ಸೇವಿಸುವ ಆಹಾರವೇ ಎಷ್ಟೋ ಸಲ ಫಲವತ್ತತೆಗೆ ಸಂಚಾರ ತರಬಹುದು ಎನ್ನೋದು ದೊಡ್ಡ ಸತ್ಯ. ಫಲವತ್ತತೆಯನ್ನು ಹೆಚ್ಚಸಬೇಕಾದರೆ ನಮ್ಮ ಡಯೆಟ್ ಹೇಗಿರಬೇಕು, ಇಲ್ಲಿದೆ ಆ ವಿವರ

- ನಾರಿನಂಶ ಇರುವ ಪದಾರ್ಥ ಸೇವಿಸಿ

ನಾರಿನ ಅಂಶ ಸಮೃದ್ಧವಾಗಿರುವ ತರಕಾರಿ, ಹಣ್ಣುಗಳಿಂದ ಜೀರ್ಣಕ್ರಿಯೆ ಸರಾಗವಾಗುತ್ತದೆ. ಇದರಿಂದ ಬ್ಲಡ್ ಶುಗರ್ ಸಮತೋಲನದಲ್ಲಿರುತ್ತೆ. ದೇಹ ಆರೋಗ್ಯಪೂರ್ಣವಾಗಿದ್ದಾಗ ಹಾರ್ಮೋನ್‌ಗಳ ಸ್ರವಿಸುವಿಕೆ ಹಾಗೂ ಕ್ರಿಯಾತ್ಮಕತೆ ಹೆಚ್ಚುತ್ತದೆ. ಆಗ ಗಂಡು ಹೆಣ್ಣು ಇಬ್ಬರ ದೇಹದಲ್ಲೂ ಫಲವತ್ತತೆ ಕೊರತೆ ನೀಗಿ ಶೀಘ್ರ ಗರ್ಭಾಂಕುರವಾಗಬಹುದು. 

- ಗಂಡ ಹೆಂಡತಿ ಇಬ್ಬರೂ ಅಂಜೂರದ ಹಣ್ಣು ತಿನ್ನಿ

ಫೊಲೇಟ್ ಮತ್ತು ಜಿಂಕ್‌ನ ಪ್ರಮಾಣ ಅಧಿಕವಾಗಿರುವ ಅಂಜೂರದ ಹಣ್ಣು ಫರ್ಟಿಲಿಟಿ ಸಮಸ್ಯೆಗೆ ಉತ್ತಮ ಪರಿಹಾರ. ಇದರ ಜೊತೆಗೆ ಬಾದಾಮಿ, ಗೋಡಂಬಿ, ಕಡ್ಲೇಬೀಜ ದಂಥ ಒಣಹಣ್ಣುಗಳನ್ನೂ ಸೇವಿಸಬಹುದು. ಹಸಿರು ತರಕಾರಿ, ಬೀನ್ಸ್ ಸೇವನೆಯೂ ಒಳ್ಳೆಯದು. ಆದರೆ ಸೋಯಾ ಬೀನ್‌ನಂಥ ಆಹಾರವನ್ನು ಸಂಸ್ಕರಿಸಿ ಸೇವಿಸುವಾಗ ಸ್ವಲ್ಪ ಎಚ್ಚರ ವಹಿಸಿ. ಇದರಿಂದ ಫಲವತ್ತತೆಯ ಕೊರತೆ ಉಂಟಾಗಬಹುದು. 

