ಮದುವೆಯಾಗಿ ಮೊದಲ ರಾತ್ರಿಗೂ ಮುನ್ನವೇ ಚಿನ್ನಾಭರಣ, ಹಣ ದೋಚಿ ಪರಾರಿಯಾದ ನವ ವಧು!

ಮದುವೆಯಾಗಿ ಕೇವಲ 5 ದಿನಗಳಾಗಿದ್ದು, ಮೊದಲ ರಾತ್ರಿಯೂ ಮುಗಿದಿಲ್ಲ. ಆದರೆ, ಗಂಡನ ಮನೆಯಲ್ಲಿದ್ದ ಚಿನ್ನಾಭರಣ ಮತ್ತು ಹಣವನ್ನು ಕದ್ದು ಹೆಂಡತಿ ಪರಾರಿ ಆಗಿದ್ದಾಳೆ.

Newlywed bride escape with steal jewelry and money before first night of marriage sat

ಕಳೆದ 5 ದಿನಗಳ ಹಿಂದಷ್ಟೇ ಅದ್ಧೂರಿಯಾಗಿ ಮದುವೆ ಮಾಡಿಕೊಂಡ ನವವಿವಾಹಿತೆ ಗಂಡನ ಮನೆಯಲ್ಲಿದ್ದ ಎಲ್ಲ ಆಭರಣ ಮತ್ತು ಹಣದೊಂದಿಗೆ ಪರಾರಿಯಾಗಿದ್ದಾಳೆ. ಮನೆಯಿಂದ ಹೊರಡುವಾಗ ಅತ್ತೆಗೆ 'ಪನೀರ್' ತರುತ್ತೇನೆ ಎಂದು ನೆಪ ಹೇಳಿ ಹೋದವಳು, ಈವರೆಗೂ ವಾಪಸ್ ಬಂದಿಲ್ಲ..

ರಾಜಸ್ಥಾನದ ಜೈಪುರದ ಶಿವದಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಶ್ಚರ್ಯಕರ ಘಟನೆ ನಡೆದಿದೆ. ಮದುವೆಯಾದ ಬಳಿಕ ನವವಿವಾಹಿತೆ ಆಭರಣ ಮತ್ತು ಹಣದೊಂದಿಗೆ ಪರಾರಿಯಾಗಿದ್ದಾಳೆ. ಜಿಲ್ಲೆಯ ಬೀಲ್ವಾ ಗ್ರಾಮದ ಯುವಕನಿಗೆ ಈ ಅನುಭವ ಆಗಿದೆ. ಮದುವೆಗಾಗಿ ಆತ 2.5 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದ. ಮದುವೆಯಾದ 5 ದಿನಗಳ ನಂತರ, ವಧು ಮದುವೆ ಉಡುಗೊರೆಗಳು ಮತ್ತು ಹಣದೊಂದಿಗೆ ಮನೆ ಬಿಟ್ಟು ಹೋಗಿದ್ದಾಳೆ ಮತ್ತು ವಾಪಸ್ ಬಂದಿಲ್ಲ.

ಪ್ರಯಾಗ್‌ರಾಜ್‌ನ ಮಂದಿರದಲ್ಲಿ ಮದುವೆ: ಸಂತ್ರಸ್ತ ಯುವಕ ಪೊಲೀಸರಿಗೆ ದೂರು ನೀಡಿದ್ದು, ಪರಿಚಿತರು ತನ್ನ ಮದುವೆ ಮಾಡಿಸುವುದಾಗಿ ಆಮಿಷವೊಡ್ಡಿ ಮೋಸ ಮಾಡಿದ್ದಾರೆ ಎಂದು ತಿಳಿಸಿದ್ದಾನೆ. ಮದುವೆಗೆ ಮುನ್ನ ಆರೋಪಿಗಳು ಯುವಕನ ಕುಟುಂಬದಿಂದ 15 ಸಾವಿರ ರೂಪಾಯಿ ಖರ್ಚಿಗಾಗಿ ಪಡೆದು ನಂತರ ಮದುವೆಗೆ 2.5 ಲಕ್ಷ ರೂಪಾಯಿಗಳನ್ನು ಕೇಳಿದ್ದರು. ನಂತರ ಪ್ರಯಾಗ್‌ರಾಜ್‌ನ ಮಂದಿರದಲ್ಲಿ ಮದುವೆ ನಿಶ್ಚಯಿಸಲಾಯಿತು. ಮದುವೆ ಮಾಡಿಕೊಂಡ ನಂತರ ವಧು-ವರರ ಎರಡೂ ಕುಟುಂಬಗಳು ರಾಜಸ್ಥಾನಕ್ಕೆ ಮರಳಿದವು.

