ಕ್ರಾಪ್ ಟಾಪ್, ಟಾರ್ಟಾಯ್ಸ್ ನೆಕ್, ಆಫ್ ಶೋಲ್ಡರ್ ಹೀಗೆ ಹೊಸತಾಗಿ ಬಂದ ಟ್ರೆಂಡೆಲ್ಲ ಹಳೆಯದಾಗೇ ಹೋಯ್ತು. ಹೊಸತೇನಾದರೂ ಟ್ರೈ ಮಾಡ್ಬೇಕಲ್ಲಾ ಎಂದು ನಿಮ್ಮೊಳಗಿನ ಸ್ಟೈಲಿಸ್ಟ್ ಕೂಗಿ ಹೇಳುತ್ತಿರಬಹುದು. ಈ ಬಾರಿ ಟ್ರೆಂಡ್ ಫಾಲೋ ಮಾಡುವವರಾಗದೇ ಟ್ರೆಂಡ್ ಸೃಷ್ಟಿಸುವವರಾಗಿ ಮಜಾ ನೋಡಿ. ಹಾಗಿದ್ದರೆ ಈ ಬಾರಿ ಶಾಪಿಂಗ್ ಮಾಡುವಾಗ ವಿಮೆನ್ಸ್ ಸೆಕ್ಷನ್ ಬದಲಾಗಿ ಮೆನ್ಸ್ ಸೆಕ್ಷನ್‌ನತ್ತ ಹೋಗಿ. ನಿಮ್ಮನ್ನು ಬೋಲ್ಡ್ ಆ್ಯಂಡ್ ಬ್ಯೂಟಿಫುಲ್ ಮಾಡುವಂಥ, ಹಾಟಿಗಳ ಮಧ್ಯೆ ಕೂಲ್ ಎನಿಸಿಕೊಳ್ಳುವಂಥ ಸ್ಟೈಲ್‌ಗಳು  ಅಲ್ಲಿವೆ. 

ರೆಡಿ ಟು ವೇರ್ ಸೀರೆಗಳದ್ದೇ ಕಾರುಬಾರು

ಬ್ಯಾಗಿ ಜಾಕೆಟ್ಸ್
ಪುರುಷರ ಈ ಬ್ಯಾಗಿ ಜಾಕೆಟ್ಸ್‌ ಬರಲಿರುವ ಮಳೆಗಾಲ ಹಾಗೂ ಚಳಿಗಾಲಕ್ಕೆ ಕಂಫರ್ಟ್ ಜೊತೆಗೆ ಬೋಲ್ಡ್ ಲುಕ್ ನೀಡುತ್ತವೆ. ಕ್ಯಾಶುಯಲ್ ವೆಸ್ಟರ್ನ್‌ನಿಂದ ಹಿಡಿದು ಎಥ್ನಿಕ್ ಹಾಗೂ ಫಾರ್ಮಲ್ ವೇರ್‌ಗೆ ಕೂಡಾ ನೀವು ಈ ಜಾಕೆಟ್ ಮ್ಯಾಚ್ ಮಾಡಬಹುದು. ಈಸಿ ಫಿಟ್ಟಿಂಗ್ ಹೊಂದಿರುವ ಮೆನ್ಸ್ ಜಾಕೆಟ್ ಆರಿಸಿಕೊಳ್ಳಿ. ಬ್ಲೂ ಜೀನ್ಸ್, ಆರ್ಮಿ ಗ್ರೀನ್, ಬೇಬಿ ಪಿಂಕ್ ಬಣ್ಣಗಳ ಜಾಕೆಟ್ ನಿಮಗೆ ಯೋ ಯೋ ಲುಕ್ ಕೊಡುತ್ತವೆ. 

