Asianet Suvarna News Asianet Suvarna News

ಅಂಬಾನಿಯ ಬೆಂಗಾವಲಿಗೆ ಮತ್ತೊಂದು ದುಬಾರಿ ಕಾರು, ಅಬ್ಬಬ್ಬಾ ಅಲ್ಟ್ರಾ ಲಕ್ಸುರಿಯಸ್‌ ರೆಡ್ ಫೆರಾರಿ ಬೆಲೆ ಇಷ್ಟೊಂದಾ?

ಮುಕೇಶ್ ಅಂಬಾನಿ, ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಅಂಬಾನಿ ಕುಟುಂಬ ತಾವು ಹೋದಲ್ಲೆಲ್ಲಾ ಐಷಾರಾಮಿ ಕಾರುಗಳ ಬೃಹತ್ ಬೆಂಗಾವಲು ಪಡೆಯಲ್ಲಿ ಪ್ರಯಾಣಿಸುತ್ತಾರೆ. ಸದ್ಯ ಈ ದುಬಾರಿ ಕಾರುಗಳ ಸಂಗ್ರಹಕ್ಕೆ ಹೊಸ ಕಾರು ಸೇರ್ಪಡೆಯಾಗಿದೆ. ಅದ್ರ ಬೆಲೆ ಎಷ್ಟೂಂತ ಗೊತ್ತಾದ್ರೆ ನಿಮ್ ತಲೆ ತಿರುಗೋದು ಖಂಡಿತ.

Mukesh Ambani brings new supercar for massive collection, buys Rs 4.5 crore Ferrari Roma Vin
Author
First Published Dec 4, 2023, 2:35 PM IST

ಮುಕೇಶ್ ಅಂಬಾನಿ, ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಕೋಟ್ಯಾಧಿಪತಿಗಳ ಕುಟುಂಬ ತಮ್ಮ ಅದ್ಧೂರಿ ಲೈಫ್‌ಸ್ಟೈಲ್‌ನಿಂದ ಆಗಾಗ ಎಲ್ಲರ ಗಮನ ಸೆಳೆಯುತ್ತಾರೆ. ಗ್ರ್ಯಾಂಡ್ ಪಾರ್ಟಿ ಆಯೋಜಿಸಿ, ಕೋಟಿ, ಲಕ್ಷದ ಡ್ರೆಸ್‌, ಶೂ, ಆಸೆಸ್ಸರೀಸ್ ಧರಿಸಿ ಸುದ್ದಿಯಾಗುತ್ತಾರೆ. ಅಂಬಾನಿ ಕುಟುಂಬದ ಕಾರ್ ಕಲೆಕ್ಷನ್ ಸಹ ಬೆಚ್ಚಿಬೀಳಿಸುವಂತಿದೆ. ಇದು ಕೋಟಿ ಕೋಟಿ ಬೆಲೆಯ ಲಕ್ಸುರಿಯಸ್ ಕಾರುಗಳನ್ನು ಹೊಂದಿದೆ. ಅಂಬಾನಿ ಕುಟುಂಬ ತಾವು ಹೋದಲ್ಲೆಲ್ಲಾ ಐಷಾರಾಮಿ ಕಾರುಗಳ ಬೃಹತ್ ಬೆಂಗಾವಲು ಪಡೆಯಲ್ಲಿ ಪ್ರಯಾಣಿಸುತ್ತಾರೆ. ಅಂಬಾನಿ ಕುಟುಂಬದ ಸದಸ್ಯರ ಬೆಂಗಾವಲು ಸಾಮಾನ್ಯವಾಗಿ ಮರ್ಸಿಡಿಸ್-ಎಎಮ್‌ಜಿ ಜಿ63, ರೇಂಜ್ ರೋವರ್ ಎಸ್‌ಯುವಿಗಳು, ರೋಲ್ಸ್ ರಾಯ್ಸ್ ಕುಲ್ಲಿನನ್ ಇತ್ಯಾದಿಗಳನ್ನು ಹೊಂದಿರುತ್ತದೆ. ಆದರೆ ಇತ್ತೀಚೆಗೆ ಈ ದುಬಾರಿ ಕಾರುಗಳ ಸಂಗ್ರಹಕ್ಕೆ ಹೊಸ ಕಾರು ಸೇರ್ಪಡೆಯಾಗಿದೆ.

