ಧೋನಿ, ಕೊಹ್ಲಿ, ಸಚಿನ್ ಲೆಕ್ಕಕ್ಕಿಲ್ಲ, ಈ ಭಾರತೀಯ ಕ್ರಿಕೆಟಿಗನ ಬಳಿ ಇದೆ ₹22 ಸಾವಿರ ಕೋಟಿ ಮೌಲ್ಯದ ಚಿನ್ನಾಭರಣ!
ಪಟಿಯಾಲದ ಮಹಾರಾಜ ಭೂಪಿಂದರ್ ಸಿಂಗ್ ಡಜನ್‌ಗೂ ಹೆಚ್ಚು ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದಾರೆ. ಇದಷ್ಟೇ ಅಲ್ಲದೇ 1911ರಲ್ಲಿ ತಮ್ಮ 20ನೇ ವಯಸ್ಸಿನಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕರಾಗಿಯೂ ಕಾರ್ಯ ನಿರ್ವಹಿಸಿದ್ದರು. ಈಗಿರುವಂತೆ ಜಾಹಿರಾತು, ಎಂಡೋರ್ಸ್‌ಮೆಂಟ್ ಇಲ್ಲದ ಕಾಲಘಟ್ಟದಲ್ಲಿ ತಮ್ಮದೇ ಸಂಪತ್ತಿನಿಂದ ಅಗಾಧವಾದ ಸಾಮ್ರಾಜ್ಯವನ್ನು ನಿರ್ಮಿಸಿದ್ದರು.
ಬೆಂಗಳೂರು: ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಸಾರ್ವಕಾಲಿಕ ಶ್ರೀಮಂತ ಕ್ರಿಕೆಟಿಗರೆಂದರೆ ಥಟ್ಟನೆ ನೆನಪಾಗುವ ಹೆಸರುಗಳು ಕ್ರಿಕೆಟ್ ದಂತಕಥೆಗಳಾದ ಸಚಿನ್ ತೆಂಡುಲ್ಕರ್, ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ ಎಂದು. ಈ ಎಲ್ಲಾ ಕ್ರಿಕೆಟಿಗರು ತಮ್ಮ ಕಾಲಘಟ್ಟದಲ್ಲಿ ಅತಿಹೆಚ್ಚು ಸಂಭಾವನೆ ಪಡೆದ ಆಟಗಾರರಾಗಿದ್ದಾರೆ. ಈ ಎಲ್ಲಾ ಕ್ರಿಕೆಟಿಗರ ಆಸ್ತಿ ಮೌಲ್ಯ ಒಂದು ಸಾವಿರ ಕೋಟಿ ರುಪಾಯಿಗೂ ಹೆಚ್ಚಿದೆ. ಆದರೆ ಭಾರತದ ಮತ್ತೊಬ್ಬ ಕ್ರಿಕೆಟಿಗರಿದ್ದಾರೆ, ಅವರ ಆಸ್ತಿ ಮೌಲ್ಯ ಕೇಳಿದರೆ, ಕೊಹ್ಲಿ, ಸಚಿನ್ ಹಾಗೂ ಧೋನಿ ಹೀಗೆ ಮೂವರ ಆಸ್ತಿ ಮೌಲ್ಯದ ಒಟ್ಟು ಮೊತ್ತಕ್ಕಿಂತ ಹಲವು ಪಟ್ಟು ಹೆಚ್ಚಿದೆ. ನಿಮಗಿದು ಅಚ್ಚರಿ ಎನಿಸಿದರೂ ಕೂಡಾ ಸತ್ಯ.
