ಹಲವು ಬಾರಿ ಶಾಪಿಂಗ್‌ಗೆ ಹೋದಾಗ ಹುಡುಗಿಯರು ತಪ್ಪಾದ ಸೈಜ್ ಟೀ ಶರ್ಟ್ ಖರೀದಿಸುತ್ತಾರೆ.  ಅದನ್ನು ಮನೆಗೆ ಬಂದು ನೋಡಿದಾಗಲೇ ಅದು ತಪ್ಪಾದ ಸೈಜ್ ನ ಟೀ ಶರ್ಟ್ ಎಂದು ಗೊತ್ತಾಗುತ್ತದೆ. ಓವರ್ ಸೈಜ್ ಟೀ ಶರ್ಟ್ ಬೇರೆ, ಅದನ್ನು ವಾಪಾಸ್ ಮಾಡೋಣ ಎಂದರೆ ಅಂಗಡಿಯವರು ಅದನ್ನು ತೆಗೊಳೋದೆ ಇಲ್ಲ. ಆ ಸಂದರ್ಭದಲ್ಲಿ ಏನು ಮಾಡೋದು ಎಂದು ತಲೆ ಕೆಡಿಸಿಕೊಂಡಿದ್ದರೆ ಈ ಟಿಪ್ಸ್ ಖಂಡಿತವಾಗಿಯೂ ನಿಮ್ಮ ಸಹಾಯಕ್ಕೆ ಬರುತ್ತೆ.. 

ಟೀ ಶರ್ಟ್ ಮತ್ತು ಬ್ಲೇಜರ್ ಅಥವಾ ಜಾಕೆಟ್ 
ಜೀನ್ಸ್ ಜೊತೆ ಓವರ್ ಸೈಜ್ ಟೀ ಶರ್ಟ್ ಧರಿಸಿ. ಮೇಲೆ ಫಿಟ್ ಆಗಿರುವ ಬ್ಲೇಜರ್ ಅಥವಾ ಜಾಕೆಟ್ ಧರಿಸಿ. ಇದರ ಜೊತೆಗೆ ಹೀಲ್ಸ್ ಧರಿಸಿ. ಇದರಿಂದ ಸ್ಟೈಲಿಶ್ ಲುಕ್ ನಿಮ್ಮದಾಗುತ್ತದೆ. 

ಟೀ ಶರ್ಟ್ ಮತ್ತು ಸ್ಕರ್ಟ್ 
ಓವರ್ ಸೈಜ್ ಟೀ ಶರ್ಟ್ ಜೊತೆ ಸ್ಕರ್ಟ್ ಧರಿಸಿ. ಇದಕ್ಕಾಗಿ ಹೈ ವೇಸ್ಟ್ ಸ್ಕರ್ಟ್ ಆಯ್ಕೆ ಮಾಡಿ. ಪ್ಲೀಟ್ಸ್ ಸ್ಕರ್ಟ್ ಅಥವಾ ಡೆನಿಮ್ ಸ್ಕರ್ಟ್ ಚೆನ್ನಾಗಿ ಕಾಣಿಸುತ್ತದೆ. ಟೀ ಶರ್ಟ್ ಇನ್ ಮಾಡಿ ತಯಾರಾಗಿ.. 

ನೀವ್ ಕೊಂಡ ಬೆಳ್ಳಿ ಅಸಲಿಯೋ? ನಕಲಿಯೋ?

ಶಾರ್ಟ್ಸ್ ಜೊತೆಗೆ 
ಓವರ್ ಸೈಜ್ ಟೀ ಶರ್ಟ್‌ನಿಂದಲೂ ಸೆಕ್ಸಿಯಾಗಿ ಕಾಣಬೇಕು ಎಂದಾದರೆ ಶಾರ್ಟ್ಸ್ ಜೊತೆಗೆ ಅದನ್ನು ಧರಿಸಿ. ಬೇಕಾದಲ್ಲಿ ಸೊಂಟಕ್ಕೆ ಬೆಲ್ಟ್ ಹಾಕಿ. ಕೆಳಗಿನ ಭಾಗವನ್ನು ನಾಟ್ ಮಾಡಿ. ಇದು ತುಂಬಾ ಸ್ಟೈಲಿಶ್ ಜೊತೆಗೆ ಸೆಕ್ಸಿ ಲುಕ್ ನೀಡುತ್ತದೆ. 

ಹೀಲ್ಸ್ ಇಲ್ಲದೆಯೂ ಹೈಟಾಗಿ ಹೀಗ್ ಕಾಣಬಹುದು

ಒನ್ ಸೈಡ್ ಶೋಲ್ಡರ್ ಟಾಪ್ 
ದೊಡ್ಡ ಸೈಜಿನ ಟೀ ಶರ್ಟ್ ಅನ್ನು ನೀವು ಒನ್ ಸೈಡ್ ಶೋಲ್ಡರ್ ಟಾಪ್ ರೀತಿ ಧರಿಸಬಹುದು. ಇದು ಮಾಡರ್ನ್ ಲುಕ್ ನೀಡುತ್ತದೆ.