Asianet Suvarna News Asianet Suvarna News

ಮುಂಗಾರಿನಲ್ಲಿ ‘ಮಿನಿ’ ಮಾಯೆ!

ಮುಂಗಾರಿನ ಆಗಮನವಾಗಿದೆ. ಈ ಸೀಸನ್‌ಗೆ ಯಾವ ಡ್ರೆಸ್‌ ಬೆಸ್ಟ್‌ ಅಂತ ತಲೆ ಕೆಡಿಸಿಕೊಂಡಿರೋರು ಮಿನಿ ಡ್ರೆಸ್‌ ಟ್ರೈ ಮಾಡಬಹುದು.

mini dresses takes over monsoon fashion trend
Author
Bangalore, First Published Jun 27, 2019, 1:25 PM IST
  • Facebook
  • Twitter
  • Whatsapp

ನಿಶಾಂತ ಕಮ್ಮರಡಿ

‘ಮಳೆಗಾಲ ಬಂದ್ರೆ ಹುಡುಗೀರು ಕಿವಿಗೆ ಗಾಳಿ ಹೊಕ್ಕ ಕರುವಿನ ಹಾಗಾಡ್ತಾರೆ’ ಅಂತಿದ್ರು ನಮ್ಮಜ್ಜಿ. ಕಿವಿಗೆ ಗಾಳಿ ಹೊಕ್ಕ ಕರು ಲಂಗು ಲಗಾಮಿದ ಹಾಗೆ ಕುಣಿಯುತ್ತ ಹಾರುತ್ತಾ ಹುಚ್ಚುಚ್ಚಾಗಿ ಆಡುತ್ತಿರುತ್ತೆ. ಮಳೆ ಕಂಡ ಹುಡುಗಿ ಕಥೆಯೂ ಇದಕ್ಕಿಂತ ಭಿನ್ನ ಇಲ್ಲ ಅಂತ ಅಜ್ಜಿ ಹೇಳಿದ್ರಲ್ಲಿ ಅತಿಶಯೋಕ್ತಿ ಏನೂ ಕಾಣಲ್ಲಪ್ಪ. ಮಳೆಯಲ್ಲಿ ನೆನೆಯುತ್ತ ಮನಸೋ ಇಚ್ಛೆ ಕುಣೀಬೇಕು ಅಂದರೆ ಹಾಕ್ಕೊಂಡಿರೋ ಡ್ರೆಸ್‌ ಕಂಫರ್ಟೇಬಲ್‌ ಆಗಿರಬೇಕು. ಡ್ರೆಸ್‌ ಪುಟ್ಟದಿದ್ದಷ್ಟುಅವಳ ಮೈಗೆ ಮಳೆಹನಿ ತಾಗಿ ಸಂಭ್ರಮ ಹೆಚ್ಚಾಗುತ್ತದೆ. ಡಿಸೈನ​ರ್‍ಸ್ಗೂ ಇದು ಗೊತ್ತಿರದ್ದೇನಲ್ಲ, ಹೆಣ್ಮನಸ್ಸಿನ ಖುಷಿ ಹೆಚ್ಚಿಸೋ ಒಂದಿಷ್ಟುಪುಟ್‌ಪುಟಾಣಿ ಮಿನಿ ಡ್ರೆಸ್‌ಗಳನ್ನು ಈ ಮಾನ್ಸೂನ್‌ಗೆ ಅಂತ ರೆಡಿ ಮಾಡಿದ್ದಾರೆ.

ನೀತಾ ಅಂಬಾನಿ ಬ್ಯಾಗ್‌ ರೇಟ್‌ ಕೇಳಿದ್ರೆ ಸಾಲ ಮನ್ನಾನೇ ಮಾಡ್ಬೋದಿತ್ತು!

