Asianet Suvarna News Asianet Suvarna News

Mark Boyle: ಹಣವಿಲ್ಲ, ಉದ್ಯೋಗವಿಲ್ಲ.. ಮೊಬೈಲ್ ಟೆನ್ಷನ್ ಇಲ್ಲದೆ ಬದುಕಿದ್ದಾನೆ ಈ ವ್ಯಕ್ತಿ!

ಆಸೆಯೇ ದುಃಖಕ್ಕೆ ಮೂಲ ಎಂದು ಬುದ್ಧ ಹೇಳಿದ್ದಾರೆ. ಮನುಷ್ಯ ಹಣದ ಆಸೆಗೆ ಬಿದ್ದು ನೆಮ್ಮದಿ ಕಳೆದುಕೊಳ್ತಾನೆ. ಈ ಸತ್ಯ ಯುನೈಟೆಡ್ ಕಿಂಗ್‌ಡಂ ವ್ಯಕ್ತಿಗೆ ಗೊತ್ತಾಗಿದೆ. ಹಾಗಾಗಿಯೇ ಎಲ್ಲವನ್ನೂ ಬಿಟ್ಟು ಭಿನ್ನ ಜೀವನ ನಡೆಸ್ತಿದ್ದಾನೆ.

Mark Boyle The Moneyless Man On Living Ancient Life Without Technology roo
Author
First Published Oct 13, 2023, 3:32 PM IST

ಹಣವಿಲ್ದೆ ಜೀವನವಿಲ್ಲ ಎನ್ನುವವರೇ ಹೆಚ್ಚು. ಹಣಕ್ಕಾಗಿ ಸಂಬಂಧವನ್ನು ತೊರೆದು ಹೋಗುವವರಿದ್ದಾರೆ. ಜಗಳ, ಗಲಾಟೆ, ಕೊಲೆ, ಸುಲಿಗೆ ಎಲ್ಲವೂ ನಡೆಯೋದು ಹಣಕ್ಕಾಗಿ. ಆದ್ರೆ ಹಣಕ್ಕಾಗಿಯೇ ಜೀವನ ನಡೆಸುವವರ ಮಧ್ಯೆ ಹಣವೇ ಎಲ್ಲವೂ ಅಲ್ಲ ಎನ್ನುವವರು ಸಿಗೋದು ಬಹಳ ಅಪರೂಪ. ಹಣವೇ ಸರ್ವಸ್ವವಲ್ಲ. ಅದರಾಚೆಗೂ ಒಂದು ಜೀವನವಿದೆ. ಬದುಕಿನಲ್ಲಿ ಶಾಂತಿಗಿಂತ ಯಾವುದೂ ಮುಖ್ಯವಲ್ಲ. ನೆಮ್ಮದಿ ಜೀವನ ಸುಖಕರ ಜೀವನ ಎಂದು ಬದುಕುವವರು ಸಿಗೋದು ಬಹಳ ಅಪರೂಪ. ಇದಕ್ಕೆ ಮಾರ್ಕ್ ಬೋಯೆಲ್ ಉತ್ತಮ ನಿದರ್ಶನ. ಮಾರ್ಕ್ ಬೋಯೆಲ್ ಎಲ್ಲರಿಗಿಂತ ಭಿನ್ನವಾಗಿದ್ದಾನೆ. ಆತನಿಗೆ ಮನೆ, ಹಣ, ನೌಕರಿ, ಬಟ್ಟೆ ಯಾವುದೂ ಮುಖ್ಯವಲ್ಲ. ಸಂಪಾದನೆ ಮಾಡದೆ, ಖರ್ಚಿನ ಭಾರವಿಲ್ಲದೆ, ಮೊಬೈಲ್ ರಿಚಾರ್ಜ್ ತಲೆನೋವಿಲ್ಲದೆ ೧೫ ವರ್ಷಗಳಿಂದ ಆರಾಮವಾಗಿ ಜೀವನ ನಡೆಸುತ್ತಿದ್ದಾನೆ ಮಾರ್ಕ್ ಬೋಯೆಲ್. ಅವನ ವಿಶೇಷತೆಯೇನು ಎಂಬುದನ್ನು ನಾವಿಂದು ಹೇಳ್ತೇವೆ.

