Asianet Suvarna News Asianet Suvarna News

ಜಲ ಸಾಹಸ ಕಯಾಕಿಂಗ್‌ಗೆ ಯಾವ ತಾಣಗಳು ಬೆಸ್ಟ್?

ಕಯಾಕಿಂಗ್ ಜಲಸಾಹಸಿಗರ ಫೇವರೇಟ್ ಸ್ಪೋರ್ಟ್. ಕಯಾಕ್‌ ಅನ್ನು ಜಾಣ್ಮೆಯಿಂದ ಬಳಸುತ್ತಾ, ಸುತ್ತಲ ಪ್ರಕೃತಿ ಸವಿಯುತ್ತಾ ನೀರಿನ ಮೇಲೆ ಸಾಗುವ ಸೊಬಗೇ ಸೊಬಗು. ಕೇರಳದಿಂದ ಕಾಶ್ಮೀರದವರೆಗೆ ಎಲ್ಲೆಲ್ಲಿ ಕಯಾಕಿಂಗ್‌ಗೆ ಅವಕಾಶಗಳಿವೆ?

kayaking destinations in India
Author
Bangalore, First Published May 12, 2019, 4:00 PM IST

ಕಯಾಕಿಂಗ್ ಗೀಳು ಈಗೀಗ ಭಾರತೀಯರಲ್ಲೂ ಹೆಚ್ಚುತ್ತಿದೆ. ಸಾಹಸೀ ಪ್ರವೃತ್ತಿಯವರ ನೆಚ್ಚಿನ ವಾಟರ್ ಸ್ಪೋರ್ಟ್ ಆಗಿ ಜನಪ್ರಿಯತೆ ಪಡೆಯುತ್ತಿರುವ ಕಯಾಕಿಂಗ್‌ನ  ಮಜವೇನೆಂದರೆ ನದಿ, ಸರೋವರ, ಸಮುದ್ರ, ಕೆರೆ ಎಲ್ಲಿ ಬೇಕಿದ್ದರೂ ಪಡ್ಲಿಂಗ್ ಮಾಡಬಹುದು. ಅಲ್ಲದೆ, ಈ ಕ್ರೀಡೆಯಲ್ಲಿ ರಿಸ್ಕ್ ಕಡಿಮೆ. ದೇಶದೆಲ್ಲೆಡೆ ಅಕ್ಟೋಬರ್‌ನಿಂದ ಮೇವರೆಗೆ ಕಯಾಕಿಂಗ್ ಆಡಲು ಬೆಸ್ಟ್ ಸಮಯ. ಝನ್ಸ್ಕರ್‌ನಲ್ಲಿ ಮಾತ್ರ ಜುಲೈನಿಂದ ಸೆಪ್ಟೆಂಬರ್‌ವರೆಗೆ ಕಯಾಕಿಂಗ್ ಆಡಬಹುದು. ನೀವು ಈ ಕ್ರೀಡೆಯ ಮಜಾ  ಸವಿಯಬೇಕೆಂದರೆ ಎಲ್ಲೆಲ್ಲಿಗೆ ಹೋಗಬೇಕೆಂಬ ಪಟ್ಟಿ ಇಲ್ಲಿದೆ ನೋಡಿ.

ಕೇರಳ ಹಿನ್ನೀರು ಪ್ರದೇಶ

ಪೂರ್ತಿ ರಿಲ್ಯಾಕ್ಸಿಂಗ್ ಕಯಾಕಿಂಗ್ ವೆಕೇಶನ್‌ಗೆ ಕೇರಳ ಹಿನ್ನೀರು ಪ್ರದೇಶ ಬೆಸ್ಟ್. ತೆಳ್ಳನೆಯ ಕಾಲುವೆಗಳಲ್ಲಿ ಹುಟ್ಟೆಳೆಯುತ್ತಾ(ಕಯಾಕ್), ಎರಡೂ ದಿಕ್ಕಿನಿಂದ ನೆರಳಾಗಿ ನಿಂತ ಪಾಮ್ ಮರಗಳ ನಡುವೆ ತೇಲುತ್ತಾ, ಸುಂದರ ಶಾಂತ ಪ್ರಕೃತಿಯನ್ನು ಸವಿಯುವ ಡ್ರೀಮ್‌ಲ್ಯಾಂಡ್‌ನ ಅನುಭವ ಇಲ್ಲಿ ದೊರೆಯುತ್ತದೆ. ಜೊತೆಗೆ ಕೇವಲ ಹಿನ್ನೀರಿನ ನೀರಿನ ಮೂಲಕ ಮಾತ್ರ ತಲುಪಬಹುದಾದ ಪುಟಾಣಿ ಹಳ್ಳಿಗಳೂ ಕೈಬೀಸಿ ಕರೆಯುತ್ತವೆ. ಇಲ್ಲಿ ಹೌಸ್‌ಬೋಟ್‌ನಲ್ಲಿ ಉಳಿಯುವ ವ್ಯವಸ್ಥೆ ಮಾಡಿಕೊಂಡರೆ ನಿಮ್ಮ ಕಯಾಕ್ ಪ್ರವಾಸಕ್ಕೆ ಮತ್ತಷ್ಟು ನೆನಪುಗಳು ಸೇರಿಕೊಳ್ಳುತ್ತವೆ.

