Asianet Suvarna News Asianet Suvarna News

Viral Video: ಶ್ರೀಮಂತನ ಈ ಕೆಲಸ ನೋಡಿ ದಂಗಾದ ನೆಟ್ಟಿಗರು!

ಸಾಮಾಜಿಕ ಜಾಲತಾಣದಲ್ಲಿ ಅನೇಕ ವಿಡಿಯೋಗಳು ವೈರಲ್ ಆಗ್ತಿರುತ್ತವೆ. ಕೆಲವರು ವೈರಲ್ ಆಗ್ಬೇಕು ಎನ್ನುವ ಕಾರಣಕ್ಕೆ ವಿಡಿಯೋ ಸೃಷ್ಟಿ ಮಾಡಿದ್ರೆ ಮತ್ತೆ ಕೆಲವರು ಯಾವುದೇ ಉದ್ದೇಶವಿಲ್ಲದೆ ಮಾಡಿದ ವಿಡಿಯೋ ಸದ್ದು ಮಾಡಿರುತ್ತದೆ.  ಈಗ ಒಂದು ವಿಡಿಯೋ ವೈರಲ್ ಆಗಿದ್ದು, ಜನಸಾಮಾನ್ಯರು ಮೂಗಿನ ಮೇಲೆ ಕೈ ಇಟ್ಟಿದ್ದಾರೆ. 
 

Man Feed Horse Keeping Grass In Ferrari Car Bonut People Are Stunned roo
Author
First Published Jul 17, 2023, 1:57 PM IST

ನಾಲ್ಕೈದು ಲಕ್ಷದ ಸೆಕೆಂಡ್ ಹ್ಯಾಂಡ್ ಕಾರು ಖರೀದಿ ಮಾಡ್ಬೇಕು ಅಂದ್ರೆ ಬಡವರಿಗೆ ಸಾಧ್ಯವಿಲ್ಲ. ಇನ್ನು ಮಧ್ಯಮ ವರ್ಗದವರು ಮೈಮೇಲೆ ಸಾಲದ ಹೊಣೆ ಹಾಕಿಕೊಂಡು, ಕಷ್ಟಪಟ್ಟು 10 ಲಕ್ಷದೊಳಗಿನ ಕಾರು ಖರೀದಿ ಮಾಡಿ ಕೈ ತೊಳೆದುಕೊಳ್ತಾರೆ. ಜೀವನದಲ್ಲಿ ಒಮ್ಮೆ ಖರೀದಿಸಿದ ಕಾರಿನ ಸಾಲ ತೀರಿಸುವವರೆಗೆ ಬದುಕು ಮುಗಿದಿರುತ್ತೆ. ಇನ್ನು ಕೆಲವರ ಮನೆಯಲ್ಲಿ ಒಂದೋ ಎರಡೋ ಕಾರನ್ನು ನಾವು ನೋಡ್ಬಹುದು. ಕಾರು ನಮ್ಮ ಅಗತ್ಯವನ್ನು ಪೂರೈಸುವ ಕಾರಣ ಹಾಗೆ ದುಡಿದ ಎಲ್ಲ ಹಣವನ್ನು ಅದಕ್ಕೆ ಹಾಕಿದ ಕಾರಣ ಕಾರಿನ ಮೇಲೆ ಅದೇನೋ ವಿಶೇಷ ಮೋಹವಿರುತ್ತದೆ. ಕಷ್ಟಪಟ್ಟು ಖರೀದಿ ಮಾಡಿದ ಕಾರಿಗೆ ಸಣ್ಣ ಗೆರೆ ಬಿದ್ರೂ ಕಣ್ಣು ಕೆಂಪಾಗುತ್ತದೆ. ಆದ್ರೆ ಶ್ರೀಮಂತರಿಗೆ ಕಾರು ಖರೀದಿ ಬಟ್ಟೆ ಖರೀದಿ ಮಾಡಿದಂತೆ.  

