Asianet Suvarna News Asianet Suvarna News

ಅರೆರೆ..ಇದು ಹೇಗಾಯ್ತು, ಟೊಮೆಟೋ ಗಿಡದಲ್ಲಿ ನೇತಾಡುತ್ತಿತ್ತು ಕಾಂಡೋಮ್‌!

ಜನರು ಎಷ್ಟು ಬೇಜವಾಬ್ದಾರರಾಗಿರುತ್ತಾರೆ ಎಂಬುದು ಈಗಾಗಲೇ ಹಲವು ಘಟನೆಗಳಿಂದ ಸಾಬೀತಾಗಿದೆ. ಮಲೇಷ್ಯಾದಲ್ಲಿ ನಡೆದ ಘಟನೆಯಲ್ಲಿ ವ್ಯಕ್ತಿಯೊಬ್ಬನ ವರ್ತನೆ ಎಲ್ಲರನ್ನು ರೊಚ್ಚಿಗೆಬ್ಬಿಸಿದೆ. ಅಷ್ಟಕ್ಕೂ ಅಲ್ಲಾಗಿದ್ದೇನು?

Malaysian woman finds used condom on her tomato plant shares disgusting photos Vin
Author
First Published May 15, 2023, 6:50 PM IST

ಅನೇಕ ರೀತಿಯ ಹೈಬ್ರಿಡ್ ಸಸ್ಯಗಳ ಬಗ್ಗೆ ನೀವು ಕೇಳಿರುತ್ತೀರಿ. ಸಂಶೋಧಕರು ಈ ಕುರಿತಾಗಿ ಸಾಕಷ್ಟು ಸಂಶೋಧನೆಗಳನ್ನು ಮಾಡಿದ್ದಾರೆ. ಒಂದೇ ಗಿಡದಲ್ಲಿ ವಿವಿಧ ಹಣ್ಣುಗಳನ್ನು ಬೆಳೆಯುವಂತೆ ಗಿಡವನ್ನು ಕಸಿ ಮಾಡಲಾಗುತ್ತದೆ. ಯಾವುದೋ ಗಿಡದಲ್ಲಿ ಇನ್ಯಾವುದೋ ಹಣ್ಣು, ತರಕಾರಿ ಬೆಳೆಯುವಂತೆ ಸಹ ಕಸಿ ಮಾಡುತ್ತಾರೆ. ಈ ಹೈಬ್ರಿಡ್ ಸಸ್ಯಗಳ ಹಣ್ಣುಗಳು ಅಥವಾ ತರಕಾರಿಗಳು ಸಾಮಾನ್ಯವಾದವುಗಳಿಗಿಂತ ಬಹಳ ಭಿನ್ನವಾಗಿರುತ್ತವೆ. ಕೆಲವು ತಳಿಯ ಹೈಬ್ರಿಡ್ ತೆಂಗಿನ ಮರಗಳು ಎತ್ತರಕ್ಕೆ ಬೆಳೆಯದೆ ಸಣ್ಣದಾಗಿದ್ದುಕೊಂಡೇ ಫಸಲು ನೀಡುತ್ತವೆ. ಒಂದು ಮಾವಿನ ಮರವು ವಿವಿಧ ರೀತಿಯ ಮಾವಿನಹಣ್ಣುಗಳನ್ನು ಉತ್ಪಾದಿಸುವುದೂ ಇದೆ. ಇಳುವರಿಯನ್ನು ಹೆಚ್ಚಿಸಲು ವಿಜ್ಞಾನಿಗಳು ಈ ರೀತಿಯ ಹೈಬ್ರಿಡ್ ಬೀಜಗಳು ಮತ್ತು ಸಸ್ಯಗಳನ್ನು ಉತ್ತೇಜಿಸುತ್ತಾರೆ. 

ಟೊಮೇಟೊ ಗಿಡದಲ್ಲಿ ನೇತಾಡುತ್ತಿತ್ತು ಕಾಂಡೋಮ್
ಆದರೆ ಮಲೇಷ್ಯಾದಲ್ಲಿ ಮಹಿಳೆ (Woman)ಯೊಬ್ಬರು ನೆಟ್ಟಿದ್ದ ಟೊಮೇಟೊ ಗಿಡದಲ್ಲಿ ಟೊಮೇಟೊ ಬದಲು ಕಾಂಡೋಮ್ ನೇತಾಡುತ್ತಿರುವುದು ಪತ್ತೆಯಾಗಿದೆ. ಅರೆ ಟೊಮೇಟೋ ಗಿಡದಲ್ಲಿ (Tomato plant) ಕಾಂಡೋಮ್ ಎಲ್ಲಿಂದ ಬಂತು ಅಂತ ಮಹಿಳೆ ಬೆಚ್ಚಿಬಿದ್ದಳು. ನಿಮ್ಮನ್ನೂ ಈ ಗೊಂದಲ ಕಾಡಿರಬಹುದು. ಆ ಬಗ್ಗೆ ಮಾಹಿತಿ ಇಲ್ಲಿದೆ.

ಹೆಸರಾಂತ ಫ್ಯಾಷನ್‌ ಶೋನಲ್ಲಿ ರಾಶಿ ರಾಶಿ ಕಾಂಡೋಮ್‌ ಪ್ಯಾಕೆಟ್ಸ್ ಯಾಕ್ ಬಂತು?

ಮಹಿಳೆಯ ಮನೆಯ ಮೇಲೆ ವಾಸಿಸುತ್ತಿದ್ದ ವ್ಯಕ್ತಿಯೊಬ್ಬ ಕಾಂಡೋಮ್ ಬಳಸಿ ನಂತರ ಬಾಲ್ಕನಿಯಿಂದ ಕೆಳಗೆ ಎಸೆದಿದ್ದಾನೆ. ಅದು ಹೋಗಿ ಕೆಳಗಿರುವ ಮನೆಯ ತೋಟದಲ್ಲಿದ್ದ ಟೊಮೇಟೊ ಗಿಡಕ್ಕೆ ಸಿಕ್ಕಿ ಹಾಕಿಕೊಂಡಿದೆ. ಟೊಮೇಟೊ ಗಿಡಗಳನ್ನು ನೆಟ್ಟಿದ್ದ ಮಹಿಳೆ ಇದನ್ನು ನೋಡಿ ಸಿಟ್ಟಿಗೆದ್ದಿದ್ದು, ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ (Social media) ಶೇರ್ ಮಾಡಿದ್ದು ವೈರಲ್ ಆಗಿದೆ.

ಮಹಿಳೆಯ ಚಿತ್ರದ ಜೊತೆಗೆ ಕಟುವಾದ ಶೀರ್ಷಿಕೆಯನ್ನೂ ಬರೆದಿದ್ದಾರೆ. 'ನನ್ನ ಮನೆಯ ಮೇಲೆ ವಾಸಿಸುವ ವ್ಯಕ್ತಿ ಇಂಥಾ ಕೆಲಸ ಮಾಡಿದ್ದಾನೆ. ನನ್ನ ಮನೆಯಲ್ಲಿ ಚಿಕ್ಕ ಮಕ್ಕಳಿದ್ದಾರೆ.. ಅಂತಹ ವಿಷಯಗಳನ್ನು ನೋಡಿದರೆ, ತುಂಬಾ ಅವಮಾನ ಮತ್ತು ಮುಜುಗರವಾಗುತ್ತದೆ' ಎಂದು ಬರೆದಿದ್ದಾರೆ.

ಅಬ್ಬಾ..ಹೀಗೂ ಮಾಡ್ತಾರಾ..ಕೋಪದಲ್ಲಿ ಕಾಂಡೋಮ್‌ನಲ್ಲಿ ಸುತ್ತಿದ್ದ ಬಾಳೆಹಣ್ಣು ತಿಂದ!

ಬಳಸಿದ ಕಾಂಡೋಮ್‌ಗಳನ್ನು ಎಂದಿಗೂ ಬಿಸಾಡಬಾರದು.ಯಾವುದಾದರೊಂದು ವಸ್ತುವಿನಲ್ಲಿ ಸುತ್ತಿ ಡಸ್ಟ್‌ಬಿನ್‌ನಲ್ಲಿ ಹಾಕಿ ಎಂದು ಸಲಹೆ ನೀಡಿದ್ದಾರೆ. ಅದನ್ನು ಇತರರ ಮನೆ ಮತ್ತು ರಸ್ತೆಗಳ ಮೇಲೆ ಎಸೆಯುವುದು ಅನೈರ್ಮಲ್ಯ ಕಾರ್ಯವಾಗಿದೆ. ಚಿತ್ರ ವೈರಲ್ ಆದ ನಂತರ, ಅನೇಕ ಜನರು ನೆರೆಹೊರೆಯವರನ್ನು ದೂಷಿಸಲು ಪ್ರಾರಂಭಿಸಿದರು. ಬೇಜವಾಬ್ದಾರಿ ವ್ಯಕ್ತಿಗಳು ಮಾತ್ರ ಇಂತಹ ಕೆಲಸ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅದೇನೆ ಇರ್ಲಿ, ಭೂಮಿಯಲ್ಲಿ ವಾಸಿಸುವ ಪ್ರತಿಯೊಬ್ಬರಿಗೂ ಸಾಮಾಜಿಕ ಕರ್ತವ್ಯ ಎಂಬುದೊಂದು ಇರುತ್ತದೆ. ಜನರು ಅದನ್ನು ತಿಳಿದುಕೊಂಡು ವರ್ತಿಸಿದರೆ ಒಳಿತು.

ಕಾಂಡೋಮ್‌ ಹೇಗೇಗೋ ಇದ್ರೆ ಸಂಭೋಗ ಖುಷಿ ಕೊಡಲ್ಲ, ಖರೀದಿಸೋ ಮುನ್ನ ಈ ವಿಚಾರ ತಿಳ್ಕೊಳ್ಳಿ

Follow Us:
Download App:
  • android
  • ios