ಪ್ರವಾಸ ಹೊರಡುವ ಮುನ್ನ ಈ 10 ವಿಷಯ ಗಮನಿಸಿ

ಝನ್ಸ್ಕರ್ ನದಿ

ಲೇಹ್ ಲಡಾಕ್‌ಗೆ ಹೋಗುವುದು ಪ್ರತಿಯೊಬ್ಬ ಪಯಣಿಗನ ಕನಸು. ನೀವು ಲಡಾಕ್‌ ಪ್ರವಾಸ ಯೋಜಿಸಿದ್ದೀರಾದರೆ ಇಲ್ಲಿನ ಝನ್ಸ್ಕರ್ ನದಿಯಲ್ಲಿ ಕಯಾಕಿಂಗ್ ಮಾಡುವುದನ್ನು ತಪ್ಪಿಸಿಕೊಳ್ಳುವ ತಪ್ಪನ್ನು ಖಂಡಿತಾ ಮಾಡಬೇಡಿ. ಸ್ವರ್ಗ ಸಮಾನ ಸ್ಥಳದಲ್ಲಿ ವೇಗವಾಗಿ ಹರಿವ ನೀರಿನಲ್ಲಿ ಕಯಾಕಿಂಗ್ ಮಾಡುವ ಸಾಹಸ ಜೀವಮಾನದ ಅನುಭವ ನೀಡುತ್ತದೆ.

ಬ್ರಹ್ಮಪುತ್ರ ನದಿ

ನೀವು ನಿಜವಾಗಿಯೂ ಸಾಹಸವನ್ನು ಚಾಲೆಂಜ್ ಆಗಿ ತೆಗೆದುಕೊಳ್ಳುವವರಾದರೆ ಬ್ರಹ್ಮಪುತ್ರ ನದಿಯಲ್ಲಿ ಕಯಾಕಿಂಗ್  ಮಾಡಬೇಕು. ಅರುಣಾಚಲ ಪ್ರದೇಶದ ಟ್ಯೂಟಿಂಗ್ ಇಲ್ಲಿ ಟ್ರಿಪ್ ಆಯೋಜಿಸಿ ಕಯಾಕಿಂಗ್ ಅವಕಾಶ ಕಲ್ಪಿಸಿಕೊಡುತ್ತದೆ. ದಿಬ್ರೂಗಡ್‌ಗೆ ತಲುಪುವ ಈ ಟ್ರಿಪ್‌ನಲ್ಲಿ ಹೈಕಿಂಗ್, ಕ್ಯಾಂಪಿಂಗ್ ಎಲ್ಲವೂ ಇರುತ್ತದೆ. 

ಮಾನವನಾಗಿ ಹುಟ್ಟಿದ್ಮೇಲೆ ಇವನ್ನು ನೋಡಿದಿದ್ದರೆ ಹೇಗೆ?

ಬೀಸ್ ನದಿ

ಜನಪ್ರಿಯ ಹನಿಮೂನ್ ತಾಣ ಕುಲು ಮನಾಲಿಯಲ್ಲಿ ಹರಿದು ಮುಂದೆ ಸಾಗುವ ಬೀಸ್ ನದಿ ರ‍್ಯಾಫ್ಟಿಂಗ್ ಹಾಗೂ ಕಯಾಕಿಂಗ್‌ಗೆ ಭಾರತದಲ್ಲೇ ಖ್ಯಾತಿ ಪಡೆದಿದೆ. ಇಲ್ಲಿ ಎಲ್ಲ ಮಟ್ಟದ ರ್ಯಾಪಿಡ್ ಲೆವೆಲ್‌ಗೆ ಅವಕಾಶವಿದ್ದು, ಹೊಸಬರಿಂದ ಎಕ್ಸ್‌ಪರ್ಟ್‌ಗಳವರೆಗೆ ಎಲ್ಲರೂ ತಮ್ಮ ಮಿತಿಗನುಗುಣವಾಗಿ ಕಯಾಕಿಂಗ್ ಮಾಡಬಹುದು. 

ತೀಸ್ತಾ ನದಿ

ಸಿಕ್ಕೀಂನ ತೀಸ್ತಾ ನದಿಯಲ್ಲಿ ವಿಶೇಷತೆ ಅಂದ್ರೆ ಇಲ್ಲಿ ಶಾಂತವಾಗಿ ಹರಿಯುವ ನೀರಿನಲ್ಲೂ, ವೇಗವಾಗಿ ಪರ್ವತಗಳ ಸಾಲಿನಲ್ಲಿ ಸಾಗುವ ನೀರಿನಲ್ಲೂ ಕಯಾಕಿಂಗ್ ಅನುಭವ ಪಡೆಯಬಹುದು. 

Follow Us:
Download App:
  • android
  • ios