ವಾರ್ ಟೆಕ್ಸ್ಚರ್ ಡಿಸೈನ್, ಇಂಟೀರಿಯರ್‌ಗೆ ಶ್ರೀಮಂತಿಕೆ ನೀಡುವ 7 ಆರ್ಟ್ ವರ್ಕ್
ಮನೆಯ ಗೋಡೆಗಳು ಸ್ಟೈಲಿಶ್ ಆಗಿ ಕಂಡಾಗ ಮಾತ್ರ ಇಂಟೀರಿಯರ್ ಡಿಸೈನ್ ಪೂರ್ಣಗೊಳ್ಳುತ್ತದೆ. ಸಾದಾ ಪೇಂಟ್‌ಗಿಂತ ವಾಲ್ ಟೆಕ್ಸ್ಚರ್ ಡಿಸೈನ್‌ಗಳು ಮನೆಗೆ ಶ್ರೀಮಂತ ನೋಟ ನೀಡುತ್ತವೆ. ಇಲ್ಲಿವೆ 7 ಅತ್ಯುತ್ತಮ ಡಿಸೈನ್‌ಗಳು.
life Mar 18 2026
Author: Mahmad Rafik Image Credits:Asianet News
Kannada
ಮಾರ್ಬಲ್ ಟೆಕ್ಸ್ಚರ್ ವಾಲ್
ಮಾರ್ಬಲ್ ಫಿನಿಶ್ ಇರುವ ಟೆಕ್ಸ್ಚರ್ ಮನೆಗೆ ತಕ್ಷಣವೇ ರಾಯಲ್ ಲುಕ್ ನೀಡುತ್ತದೆ. ಗೋಡೆಯ ಮೇಲೆ ಅಮೃತಶಿಲೆಯಂತಹ ವಿನ್ಯಾಸವನ್ನು ರಚಿಸಲಾಗುತ್ತದೆ. ಲಿವಿಂಗ್ ರೂಮ್, ಎಂಟ್ರೆನ್ಸ್ ಏರಿಯಾದಲ್ಲಿ ಬಹಳ ಆಕರ್ಷಕವಾಗಿ ಕಾಣುತ್ತದೆ.
Image credits: Gemini AI
Kannada
ಸ್ಪಾಂಜ್ ಬ್ಲಾಕ್ ಟೆಕ್ಸ್ಚರ್ ವಾಲ್
ಸ್ಪಾಂಜ್ ಬಳಸಿ ಪೇಂಟ್ ಅನ್ನು ಗೋಡೆಯ ಮೇಲೆ ಡ್ಯಾಬ್ ಮಾಡುವ ಮೂಲಕ ಈ ಟೆಕ್ಸ್ಚರ್ ಮಾಡ್ತಾರೆ. ಇದರಿಂದ ಗೋಡೆಗೆ ಸಾಫ್ಟ್ ಮತ್ತು ಕ್ಲೌಡಿ ಎಫೆಕ್ಟ್ ಸಿಗುತ್ತದೆ. ಇದು ಬೆಡ್‌ರೂಮ್‌ಗೆ ಒಂದು ವಿಶಿಷ್ಟ ನೋಟವನ್ನು ನೀಡುತ್ತದೆ.
Image credits: instagram
Kannada
ಮೆಟಾಲಿಕ್ ಗೋಲ್ಡ್ ಟೆಕ್ಸ್ಚರ್
ನಿಮಗೆ ಶ್ರೀಮಂತ ಮತ್ತು ಗ್ಲಾಮರಸ್ ಲುಕ್ ಬೇಕಿದ್ದರೆ, ಮೆಟಾಲಿಕ್ ಗೋಲ್ಡ್ ಟೆಕ್ಸ್ಚರ್ ಪರ್ಫೆಕ್ಟ್ ಆಯ್ಕೆ. ಇದರಲ್ಲಿ ಗೋಡೆಗೆ ತಿಳಿ ಚಿನ್ನದ ಬಣ್ಣದ ಶೈನ್ ನೀಡಲಾಗುತ್ತದೆ. ಇದು ಬೆಳಕು ಬಿದ್ದಾಗ ಹೊಳೆಯುತ್ತದೆ.