ಬೆಂಗಳೂರು ಫ್ಯಾಷನ್ ವೀಕ್‌ನಲ್ಲಿ ಬಸಣ್ಣಿ

ಬೇಸಿಕ್ ಟೀಸ್
ಸಡಿಲ ಉಡುಪು ಕ್ಯಾಶುಯಲ್ ಲುಕ್ ನೀಡುವುದಷ್ಟೇ ಅಲ್ಲ, ಕಂಫರ್ಟ್ ಕೂಡಾ. ಈ ಮಳೆಗಾಲದಲ್ಲಿ ನಿಮ್ಮ ಬಿಗಿಯಾದ ಟೀ ಶರ್ಟನ್ನು ಬದಿಗಿಟ್ಟು ಪುರುಷರ ಲೂಸ್ ಟೀಸ್ ಧರಿಸಿ. ನಿಮ್ಮ ಅಳತೆಗಿಂತ ಒಂದು ಪಟ್ಟು ದೊಡ್ಡದಾದ ಟೀ ಶರ್ಟ್ ಆರಿಸಿಕೊಳ್ಳಿ. ತೋಳು ಜೋತುಬಿದ್ದಿದ್ದರೆ, ಸ್ವಲ್ಪ ತೊಡೆವರೆಗೆ ಉದ್ದ ಇರಬೇಕು. ಬಿಗಿಯಾದ ಪ್ಯಾಂಟ್ ಮೇಲೆ ಇದನ್ನು ಧರಿಸುವುದರಿಂದ ಕೇರ್‌‌ಲೆಸ್ ಆ್ಯಟಿಟ್ಯೂಡ್ ಫ್ಲಾಂಟ್ ಮಾಡಬಹುದು. ಅಲ್ಲದೆ,  ಈ ಟೀ ಶರ್ಟ್‌ಗಳಲ್ಲಿರುವ ಹಲವಾರು ಗ್ರಾಫಿಕ್ಸ್‌ಗಳು ನಿಮ್ಮ ಮನಸ್ಸು ಗೆಲ್ಲದಿರಲಾರವು. ಬೇಕಿದ್ದರೆ ಅರ್ಧ ಶರ್ಟನ್ನು ಇನ್ ಮಾಡಿದಂತೆ ಧರಿಸಿ, ಮತ್ತಷ್ಟು ಬೋಲ್ಡ್ ಎನಿಸಿಕೊಳ್ಳಬಹುದು.

ಬ್ಲೇಜರ್ಸ್
ನಿಮ್ಮ ಬಾಸ್ ಲೇಡಿ ವಾರ್ಡ್‌ರೋಬ್‌ನಲ್ಲಿ ಬ್ಲೇಜರ್ ಸ್ಟೈಲ್ ಇರಲೇಬೇಕು. ಫಾರ್ಮಲ್ ಲುಕ್‌ನ್ನು ಇನ್ನಷ್ಟು ಹೆಚ್ಚಿಸಲು ಬ್ಲೇಜರ್ ಧರಿಸಿ. ಈ ಬ್ಲೇಜರ್‌ಗಳನ್ನು ಮೆನ್ಸ್ ಸೆಕ್ಷನ್‌ನಿಂದ ಆರಿಸುವುದರಿಂದ ಬೇರೆ ಬೇರೆ ಲಾಭಗಳಿವೆ. ಸಾಮಾನ್ಯವಾಗಿ ಮಹಿಳೆಯರ ಬ್ಲೇಜರ್ಸ್ ಗಿಡ್ಡವಾಗಿರುತ್ತದೆ. ಆದರೆ, ಪುರುಷರ ಬ್ಲೇಜರ್ ಉದ್ದವಾಗಿರುವುದರಿಂದ ಶಾರ್ಟ್ ಡ್ರೆಸ್‌ಗಳು ಹಾಗೂ ಪೆನ್ಸಿಲ್ ಸ್ಕರ್ಟ್‌ಗಳಿಗೆ ಅವು ಚೆನ್ನಾಗಿ ಹೊಂದುತ್ತವೆ. ತೀರಾ ಬೋರಿಂಗ್ ಔಟ್‌ಫಿಟ್‌ನ್ನು ಕೂಡಾ ಇಂಟರೆಸ್ಟಿಂಗ್ ಎನಿಸುವಂತೆ ಮಾಡುತ್ತವೆ. ಬಟನ್ ಹಾಕದೆ, ಸ್ಲೀವ್ಸ್ ಮಡಿಚಿ ಧರಿಸಿ ನೋಡಿ. 