ಬೆಳ್ಳನೆಯ ಮಿನಿ ಡ್ರೆಸ್‌ನಲ್ಲಿ ಜಾನ್ವಿ

ಚೆಲುವಿನ ಪುತ್ಥಳಿ ಜಾನ್ವಿ ಕಪೂರ್‌ ಈ ಬಾರಿ ಶಾರ್ಟ್‌ ಡ್ರೆಸ್‌ ಟ್ರೆಂಡ್‌ಗೆ ಜೈಕಾರ ಹಾಕಿದ ಮೊದಲ ಬಾಲಿವುಡ್‌ ಹುಡುಗಿ. ಇತ್ತೀಚೆಗೆ ಮುಂಬೈಯ ಬಾಂದ್ರಾದಲ್ಲಿ ಬೆಳ್ಳನೆಯ ಮಿನಿ ಡ್ರೆಸ್‌ನಲ್ಲಿ ಕಾಣಿಸಿಕೊಂಡರು. ಬಿಳಿ ಬಣ್ಣದ ಬ್ಯಾಗ್ರೌಂಡ್‌ನಲ್ಲಿ ಪುಟ್ಟಪುಟ್ಟಪಿಂಕ್‌ ಹೂಗಳು. ಸರಳ, ಅಷ್ಟೇ ಸೊಗಸಾಗಿದ್ದ ಡ್ರೆಸ್‌ ಅದು. ಈ ಉಡುಗೆಯಲ್ಲಿ ಜಾನ್ವಿಯನ್ನು ಕಂಡ ಫ್ಯಾಶನ್‌ಪ್ರಿಯರು ‘ಮುಂಬೈಯ ಮುಂಗಾರಿನ ಸೊಗಸನ್ನು ಹೆಚ್ಚಿಸಿದ ಚೆಲುವೆ’ ಎಂದು ಉದ್ಗರಿಸಿದ್ರು. ಮುಂಗಾರಿಗೆ ಬಹಳ ಚೆನ್ನಾಗಿ ಹೊಂದುವ ಈ ಡ್ರೆಸ್‌ಅನ್ನು ಆಕೆ ಮಾನ್ಸೂನ್‌ಗಾಗಿಯೇ ಶಾಪ್‌ ಮಾಡಿದ್ರಂತೆ. ಬೆಳ್ಳಿಯ ದೊಡ್ಡ ಹೂಪ್‌ ಇರುವ ಯಿಯರ್‌ರಿಂಗ್‌ ತೊಟ್ಟು ಸಿಂಪಲ್ಲಾದ ಮೇಕಪ್‌ನಲ್ಲಿ ಬಂದ ಈಕೆ ತನ್ನ ಗುಂಗುರು ಹೆರಳನ್ನು ಹಾಗೇ ಬಿಟ್ಟಿದ್ದು ಚೆಲುವು ಹೆಚ್ಚಿಸಿತ್ತು.

ಅಲಿಯಾಳ ಪ್ರಿಂಟ್‌ ಮೋಹ

ಅಲಿಯಾ ಭಟ್‌ ವಾರ್ಡ್‌ರೋಬ್‌ನಲ್ಲಿ ಇಣುಕಿ ನೋಡಿದರೆ ನಾನಾ ವೆರೈಟಿ ಮಿನಿ ಡ್ರೆಸ್‌ಗಳಿವೆ. ಅವುಗಳಲ್ಲಿ ಬಹಳ ಹೆಚ್ಚಿರುವುದು ನಾನಾ ಚಿಹ್ನೆಗಳುಳ್ಳ ಪುಟಾಣಿ ದಿರಿಸುಗಳು. ಅದರಲ್ಲೂ ಪ್ರಾಣಿಗಳ ಪ್ರಿಂಟ್‌ ಇರುವ ಡ್ರೆಸ್‌ಗಳೆಂದರೆ ಈಕೆ ಹುಚ್ಚುಪ್ರೀತಿ. ಬಹಳ ಜನಪ್ರಿಯವಾಗಿರುವ ಆರೆಂಜ್‌ ಹಿನ್ನೆಲೆಯ ಡ್ರೆಸ್‌ನ ತುಂಬ ಪುಟ್ಟಪುಟ್ಟನಾಯಿಯ ಚಿತ್ರಗಳಿವೆ. ಬೆಕ್ಕಿನ ಪ್ರಿಂಟ್‌ ಅಥವಾ ಎಂಬ್ರಾಯಿಡರಿ ಇರುವ ಡ್ರೆಸ್‌ ತೊಟ್ಟು ಫೋಸ್‌ ಕೊಡೋದು ಬಹಳ ಇಷ್ಟ. ಜೊತೆಗೆ ಲವ್‌ ಸಿಂಬಲ್‌ ಪ್ರಿಂಟ್‌ ಇರುವ ಮಿನಿಗಳೂ ಇದೆ. ಈಕೆ ಪ್ರಾಣಿ ಪ್ರಿಂಟ್‌ನ ಮಿನಿ ಇಷ್ಟಪಡೋದಕ್ಕೆ ಮುಖ್ಯ ಕಾರಣ ಈಕೆ ಪ್ರಾಣಿ ಪ್ರಿಯೆ. ಬೆಕ್ಕು, ನಾಯಿ ಅಂದರೆ ಪ್ರಾಣ. ಈಕೆಯ ಇನ್‌ಸ್ಟಾದಲ್ಲಿ ಇಣುಕಿದರೆ ಅದರ ತುಂಬ ನಾಯಿ ಜೊತೆಗೆ ಗುಡ್‌ ಮಾರ್ನಿಂಗ್‌ ಹೇಳುವ, ಬೆಕ್ಕಿಗೆ ಕತೆ ಹೇಳುವ ಫೋಟೋಗಳಿವೆ. ತಾನು ತೊಡೋ ಡ್ರೆಸ್‌ನಲ್ಲೂ ತನ್ನಿಷ್ಟದ ಪ್ರಾಣಿಗಳಿರಬೇಕು ಅನ್ನೋದು ಈಕೆಗಿಷ್ಟ.

