ಸೋಶಿಯಲ್‌ ಮೀಡಿಯಾ ಬಳಕೆಗೆ 16 ವರ್ಷ ಮಿತಿ; ಮಸೂದೆಗೆ ಸಮ್ಮತಿ ನೀಡಿದ ಆಸೀಸ್‌!

16 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿಷೇಧಿಸುವ ಮಸೂದೆಯನ್ನು ಆಸ್ಟ್ರೇಲಿಯಾದ ಸಂಸತ್ತಿನ ಕೆಳಮನೆ ಅಂಗೀಕರಿಸಿದೆ. ಈ ಮಸೂದೆ ಸೆನೆಟ್‌ನಲ್ಲೂ ಅಂಗೀಕಾರವಾದರೆ, ಆಸ್ಟ್ರೇಲಿಯಾ ಇಂತಹ ಕಾನೂನು ಜಾರಿಗೆ ತಂದ ಮೊದಲ ದೇಶವಾಗಲಿದೆ.

Social Media ban on For Kids Under 16 Australia Passes Bill san

ಮೆಲ್ಬೋರ್ನ್‌ (ನ.28): 16 ವರ್ಷಕ್ಕಿಂತ ಕೆಳಗಿನ ಮಕ್ಕಳ ಸಾಮಾಜಿಕ ಜಾಲತಾಣ ಬಳಕೆಯನ್ನು ನಿಷೇಧಿಸುವ ಮಸೂದೆಯನ್ನು ಆಸ್ಟ್ರೇಲಿಯಾದ ಸಂಸತ್ತಿನ ಕೆಳಮನೆಯಾದ ಹೌಸ್‌ ಆಫ್‌ ರೆಪ್ರಸೆಂಟೇಟಿವ್‌ನಲ್ಲಿ ಬಹುಮತದಿಂದ ಅಂಗೀಕರಿಸಲಾಗಿದೆ. ಮಸೂದೆ ಪರವಾಗಿ 112 ಸದಸ್ಯರು ಮತ್ತು ವಿರುದ್ಧವಾಗಿ 13 ಜನ ಸದಸ್ಯರು ಮತ ಚಲಾಯಿಸಿದರು.

ಮಸೂದೆಗೆ ಇನ್ನು ಸಂಸತ್ತಿನ ಮೇಲ್ಮನೆಯಾದ ಸೆನೆಟ್‌ನ ಅನುಮೋದನೆ ಸಿಕ್ಕರೆ ಅದು ಅದು ಕಾನೂನಿನ ಸ್ವರೂಪ ಪಡೆದುಕೊಂಡು ಜಾರಿಗೆ ಬರಲಿದೆ. ಈ ಮೂಲಕ ಇಂಥ ಕಾನೂನು ಜಾರಿಗೆ ತಂದ ವಿಶ್ವದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಆಸ್ಟ್ರೇಲಿಯಾ ಪಾತ್ರವಾಗಲಿದೆ.
ಮಸೂದೆಯಲ್ಲಿ ಏನಿದೆ?:

ಮಸೂದೆ ಅನ್ವಯ 16 ವರ್ಷಕ್ಕಿಂತ ಕೆಳಗಿನ ವಯಸ್ಸಿನ ಮಕ್ಕಳಿಗೆ ಜಾಲತಾಣ ಬಳಕೆ ನಿಷೇಧವಾಗಲಿದೆ. ಜೊತೆಗೆ ಮಕ್ಕಳು ಜಾಲತಾಣ ಬಳಸದಂತೆ ತಡೆಯುವ ಹೊಣೆ, ಫೇಸ್‌ಬುಕ್‌, ಟಿಕ್‌ಟಾಕ್‌ ಸ್ನಾಪ್‌ಚಾಟ್‌, ಇನ್ಸ್ಟಾಗ್ರಾಂನಂಥ ಸಂಸ್ಥೆಗಳಿಗೂ ಇರಲಿದೆ.

ಈ ಸಂಸ್ಥೆಗಳು ನಿಗದಿತ ವಯೋಮಿತಿಗಿಂತ ಕೆಳಗಿನ ಮಕ್ಕಳಿಗೆ ಈ ಜಾಲತಾಣದಲ್ಲಿ ಖಾತೆ ತೆರೆಯಲು ಅವಕಾಶ ನೀಡಬಾರದು. ಇಂಥ ವ್ಯವಸ್ಥೆ ಜಾರಿಗೆ ಅವುಗಳಿಗೆ ಒಂದು ವರ್ಷ ಸಮಯ ನೀಡಲಾಗುವುದು. ಅದರ ಬಳಿಕವೂ ನಿಯಮ ಪಾಲನೆ ಮಾಡದೇ ಹೋದಲ್ಲಿ ಅಂಥ ಕಂಪನಿಗಳಿಗೆ 275 ಕೋಟಿ ರು.ವರೆಗೂ ದಂಡ ವಿಧಿಸುವ ಅವಕಾಶ ಕಲ್ಪಿಸಲಾಗಿದೆ.

Chitradurga: 20 ವರ್ಷದ ಯುವತಿಗೆ 40ರ ಅಂಕಲ್‌ ಜೊತೆ ಲವ್‌-ಮದುವೆ; ಅಳಿಯನ ಜೀವ ತೆಗೆದ ಪೋಷಕರು!

ಈ ನಡುವೆ ಈ ಕಾನೂನಿನ ದೋಷದ ಬಗ್ಗೆ ಮಾತನಾಡಿದ ವಿಪಕ್ಷದ ಸಂಸದರೊಬ್ಬರು, ‘ಬಳಕೆದಾರರ ವಯಸ್ಸನ್ನು ತಿಳಿಯಲು ಅವರ ಗುರುತಿನ ದಾಖಲೆ ಒದಗಿಸುವಂತೆ ಜಾಲತಾಣಗಳು ಕೇಳಲಾಗದು. ಜೊತೆಗೆ ಕಾನೂನು ಜನರ ಗೌಪ್ಯತೆಗೆ ಧಕ್ಕೆ ತರುತ್ತದೆ. ಮಕ್ಕಳಿಗೇನು ಒಳ್ಳೆಯದು ಎಂಬ ಬಗ್ಗೆ ನಿರ್ಣಯಿಸುವ ಪೋಷಕರ ಅಧಿಕಾರ ಕಿತ್ತುಕೊಳ್ಳುತ್ತದೆ. ಅಂತೆಯೇ, ಮಕ್ಕಳು ಸಾಮಾಜಿಕ ಜಾಲತಾಣಗಳಿಂದ ಒಳ್ಳೆಯದನ್ನು ಕಲಿಯುವುದರಿಂದ ವಂಚಿತರಾಗಿ, ಡಾರ್ಕ್‌ ವೆಬ್‌ ಬಳಸುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಅಂಪೈರ್‌, ಆಕ್ಷನ್‌ ಫಿಕ್ಸಿಂಗ್‌ ಆರೋಪ ಮಾಡಿದ ಐಪಿಎಲ್‌ ಮಾಜಿ ಕಮೀಷನರ್‌!

Latest Videos
Follow Us:
Download App:
  • android
  • ios