ಹೌದು, ಭಾರತದ ಕ್ರಿಕೆಟಿಗ ಭೂಪಿಂದರ್ ಸಿಂಗ್ ಅವರ ಒಟ್ಟು ಆಸ್ತಿ ಮೌಲ್ಯ, ಸಚಿನ್, ಧೋನಿ ಮತ್ತೆ ಕೂಹ್ಲಿಯ ಒಟ್ಟು ಸಂಪತ್ತಿಗಿಂತ ಹೆಚ್ಚಿದೆ. 1900ನೇ ಇಸವಿಯಲ್ಲಿ ಬ್ರಿಟೀಷ್ ಆಳ್ವಿಕೆಯ ಸಂದರ್ಭದಲ್ಲಿ ಮಹಾರಾಜ ಭೂಪಿಂದರ್ ಸಿಂಗ್ ಪಟಿಯಾಲ(ಪಂಜಾಬ್)ದ ರಾಜನಾಗಿದ್ದರು. ಆ ಸಂದರ್ಭದಲ್ಲಿ ಪಟಿಯಾಲ ಸಂಸ್ಥಾನವು ದೇಶದ ಅತ್ಯಂತ ಶ್ರೀಮಂತ ರಾಜ ಮನೆತನ ಎನಿಸಿಕೊಂಡಿತ್ತು. ಭೂಪಿಂದರ್ ಸಿಂಗ್, ಕೇವಲ ಮಹಾರಾಜ ಮಾತ್ರವಾಗಿರದೇ, ಭಾರತದ ಮೊದಲ ಪ್ರಖ್ಯಾತ ಕ್ರಿಕೆಟಿಗರೆನಿಸಿಕೊಂಡಿದ್ದರು.
ಅಮೆರಿಕದಲ್ಲೂ ಧೋನಿ ಹವಾ; ಕ್ಯಾಪ್ಟನ್ ಕೂಲ್‌ಗಾಗಿ ಗಾಲ್ಫ್ ಪಂದ್ಯ ಆಯೋಜಿಸಿದ ಡೊನಾಲ್ಡ್ ಟ್ರಂಪ್..! ವಿಡಿಯೋ ವೈರಲ್
ಮಹಾರಾಜ ಭೂಪಿಂದರ್ ಸಿಂಗ್, ಚಿಕ್ಕ ವಯಸ್ಸಿನಲ್ಲಿಯೇ ಕ್ರಿಕೆಟ್‌ನತ್ತ ಒಲವು ಬೆಳೆಸಿಕೊಂಡರು. 20 ವರ್ಷದವರಿದ್ದಾಗಲೇ ಭಾರತ ಕ್ರಿಕೆಟ್ ತಂಡದ ನಾಯಕರಾಗಿಯೂ ನೇಮಕವಾಗಿದ್ದರು. ಆದರೆ ಬಹುತೇಕ ಮಂದಿಗೆ ಗೊತ್ತಿಲ್ಲ, ಇವರು ಮಹೇಂದ್ರ ಸಿಂಗ್ ಧೋನಿ ಹಾಗೂ ವಿರಾಟ್ ಕೊಹ್ಲಿಗಿಂತ ಸಾಕಷ್ಟು ಶ್ರೀಮಂತ ಕ್ರಿಕೆಟಿಗರೆಂದು.
ಭೂಪೇಂದರ್ ಸಿಂಗ್ ಕೇವಲ 9 ವರ್ಷದವರಿದ್ದಾಗಲೇ ಪಟಿಯಾಲದ ಮಹಾರಾಜರಾಗಿ ಪಟ್ಟಾಭಿಷೇಕ ಮಾಡಿಸಿಕೊಂಡಿದ್ದರು. ಭೂಪಿಂದರ್ ಸಿಂಗ್ ಅವರ ತಂದೆ ನಿಧನವಾಗಿದ್ದರಿಂದಾಗಿ ಚಿಕ್ಕವಯಸ್ಸಿನಲ್ಲೇ ಸಿಂಹಾಸನ ಏರಿದರು. ಸಾಕಷ್ಟು ವರ್ಣರಂಜಿತ ಜೀವನ ನಡೆಸಿದ್ದ ಭೂಪಿಂದರ್ ಸಿಂಗ್ ಅವರ ಬಳಿ ಪ್ರೈವೇಟ್ ಜೆಟ್ ಕೂಡಾ ಇತ್ತು. ಇನ್ನೂ ಇಂಟ್ರೆಸ್ಟಿಂಗ್ ವಿಚಾರವೆಂದರೆ, ಪ್ರೈವೇಟ್ ಜೆಟ್ ಹೊಂದಿದ ಭಾರತದ ಮೊದಲ ಕ್ರಿಕೆಟಿಗ ಎನ್ನುವ ಹಿರಿಮೆ ಕೂಡಾ ಭೂಪಿಂದರ್ ಸಿಂಗ್ ಅವರ ಹೆಸರಿನಲ್ಲಿದೆ.