ಇಷ್ಟು ಫೂಟ್‌ವೇರ್‌ಗಳಿದ್ದರೆ ಸಾಕು, ಬಟ್ಟೆಗೆ ಹೊಂದೋಲ್ಲ ಎಂಬ ಕ್ಯಾತೆಗೆ ಬೀಳುತ್ತೆ ಬ್ರೇಕು!

ಫ್ಲೋರಲ್‌ ಡಿಸೈನ್‌ ಬೆಸ್ಟ್‌

ಮಳೆಗಾಲಕ್ಕೆ ಶಾರ್ಟ್‌ ಡ್ರೆಸ್‌ ಖರೀದಿಸುವ ಯೋಚನೆ ಇದ್ದರೆ ಫೆä್ಲೕರಲ್‌ ಆಯ್ಕೆ ಮಾಡಿಕೊಳ್ಳಿ. ತಿಳಿ ಬಣ್ಣದ ಹಿನ್ನೆಲೆಯಲ್ಲಿ ಪುಟ್ಟಪುಟ್ಟಹೂಗಳಿರುವ ಡ್ರೆಸ್‌ ಈ ಸೀಸನ್‌ನ ಬೆಸ್ಟ್‌ ಟ್ರೆಂಡ್‌ ಅನಿಸಿಕೊಂಡಿದೆ. ಹೂವು, ಬಳ್ಳಿಯ ಡಿಸೈನ್‌ಗಳು ಪ್ರಕೃತಿಯ ಜೊತೆಗೆ ಹೆಣ್ಣನ್ನು ಸಮೀಕರಿಸುತ್ತದೆ. ದಟ್ಟಹೂಗಳು ಅಥವಾ ದೊಡ್ಡ ಹೂಗಳಿಗಿಂತಲೂ ಚುಕ್ಕೆ ಇಟ್ಟಹಾಗೆ ಪುಟಾಣಿ ಹೂಗಳ ವಿನ್ಯಾಸ ಇರುವ ಫೆä್ಲೕರಲ್‌ ಡ್ರೆಸ್‌ಗಳು ಈ ಸೀಸನ್‌ಗೆ ಸರಿ ಹೊಂದುತ್ತವೆ. ಸಾಧ್ಯವಾದಷ್ಟುನಿಸರ್ಗಕ್ಕೆ ಹತ್ತಿರವಾದಂಥಾ ಡಿಸೈನ್‌ಗಳನ್ನೇ ತೊಟ್ಟುಕೊಳ್ಳಿ.

ಮೊನೊಕ್ರೋಮ್‌ ಡಿಸೈನ್‌ಗಳೂ ಚೆಂದ

ಮಿನಿಯಲ್ಲಿ ಮೊನೊಕ್ರೋಮ್‌ ಡಿಸೈನ್‌ಗಳು ಹೆಚ್ಚೆಚ್ಚು ಬರುತ್ತಿವೆ. ಕಾಜಲ್‌ ಅಗರ್‌ವಾಲ್‌ರಂಥ ಟ್ರೆಂಡಿ ಡ್ರೆಸ್‌ಗಳ ಹಿಂದೆ ಬಿದ್ದಿರೋ ಹುಡುಗೀರಿಗೆ ಇಂಥ ಡಿಸೈನ್‌ಗಳು ಬಹಳ ಇಷ್ಟ. ಮೊನೊಕ್ರೋಮ್‌ ಅಂದ್ರೆ ಒಂದು ಅಥವಾ ಎರಡು ಬಣ್ಣಗಳಿರುವ ಸರಳ ರೇಖೆಗಳ ಡಿಸೈನ್‌ ಇರೋ ಡ್ರೆಸ್‌ಗಳು. ಈ ವೆರೈಟಿಯಲ್ಲಿ ಬ್ರೌನ್‌, ಬಿಳಿ ಹಿನ್ನಲೆಯಲ್ಲಿ ಕಡುಗಪ್ಪು ಗೆರೆಗಳ ವಿನ್ಯಾಸ ಹೆಚ್ಚು ಜನಪ್ರಿಯ. ಮೊನೊಕ್ರೋಮ್‌ ಮಿನಿಗಳಿಗೆ ಡಿಗ್ನಿಫೈಡ್‌ ಲುಕ್‌ ಇದೆ. ಮಾನ್ಸೂನ್‌ ಸೀಸನ್‌ಗೆ ಫೆä್ಲೕರಲ್‌ನಷ್ಟುಈ ಡಿಸೈನ್‌ ಸರಿಹೊಂದದಿದ್ದರೂ ಒಂದು ಡಿಸೈನ್‌ ಇದು ಎಲ್ಲ ಕಾಲಕ್ಕೂ ಸಲ್ಲುತ್ತದೆ.

