ಬ್ರೇಕ್ ಫಾಸ್ಟ್ ಮಿಸ್ ಮಾಡಿದರೇನಾಗುತ್ತೆ?
ಮನೆಗೆಲಸ ಮುಗಿಸಿ, ಆಫೀಸ್‌ಗೆ ಹೋಗೋ ತವಕ. ಒತ್ತಡದ ಜೀವನಶೈಲಿಯಲ್ಲಿ ಬೆಳಗ್ಗೆ ತಿಂಡಿಯನ್ನೇ ಸ್ಕಿಪ್ ಮಾಡುತ್ತಾರೆ ಹಲವರು. ಇದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರೋದ್ರಲ್ಲಿ ಅನುಮಾನವೇ ಇಲ್ಲ.
ಹೆಚ್ಚಿನ ಜನರು ತಮ್ಮ ಕೆಲಸದ ಒತ್ತಡದಿಂದ ಹಾಗು ಆಫೀಸ್ ಗೆ ಅಥವಾ ಕಾಲೇಜಿಗೆ ತಡವಾಗುವುದರಿಂದ ಬ್ರೇಕ್ ಫಾಸ್ಟ್ ತಿನ್ನದೇ ಹೊರಡುತ್ತಾರೆ. ಇದರಿಂದ ಏನೂ ಆಗೋಲ್ಲ ಎಂದು ಕೊಳ್ಳುತ್ತಾರೆ. ಆದರೆ ಅದು ತಪ್ಪು. ಒಂದು ದಿನ ಬ್ರೇಕ್ ಫಾಸ್ಟ್ ಮಿಸ್ ಮಾಡಿದರೂ ಆರೋಗ್ಯದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ.
- ಬ್ರೇಕ್ ಫಾಸ್ಟ್ ಮಾಡದೆ ಇದ್ದರೆ ರಕ್ತದಲ್ಲಿರುವ ಸಕ್ಕರೆ ಪ್ರಮಾಣದಲ್ಲಿ ಏರಿಳಿತವಾಗುತ್ತದೆ. ಇದರಿಂದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಡಯಬೀಟಿಸ್ ಕಾಣಿಸುವ ಸಾಧ್ಯತೆ ಇದೆ.
- ಕಡಿಮೆ ತಿಂದಷ್ಟು ತೂಕ ಹೆಚ್ಚಾಗುವ ಸಾಧ್ಯತೆ ಹೆಚ್ಚು. ಬ್ರೇಕ್ ಫಾಸ್ಟ್ ಸ್ಕಿಪ್ ಮಾಡಿದ್ರೆ ತೂಕ ಹೆಚ್ಚಾಗೋದು ಖಂಡಿತ.
- ಚಯಾಪಚಯ ಕ್ರಿಯೆ ಅಸಮತೋಲನಗೊಳ್ಳುತ್ತದೆ. ದೇಹಕ್ಕೆ ಸಾಕಷ್ಟು ಶಕ್ತಿ ಸಿಗುವುದಿಲ್ಲ. ಇದರಿಂದ ನಿಶ್ಶಕ್ತಿ ಉಂಟಾಗುತ್ತದೆ.
- ಮೆಟಾಬಾಲಿಸಂ ನಿಧಾನವಾಗುತ್ತದೆ. ಬೆಳಗ್ಗೆ ಎದ್ದಾಗಲೇ ನಮ್ಮ ಮೆಟಬಾಲಿಸಂ ಕಡಿಮೆಯಾಗಿರುತ್ತದೆ. ಒಂದು ವೇಳೆ ನಾವು ಬ್ರೇಕ್ ಫಾಸ್ಟ್ ಮಿಸ್ ಮಾಡಿದರೆ ದೇಹದಲ್ಲಿ ಶಕ್ತಿ ಕಡಿಮೆಯಾಗುತ್ತದೆ. ನಿಶಕ್ತರಾಗುತ್ತೇವೆ. ಲವಲವಿಕೆಯಿಂದ ಇರಲು ಸಾಧ್ಯವಾಗುವುದಿಲ್ಲ.
- ಮೆದುಳಿನ ಕೆಲಸದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ, ನೆನಪಿನ ಶಕ್ತಿ ಮತ್ತು ಏಕಾಗ್ರತೆ ಕುಂದುತ್ತದೆ. ಯಾವುದೇ ಕೆಲಸ ಮಾಡಲು ಆಸಕ್ತಿ ಇರೋದಿಲ್ಲ.
- ಬೆಳಗ್ಗೆ ಬ್ರೇಕ್ ಫಾಸ್ಟ್ ಮಾಡಿದರೆ ಮಧ್ಯಾಹ್ನದವರೆಗೆ ಹೊಟ್ಟೆ ಫುಲ್ ಆಗಿರುತ್ತದೆ. ಆದರೆ ಬ್ರೇಕ್ ಫಾಸ್ಟ್ ಮಿಸ್ ಮಾಡಿಕೊಂಡರೆ ಹಸಿವು ಹೆಚ್ಚುತ್ತದೆ. ಹಸಿವು ನೀಗಿಸಲು ಬೇಡದ ಆಹಾರವನ್ನು ಹೆಚ್ಚು ತಿನ್ನುತ್ತೇವೆ.
- ದೇಹದಲ್ಲಿ ಕೆಟ್ಟ ಕೊಬ್ಬು ಸಂಗ್ರಹವಾಗುತ್ತದೆ. ಮೂಳೆಗಳ ಸಾಂದ್ರತೆ ಕಡಿಮೆಯಾಗಿ ಆಸ್ಟಿಯೋಪೋರೋಸಿಸ್‌ಗೆ ಗುರಿಯಾಗುವ ಸಂಭವ ಹೆಚ್ಚು.
- ಶಕ್ತಿ ಕಡಿಮೆಯಾಗುತ್ತದೆ. ಇದರಿಂದ ಪ್ರಜ್ಞೆ ತಪ್ಪಿ ಬೀಳುವ ಸಾಧ್ಯತೆ ಇದೆ.
- ಋತು ಸ್ರಾವದ ವೇಳೆ ವಿಪರೀತ ಹೊಟ್ಟೆನೋವು ಕಾಣಿಸಿಕೊಳ್ಳುತ್ತದೆ. ಹಾರ್ಮೋನ್ ಏರುಪೇರು ಮತ್ತು ಒತ್ತಡ ಮೊದಲಾದ ಸಮಸ್ಯೆಗಳಿಗೆ ತುತ್ತಾಗುತ್ತಾರೆ.
- ಉಸಿರಾಡುವಾಗ ಹಾಗು ಬಾಯಿಯಿಂದ ದುರ್ಗಂಧ ಬರುವ ಸಾಧ್ಯತೆ ಇದೆ.
- ದೇಹಕ್ಕೆ ಬೇಕಾದ ಪೋಷಕಾಂಶಗಳ ಸಿಗುವುದಿಲ್ಲ. ಆಮೇಲೆ ಔಷಧಿಗಳ ಮೊರೆ ಹೋಗ ಬೇಕಾಗಬಹುದು.
- ಮುಖದ ಮೇಲೆ ವಯಸ್ಸಿನ ಗೆರೆಗಳು ಮೂಡಿ, ಏಜ್ ಲುಕ್ ಬರುತ್ತದೆ.