ಸಂಪಾದನೆ, ಖರ್ಚಿಲ್ಲದೆ ಸುಖಿ ಜೀವಿ ಮಾರ್ಕ್ ಬೋಯೆಲ್ (Mark Boyle) : ಮಾರ್ಕ್ ಬೊಯೆಲ್ ಯುನೈಟೆಡ್ ಕಿಂಗ್‌ಡಂನ ಪ್ರಜೆಯಾಗಿದ್ದಾನೆ. ಒಂದು ರೂಪಾಯಿ ಖರ್ಚು ಮಾಡದೆ ನಾವು ಒಂದು ದಿನವೂ ಇರೋದು ಕಷ್ಟ. ಆದ್ರೆ ಮಾರ್ಕ್ 2008ರಿಂದ ಹಣ (Money)ವನ್ನು ಬಳಸಿಲ್ಲ. ಹಣವಿಲ್ಲದೆ ಬದುಕುವ ಈತನ ಕಲ್ಪನೆ ವಿಚಿತ್ರವಾಗಿದೆ.  ಮಾರ್ಕ್ ಬೋಲ್ ಕಾಡು ಮನುಷ್ಯರಂತೆ ನಿಸರ್ಗದಲ್ಲಿ ಬದುಕಲು ಇಷ್ಟಪಡ್ತಾನೆ. ಆತ ಯಾವುದೇ ತಂತ್ರಜ್ಞಾನವನ್ನು ಬಳಸುತ್ತಿಲ್ಲ. ಐಷಾರಾಮಿ ಜೀವನವನ್ನು ಆತ ಇಷ್ಟಪಡುವುದಿಲ್ಲ. ಒಂದೂವರೆ ದಶಕದ ಹಿಂದೆ ಖರೀದಿಸಿದ ಕೆಲವು ಬಟ್ಟೆಗಳನ್ನೇ ಆತ ಈಗ್ಲೂ ಧರಿಸುತ್ತಿದ್ದಾನೆ. 

ಫೋರ್ಬ್ಸ್‌ 100 ಶ್ರೀಮಂತ ಭಾರತೀಯರ ಪಟ್ಟಿ ಬಿಡುಗಡೆ; ಅಂಬಾನಿ, ಅದಾನಿ ಜೊತೆ ರೇಸ್‌ನಲ್ಲಿ ತಮಿಳುನಾಡಿನ ಉದ್ಯಮಿ!

ಮಾರ್ಕ್ ಓದಿಗೂ, ಜೀವನಕ್ಕೂ ಸಂಬಂಧವಿಲ್ಲ : ಮಾರ್ಕ್ ಅಶಿಕ್ಷಿತನಲ್ಲ. ಮಾರ್ಕ್ ಬೋಲ್ ಅರ್ಥಶಾಸ್ತ್ರ ಮತ್ತು ಬ್ಯುಸಿನೆಸ್ ನಲ್ಲಿ ಅನೇಕ ಪದವಿಗಳನ್ನು ಪಡೆದಿದ್ದಾನೆ. ಆದ್ರೆ ವಿದ್ಯೆಗೆ ತಕ್ಕಂತೆ ಕೆಲಸ ಮಾಡಿ, ಹಣ ಸಂಪಾದನೆ ಮಾಡುವ ಮನಸ್ಸು ಮಾಡಿಲ್ಲ. ಆತ ಕಾಡಿನ ಹಾದಿ ಹಿಡಿದಿದ್ದಾನೆ. 

ಮಾರ್ಕ್ ಮೊದಲು ಬ್ರಿಸ್ಟಲ್‌ನ ಫುಡ್ ಕಂಪನಿಯಲ್ಲಿ ಕೆಲಸ ಮಾಡ್ತಿಲ್ಲ. ಲಕ್ಷಾಂತರ ರೂಪಾಯಿ ಪ್ಯಾಕೆಜ್ ಇದ್ದ ಕಾರಣ, ಯಾವುದೇ ಐಷಾರಾಮಿ ಜೀವನಕ್ಕೆ ತೊಂದರೆ ಇರಲಿಲ್ಲ. ಬೇಕಾಗಿದ್ದನ್ನು ಆತ ಖರೀದಿ ಮಾಡಬಲ್ಲವನಾಗಿದ್ದ. 2007ರಲ್ಲಿ ಆತನ ಜೀವನದಲ್ಲಿ ದೊಡ್ಡ ಬದಲಾವಣೆ ಆಯ್ತು. ಆತ ನಿದ್ರೆ ಮಾಡಲು ಹೋಗುವ ಸಂದರ್ಭದಲ್ಲಿ ಜೀವನದ ಮಹತ್ವದ ವಿಷ್ಯ ಆತನ ಅರಿವಿಗೆ ಬಂತು. ಪ್ರತಿಯೊಂದು ಸಮಸ್ಯೆಯ ಮೂಲ ಹಣ. ಹಣಕ್ಕಾಗಿ ನಾವು ನಿರಂತರ ಓಡ್ತಿದ್ದೇವೆ ಎಂಬುದು ಗೊತ್ತಾಯ್ತು. ಆ ದಿನದಿಂದ ಮಾರ್ಕ್, ಹಣದಿಂದ ದೂರವಿರುವ ನಿರ್ಧಾರಕ್ಕೆ ಬಂದ. ಕೆಲಸಕ್ಕೆ ರಾಜೀನಾಮೆ ನೀಡಿ, ಹಣ ಸಂಪಾದನೆ ಮಾಡದಿರುವ ದೃಢ ನಿರ್ಧಾರ ಕೈಗೊಂಡ. 

