ಕಬ್ಬಿಣಾಂಶ ಹೆಚ್ಚಿರುವ ರುಚಿಕರವಾದ, ಸಿಹಿ ತಿಂಡಿಗೆ ಬಳಸುವ ಬೆಲ್ಲ ಆರೋಗ್ಯಕಾರಿ. ಸಕ್ಕರೆ ಬದಲಾಗಿ ಆಹಾರದಲ್ಲಿ ಇದನ್ನು ಹೆಚ್ಚು ಬಳಸಿದರೆ, ಆರೋಗ್ಯಕ್ಕೆ ಒಳಿತು. ಆದರೆ ಇದರಿಂದ ಸೌಂದರ್ಯವೂ ಹೆಚ್ಚುತ್ತೆ ಅನ್ನೋದು ಗೊತ್ತಾ? 

ಪಿಂಪಲ್ ನಿವಾರಣೆ : ಪ್ರತಿದಿನ ಒಂದು ತುಂಡು ಬೆಲ್ಲ ತಪ್ಪದೇ ತಿನ್ನಿ. ಇದರಿಂದ ಮೊಡವೆ ನಿವಾರಣೆಯಾಗುತ್ತದೆ. ಕಲೆ ನಿವಾರಣೆಯಾಗಿ ಸ್ಕಿನ್ ಹೊಳೆಯುತ್ತದೆ. 

ರಿಂಕಲ್ ನಿವಾರಣೆ : ಬೆಲ್ಲದಲ್ಲಿರುವ ಕೆಲವು ಅಂಶಗಳು ವಯಸ್ಸಾಗುವಿಕೆಯ ಲಕ್ಷಣವನ್ನು ನಿವಾರಿಸುತ್ತದೆ. ಜೊತೆಗೆ ಮುಖದಲ್ಲಿ ಸುಕ್ಕು ಉಂಟಾಗುವುದನ್ನು ತಡೆಯುತ್ತದೆ. 

ಸಿಲ್ಕಿ ಕೂದಲಿಗೂ ಮದ್ದು: ಮೃದುವಾದ ಸುಂದರ ಕೂದಲು ನಿಮ್ಮದಾಗಲೂ ಬೆಲ್ಲವನ್ನು ಪುಡಿ ಮಾಡಿ ಬೌಲ್‌ಗೆ ಹಾಕಿ ಅದಕ್ಕೆ ಮುಲ್ತಾನಿ ಮಿಟ್ಟಿ, ಮತ್ತು ನೀರು ಬೆರೆಸಿ ಕೂದಲಿಗೆ ಹಚ್ಚಿ. ಹತ್ತು ನಿಮಿಷದಲ್ಲಿ ತೊಳೆಯಿರಿ. ಇದರಿಂದ ಕೂದಲು ಚೆನ್ನಾಗಿ ಬೆಳೆಯುತ್ತದೆ. 

ತ್ವಚೆ ಸಾಫ್ಟ್ ಆಗುತ್ತದೆ: ಬೆಲ್ಲದಲ್ಲಿ ಗ್ಲಿಕೊಲಿಕ್ ಆ್ಯಸಿಡ್  ಇದೆ. ಇದು ಸ್ಕಿನ್ ಸಾಫ್ಟ್ ಮಾಡುತ್ತದೆ. ಅದಕ್ಕಾಗಿ ಎರಡು ಚಮಚ ಜೇನು, ನಿಂಬೆ ರಸ ಮತ್ತು ಬೆಲ್ಲವನ್ನು ಮಿಕ್ಸ್ ಮಾಡಿ ಪೇಸ್ಟ್ ಮಾಡಿ. ಸ್ಕಿನ್ ಗೆ ಹಚ್ಚಿ ಇದರಿಂದ ಸ್ಕಿನ್ ಮೃದುವಾಗುತ್ತದೆ.