ಅದುವೇ ಹೊಸ ಫೆರಾರಿ ರೋಮಾ. ಈ ಅಲ್ಟ್ರಾ ಲಕ್ಸುರಿಯಸ್‌ ಕಾರು 'ಫೆರಾರಿ ರೆಡ್' ಬಣ್ಣವನ್ನು ಹೊಂದಿದೆ ಮತ್ತು ಇದರ ಬೆಲೆ (Price) ಸುಮಾರು 4.5 ಕೋಟಿ ರೂ. ಎಂದು ತಿಳಿದುಬಂದಿದೆ. ಭಾರತದಲ್ಲಿ ಫೆರಾರಿ ಕಾರುಗಳ ಬಳಕೆ ತುಸು ಕಡಿಮೆಯೇ.  ಅದರಲ್ಲೂ ರೋಮಾ ಮಾದರಿಯ ಕಾರುಗಳು ಭಾರತದ ರಸ್ತೆಗಳಲ್ಲಿ ಅತ್ಯಂತ ಅಪರೂಪವಾಗಿದೆ. 2021ರಲ್ಲಿ ಬಿಡುಗಡೆಯಾದ ಫೆರಾರಿ ರೋಮಾ ತಯಾರಕರ ಇತರ ಕಾರುಗಳಿಗಿಂತ ಭಿನ್ನವಾಗಿದೆ. 

ಬಹುಕೋಟಿ ಬಿಸಿನೆಸ್‌ಗೆ ಲಾಸ್‌ ಮಾಡ್ತಾರ ಮುಕೇಶ್ ಅಂಬಾನಿ, ಅತೀ ಕಡಿಮೆ ಬೆಲೆಗೆ ಸಿಗಲಿದೆ ಜಿಯೋ ಲ್ಯಾಪ್‌ಟಾಪ್‌!

ಅಂಬಾನಿಯ ಪಾರ್ಕಿಂಗ್‌ನಲ್ಲಿದೆ ಅಲ್ಟ್ರಾ ಲಕ್ಸುರಿಯಸ್‌ ಸೂಪರ್‌ಕಾರ್‌
ಹುಡ್ ಅಡಿಯಲ್ಲಿ, ಫೆರಾರಿ ರೋಮಾವು 3.9-ಲೀಟರ್ ಟ್ವಿನ್-ಟರ್ಬೋಚಾರ್ಜ್ಡ್ V8 ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ, ಇದು 690 PS ನ ಗರಿಷ್ಠ ಶಕ್ತಿಯನ್ನು ಮತ್ತು 760 Nm ನ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹೊಸ ಫೆರಾರಿ ರೋಮಾ ಫೆರಾರಿ 812 ಸೂಪರ್‌ಫಾಸ್ಟ್, ಮೆಕ್‌ಲಾರೆನ್ 570 ಎಸ್, ಲಂಬೋರ್ಘಿನಿ ಅವೆಂಟಡಾರ್ ಎಸ್ ರೋಡ್‌ಸ್ಟರ್, ಫೆರಾರಿ 488 ಜಿಟಿಬಿ, ಫೆರಾರಿ ಪೋರ್ಟೊಫಿನೊ, ಆಸ್ಟನ್ ಮಾರ್ಟಿನ್ ಡಿಬಿ11 ಮತ್ತು ಅಂಬಾನಿಯ ಪಾರ್ಕಿಂಗ್‌ನಲ್ಲಿರುವ ಇತರ ಸೂಪರ್‌ಕಾರ್‌ಗಳನ್ನು ಸೇರುತ್ತದೆ.