ಇದನ್ನೂ ಓದಿ: 

ಪನೀರ್ ತರುವುದಾಗಿ ಹೇಳಿ ಹೋದವಳು ಬರಲೇ ಇಲ್ಲ: ಮದುವೆಯ ನಂತರ ವಧು ತನ್ನ ಪತಿಯಿಂದ 35 ಸಾವಿರ ರೂಪಾಯಿ ಮೌಲ್ಯದ ಮಂಗಳ ಸೂತ್ರವನ್ನು ಮಾಡಿಸಿಕೊಂಡಳು. ಆದರೆ ಪತಿ ಕಚೇರಿಗೆ ಹೋದ ತಕ್ಷಣ, ವಧು ಮನೆಯಿಂದ ಆಭರಣಗಳು ಮತ್ತು ಹಣವನ್ನು ಕದ್ದು ಪರಾರಿಯಾಗಿದ್ದಾಳೆ. ಮನೆಯಿಂದ ಹೊರಡುವಾಗ ಅತ್ತೆ ಎಲ್ಲಿಗೆ ಹೋಗುತ್ತಿದ್ದೀಯ ಎಂದು ಕೇಳಿದಾಗ, ಸೊಸೆ ಮಾರುಕಟ್ಟೆಯಿಂದ ಪನೀರ್ ತರುತ್ತಿದ್ದೇನೆ, ಸಂಜೆ ಪನೀರ್ ಕರಿ ಮಾಡುತ್ತೇನೆ ಎಂದು ಹೇಳಿದ್ದಾಳೆ. ಮಾರುಕಟ್ಟೆಗೆ ಒಬ್ಬಂಟಿಯಾಗಿ ಹೋದ ಸೊಸೆಯ ಬರುವಿಕೆಗಾಗಿ ಅತ್ತೆ ಕಾಯುತ್ತಿದ್ದರು. ಎಷ್ಟೊತ್ತಾದರೂ ಬರಲಿಲ್ಲ. ಜೊತೆಗೆ, ಕೆಲಸಕ್ಕೆ ಹೋಗಿದ್ದ ಮಗ ವಾಪಸ್ ಬಂದರೂ ಸೊಸೆ ಮಾತ್ರ ಮನೆಗೆ ವಾಪಸ್ ಬರಲೇ ಇಲ್ಲ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಮನೆಗೆ ಬಂದು ಹಣ ಮತ್ತು ಆಭರಣಗಳನ್ನು ಇಟ್ಟಿರುವ ಅಲ್ಮೆರಾ ತೆರೆದು ನೋಡಿದಾಗ ಎಲ್ಲಾ ಆಭರಣಗಳು ಮತ್ತು ಹಣ ಕಾಣೆಯಾಗಿತ್ತು.

ಇದನ್ನೂ ಓದಿ: ಅಪಾರ್ಟ್​ಮೆಂಟ್​ನಲ್ಲಿ ಅಸ್ಸಾಮಿ ಸುಂದರಿಯ ಡೆಡ್​ ಬಾಡಿ: ಬ್ರೇಕ್​​ ಅಪ್​ ಅಂದವಳಿಗೆ ಮಚ್ಚು ಬೀಸಿದ ಪಾಗಲ್​​​ ಪ್ರೇಮಿ!

ಈ ಘಟನೆಯ ನಂತರ ಸಂತ್ರಸ್ತ ಯುವಕ ತನ್ನ ಮದುವೆ ಮಾಡಿಸಿದ ಪರಿಚಿತರನ್ನು ಸಂಪರ್ಕಿಸಿದಾಗ, ಅವರು ಮೊದಲು ಆತನಿಗೆ ಏನೋನೋ ಸಬೂಬು ಹೇಳಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ನಂತರ ಮದುವೆ ಮಾಡಿಸಿದ ಯುವಕನಿಗೆ ಬೆದರಿಕೆ ಹಾಕಲು ಪ್ರಾರಂಭಿಸಿದರು. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದಾಗ ಪೊಲೀಸರೇ ಮದುವೆ ಮಾಡಿಸಿದವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ. ಜೊತೆಗೆ, ಆರೋಪಿ ಮಹಿಳೆ ಮತ್ತು ಆಕೆಯ ಸಹಚರರ ವಿರುದ್ಧ ಕ್ರಮ ಕೈಗೊಳ್ಳುವ ಪ್ರಕ್ರಿಯೆ ಆರಂಭಿಸಿದ್ದಾರೆ.

Latest Videos
Follow Us:
Download App:
  • android
  • ios