- ಸೀ ಫುಡ್ ಗಳಿಂದ ಲೈಂಗಿಕ ಆಸಕ್ತಿ ವೃದ್ಧಿ

ಇತ್ತೀಚೆಗೆ ‘ಎಂಡೋಕ್ರೈನ್ ಸೊಸೈಟಿ’ ಆಸಕ್ತಿಕರ ಅಧ್ಯಯನ ನಡೆಸಿತು. ಸೀ ಫುಡ್ ಲೈಂಗಿಕತೆ ಮೇಲೆ ಪರಿಣಾಮ ಬೀರುತ್ತಾ ಅನ್ನುವ ವಿಷಯದ ಮೇಲೆ. ಫಲಿತಾಂಶ ಸಕಾರಾತ್ಮಕವಾಗಿತ್ತು. ಸೀ ಫುಡ್‌ಅನ್ನು ತಿಂದರೆ ಲೈಂಗಿಕ ಆಸಕ್ತಿ ಹೆಚ್ಚುತ್ತದೆ ಎನ್ನುವುದು ಸಾಬೀತಾಯ್ತು. ಈ ಬಗೆಯ ಲೈಂಗಿಕತೆಯಿಂದ ಸ್ಟ್ರೆಸ್ ಮತ್ತು ಉದ್ವಿಗ್ನತೆ ಕಡಿಮೆಯಾಗಿ ಫಲವತ್ತತೆಯ ಹಾರ್ಮೋನ್ ಸ್ರವಿಸುವಿಕೆ ಸರಾಗವಾಗುತ್ತದೆ. ಇದರಿಂದ ಶೀಘ್ರ ಮಗುವನ್ನು ಪಡೆಯಬಹುದು. 

- ಲೋ ಕಾರ್ಬ್ ಡಯೆಟ್

ಕಾರ್ಬೊಹೈಡ್ರೇಟ್ ಕಡಿಮೆ ಇರುವ ಡಯೆಟ್‌ನಿಂದ ಕನ್ಸೆಪ್ಷನ್‌ನ ಸಾಧ್ಯತೆ ಐದು ಪಟ್ಟು ಹೆಚ್ಚು ಅನ್ನುವುದು ಸಂಶೋಧನೆಗಳಿಂದ ತಿಳಿದುಬಂದಿದೆ. ಸಂಸ್ಕರಿತ ಕಾರ್ಬೊಹೈಡ್ರೇಟ್ ಅಧಿಕವಿರುವ ಚಿಪ್ಸ್, ಜಂಕ್‌ಫುಡ್ ಬೊಜ್ಜು ಬೆಳೆಯಲು ಗೊಬ್ಬರವಿದ್ದಂತೆ. ಈ ಒಬೆಸಿಟಿ ಫಲವತ್ತತೆ ಕೊರತೆಗೂ ಕಾರಣವಾಗುತ್ತೆ. ಕಡಿಮೆ ಕಾರ್ಬೊಹೈಡ್ರೇಟ್ ಆಹಾರ ಸೇವನೆಯಿಂದ ಫಲವತ್ತತೆ ಹೆಚ್ಚುತ್ತೆ. 

- ಡಯೆಟ್ ಜೊತೆಗೆ ಎಕ್ಸರ್ ಸೈಸ್

ವ್ಯಾಯಾಮ ಮಾಡಿದಷ್ಟೂ ಒಳ್ಳೆಯದೇ. ಡಯೆಟ್ ಜೊತೆಗೆ ಎಕ್ಸರ್‌ಸೈಸ್‌ಅನ್ನೂ ಮಾಡ್ತಿದ್ರೆ ಗರ್ಭ ಧರಿಸಲು ದೇಹ ತಯಾರಾಗುತ್ತೆ. ಗರ್ಭಧಾರಣೆಗೆ ಋತುಸ್ರಾವದಲ್ಲಿನ ಅನಿಯಮಿತತೆಯೂ ಕಾರಣ. ಎಷ್ಟೋ ಸಲ ನಿಯಮಿತವಾಗಿ ವ್ಯಾಯಾಮ ಮಾಡುವ ಈ ಮೂಲಕ ಈ ಸಮಸ್ಯೆಯಿಂದ ಹೊರಬರಬಹುದು. ಒಮ್ಮೆ ನಿಮ್ಮ ಪೀರೆಯಡ್ಸ್ ನಿಯಮಿತಾಗಿ ಆಗಲು ಶುರುವಾದರೆ ಗರ್ಭ ಧರಿಸುವ ಸಾಧ್ಯತೆ ಹೆಚ್ಚುತ್ತೆ.