ಆಫೀಸ್‌ಗೆ ಹೋಗೋದು ಎಂದರೆ ಉಸಿರುಗಟ್ಟಿದಂತಾಗುತ್ತದೆ. ಮನಸು ಮಾಡಿದರೂ ಕೆಲಸ ಮಾಡಲು ಆಗುತ್ತಿಲ್ಲ. ಯಾರೂ ಸಹಕರಿಸುತ್ತಿಲ್ಲ. ಹೀಗೆಲ್ಲಾ ಆದರೆ ಮನಸಿನಲ್ಲಿ ಮೂಡುವ ಒಂದೇ ಒಂದು ಯೋಚನೆ ಅಂದರೆ ರಿಸೈನ್ ಮಾಡೋದು. ಇಷ್ಟೆಲ್ಲಾ ಆಗುತ್ತಿದ್ದರೆ ರಿಸೈನ್ ಮಾಡೋದು ಸರಿಯಾದ ನಿರ್ಧಾರ. ಆದರೆ ಕೆಲಸ ಬಿಡುವ ಮುನ್ನ ಈ ತಪ್ಪುಗಳನ್ನು ಮಾಡಲೇಬೇಡಿ... 

ಕೋಪದಲ್ಲಿ ರಿಸೈನ್ ಮಾಡಬೇಡಿ: ಆಫೀಸ್ ವಾತಾವರಣದಿಂದ ಕೋಪಗೊಂಡು ರಿಸೈನ್ ಮಾಡಲೇಬೇಕು ಎಂದು ಅಂದುಕೊಂಡು ಕೋಪದಲ್ಲಿ ಅದೇ ದಿನ ರಿಸೈನ್ ಮಾಡಬೇಡಿ. ರಿಸೈನ್ ಮಾಡಬೇಕು ಎಂದು ಅನಿಸಿದಾಗ ಅದರ ಬಗ್ಗೆ ಹೆಡ್ ಆಫೀಸ್ ಜೊತೆ ಮಾತನಾಡಿ, ನಿಮ್ಮ ಸಮಸ್ಯೆಗಳನ್ನು ಅವರ ಬಳಿ ಹಂಚಿಕೊಳ್ಳಿ. ನಂತರ ಎಲ್ಲ ಫಾರ್ಮಾಲಿಟಿ ಪೂರ್ತಿ ಮಾಡಿ ನಂತರ ರಿಸೈನ್ ಮಾಡಿ. ಕೋಪದಲ್ಲಿ ರಿಸೈನ್ ಮಾಡಿದರೆ ಆಫೀಸ್ ನಿಮ್ಮ ಮೇಲೆ ಸೇಡು ತೀರಿಸಿಕೊಳ್ಳಬಹುದು. 

ಧಾರಾವಾಹಿ ನೋಡ್ತಾ ಗೊಳೋ ಎಂದು ಅಳುವವರಿಗೆ ಈ ಸುದ್ದಿ

ಕೆಟ್ಟ ಇಮೇಜ್: ನೌಕರಿ ಬಿಡುವುದು ಎಂದು ಗೊತ್ತಾದಮೇಲೆ ಯಾವತ್ತೂ ನಿಮ್ಮ ಮೇಲೆ ಕೆಟ್ಟ ಇಮೇಜ್ ಬರುವ ಹಾಗೆ ನಡೆದುಕೊಳ್ಳಬೇಡಿ. ಕೆಲಸ ಬೇಕಾದರೆ ಸ್ವಲ್ಪ ಕಡಿಮೆ ಮಾಡಿ, ಆದರೆ ಆಫೀಸಿನಲ್ಲಿ ಜಗಳ ಮಾಡುವುದು, ತಪ್ಪು ತಪ್ಪು ಕೆಲಸ ಮಾಡುವುದು ಮಾಡಬೇಡಿ. ನೋಟಿಸ್ ಪಿರಿಯಡ್‌ನಲ್ಲಿ ಉತ್ತಮವಾಗಿ ವರ್ತಿಸಿ. ಇದು ನಿಮಗೇ ಒಳ್ಳೆಯದು.

ಹ್ಯಾಂಡ್ ಓವರ್ ಮಾಡದೇ ಇರುವುದು: ಆಫೀಸಿನಿಂದ ಹೋಗುವಾಗ ನೀವು ಇಲ್ಲಿವರೆಗೆ ಮಾಡುತ್ತಿದ್ದ ಕೆಲಸ, ಫೈಲ್, ಡಾಕ್ಯುಮೆಂಟ್ಸ್ ಎಲ್ಲವನ್ನೂ ಕಚೇರಿಯ ಇತರರಿಗೆ ಹಸ್ತಾಂತರಿಸಿ. ಫೈಲ್ ಡಿಲೀಟ್ ಮಾಡುವುದು, ಎಲ್ಲ ಡಾಕ್ಯುಮೆಂಟ್ಸ್ ಸಬ್‌ಮಿಟ್ ಮಾಡದಿರುವುದು ಮಾಡಬೇಡಿ. 

ಫ್ಯೂಚರ್ ಪ್ಲಾನಿಂಗ್ ಇಲ್ಲದೆ ಇರುವುದು: ಕೆಲಸ ಬಿಟ್ಟ ನಂತರ ಮುಂದೆ ಏನು ಮಾಡುತ್ತೀರಿ ಅನ್ನೋದು ಮುಖ್ಯ. ಅದಕ್ಕಾಗಿ ಕೆಲಸ ಬಿಡುವ ಮುನ್ನವೇ ಮುಂದಿನ ಕೆಲಸದ ಬಗ್ಗೆ ಆಲೋಚಿಸಿ. ಭವಿಷ್ಯದ ಬಗ್ಗೆ ಯೋಚನೆ ಮಾಡದೇ ಕೆಲಸ ಬಿಡುವುದು ಉತ್ತಮವಲ್ಲ. 

ಗೊರಕೆ ಹೊಡೆಯಲ್ಲ ಎನ್ನೋ ಪತ್ನಿಗೆ ಈ ಸುದ್ದಿ ತೋರಿಸಿ!

ಕಂಪನಿ ವಿರುದ್ಧ ಮಾತನಾಡುವುದು: ನೀವು ಕೆಲಸ ಬಿಡುವ ಬಗ್ಗೆ ಯೋಚನೆ ಮಾಡುತ್ತಿರಬಹುದು. ಆದರೆ ಇದರ ಅರ್ಥ ನೀವು ಕಂಪನಿ ಬಗ್ಗೆ ಎಲ್ಲರ ಬಳಿಯೂ  ಕೆಟ್ಟದಾಗಿ ಹೇಳುವುದು ಸರಿಯಲ್ಲ. ನಿಮಗೆ ಎಷ್ಟೇ ಕೆಟ್ಟ ಅನುಭವ ಆಗಿದ್ದರೂ ಕಂಪನಿ ಬಗ್ಗೆ ಒಂದು ಕೆಟ್ಟ ಮಾತು ಆಡದೇ, ಅಲ್ಲಿಂದ ಹೊರ ಬರುವುದು ಒಳ್ಳೆ ನಡತೆ.