ಪಾಕಿಸ್ತಾನ ವೇಗಿಗೆ ಗಾಳ ಹಾಕಿದ ರಿಷಭ್ ಪಂತ್ ಪ್ರೇಯಸಿ..! ಊರ್ವಶಿ ಸ್ಟೇಟಸ್ ವೈರಲ್
ಪಟಿಯಾಲದ ಮಹಾರಾಜ ಭೂಪಿಂದರ್ ಸಿಂಗ್ ಡಜನ್‌ಗೂ ಹೆಚ್ಚು ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದಾರೆ. ಇದಷ್ಟೇ ಅಲ್ಲದೇ 1911ರಲ್ಲಿ ತಮ್ಮ 20ನೇ ವಯಸ್ಸಿನಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕರಾಗಿಯೂ ಕಾರ್ಯ ನಿರ್ವಹಿಸಿದ್ದರು. ಈಗಿರುವಂತೆ ಜಾಹಿರಾತು, ಎಂಡೋರ್ಸ್‌ಮೆಂಟ್ ಇಲ್ಲದ ಕಾಲಘಟ್ಟದಲ್ಲಿ ತಮ್ಮದೇ ಸಂಪತ್ತಿನಿಂದ ಅಗಾಧವಾದ ಸಾಮ್ರಾಜ್ಯವನ್ನು ನಿರ್ಮಿಸಿದ್ದರು.
ಹಲವು ವರದಿಗಳ ಪ್ರಕಾರ, ಅತಿಹೆಚ್ಚು ಚಿನ್ನಾಭರಣಗಳನ್ನು ಹೊಂದಿದ್ದ ಭಾರತದ ಕ್ರಿಕೆಟಿಗ ಎನ್ನುವ ಹಿರಿಮೆ ಕೂಡಾ ಭೂಪಿಂದರ್ ಸಿಂಗ್ ಅವರ ಹೆಸರಿನಲ್ಲಿ ಇಂದಿಗೂ ಅಚ್ಚಳಿಯದೇ ಉಳಿದಿದೆ. ಅತ್ಯಂತ ದುಬಾರಿ ಮೌಲ್ಯದ ಪಟಿಯಾಲ ನೆಕ್ಲೆಸ್ ಸೇರಿದಂತೆ ಭೂಪಿಂದರ್ ಸಿಂಗ್ ಅವರ ಬಳಿ 22 ಸಾವಿರ ಕೋಟಿ ರುಪಾಯಿ ಮೌಲ್ಯದ ಚಿನ್ನಾಭರಣಗಳು, ಮುತ್ತು ರತ್ನಗಳು ಅವರ ಬಳಿ ಇದ್ದವು ಎಂದು ವಿಕಿಪೀಡಿಯಾ ಪೇಜ್‌ನಲ್ಲಿ ಉಲ್ಲೇಖವಾಗಿದೆ.
ಆಗಿನ ಕಾಲದಲ್ಲಿದ್ದ ಅವರ ಒಟ್ಟು ಸಂಪತ್ತು ಎಷ್ಟು ಎನ್ನುವುದನ್ನು ಖಚಿತವಾಗಿ ಈಗ ಲೆಕ್ಕಾಹಾಕಲು ಸಾಧ್ಯವಿಲ್ಲ. ಆಗ ಭೂಪಿಂದರ್ ಸಿಂಗ್ ವಾಸವಾಗಿದ್ದ ಅರಮನೆಯ ಮೌಲ್ಯ 350 ಕೋಟಿ ರುಪಾಯಿಗೂ ಹೆಚ್ಚಿನದಾಗಿತ್ತು. ಭೂಪಿಂದರ್ ಸಿಂಗ್ ಅವರ ಸಂಪತ್ತಿನ ಆಧುನಿಕ ಕ್ರಿಕೆಟ್ ದಂತಕಥೆಗಳಾದ ಸಚಿನ್ ತೆಂಡುಲ್ಕರ್, ಮಹೇಂದ್ರ ಸಿಂಗ್ ಧೋನಿ ಹಾಗೂ ವಿರಾಟ್ ಕೊಹ್ಲಿ ಲೆಕ್ಕಕ್ಕಿಲ್ಲ.