ಬಟನ್ ಡೌನ್ ಶರ್ಟ್‌ಗಳು
ನಿಮಗಿಷ್ಟದ ಪ್ರಿಂಟ್ ಮೆನ್ಸ್ ಸೆಕ್ಷನ್‌ನಲ್ಲಿ ಸಿಕ್ಕಿತೇ? ಹಾಗಿದ್ದರೆ ಹೆಚ್ಚು ಯೋಚಿಸದೆ ಆ ಶರ್ಟನ್ನು ಖರೀದಿಸಿ. ಹೈ ವೆಸ್ಟ್ ಸ್ಕರ್ಟ್‌ನೊಂದಿಗೆ ಪೇರ್ ಮಾಡಿ. ಇಲ್ಲವೇ ನಿಮ್ಮ ಸ್ಲಿಮ್ ಫಿಟ್ಟೆಡ್ ಟೀ ಶರ್ಟ್ ಮೇಲೆ ಕೂಡಾ ಇವು ಡೇರಿಂಗ್ ಎನಿಸುತ್ತವೆ. ಬಿಗಿಯಾದ ಪ್ಯಾಂಟ್‌ಗೆ ಇನ್‌ಶರ್ಟ್ ಮಾಡಿಯೂ ನೋಡಬಹುದು. 

ಓವರ್‌ಸೈಜ್ ಶರ್ಟನ್ನು ಹೀಗ್ ಧರಿಸಿ

ಕೂಲ್ ಕ್ಯಾಪ್ಸ್
ನಿಮ್ಮ ಹ್ಯಾಟ್ಸ್ ಮತ್ತು ಸ್ಕಾರ್ಫ್‌ಗಳನ್ನು ಧರಿಸಿ ಬೋರಾಗಿದೆಯೇ? ನಿಮ್ಮ ವೈಲ್ಡ್ ಸ್ಪಿರಿಟ್‌ನ್ನು ಅವು ಶೋಕೇ್ಸ್ ಮಾಡುತ್ತಿಲ್ಲವೇ? ಹಾಗಿದ್ದರೆ ಮೆನ್ಸ್ ಕ್ಯಾಪ್‌ಗಳನ್ನು ಹಾಕಿಕೊಳ್ಳಿ. 

ಮೆನ್ಸ್ ವಾಚ್
ಓವರ್ ಸೈಜ್‌ನ ವಾಚ್‌ಗಳು ಬಹಳ ಹಿಂದಿನಿಂದಲೂ ಜನಪ್ರಿಯ ಟ್ರೆಂಡ್. ಮೆನ್ಸ್ ವಾಚ್‌ಗಳು ಯುವತಿಯ ಕೈಗೆ ಕ್ಲಾಸಿ ಲುಕ್ ನೀಡುತ್ತವೆ. ಬ್ಯಾಂಡ್ ಲೂಸ್ ಎನಿಸಿದರೆ, ಫಿಟ್ಟಿಂಗ್ ಮಾಡಿಸಿಕೊಳ್ಳಿ. ಆದರೆ ಡಯಲ್ ಮಾತ್ರ ನಿಮ್ಮ ಕೈಯಗಲಕ್ಕಿರಲಿ. ಇದರ ಇನ್ನೊಂದು ಲಾಭವೆಂದರೆ ಧರಿಸಿ ಬೋರಾದ ಮೇಲೆ ನಿಮ್ಮ ಸಂಗಾತಿಗೆ ನೀಡಬಹುದು.