ಕೆಲ ಶ್ರೀಮಂತರ ಮನೆಯಲ್ಲಿ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಎಂದೆರಡು ಕಾರು (Car) ಗಳಿರುತ್ತವೆ. ಇನ್ನು ಕೆಲವರ ಮನೆಯಲ್ಲಿ ನೀವು ಐದಾರು ಕಾರುಗಳನ್ನು ನೋಡ್ಬಹುದು. ಮನೆಯಲ್ಲಿ ಎಷ್ಟೇ ಕಾರಿದ್ರೂ ಅದ್ರ ಮೇಲಿನ ಪ್ರೀತಿ ಕಡಿಮೆಯಾಗೋದಿಲ್ಲ. ಇದೇ ಎನ್ನುವ ಕಾರಣಕ್ಕೆ ಕಾರನ್ನು ಕಂಡ ಕಂಡಂತೆ ಬಳಸೋರು ಕಡಿಮೆ. ಹಾಳಾದ ಕಾರನ್ನು ತಮ್ಮಿಷ್ಟದಂತೆ ರೀಯೂಸ್ ಗೆ ಬಳಸಬಹುದೇ ವಿನಃ ಫೆರಾರಿಯಂತ ಕಾರನ್ನು ಕುದುರೆ (Horse) ಆಹಾರಕ್ಕೆ ಬಳಸೋದು ಬಹಳ ಕಡಿಮೆ. ಆದ್ರೆ ಇಲ್ಲೊಬ್ಬ ವ್ಯಕ್ತಿ ಕೋಟ್ಯಾಂತರ ರೂಪಾಯಿ ನೀಡಿ ಖರೀದಿ ಮಾಡಿರುವ ಫೆರಾರಿ ಒಳಗೆ ಹುಲ್ಲು ಹಾಕಿ ಅದನ್ನು ಕುದುರೆಗೆ ತಿನ್ನಿಸುತ್ತಿದ್ದಾನೆ. ಕುದುರೆ ಫೆರಾರಿ (Ferrari) ಯಲ್ಲಿ ಹುಲ್ಲು ತಿನ್ನುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣ ಬಳಕೆದಾರರು ಕಂಗಾಲಾಗಿದ್ದಾರೆ. 

ಕನ್ನಡಿಗರಾಗಿ ಕರ್ನಾಟಕದ ಈ ಎಲ್ಲಾ ಸ್ಪೆಷಲ್ ತಿಂಡಿ ಸವಿದಿದ್ದೀರಾ?

ಎಲ್ಲಿ ವೈರಲ್ ಆಗಿದೆ ಈ ವಿಡಿಯೋ? : ಇನ್ಸ್ಟಾಗ್ರಾಮ್ (Instagram)ನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. @philipirelandsupercars ಹೆಸರಿನ ಬಳಕೆದಾರರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ವಿಡಿಯೋದಲ್ಲಿ ಏನಿದೆ? :  ಪೋಸ್ಟ್ ಮಾಡಿದ ವಿಡಿಯೋದಲ್ಲಿ ಫಾರ್ಮ್ ಹೌಸ್ ನಲ್ಲಿ ಫೆರಾರಿ ಕಾರನ್ನು ನಿಲ್ಲಿಸಲಾಗಿದೆ. ಕೆಂಪು ಬಣ್ಣದ ಫೆರಾರಿ ಕಾರನ್ನು ನೀವು ವಿಡಿಯೋದಲ್ಲಿ ನೋಡ್ಬಹುದು. ಕಾರಿನ ಬೊನಟ್ ಗೆ ಹುಲ್ಲನ್ನು ಹಾಕಲಾಗಿದೆ. ಬೊನಟ್ ನಲ್ಲಿ ಹಾಕಿರುವ ಹುಲ್ಲನ್ನು ಕುದುರೆ ತಿನ್ನುತ್ತಿರೋದನ್ನು ನೀವು ನೋಡಬಹುದು. ಕುದುರೆಗೆ ಈ ರೀತಿ ಹುಲ್ಲನ್ನು ತಿನ್ನಿಸುವುದು ವಿಚಿತ್ರವೆನ್ನಿಸುತ್ತದೆ. ದುಡ್ಡಿದ್ದವರು ಏನು ಬೇಕಾದ್ರೂ ಮಾಡ್ತಾರೆ ಎಂಬುದನ್ನು ಇಂಥ ವಿಡಿಯೋ ನೋಡಿಯೇ ಜನ ಹೇಳಿರಬೇಕು.  