ರಾಷ್ಟ್ರ ರಾಜಧಾನಿಗೆ ಕಾಲಿಟ್ಟ ಭೂತ ಸನ್ಯಾಸಿನಿ: ಜನರನ್ನು ಆತಂಕಕ್ಕೀಡುಮಾಡಿದ ವೈರಲ್‌ ವಿಡಿಯೋ!

ಹೌಸ್ ಬೋಟ್ ಮಾರಿ ಇಲ್ಲಿ ಜೀವನ ನಡೆಸುತ್ತಿದ್ದಾನೆ ಮಾರ್ಕ್ : ಮಾರ್ಕ್ ಒಂದು ದುಬಾರಿ ಹೌಸ್ ಬೋಟ್ ಹೊಂದಿದ್ದ. ಅದನ್ನು ಅವನು ಮಾರಿದ್ದಾನೆ. ಹಳೆಯ ಕಾರವಾನ್‌ನಲ್ಲಿ ತನ್ನ ಜೀವನ ನಡೆಸುತ್ತಿದ್ದಾನೆ. ಆರಂಭದಲ್ಲಿ ಹಣವಿಲ್ಲದೆ ಬದುಕುವುದು ಸ್ವಲ್ಪ ಕಷ್ಟವಾಯ್ತು. ಹಣ ಅಗತ್ಯವಿರುವ ವಸ್ತುವನ್ನು ಮಾರ್ಕ್ ತ್ಯಜಿಸುತ್ತ ಬಂದ. ಮಾರ್ಕ್ ಟೀ ಅಥವಾ ಕಾಫಿ ಸೇವನೆ ಮಾಡೋದಿಲ್ಲ. ಪ್ರಕೃತಿಯಲ್ಲಿ ಸಿಗುವ ವಸ್ತುಗಳನ್ನು ಮಾತ್ರ ಬಳಸ್ತಾನೆ.

ಮೊಬೈಲ್ ಇಲ್ಲದ ಜೀವನ : ಈಗಿನ ದಿನಗಳಲ್ಲಿ ಇಂಥ ವ್ಯಕ್ತಿಗಳಿದ್ದಾರೆಂದ್ರೆ ನಂಬೋದು ಕಷ್ಟ. ಮಾರ್ಕ್ ಮೊಬೈಲ್, ಲ್ಯಾಪ್ ಟಾಪ್ ಸೇರಿದಂತೆ ಯಾವುದನ್ನೂ ಬಳಸೋದಿಲ್ಲ. ಆತನಿಗೆ ಒಂದಿಷ್ಟು ಸ್ನೇಹಿತರಿದ್ದರೂ ಅವರ ಜೊತೆ ಫೋನ್ ಸಂಪರ್ಕವಿಲ್ಲ. ಈ ನೈಸರ್ಗಿಕ ಜೀವನ ರೂಢಿಸಿಕೊಂಡ ಮೇಲೆ ಮಾರ್ಕ್ ಅನಾರೋಗ್ಯಕ್ಕೆ ಒಳಗಾಗಿಲ್ಲವಂತೆ. ಅನವಶ್ಯಕ ಚಿಂತೆ ಆತನನ್ನು ಕಾಡಿಲ್ಲವಂತೆ. ನಿನ್ನೆ ಬಗ್ಗೆ ಆಲೋಚನೆ ಮಾಡುವ ಬದಲು ನಾನು ನಾಳೆ ಬಗ್ಗೆ ಪ್ಲಾನ್ ಮಾಡ್ತೇನೆ ಎನ್ನುತ್ತಾನೆ ಮಾರ್ಕ್. 

Follow Us:
Download App:
  • android
  • ios