ಒಂದು ಕ್ರಾಪ್‌ಟಾಪ್‌ನ ಹಲವು ಅವಸ್ಥಾಂತರ!

ಮಿನಿ ಡ್ರೆಸ್‌ ಆಯ್ಕೆ ಹೇಗೆ?

ನಿಮ್ಮ ಬಣ್ಣ, ನಿಲುವು ನೋಡ್ಕೊಂಡು ಡ್ರೆಸ್‌ಗಳನ್ನು ಆಯ್ಕೆ ಮಾಡಿ. ಸಣ್ಣಗೆ ಉದ್ದಕ್ಕಿದ್ದರೆ ನಿಮಗೆ ಫೆä್ಲೕರಲ್‌ ಮಿನಿ ಚೆನ್ನಾಗಿ ಸೂಟ್‌ ಆಗುತ್ತೆ. ದೊಡ್ಡ ಹೂಗಳ ಮಿನಿಯನ್ನೂ ಆರಾಮವಾಗಿ ತೊಟ್ಟುಕೊಳ್ಳಬಹುದು. ಸಣ್ಣಗೆ ಗಿಡ್ಡಕ್ಕಿದ್ದರೆ ಪುಟ್ಟಹೂಗಳ ಡಿಸೈನ್‌ ಚೆನ್ನಾಗಿರುತ್ತೆ. ಮಧ್ಯಮ ಹೈಟ್‌, ದಪ್ಪ ಇರುವವರಿಗೆ ವಿವಿಧ ಚಿಹ್ನೆಗಳುಳ್ಳ ಮಿನಿ ಡ್ರೆಸ್‌ ಚೆನ್ನಾಗಿರುತ್ತೆ. ಮೊನೊಕ್ರೋಮ್‌ ಅನ್ನೂ ಟ್ರೈ ಮಾಡಬಹುದು. ಅದೇ ಕುಳ್ಳಗೆ, ದಪ್ಪಗಿರುವವರು ಉದ್ದುದ್ದ ಲೈನ್‌ಗಳ ಡಿಸೈನ್‌ ಇರುವ ಮಿನಿ ತೊಡಬಹುದು. ಅಂಟಿಕೊಂಡ ಹಾಗಿರುವ ಪುಟ್ಟಹೂಗಳ ಮಿನಿಯನ್ನೂ ಧರಿಸಬಹುದು.

ಆಕ್ಸೆಸರೀಸ್‌ ಹೇಗೆ?

ನೀವು ಧರಿಸಿದ ಮಿನಿ ಯಾವ ರೀತಿಯದ್ದು ಅನ್ನೋದರ ಮೇಲೆ ಆ್ಯಕ್ಸೆಸರೀಸ್‌ ನಿರ್ಧರಿತವಾಗುತ್ತವೆ. ದೂರ ದೂರು ಹೂಗಳಿರುವ ತಿಳಿಬಣ್ಣದ ಮಿನಿಗೆ ಮೆಟಲ್‌ ಕಲರ್‌ನ ಉದ್ದುದ್ದ ಹ್ಯಾಂಗಿಂಗ್ಸ್‌ ಚೆನ್ನಾಗಿರುತ್ತೆ. ದಟ್ಟಹೂಗಳ ಡಿಸೈನ್‌ಗೆ ಹಕ್ಕಿ ಗರಿಗಳ ಹ್ಯಾಂಗಿಂಗ್‌ ಬೆಸ್ಟ್‌. ಮೊನೊಕ್ರೋಮ್‌ಗೆ ಸ್ಟಡ್ಸ್‌ ಚೆನ್ನಾಗಿರುತ್ತೆ. ಕೂದಲನ್ನು ಎತ್ತಿ ಕಟ್ಟೋದಕ್ಕಿಂತಲೂ ಹುಚ್ಚುಚ್ಚಾಗಿ ಹಾರಾಡಲು ಬಿಟ್ಟರೆ ಅಂದರೆ ಫ್ರೀ ಹೇ​ರ್‍ಸ್ ಮಾಡಿಕೊಂಡರೆ ಹುಡ್ಗಿ ಸಖತ್ತಾಗಿ ಕಾಣ್ತಾಳೆ. ಚೂಪಾದ ಹೀಲ್ಸ್‌ ಚೆನ್ನಾಗಿರುತ್ತೆ. ದೇಸಿ ವಿನ್ಯಾಸದ ಸರಳ ಚಪ್ಪಲಿಯನ್ನೂ ತೊಡಬಹುದು.

 

Follow Us:
Download App:
  • android
  • ios