ಕೋಡುಬಳೆ ಹುಳವೆಂದ್ರೆ ನೆನಪಾಗುತ್ತೆ ಬಾಲ್ಯ, ಇದರ ಕಾಟದಿಂದ ಮುಕ್ತರಾಗೋದು ಹೇಗೆ?

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ : ಮೂರ್ನಾಲ್ಕು ದಿನಗಳ ಹಿಂದೆ ಇನ್ಸ್ಟಾಗ್ರಾಮ್ ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಈವರೆಗೆ 3 ಲಕ್ಷಕ್ಕೂ ಹೆಚ್ಚು ಬಾರಿ ಇದನ್ನು ವೀಕ್ಷಿಸಲಾಗಿದೆ. ಬಳಕೆದಾರರು ಕಮೆಂಟ್ ಮೂಲಕ ತಮ್ಮ ಅಭಿಪ್ರಾಯ ಹೇಳಿದ್ದಾರೆ. ಭಾರತದ ಫೆರಾರಿ ಮಾಲೀಕರಿಗೆ ಈ ವೀಡಿಯೊ  ಇಷ್ಟವಾಗೋದಿಲ್ಲ ಅಂತಾ ಒಬ್ಬರು ಬರೆದ್ರೆ ಇನ್ನೊಬ್ಬರು ಈಗ ನಾನು ಫೆರಾರಿ ಕಾರನ್ನು ಖರೀದಿಸುವುದಿಲ್ಲ ಎಂದು ಕಮೆಂಟ್ ಮಾಡಿದ್ದಾರೆ. ಯಾರಾದರೂ ಈ ಕಾರಿನ ಮಾಲೀಕರನ್ನು ಪರಿಚಯಿಸಿ ಎಂದು ಇನ್ನೊಬ್ಬರು ಬರೆದಿದ್ದಾರೆ. ಇದು ಕುದುರೆ ಪವರ್ ಹೆಚ್ಚು ಮಾಡ್ತಿದೆ ಎಂದು ಇನ್ನೊಬ್ಬರು ಬರೆದಿದ್ದಾರೆ. 

ಭಾರತದಲ್ಲಿ ಎಷ್ಟಿದೆ ಫೆರಾರಿ ಕಾರಿನ ಬೆಲೆ : ದುಬಾರಿ ಕಾರುಗಳಲ್ಲಿ ಫೆರಾರಿ ಸೇರಿದೆ. ಪೋರ್ಟೊಫಿನೊ ಕಾರಿನ ಬೆಲೆ 3.50 ಕೋಟಿ ರೂಪಾಯಿಯಿಂದ ಪ್ರಾರಂಭವಾಗುತ್ತದೆ. ಎಫ್8 ಟ್ರಿಬ್ಯೂಟೊ ಅತ್ಯಂತ ದುಬಾರಿ ಮಾದರಿಯಾಗಿದ್ದು ಅದ್ರ ಬೆಲೆ 4.02 ಕೋಟಿ ರೂಪಾಯಿಯಿಂದ ಶುರುವಾಗುತ್ತದೆ. ಭಾರತದಲ್ಲಿ ಫೆರಾರಿಯ ಮೂರು ಮಾದರಿ ಕಾರುಗಳು ಲಭ್ಯವಿದೆ. 
 

Follow Us:
Download App:
  • android
  • ios