ಫೋರ್ಬ್ಸ್ 100 ಶ್ರೀಮಂತ ಭಾರತೀಯರ ಪಟ್ಟಿ ಬಿಡುಗಡೆ; ಅಂಬಾನಿ, ಅದಾನಿ ಜೊತೆ ರೇಸ್‌ನಲ್ಲಿ ತಮಿಳುನಾಡಿನ ಉದ್ಯಮಿ!
ತಿಷ್ಠಿತ ಫೋರ್ಬ್ಸ್ ನಿಯತಕಾಲಿಕೆ 2023ನೇ ಸಾಲಿನ ಟಾಪ್ 100 ಶ್ರೀಮಂತ ಭಾರತೀಯರ ಪಟ್ಟಿ ಬಿಡುಗಡೆ ಮಾಡಿದೆ. ಇದರಲ್ಲಿ ಅಂಬಾನಿ, ಅದಾನಿ ಜೊತೆ ತಮಿಳುನಾಡಿನ ಉದ್ಯಮಿಯೊಬ್ಬರು ಸಹ ರೇಸ್‌ನಲ್ಲಿದ್ದಾರೆ. ಯಾರವರು?
ನವದೆಹಲಿ: ರಿಲಯನ್ಸ್ ಸಮೂಹದ ಮುಖ್ಯಸ್ಥ ಮುಕೇಶ್ ಅಂಬಾನಿ ಮತ್ತೊಮ್ಮೆ ಭಾರತದ ನಂ.1 ಶ್ರೀಮಂತರಾಗಿ ಹೊರಹೊಮ್ಮಿದ್ದಾರೆ. ಕೆಲ ಕಾಲ ನಂ.1 ಶ್ರೀಮಂತ ಭಾರತೀಯರ ಪಟ್ಟಿಯಲ್ಲಿದ್ದ ಅದಾನಿ ಸಮೂಹದ ಗೌತಮ್ ಅದಾನಿಯನ್ನು ಅಂಬಾನಿ ಹಿಂದಿಕ್ಕಿದ್ದಾರೆ. ಪ್ರತಿಷ್ಠಿತ ಫೋರ್ಬ್ಸ್ ನಿಯತಕಾಲಿಕೆ 2023ನೇ ಸಾಲಿನ ಟಾಪ್ 100 ಶ್ರೀಮಂತ ಭಾರತೀಯರ ಪಟ್ಟಿ ಬಿಡುಗಡೆ ಮಾಡಿದೆ. ಅದರಲ್ಲಿ 7.6 ಲಕ್ಷ ಕೋಟಿ ರೂ. ಆಸ್ತಿಯೊಂದಿಗೆ ಮುಕೇಶ್ ಅಂಬಾನಿ ಪ್ರಥಮ ಸ್ಥಾನ, 5.6 ಲಕ್ಷ ಕೋಟಿ ರೂ. ಸಂಪತ್ತಿನೊಂದಿಗೆ ಗೌತಮ್ ಅದಾನಿ ದ್ವಿತೀಯ ಸ್ಥಾನ ಹಾಗೂ 2.4 ಲಕ್ಷ ಕೋಟಿ ರೂ. ಸಂಪತ್ತಿನೊಂದಿಗೆ ಎಚ್‌ಸಿಎಲ್‌ನ ಶಿವ ನಾಡಾರ್ ತೃತೀಯ ಸ್ಥಾನ ಪಡೆದಿದ್ದಾರೆ. ಎಲ್ಲಾ 100 ಶ್ರೀಮಂತರ ಒಟ್ಟು ಸಂಪತ್ತು ಕಳೆದ ವರ್ಷದಷ್ಟೇ ಅಂದರೆ 665 ಲಕ್ಷ ಕೋಟಿ ರೂ. ಇದೆ.
ಶಿವ ನಾಡಾರ್ ಯಾರು?
ಫೋರ್ಬ್ಸ್ 100 ಶ್ರೀಮಂತ ಭಾರತೀಯರ ಪಟ್ಟಿಯಲ್ಲಿ ಅಂಬಾನಿ, ಅದಾನಿ ಜೊತೆ ರೇಸ್‌ನಲ್ಲಿರೋ ಶಿವ ನಾಡಾರ್, ಎಚ್‌ಸಿಎಲ್ ಸಂಸ್ಥಾಪಕರು. 2.4 ಲಕ್ಷ ಕೋಟಿ ರೂ. ಸಂಪತ್ತಿನೊಂದಿಗೆ ಎಚ್‌ಸಿಎಲ್‌ನ ಶಿವ ನಾಡಾರ್ ತೃತೀಯ ಸ್ಥಾನ ಪಡೆದಿದ್ದಾರೆ. ಶಿವ ನಾಡರ್ ಅವರು ಜುಲೈ 14,1945ರಂದು ತಮಿಳುನಾಡಿನ ಹಳ್ಳಿಯೊಂದರಲ್ಲಿ ಶಿವಸುಬ್ರಮಣ್ಯ ನಾಡರ್ ಮತ್ತು ವಾಮಸುಂದರಿ ದೇವಿ ದಂಪತಿಗಳಿಗೆ ಜನಿಸಿದರು. ತಮಿಳುನಾಡಿನ ವಿವಿಧ ಶಾಲೆಗಳಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪಡೆದರು.
