ಸಂಗೀತ ಎಂಬುದು ನಮ್ಮ ಸಂಸ್ಕೃತಿಯಲ್ಲ ಅವಿಭಾಜ್ಯ ಅಂಗ. ದಿನದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ನಾವು ಸಂಗೀತವನ್ನು ಕೇಳುತ್ತೇವೆ. ಇದಕ್ಕೆ ನೋವನ್ನು ಮರೆಸುವ ಶಕ್ತಿಯೂ ಇದೆ. 

ಕೇವಲ ಹಿರಿಯರಿಗೆ ಮಾತ್ರವಲ್ಲ, ಮಕ್ಕಳಿಗೂ ಸಂಗೀತ ಹಾಗೂ ಅದಕ್ಕೆ ಸ್ಟೆಪ್ಟ್ ಹಾಕುವುದೆಂದರೆ ಎಲ್ಲಿಲ್ಲದ ಪ್ರೀತಿ. ಮಕ್ಕಳಿಗೆ ಬಾಲ್ಯದಿಂದಲೇ ಸಂಗೀತ ಕೇಳುವಂತೆ ಮಾಡಬೇಕು ಎಂದು ವಿಜ್ಞಾನಿಗಳು ಸಲಹೆ ನೀಡುತ್ತಾರೆ. ಯಾಕೆಂದರೆ ಈ ಸಂಗೀತ ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀಳುತ್ತದೆ ಹಾಗೂ ಅಭಿವೃದ್ಧಿಗೆ ಸಹಕಾರಿ. ಮಕ್ಕಳು ಸಂಗೀತ ಕೇಳಿದರೆ ಏನಾಗುತ್ತದೆ?

- ಮಧುರ ಸಂಗೀತ ಕೇಳುವುದರಂದ ದೊಡ್ಡವರಾದಂತೆ ಅವರ ಒತ್ತಡ ನಿವಾರಿಸಲು ನೆರವಾಗುತ್ತದೆ. 
- ಬಾಲ್ಯದಿಂದಲೇ ಮಕ್ಕಳು ಸಂಗೀತದ ಅಭ್ಯಾಸ ಬೆಳೆಸಿಕೊಂಡರೆ ಅವರ ಯೋಚನಾ ಲಹರಿ ಮತ್ತು ಭಾಷಾ ಪಾಂಡಿತ್ಯ ಹೆಚ್ಚುತ್ತದೆ. 
- ಮೆದುಳು ಮತ್ತು ದೇಹ ಜೊತೆಯಾಗಿ ಕಾರ್ಯ ನಿರ್ವಹಿಸಲು ಸಂಗೀತ ಸಹಕರಿಸುತ್ತದೆ.
-  ಸಂಗೀತವು ಮಕ್ಕಳ ಮೆದುಳಿನ ಎಡ ಭಾಗವನ್ನು ಚುರುಕುಗೊಳಿಸುತ್ತದೆ. ಈ ಭಾಗ ಭಾಷೆ ಕಲಿಕಾ ಸಾಮರ್ಥ್ಯ ಹೆಚ್ಚಿಸುತ್ತದೆ.
- ಮಕ್ಕಳ ಸಾಮಾಜಿಕ ಕೌಶಲ್ಯ ಹೆಚ್ಚಲು ಅವರು ಕ್ರಿಯಾಶೀಲರಾಗಿರಲು ಸಂಗೀತ ಬೇಕು.
- ಸಂಗೀತದ ಮೂಲಕ ಮಕ್ಕಳಿಗೆ ಪಠ್ಯ ಹೇಳಿಕೊಟ್ಟರೆ, ಅದನ್ನು ಮನನ ಮಾಡಿಕೊಳ್ಳಲು ಸುಲಭವಾಗುತ್ತದೆ. 
- ಸಂಗೀತವನ್ನು ಕಲಿತರೆ ಮಕ್ಕಳಿಗೆ ತಮ್ಮಲ್ಲಿ ಆತ್ವವಿಶ್ವಾಸ ಬೆಳೆಯುತ್ತದೆ. ಮುಂದೆ ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದೆಂಬ ಭಾವ ಮೂಡುತ್ತದೆ. 
- ಮಕ್ಕಳ ಏಕಾಗ್ರತಾ ಶಕ್ತಿ ಹೆಚ್ಚುತ್ತದೆ.
- ಮಕ್ಕಳ ತಾಳ್ಮೆ ಹೆಚ್ಚುತ್ತದೆ. ಸಮಯ ಸಂದರ್ಭವನ್ನು ಯಾವ ರೀತಿ ಸಂಭಾಳಿಸಬಹುದು ಎಂಬುದನ್ನು ಅರಿಯುತ್ತಾರೆ.
- ಮಕ್ಕಳಿಗೆ ಬಾಲ್ಯದಿಂದಲೇ ಸಂಗೀತ ಕಲಿಸಿದರೆ ಅವರಿಗೆ ಭಾವನೆಗಳನ್ನು ಹಿಡಿತದಲ್ಲಿಟ್ಟುಕೊಳ್ಳಲು ಸಾಧ್ಯವಾಗುತ್ತದೆ. 
 

ಈ ಸುದ್ದಿಗಳನ್ನೂ ಓದಿ

ಬ್ರೇಕ್ ಫಾಸ್ಟ್ ಮಿಸ್ ಮಾಡಿದರೇನಾಗುತ್ತದೆ?

ಎಮ್ಮ ಹಲ್ವಾ ಮಾಡಬಹುದಾದ ಕ್ಯಾರೇಟ್ ಪಲ್ಯವೂ ಬಲು ರುಚಿ

ಮಗುವಿಗಾಗಿ ಹಂಬಲಿಸುವವರಿಗೆ ಈ ಡಯಟ್

ಯಾವ ಬಾಳೆಹಣ್ಣು ಆರೋಗ್ಯಕ್ಕೆ ಒಳ್ಳೆಯದು

ಶಕ್ತಿ ವರ್ಧಕ ದ್ರಾಕ್ಷಿಯಲ್ಲಿದೆ ಆರೋಗ್ಯವರ್ಧಕ ಗುಣ