ಎಮ್ಮಿ ಹಲ್ವಾ ಮಾಡಬಲ್ಲ ಕ್ಯಾರೇಟ್ ಪಲ್ಯವೂ ರುಚಿ

First Published 31, Jul 2018, 9:49 AM IST
How to make carrot palya
Highlights

ಕ್ಯಾರೇಟ್ ಹಲ್ವಾ ಹಾಗೂ ಐಸ್ ಕ್ರೀಂ ಬೆಸ್ಟ್ ಕಾಂಬಿನೇಷನ್. ಇದರ ರುಚಿಯನ್ನು ಸವಿದವನೇ ಬಲ್ಲ. ಸರ್ವಕಾಲಕ್ಕೂ ಸೂಟ್ ಆಗೋ ಸ್ವೀಟ್ ಕ್ಯಾರೇಟ್ ಹಲ್ವಾ. ಆದರೆ, ಈ ಕ್ಯಾರೇಟ್‌‌ನಿಂದ ಮಾಡೋ ಪಲ್ಯವೂ ಮಕ್ಕಳಿಗೆ ಇಷ್ಟವಾಗುತ್ತೆ, ಟ್ರೈ ಮಾಡಿ. 

ದೃಷ್ಟಿ ದೋಷ, ದೇಹದಲ್ಲಿ ಕೆಲವು ತೊಂದರೆ ಎಂದಾಕ್ಷಣ ಕೇಳುವ ಮಾತು ಕ್ಯಾರೇಟ್ ತಿನ್ನೋಲ್ವಾ? ತೊಳೆದು ದಿನಾ ಅದನ್ನೇ ತಿನ್ನೋ ಬದಲು ನಿತ್ಯವೂ ವೆರೈಟಿ ತಿನಿಸು ಮಾಡಿಕೊಂಡು ತಿನ್ನಬೇಕು. ಇವತ್ತು ಕ್ಯಾರೇಟ್ ಪಲ್ಯ ಟ್ರೈ ಮಾಡಿ. ಇಲ್ಲಿದೆ ರೆಸಿಪಿ.

ಬೇಕಾಗುವ ಸಾಮಾಗ್ರಿ:

  • 200 ಗ್ರಾಂ. ಕ್ಯಾರೇಟ್
  • 1 ಚಮಚ ಹುಣಸೆ ರಸ 
  • ಗರಂ ಮಸಾಲ
  • ಖಾರದ ಪುಡಿ
  • ಕೊತ್ತಂಬರಿ ಸೊಪ್ಪು
  • ಉದ್ದಿನಬೇಳೆ ನಾಲ್ಕು ಕಾಳು
  • ಕಡಲೆಬೇಳೆ.
  • ಎಣ್ಣೆ
  • ಸಾಸಿವೆ
  • ಉಪ್ಪು 

ಮಾಡುವ ವಿಧಾನ:

ಕ್ಯಾರೇಟ್ ಅನ್ನು ಸಣ್ಣದಾಗಿ ಹೆಚ್ಚಿಕೊಳ್ಳಿ. ಬಾಣಲೆಯಲ್ಲಿ ಎಣ್ಣಿ ಹಾಕಿ ಸಾಸಿವೆ, ಉದ್ದಿನಬೇಳೆ, ಕಡಲೆಬೇಳೆ ಹುರಿದು ಕೊಳ್ಳಿ. ಅದಕ್ಕೆ ಸಣ್ಣದಾಗಿ ಹೆಚ್ಚಿಟ್ಟುಕೊಂಡಿದ್ದ ಕ್ಯಾರೆಟ್ ಹಾಕಿ, ಬೇಯಿಸಿ. ಹುಣಸೆ ರಸ, ಗರಂ ಮಸಾಲ ಮತ್ತು ಉಪ್ಪು ಬೆರೆಸಿ. ಚಂದ ಹೆಚ್ಚಿಸಲು ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಪಲ್ಯ ಮೇಲೆ ಹಾಕಿ. ರುಚಿ ರುಚಿಯಾದ, ಬರೀ ಬಾಯಲ್ಲೇ ತಿನ್ನುವ ಕ್ಯಾರೇಟ್ ಪಲ್ಯ ರೆಡಿ.

loader