Image credits: Gemini AI
Kannada
ಬ್ರಷ್ ಸ್ಟ್ರೋಕ್ ಟೆಕ್ಸ್ಚರ್
ಈ ಟೆಕ್ಸ್ಚರ್‌ನಲ್ಲಿ, ಪೇಂಟ್ ಅನ್ನು ಬ್ರಷ್‌ನಿಂದ ವಿಶೇಷ ಪ್ಯಾಟರ್ನ್‌ನಲ್ಲಿ ಹಚ್ಚಲಾಗುತ್ತದೆ. ಇದು ಗೋಡೆಗೆ ಕಲಾತ್ಮಕ ನೋಟವನ್ನು ನೀಡುತ್ತದೆ. ಈ ವಿನ್ಯಾಸ ಮಾಡರ್ನ್ ಮತ್ತು ಮಿನಿಮಲ್ ಇಂಟೀರಿಯರ್‌ಗೆ ಉತ್ತಮ ಆಯ್ಕೆ.
Image credits: instagram
Kannada
ಫ್ಲವರ್ ಆರ್ಟ್ ಫಿನಿಶ್ ಟೆಕ್ಸ್ಚರ್
ಸಾಫ್ಟ್ ಲುಕ್ ಇಷ್ಟಪಡುವವರಿಗೆ ಫ್ಲವರ್ ಆರ್ಟ್ ಫಿನಿಶ್ ಟೆಕ್ಸ್ಚರ್ ಅತ್ಯುತ್ತಮ ಆಯ್ಕೆ. ಇದರಲ್ಲಿ ಗೋಡೆಯ ಮೇಲೆ ಸ್ವಲ್ಪ ರಫ್ ಮತ್ತು ಮ್ಯಾಟ್ ಟೆಕ್ಸ್ಚರ್ ಅನ್ನು ರಚಿಸಲಾಗುತ್ತದೆ.
Image credits: instagram
Kannada
3D ಟೆಕ್ಸ್ಚರ್ ಪ್ಯಾನಲ್
3D ಪ್ಯಾನಲ್ ವಾಲ್‌ಗಳು ಈಗ ಸಿಕ್ಕಾಪಟ್ಟೆ ಟ್ರೆಂಡ್‌ನಲ್ಲಿವೆ. ಇದರಲ್ಲಿ ಗೋಡೆಯ ಮೇಲೆ ಉಬ್ಬಿದ ಮಾದರಿಗಳನ್ನು (ವೇವ್ಸ್ ಅಥವಾ ಜಿಯೋಮೆಟ್ರಿಕ್ ಡಿಸೈನ್) ಮಾಡಲಾಗುತ್ತದೆ. ಲಿವಿಂಗ್ ರೂಮ್‌ಗೆ ಪ್ರೀಮಿಯಂ ಲುಕ್ ನೀಡುತ್ತದೆ.
Image credits: Gemini AI
Kannada
ಆರ್ಟ್ ವರ್ಕ್ ವಾಲ್ ಟೆಕ್ಸ್ಚರ್ ಡಿಸೈನ್
ನೀವು ನ್ಯಾಚುರಲ್ ಮತ್ತು ರಾಯಲ್ ಫೀಲ್ ಬಯಸಿದರೆ, ಆರ್ಟ್ ವರ್ಕ್ ವಾಲ್ ಟೆಕ್ಸ್ಚರ್ ಡಿಸೈನ್ ಒಂದು ಅದ್ಭುತ ಆಯ್ಕೆ. ಇದರಲ್ಲಿ ಗೋಡೆಯ ಮೇಲೆ ಪ್ರಕೃತಿ, ಹೂವು, ಬಳ್ಳಿ ಅಥವಾ ವಿವಿಧ ಕಲಾಕೃತಿಗಳನ್ನು ಬಿಡಿಸಲಾಗುತ್ತದೆ.