ಪ್ಲಾಸ್ಟಿಕ್ ಕಪ್ ಮರುಬಳಕೆ: ಬಿಸಾಡುವ ಕಪ್‌ಗಳಿಂದ 7 ಅದ್ಭುತ ವಸ್ತುಗಳನ್ನು ಮಾಡಿ
ಮನೆಯಲ್ಲಿ ಉಳಿದಿರುವ ಡಿಸ್ಪೋಸಬಲ್ ಪ್ಲಾಸ್ಟಿಕ್ ಕಪ್‌ಗಳನ್ನು ಎಸೆಯಬೇಡಿ. ಅವುಗಳಿಂದಲೇ ಮನೆಯನ್ನು ಸಿಂಗರಿಸುವ ಸುಲಭ ಉಪಾಯಗಳು ಇಲ್ಲಿವೆ.
life Mar 18 2026
Author: Mahmad Rafik Image Credits:chat GPT
Kannada
ಪ್ಲಾಸ್ಟಿಕ್ ಕಪ್ ಮರುಬಳಕೆ ಐಡಿಯಾ
ಪಾರದರ್ಶಕ ಪ್ಲಾಸ್ಟಿಕ್ ಕಪ್‌ಗಳಿಗೆ ಬಣ್ಣ ಬಣ್ಣದ ದಾರಗಳನ್ನು ಸುತ್ತಿ. ಕಪ್‌ನ ಮೇಲೆ ಮತ್ತು ಕೆಳಗೆ ಜೇಡಿಮಣ್ಣಿನಿಂದ (clay) ಮಾಡಿದ ಚಿಕ್ಕ ಹೂವುಗಳನ್ನು ಅಂಟಿಸಿ. ನಂತರ ಇದನ್ನು ಮನೆಯ ಮೂಲೆಯಲ್ಲಿ ನೇತುಹಾಕಿ.
Image credits: gemini AI
Kannada
ಪ್ಲಾಸ್ಟಿಕ್ ಕಪ್ ಪೆನ್ಸಿಲ್ ಸ್ಟ್ಯಾಂಡ್
ಮಕ್ಕಳ ಸ್ಟಡಿ ಟೇಬಲ್‌ಗೆ ಪೆನ್/ಪೆನ್ಸಿಲ್ ಹೋಲ್ಡರ್ ತಯಾರಿಸಿ. ಪ್ಲಾಸ್ಟಿಕ್ ಕಪ್‌ಗೆ ಬಿಳಿ ಬಣ್ಣ ಬಳಿದು, ಅದರ ಮೇಲೆ ಮುದ್ದಾದ ಮುಖ ಬಿಡಿಸಿ. ಪಕ್ಕದಲ್ಲಿ ಕ್ಯೂಟ್ ಪಾಂಡಾ ಚಿತ್ರವನ್ನು ಅಂಟಿಸಿ ಸ್ಟಡಿ ಟೇಬಲ್ ಮೇಲೆ ಇಡಿ.
Image credits: gemini AI
Kannada
ಪ್ಲಾಸ್ಟಿಕ್ ಕಪ್‌ನಿಂದ ಹೂವು
ಚಿಕ್ಕ ಚಿಕ್ಕ ಬಣ್ಣದ ಪ್ಲಾಸ್ಟಿಕ್ ಕಪ್‌ಗಳನ್ನು ತೆಗೆದುಕೊಂಡು, ಮೇಲ್ಭಾಗವನ್ನು ತೆಳುವಾದ ಪಟ್ಟಿಗಳಾಗಿ ಕತ್ತರಿಸಿ. ಅದನ್ನು ಹೂವಿನ ಆಕಾರ ಬರುವಂತೆ ತೆರೆಯಿರಿ. ಇದೇ ರೀತಿ ಬೇರೆ ಬೇರೆ ಬಣ್ಣದ ಹೂ ಮಾಡಿ ಗೋಡೆಗೆ ಅಂಟಿಸಿ.
Image credits: Pinterest
Kannada
ಪ್ಲಾಸ್ಟಿಕ್ ಕಪ್ ಮಾಡರ್ನ್ ಆರ್ಟ್
ಪ್ಲಾಸ್ಟಿಕ್ ಕಪ್‌ಗಳಿಗೆ ಬಿಳಿ, ಹಳದಿ ಮತ್ತು ಕಪ್ಪು ಬಣ್ಣ ಬಳಿಯಿರಿ. ನಂತರ ನಿಮ್ಮ ಮನೆಯ ಗೋಡೆಯ ಮೇಲೆ ವೃತ್ತಾಕಾರದಲ್ಲಿ ಜೋಡಿಸಿ. ಈ ರೀತಿ ಒಂದು ಮಾಡರ್ನ್ ಆರ್ಟ್ ತಯಾರಿಸಬಹುದು.
Image credits: Instagram
Kannada
ಪ್ಲಾಸ್ಟಿಕ್ ಕಪ್‌ನಿಂದ ಗೊಂಬೆ
ಮಕ್ಕಳ ಆರ್ಟ್ ಕ್ರಾಫ್ಟ್ ಪ್ರಾಜೆಕ್ಟ್‌ಗಾಗಿ, ಒಂದು ಶೀಟ್ ಮೇಲೆ ಗೊಂಬೆ ಬಿಡಿಸಿ. ಅದರ ಡ್ರೆಸ್ ಮಾಡಲು ಪ್ಲಾಸ್ಟಿಕ್ ಕಪ್ ಅನ್ನು ಅರ್ಧಕ್ಕೆ ಕತ್ತರಿಸಿ. ಅದಕ್ಕೆ ಕೆಂಪು ಬಣ್ಣ ಬಳಿದು, ಕೆಳಗೆ ಗೋಲ್ಡನ್ ಗ್ಲಿಟರ್ ಹಚ್ಚಿ.
Image credits: Pinterest
Kannada
ಪ್ಲಾಸ್ಟಿಕ್ ಕಪ್‌ನಿಂದ ವಿಂಡ್ ಚೈಮ್
ಒಂದು ವೃತ್ತಾಕಾರದ ಡಿಸ್ಕ್ ತೆಗೆದುಕೊಂಡು ಅದಕ್ಕೆ ಸಣ್ಣ ರಂಧ್ರಗಳನ್ನು ಮಾಡಿ. ಚಿಕ್ಕದರಿಂದ ದೊಡ್ಡದಾಗುವಂತೆ ಹಗ್ಗಗಳನ್ನು ಕಟ್ಟಿ. ಕೆಳಗೆ ಪ್ಲಾಸ್ಟಿಕ್ ಕಪ್‌ಗಳಿಗೆ ಬಣ್ಣ ಬಳಿದು, ಮಣಿಗಳ ಜೊತೆ ಜೋಡಿಸಿ.
Image credits: Pinterest
Kannada
ಹ್ಯಾಂಗಿಂಗ್ ಲೈಟ್ ಡೆಕೋರೇಷನ್
ಪ್ಲಾಸ್ಟಿಕ್ ಕಪ್‌ಗಳನ್ನು ತಲೆಕೆಳಗಾಗಿ ನೇತುಹಾಕಿ, ಅದರ ಮೇಲೆ ಬೇರೆ ಬೇರೆ ಬಣ್ಣದ ದಾರಗಳನ್ನು ಸುತ್ತಿ. ಅದರಲ್ಲಿ ಚಿಕ್ಕ ಚಿಕ್ಕ ಬಲ್ಬ್‌ಗಳನ್ನು ಹಾಕಿ ಸುಂದರವಾದ ಲೈಟ್ ಡೆಕೋರೇಷನ್ ಮಾಡಿ.