ಇತ್ತೀಚಿಗೆ ಮುಕೇಶ್ ಅಂಬಾನಿ ಅವರು ತಮ್ಮ ಪತ್ನಿ ನೀತಾ ಅಂಬಾನಿ ಅವರಿಗೆ ಉಡುಗೊರೆ (Gift)ಯಾಗಿ 10 ಕೋಟಿ ರೂ.ಗಳ ರೋಲ್ಸ್ ರಾಯ್ಸ್ ಕಲಿನನ್ ಬ್ಲಾಕ್ ಬ್ಯಾಡ್ಜ್ ಎಸ್‌ಯುವಿ ಖರೀದಿಸಿದ್ದರು. ರೋಲ್ಸ್ ರಾಯ್ಸ್ ಕಲ್ಲಿನನ್ ಬ್ಲ್ಯಾಕ್ ಬ್ಯಾಡ್ಜ್ ಭಾರತದಲ್ಲಿನ ಅತ್ಯಂತ ದುಬಾರಿ ಎಸ್‌ಯುವಿಯಾಗಿದೆ. ದೇಶದಲ್ಲಿ ಕೆಲವೇ ಸೆಲೆಬ್ರಿಟಿಗಳು ಈ ಕಾಸ್ಟ್ಲೀ ಕಾರನ್ನು ಹೊಂದಿದ್ದಾರೆ. ಭಾರತದಲ್ಲಿನ ಜನಪ್ರಿಯ ರೋಲ್ಸ್ ರಾಯ್ಸ್ ಕಲ್ಲಿನನ್ ಬ್ಲ್ಯಾಕ್ ಬ್ಯಾಡ್ಜ್ ಮಾಲೀಕರಲ್ಲಿ (Owner) ಒಬ್ಬರು ಬಾಲಿವುಡ್ ಸ್ಟಾರ್ ಶಾರುಕ್ ಖಾನ್‌. ಅದೇನೆ ಇರ್ಲಿ, ಅಂಬಾನಿಯ ಕೋಟಿ ಕೋಟಿ ಬೆಲೆಯ ಕಾರು ಕಲೆಕ್ಷನ್ ಎಲ್ಲರನ್ನೂ ನಿಬ್ಬೆರಗಾಗಿಸುತ್ತಿರುವುದಂತೂ ನಿಜ.

ಜಿಯೋ ಮಾಲ್‌ನಲ್ಲಿ ಅಂತಾರಾಷ್ಟ್ರೀಯ ಫ್ಯಾಷನ್ ಬ್ರ್ಯಾಂಡ್‌; ಬರೀ ಬಾಡಿಗೆಯಿಂದ್ಲೇ ಅಂಬಾನಿ ಗಳಿಸ್ತಿರೋದು ಇಷ್ಟೊಂದಾ?

ವಿಶ್ವದ ಅತ್ಯಂತ ದುಬಾರಿ ಬಂಗಲೆ ಅಂಟಿಲಿಯಾ
ವಿಶ್ವದಲ್ಲೇ ಅತ್ಯಂತ ದುಬಾರಿ ಮನೆಯಲ್ಲಿ ಅಂಬಾನಿ ಕುಟುಂಬ ವಾಸಿಸುತ್ತಿದೆ. ಮುಕೇಶ್ ಅಂಬಾನಿ ಒಡೆತನದ ಐಷಾರಾಮಿ ಬಂಗಲೆ ಅಂಟಿಲಿಯಾ ಬರೋಬ್ಬರಿ 15000 ಕೋಟಿ ರೂ. ಮೌಲ್ಯದ್ದಾಗಿದೆ. ಇದರಲ್ಲಿ ನೀತಾ ಅಂಬಾನಿ, ಅನಂತ್ ಅಂಬಾನಿ, ಆಕಾಶ್ ಅಂಬಾನಿ, ಶ್ಲೋಕಾ ಅಂಬಾನಿ ಮತ್ತು ಪೃಥ್ವಿ ಅಂಬಾನಿ ವಾಸಿಸುತ್ತಾರೆ. ಈ ಬೃಹತ್ ಬಂಗಲೆ 27 ಮಹಡಿಗಳನ್ನು ಹೊಂದಿದೆ. 173 ಮೀಟರ್ (568 ಅಡಿ) ಎತ್ತರವಾಗಿದೆ. ಸಂಪೂರ್ಣ ರಚನೆಯು 37,000 ಚದರ ಮೀಟರ್ ಪ್ರದೇಶದಲ್ಲಿ ಹರಡಿದೆ. ಆಂಟಿಲಿಯಾವು 168 ಕಾರ್ ಗ್ಯಾರೇಜ್, ಬಾಲ್ ರೂಂ, 9 ಹೈ ಸ್ಪೀಡ್ ಎಲಿವೇಟರ್‌ಗಳು, 50 ಆಸನಗಳ ಥಿಯೇಟರ್, ಟೆರೇಸ್ ಗಾರ್ಡನ್ಸ್, ಈಜುಕೊಳ, ಸ್ಪಾ, ಆರೋಗ್ಯ ಕೇಂದ್ರ ಮತ್ತು ದೇವಸ್ಥಾನವನ್ನು ಹೊಂದಿದೆ.

Follow Us:
Download App:
  • android
  • ios