ಗೊರಕೆ ಹೊಡೆಯಲ್ಲ ಎನ್ನೋ ಪತ್ನಿಗೆ ಈ ಸುದ್ದಿ ತೋರಿಸಿ!
ರಾತ್ರಿ ಎಲ್ಲ ಗೊರಕೆ ಹೊಡೆದು ಗರ್ಜಿಸಿ ನಿಮ್ಮ ನಿದ್ದೆ ಕೆಡಿಸಿ, ಬೆಳಗ್ಗೆ ಹೇಳಿದರೆ ಇಲ್ಲ ನಾನು ಗೊರಕೆ ಹೊಡೆದೇ ಇಲ್ಲ ಎನ್ನುವ ಪತ್ನಿಯರ ಸಾಲಿನಲ್ಲಿ ನಿಮ್ಮ ಪತ್ನಿಯೂ ಇರುವುದಾದರೆ ಆಕೆಗೆ ಈ ಸುದ್ದಿ ತೋರಿಸಿ
ಸುಂದರವಾದ ಹುಡುಗಿಯರು ಗೊರಕೆ ಹೊಡೆಯುತ್ತಾರೆಂದರೆ ಯಾವ ಹುಡುಗನೂ ನಂಬಲಿಕ್ಕಿಲ್ಲ. ಇನ್ನು ಕಟ್ಟಿಕೊಂಡ ಮೇಲೆ ಆಕೆ ಗೊರೆಯುವುದನ್ನು ನೋಡಿ ಬೆಚ್ಚಿ, ಅವಳಲ್ಲಿ ಹೇಳಿದರೆ ಆಕೆ ಅದನ್ನು ಒಪ್ಪಿಕೊಳ್ಳುವುದೂ ಇಲ್ಲ. ಆದರೆ, ನಿಜವೆಂದರೆ ಗಂಡಸರಷ್ಟೇ ಪ್ರಮಾಣದಲ್ಲಿ ಹಾಗೂ ಅವರಷ್ಟೇ ದೊಡ್ಡ ಸ್ವರದಲ್ಲಿ ಹೆಂಗಸರು ಗೊರಕೆ ಹೊಡೆಯುತ್ತಾರಂತೆ! ಬೇರೆಲ್ಲದರಲ್ಲಿ ಈಕ್ವಾಲಿಟಿ ಮಾತಾಡುವ ಹೆಂಗಸರು ಈ ವಿಷಯದಲ್ಲಿ ಸಮಾನತೆಯನ್ನು ಒಪ್ಪಿಕೊಳ್ಳುವುದಿಲ್ಲವಾದರೂ ಸತ್ಯ ಇದೇ ಆಗಿದೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.
ಗೊರಕೆ ಹೊಡೀತೀರಾ? ಇಲ್ಲಿದೆ ಮನೆ ಮದ್ದು..
ಕ್ಲಿನಿಕಲ್ ಸ್ಲೀಪ್ ಮೆಡಿಸಿನ್ ಜರ್ನಲ್‌ನಲ್ಲಿ ಈ ಅಧ್ಯಯನ ವರದಿಯಾಗಿದ್ದು, ಸಾಮಾಜಿಕ ಕಳಂಕಕ್ಕೆ ಹೆದರಿ ಮಹಿಳೆಯರು ತಾವು ಗೊರಕೆ ಹೊಡೆಯುವುದನ್ನು ಒಪ್ಪಿಕೊಳ್ಳುವುದಿಲ್ಲ. ಹೀಗಾಗಿ ಚಿಕಿತ್ಸೆ ತೆಗೆದುಕೊಳ್ಳಲೂ ಒಪ್ಪುವುದಿಲ್ಲ. ಇದರಿಂದ ಸ್ಲೀಪ್ ಅಪ್ನೋಯಿಯಾ ಎಂಬ ಸ್ಲೀಪ್ ಡಿಸಾರ್ಡರ್‌ನಿಂದ ಅವರು ಬಳಲುವ ಸಂಭವ ಹೆಚ್ಚು. ಇದೇ ಕಾರಣಕ್ಕೆ ಬೆಳಗಿನ ಸಮಯ ಸುಸ್ತಿನಿಂದ ಬಳಲುತ್ತಾರೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಗೊರಕೆ ಸಮಸ್ಯೆಯಿಂದ ರಾತ್ರಿ ನಿದ್ದೆ ಬರುತ್ತಿಲ್ಲವೇ?
ಸಂಶೋಧನೆ ಪ್ರಕಾರ, ಮಹಿಳೆಯರು ಸರಾಸರಿ 50 ಡೆಸಿಬಲ್‌ನಷ್ಟು ಜೋರಾಗಿ ಗೊರಕೆ ಹೊಡೆಯುತ್ತಾರೆ. ಪುರುಷರಲ್ಲಿ ಇದು 51 ಡೆಸಿಬಲ್ ಪ್ರಮಾಣದಲ್ಲಿದೆ. ಅಂದ ಮೇಲೆ ಇಬ್ಬರೂ ಕಾಂಪಿಟೇಶನ್ ಮೇಲೆ ಗೊರಕೆ ಹೊಡೆಯುತ್ತಾರೆಂಬುದು ಶತಸಿದ್ಧವಾಯ್ತಲ್ಲವೇ?