ಭಾರತದ ಯಾವ ಮೂಲೆಗೆ ಹೋದರೂ ಅಲ್ಲಿ ಸುಂದರವಾದ ಹತ್ತು ಹಲವು ತಾಣಗಳಿವೆ. ಅಷ್ಟೇ ಯಾಕೆ ಎಂಜಾಯ್ ಸಹ ಮಾಡಬಹುದು. ಬೇಸಿಗೆ ಸೆಖೆಯಿಂದ ನೀವು ಕಂಗೆಟ್ಟಿದ್ದರೆ ಮೇ ಮುಗಿಯೋ ಮುನ್ನ ಒಂದು ಬಾರಿಯಾದರೂ ದೇಶದ ಸುಂದರ ತಂಪಾದ ಈ ತಾಣಗಳಿಗೆ ನೀವು ಭೇಟಿ ನೀಡಬೇಕು. ಈ ತಾಣಗಳು ಕೇವಲ ದೇಹಕ್ಕೆ ತಂಪು ನೀಡುವುದು ಮಾತ್ರವಲ್ಲ. ಮನಸಿಗೂ ಮುದ ನೀಡುತ್ತವೆ. 

ತವಾಂಗ್‌: ಅದ್ಭುತ ಸೌಂದರ್ಯ ಹೊಂದಿದ ಸುಂದರ ಪ್ರದೇಶ ತವಾಂಗ್. ಇದು ಅರುಣಾಚಲ ಪ್ರದೇಶದ ಅತ್ಯಂತ ಪುಟ್ಟ ಜಿಲ್ಲೆ. ಇಲ್ಲಿ ಮೋಂಪಾ ಜನರು ಹೆಚ್ಚು ವಾಸಿಸುತ್ತಾರೆ. ಈ ಪ್ರದೇಶದ ಜನರು ಕೃಷಿ ಮತ್ತು ಧಾರ್ಮಿಕ ವಿಚಾರಕ್ಕೆ ಸಂಬಂಧಿಸಿದಂತೆ ಹಲವಾರು ಉತ್ಸವ - ಹಬ್ಬಗಳನ್ನು ಆಚರಿಸುತ್ತಾರೆ. ಇಲ್ಲಿ ನೀವು ಬೇಸಿಗೆಯನ್ನು ಸಖತ್ತಾಗಿ ಎಂಜಾಯ್‌ ಮಾಡಬಹುದು.

ಜಲ ಸಾಹಸ ಕಯಾಕಿಂಗ್‌ಗೆ ಯಾವ ತಾಣಗಳು ಬೆಸ್ಟ್?

ಕಲಿಪೋಂಗ್‌:  ಪಶ್ಚಿಮ ಬಂಗಾಳದ ಅತ್ಯಂತ ಜನಪ್ರಿಯ ತಾಣ. ಇಲ್ಲಿಗೆ ಯಾವಾಗ ಬೇಕಾದರೂ ಹೋಗಬಹುದು. ಇದು ಹಲವಾರು ಸಂಸ್ಕೃತಿ ಮತ್ತು ಸಂಪ್ರದಾಯಗಳ ತವರೂರು. ಇಲ್ಲಿ ಕಾಂಚನಜುಂಗಾ ಮತ್ತು ಇತರ ಹಿಮಾಲಯದ ಹಲವಾರು ಪರ್ವತ ಶ್ರೇಣಿಗಳು ನಿಮ್ಮನ್ನು ಮಂತ್ರಮುಗ್ಧಗೊಳಿಸುತ್ತದೆ. ಹಚ್ಚ ಹಸಿರಿನಿಂದ ಕೂಡಿರುವ ಈ ಜಾಗ ನೋಡುಗರ ಕಣ್ಣಿಗೆ  ಹಬ್ಬವನ್ನುಂಟು ಮಾಡುತ್ತದೆ.

ಝೈರೋ : ವಿಶ್ವ ಪಾರಂಪರಿಕ ತಾಣದ ಸಂಪೂರ್ಣ ಸೌಂದರ್ಯವನ್ನು ಸವಿಯಬೇಕು ಎಂದಾದರೆ ಅರುಣಾಚಲ ಪ್ರದೇಶದ ಝೈರೋ ತಾಣಕ್ಕೆ ನೀವು ಒಮ್ಮೆ ಹೋಗಿ ಬನ್ನಿ. ಅಕ್ಕಿ ಬೆಳೆಯುವುದು ಇಲ್ಲಿನ ಜನರ ಪ್ರಮುಖ ಕಸುಬು. ಇಲ್ಲಿ ಎರಡು ವಿಧದ ಅಕ್ಕಿಯನ್ನು ಬೆಳೆಯಲಾಗುತ್ತದೆ. ಪಿಕ್‌ನಿಕ್‌ ಮಾಡಲು ಇದು ಪರ್‌ಫೆಕ್ಟ್‌ ತಾಣ.

ಬಿರ್‌ ಬಿಲ್ಲಿಂಗ್‌ ಮತ್ತು ಖಾಜಿಯರ್‌: ಇದು ಹಿಮಾಚಲ ಪ್ರದೇಶದ ಅತ್ಯಂತ ಪ್ರಮುಖ ತಾಣ. ಇಲ್ಲಿ ಪ್ಯಾರಾಗ್ಲೈಡಿಂಗ್‌ ಮಾಡಲಾಗುತ್ತದೆ. ಭಾರತೀಯರು ಮತ್ತು ವಿದೇಶಿಯರು ಭಾರತದಲ್ಲಿ ಹೆಚ್ಚು ಭೇಟಿ ನೀಡುವ ತಾಣಗಳಲ್ಲಿ ಇದೂ ಒಂದು. ಟ್ರೆಕ್ಕಿಂಗ್‌, ಕ್ಯಾಪಿಂಗ್‌ ಮಾಡಲೂ ಇದು ಬೆಸ್ಟ್. 

ಹಬ್ಬಿದಾ ಮಲೆ ಮಧ್ಯದೊಳಗೆ ಹರಡಿ ನಿಂತ ಅಮ್ಮನಘಟ್ಟ!

ಟಿರ್ಟಾನ್‌ ವ್ಯಾಲಿ: ಇದೂ ಹಿಮಾಚಲ ಪ್ರದೇಶದಲ್ಲಿರುವ ಅತ್ಯಂತ ಪುಟ್ಟ ಕಣಿವೆ. ಈ ಕಣಿವೆ ಪೂರ್ತಿಯಾಗಿ ನದಿ- ಸರೋವರ, ಹಚ್ಚ ಹಸುರಿನ ಗಿಡಮರಗಳಿಂದ ಸುತ್ತುವರಿದಿರುವ ಸುಂದರ ಕಣಿವೆ. ಗ್ರೇಟ್‌ ಹಿಮಾಲಯನ್‌ ನ್ಯಾಷನಲ್‌ ಪಾರ್ಕ್‌ ಇರೋದು ಇಲ್ಲಿಯೇ.