ಪ್ರೈವೇಟ್ ಜೆಟ್ ಖರೀದಿಸಿದ ಮೊದಲ ಭಾರತೀಯ ಕ್ರಿಕೆಟಿಗನೀತ! ಆದರೆ ಅದು ಕಪಿಲ್ ದೇವ್, ತೆಂಡುಲ್ಕರ್, ಧೋನಿ, ಕೊಹ್ಲಿ ಅಲ್ಲವೇ ಅಲ್ಲ

ಟೀಂ ಇಂಡಿಯಾದ ಕೆಲವು ಆಟಗಾರರ ಬಳಿ ಪ್ರೈವೇಟ್ ಜೆಟ್ ಇದೆ. ಆದರೆ ಭಾರತದಲ್ಲಿ ಪ್ರೈವೇಟ್ ಜೆಟ್ ಖರೀದಿಸಿದ ಮೊದಲ ಕ್ರಿಕೆಟಿಗ ಯಾರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ

Maharaja Bhupinder Singh was first Indian cricketer to buy private jet kvn

ಬೆಂಗಳೂರು: ಕ್ರಿಕೆಟ್‌ ಜಗತ್ತಿನಲ್ಲಿ ವಿರಾಟ್ ಕೊಹ್ಲಿ, ಮಹೇಂದ್ರ ಸಿಂಗ್ ಧೋನಿ, ಸಚಿನ್ ತೆಂಡುಲ್ಕರ್ ಹೀಗೆ ಹತ್ತು ಹಲವು ಶ್ರೀಮಂತ ಆಟಗಾರರಿದ್ದಾರೆ. ಇವರೆಲ್ಲಾ ಎಷ್ಟರಮಟ್ಟಿಗೆ ಶ್ರೀಮಂತರೆಂದರೆ, ಈ ಎಲ್ಲಾ ಆಟಗಾರರ ಬಳಿ ಖಾಸಗಿ ಜೆಟ್‌ಗಳಿವೆ. ಆದರೆ ಪ್ರೈವೇಟ್ ಜೆಟ್ ಖರೀದಿಸಿದ ಮೊದಲ ಭಾರತೀಯ ಕ್ರಿಕೆಟಿಗ ಎನ್ನುವ ಶ್ರೇಯ ಮಾತ್ರ ಮಹಾರಾಜ ಭೂಪಿಂದರ್ ಸಿಂಗ್ ಅವರ ಹೆಸರಿನಲ್ಲಿದೆ.

ಭಾರತಕ್ಕೆ ಚೊಚ್ಚಲ ಏಕದಿನ ವಿಶ್ವಕಪ್ ಗೆದ್ದುಕೊಟ್ಟ ನಾಯಕ ಕಪಿಲ್ ದೇವ್, ಕ್ರಿಕೆಟ್ ದಂತಕಥೆಗಳಾದ ಸಚಿನ್ ತೆಂಡುಲ್ಕರ್, ಮಹೇಂದ್ರ ಸಿಂಗ್ ಧೋನಿ ಹಾಗೂ ವಿರಾಟ್ ಕೊಹ್ಲಿ ಬಳಿ ಖಾಸಗಿ ಜೆಟ್‌ಗಳಿವೆ. ಆದರೆ ಇವರೆಲ್ಲರಿಗಿಂತ ಮೊದಲೇ ಖಾಸಗಿ ವಿಮಾನ ಖರೀದಿಸಿದ ಕೀರ್ತಿ ಪಟಿಯಾಲದ ಮಹರಾಜಾ ಹಾಗೂ ಕ್ರಿಕೆಟಿಗರೂ ಆಗಿದ್ದ ಭೂಪಿಂದರ್ ಸಿಂಗ್ ಅವರದ್ದಾಗಿದೆ.

ಪಟಿಯಾಲಾ ರಾಜಮನೆತನದ ಭೂಪಿಂದರ್ ಸಿಂಗ್, ತಾವು 9ನೇ ವಯಸ್ಸಿನವರಾಗಿದ್ದಾಗಲೇ, ಪಟಿಯಾಲ ರಾಜ್ಯದ ಮಹಾರಾಜರಾಗಿ ಪಟ್ಟಕ್ಕೇರಿದ್ದರು. ಭೂಪಿಂದರ್ ಸಿಂಗ್ 1900ರಿಂದ 1938ರ ವರೆಗೆ ಪಂಜಾಬ್‌ನ ಪಟಿಯಾಲದ ಮಹರಾಜಾರಾಗಿ ಕಾರ್ಯ ನಿರ್ವಹಿಸಿದ್ದರು. ಇದಾಗಿ ಕೆಲವೇ ವರ್ಷಗಳಲ್ಲಿ ಭಾರತ, ಬ್ರಿಟೀಷರಿಂದ ಸ್ವಾತಂತ್ರ್ಯ ಪಡೆದುಕೊಂಡಿತು.

ಧೋನಿ, ಕೊಹ್ಲಿ, ಸಚಿನ್‌ ಲೆಕ್ಕಕ್ಕಿಲ್ಲ, ಈ ಭಾರತೀಯ ಕ್ರಿಕೆಟಿಗನ ಬಳಿ ಇದೆ ₹22 ಸಾವಿರ ಕೋಟಿ ಮೌಲ್ಯದ ಚಿನ್ನಾಭರಣ!

ವಿಶಾಲ ಸಾಮ್ರಾಜ್ಯದ ಮಹಾರಾಜರಾಗಿದ್ದ ಭೂಪಿಂದರ್ ಸಿಂಗ್ ಐಷಾರಾಮಿ ಜೀವನ ಶೈಲಿಗೆ ಹೆಸರಾಗಿದ್ದರು. ಭೂಪಿಂದರ್ ಸಿಂಗ್, ಖಾಸಗಿ ವಿಮಾನ ಖರೀದಿಸಿದ ಮೊದಲ ಭಾರತೀಯ ಎನ್ನುವ ಹಿರಿಮೆಗೂ ಪಾತ್ರರಾಗಿದ್ದಾರೆ. ಕೇವಲ 19 ವರ್ಷದ ಭೂಪಿಂದರ್ ಸಿಂಗ್, 1910ರಲ್ಲಿ ಯುನೇಟೆಡ್ ಕಿಂಗ್‌ಡಮ್‌ನಿಂದ ಪ್ರೈವೇಟ್ ