ವಿಲಾಸಿ ಜೀವನಕ್ಕೆ ಹೆಸರಾಗಿದ್ದ ಪಟಿಯಾಲದ ಮಹಾರಾಜ ಭೂಪಿಂದರ್ ಸಿಂಗ್, ಒಂಬತ್ತನೇ ವಯಸ್ಸಿಗೆ ಪಟ್ಟಕ್ಕೆ ಏರಿದರು. 44 ರೋಲ್ಸ್ ರಾಯ್ಸ್ ಕಾರು, ಖಾಸಗಿ ವಿಮಾನ ಹೊಂದಿದ್ದ ಇವರಿಗೆ 10 ರಾಣಿಯರು, 332 ದಾಸಿಯರು, ೮೮ ಮಕ್ಕಳಿದ್ದರು. ಕ್ರಿಕೆಟ್ ಪ್ರೇಮಿಯಾಗಿದ್ದ ಭೂಪಿಂದರ್ ಸಿಂಗ್, ಚೈಲ್ ಕ್ರಿಕೆಟ್ ಮೈದಾನ ನಿರ್ಮಿಸಿದರು ಹಾಗೂ ಪಟಿಯಾಲಾ ಪೆಗ್‌ನ್ನು ಜನಪ್ರಿಯಗೊಳಿಸಿದರು.

ಪಟಿಯಾಲ: ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮ ದೇಶದಲ್ಲಿ ನೂರಾರು ರಾಜಮನೆತನಗಳಿದ್ದವು. ಈ ಪೈಕಿ ಹಲವು ರಾಜಮನೆತನಗಳು ಪ್ರಜೆಗಳ ಹಿತಾದೃಷ್ಟಿಯಿಂದ ಆಡಳಿತ ನಡೆಸುವ ಮೂಲಕ ಜನ ಮನ್ನಣೆ ಗಳಿಸಿದ್ದವು. ಇನ್ನು ಕೆಲವು ರಾಜ ಮಹಾರಾಜರು ತಮ್ಮ ವಿಲಾಸಿ ಜೀವನ ಶೈಲಿಯ ಮೂಲಕ ಗಮನ ಸೆಳೆದಿದ್ದರು. ನಾವಿಂದು ಅಂತಹದ್ದೇ ಮಹಾರಾಜರ ಪರಿಚಯ ಮಾಡಿಕೊಡಲು ಹೊರಟಿದ್ದೇವೆ. ಈತನಿಗೆ 10 ರಾಣಿಯರು, 350 ಪ್ರೇಯಸಿಗಳು, 88 ಮಕ್ಕಳಿದ್ದರು. ಈತ ಕ್ರಿಕೆಟ್ ಮೈದಾನವನ್ನು ನಿರ್ಮಿಸಿದ್ದ. ಇದೆಲ್ಲ ಅಚ್ಚರಿ ಎನಿಸಿದ್ರೂ ಸತ್ಯ.

ಹೌದು, ನಾವಿಂದು ಹೇಳಲು ಹೊರಟಿರುವ ರಾಜ ಬೇರೆಯಾರೂ ಅಲ್ಲ ಪಟಿಯಾಲದ ಮಹಾರಾಜ ಭೂಪಿಂದರ್ ಸಿಂಗ್ ಅವರ ಬಗ್ಗೆ. ಅಪಾರ ಸಂಪತ್ತಿನ ಒಡೆಯರಾಗಿದ್ದ ಭೂಪಿಂದರ್ ಸಿಂಗ್ ತಮ್ಮ ವಿಲಾಸಿ ಜೀವನಶೈಲಿಯ ಮೂಲಕವೇ ಹೆಚ್ಚು ಗಮನ ಸೆಳೆದ ರಾಜ. ಕೇವಲ 9ನೇ ವಯಸ್ಸಿಗೆ ಸಿಂಹಾಸನ ಏರಿದ ಭೂಪಿಂದರ್ ಸಿಂಗ್, ಪಟಿಯಾಲ ಪೆಗ್ ಹಾಗೂ ಪಟಿಯಾಲ ನೆಕ್ಲೇಸ್‌ಗೆ ಹೆಸರುವಾಸಿಯಾಗಿದ್ದರು. ಇದು ಅವರ ಶ್ರೀಮಂತಿಕೆಯ ಸಂಕೇತವಾಗಿತ್ತು ಎಂದು ಅವರ ಆಸ್ಥಾನದ ದಿವಾನ್ ಜರ್ಮಾನಿ ದಾಸ್‌ ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.

ಪ್ರೈವೇಟ್ ಜೆಟ್ ಖರೀದಿಸಿದ ಮೊದಲ ಭಾರತೀಯ ಕ್ರಿಕೆಟಿಗನೀತ! ಆದರೆ ಅದು ಕಪಿಲ್ ದೇವ್, ತೆಂಡುಲ್ಕರ್, ಧೋನಿ, ಕೊಹ್ಲಿ ಅಲ್ಲವೇ ಅಲ್ಲ

ಭೂಪಿಂದರ್ ಸಿಂಗ್ ಅವರ ಆಳ್ವಿಕೆಯಲ್ಲಿ ಲೀಲಾ ಭವನ್ ಅರಮನೆಯನ್ನು ನಿರ್ಮಿಸಲಾಗಿತ್ತು. ಈ ಭವನವನ್ನು ಅತ್ಯಾಧುನಿಕ ಶೈಲಿಯಲ್ಲಿ ನಿರ್ಮಿಸಲಾಗಿತ್ತು. ಈ ಭವನ ಪ್ರವೇಶಿಸುವ ಮುನ್ನ ಅತಿಥಿಗಳು ಬೆತ್ತಲೆಯಾಗಿ ಪ್ರವೇಶಿಸಬೇಕಿತ್ತು. ಹಾಗೂ ಅದ್ಧೂರಿ ಈಜು ಕೊಳದಲ್ಲಿ ಮೋಜು ಮಸ್ತಿ ಮಾಡಲು ಅವಕಾಶ ಮಾಡಿಕೊಟ್ಟಿದ್ದ.

ಇನ್ನು ಭೂಪಿಂದರ್ ಸಿಂಗ್ ಖಾಸಗಿ ಬದುಕು ಮತ್ತಷ್ಟು ಇಂಟ್ರೆಸ್ಟಿಂಗ್ ಆಗಿದೆ. ಈ ರಾಜ 10 ರಾಣಿಯರನ್ನು ಮದುವೆಯಾಗಿದ್ದ ಎಂದು ವರದಿಯಾಗಿದೆ. ಇದಷ್ಟೇ ಅಲ್ಲದೇ ಈತನ ಜನಾನದಲ್ಲಿ ಬರೋಬ್ಬರಿ 332 ಮಹಿಳಾ ದಾಸಿಯರಿದ್ದರು. ಈ ಪೈಕಿ ಕೆಲವರನ್ನಷ್ಟೇ ರಾಣಿಯರೆಂದು ಗುರುತಿಸಲಾಗಿತ್ತು. ಈ ರಾಜನ ಬಳಿ ಆಗಲೇ ಬರೋಬ್ಬರಿ 44 ರೋಲ್ಸ್ ರಾಯ್ಸ್ ಕಾರುಗಳಿದ್ದವು ಹಾಗೂ ಒಂದು ಖಾಸಗಿ ಏರೋಪ್ಲೇನ್‌ ಕೂಡಾ ಇತ್ತು. 

ಧೋನಿ, ಕೊಹ್ಲಿ, ಸಚಿನ್‌ ಲೆಕ್ಕಕ್ಕಿಲ್ಲ, ಈ ಭಾರತೀಯ ಕ್ರಿಕೆಟಿಗನ ಬಳಿ ಇದೆ ₹22 ಸಾವಿರ ಕೋಟಿ ಮೌಲ್ಯದ ಚಿನ್ನಾಭರಣ!

ಭೂಪಿಂದರ್ ಸಿಂಗ್ ತಮ್ಮ ಶೃಂಗಾರ ಹಾಗೂ ಪ್ರಣಯಚೇಷ್ಟೆಗೆ ಹೆಚ್ಚು ಸುದ್ದಿಯಲ್ಲಿರುತ್ತಿದ್ದ. ಆತನದ್ದು ಪ್ರೇಯಸಿಗಳ ಜತೆ ಮಲಗುವುದು, ಬ್ರ್ಯಾಂಡಿ ಕುಡಿಯುವುದು, , ಇಸ್ಪೀಟ್‌ ಎಲೆ ಆಡುವುದು ಹಾಗೂ ಬಿಡುವಿನ ಸಮಯದಲ್ಲಿ ಶಿಖಾರಿ ಮಾಡುವುದು ಈತನ ಹವ್ಯಾಸವಾಗಿತ್ತು. 120 ಮಿಲಿ ವಿಸ್ಕಿ ಅಳತೆಯ ಪಟಿಯಾಲಾ ಪೆಗ್ ಪ್ರಖ್ಯಾತಿಗೊಳಿಸಿದ ಕೀರ್ತಿ ಕೂಡಾ ಈ ಭೂಪಿಂದರ್ ಸಿಂಗ್‌ಗೆ ಸಲ್ಲುತ್ತದೆ. ಭವ್ಯವಾದ ಪಾರ್ಟಿಗಳನ್ನು ಆಯೋಜಿಸುವುದು ಈತನ ಫ್ಯಾಷನ್‌ಗಳಲ್ಲಿ ಒಂದಾಗಿತ್ತು.

ಇದೆಲ್ಲದರ ಜತೆಗೆ ಈತ ಓರ್ವ ಒಳ್ಳೆಯ ಕ್ರೀಡಾಪಟು ಕೂಡಾ ಆಗಿದ್ದ. ಭೂಪಿಂದರ್ ಸಿಂಗ್ ನೇತೃತ್ವದ ಭಾರತ ಕ್ರಿಕೆಟ್ ತಂಡವು 1911ರಲ್ಲಿ ಇಂಗ್ಲೆಂಡ್ ಪ್ರವಾಸ ಮಾಡಿತ್ತು. ಪಟಿಯಾಲ ಇಲೆವನ್ ಹಾಗೂ ಪಟಿಯಾಲ ಟೈಗರ್ಸ್ ಕ್ರಿಕೆಟ್ ತಂಡವನ್ನು ಕಟ್ಟಿದ ಕೀರ್ತಿ ಕೂಡಾ ಇವರಿಗೆ ಸಲ್ಲುತ್ತದೆ. ಇನ್ನು ಭೂಪಿಂದರ್ ಸಿಂಗ್ ಚೈಲ್ ಕ್ರಿಕೆಟ್ ಗ್ರೌಂಡ್ ಕೂಡಾ ನಿರ್ಮಿಸುವ ಮೂಲಕ ಕ್ರಿಕೆಟ್‌ ಮೇಲೆ ತಮಗಿರುವ ಒಲವನ್ನು ಜಗತ್ತಿನ ಮುಂದೆ ಅನಾವರಣ ಮಾಡಿದ್ದರು.