ಭಾರತದ ಟಾಪ್ 10 ಶ್ರೀಮಂತರ ಪಟ್ಟಿ ಬಿಡುಗಡೆ; ಅಂಬಾನಿ, ಅದಾನಿಯಲ್ಲಿ ನಂ.1 ಯಾರು?
ನಾಡಾರ್ ಅವರು ಮಧುರೈನ ಅಮೇರಿಕನ್ ಕಾಲೇಜಿನಲ್ಲಿ ಪ್ರಿ-ಯೂನಿವರ್ಸಿಟಿ ಪದವಿಯನ್ನು ಪಡೆದರು.ಕೊಯಮತ್ತೂರಿನ PSG ಕಾಲೇಜ್ ಆಫ್ ಟೆಕ್ನಾಲಜಿಯಿಂದ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದರು. ಶಿವ ನಾಡರ್ ಅವರು 1967 ರಲ್ಲಿ ವಾಲ್‌ಚಂದ್ ಗ್ರೂಪ್‌ನ ಕಾಲೇಜ್ ಆಫ್ ಇಂಜಿನಿಯರಿಂಗ್ ಪುಣೆಯಲ್ಲಿ (COEP) ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.
ದೆಹಲಿ ಕ್ಲಾತ್ ಮಿಲ್ಸ್ ಡಿಜಿಟಲ್ ಉತ್ಪನ್ನಗಳ ವಿಭಾಗದಲ್ಲಿ ಕೆಲಸ ಉತ್ತಮವಾಗಿದ್ದರೂ ತಮ್ಮದೇ ಆದ ಉದ್ಯಮವೊಂದನ್ನು ಆರಂಭಿಸಬೇಕೆಂದು ಶಿವ ನಾಡಾರ್ ನಿರ್ಧರಿಸಿದರು. ಆ ನಂತರ ಅದೇ ಕಂಪೆನಿಯಲ್ಲಿದ್ದ ಕೆಲ ಸಹೋದ್ಯೋಗಿಗಳೊಂದಿಗೆ ತಮ್ಮದೇ ಆದ ಕಂಪನಿಯನ್ನು ಪ್ರಾರಂಭಿಸಿದರು. ನಾಡಾರ್ ಮತ್ತು ಅವರ ಪಾಲುದಾರರು ಪ್ರಾರಂಭಿಸಿದ ಆರಂಭಿಕ ಉದ್ಯಮವೆಂದರೆ ಮೈಕ್ರೋಕಾಂಪ್, ಇದು ಭಾರತೀಯ ಮಾರುಕಟ್ಟೆಯಲ್ಲಿ ಟೆಲಿಡಿಜಿಟಲ್ ಕ್ಯಾಲ್ಕುಲೇಟರ್‌ಗಳನ್ನು ಮಾರಾಟ ಮಾಡುವತ್ತ ಗಮನಹರಿಸಿತು.
ಭಾರತದ ಟಾಪ್ 10 ಶ್ರೀಮಂತ ನಗರಗಳ ಪಟ್ಟಿ ಬಿಡುಗಡೆ; ಮುಂಬೈ ನಂ.1, ಬೆಂಗಳೂರಿಗೆ ಎಷ್ಟನೇ ಸ್ಥಾನ?
ದೇಶದ ಅತಿದೊಡ್ಡ ತಾಂತ್ರಿಕ ಕ್ರಾಂತಿಗಳ ಹಿಂದಿನ ಕಾರಣಗಳಲ್ಲಿ ಶಿವ ನಾಡಾರ್ ಒಬ್ಬರು. 18,700 ರೂ. ಆರಂಭಿಕ ಹೂಡಿಕೆಯೊಂದಿಗೆ ಅವರು HCL ಟೆಕ್ನಾಲಜೀಸ್‌ನ್ನು ಆರಂಭಿಸಿದರು. ನೋಕಿಯಾದೊಂದಿಗೆ ಅತಿದೊಡ್ಡ ಮೊಬೈಲ್ ವಿತರಣಾ ಜಾಲವನ್ನು ರಚಿಸುವ ಮೂಲಕ ಭಾರತದ ಟೆಲಿಕಾಂ ಕ್ರಾಂತಿಯನ್ನು ಬೆಂಬಲಿಸುವಲ್ಲಿ HCL ಪ್ರಮುಖ ಪಾತ್ರ ವಹಿಸಿದೆ. ಮಾತ್ರವಲ್ಲ ಶಿವ ನಾಡಾರ್ ವಾರ್ಷಿಕ 1,161 ಕೋಟಿ ರೂ. ದಾನ ಮಾಡುವ ಮೂಲಕ ದೇಶದ ಅತ್ಯಂತ ಉದಾರಿ ಉದ್ಯಮಿಯೆಂದೂ ಗುರುತಿಸಿಕೊಂಡಿದ್ದಾರೆ.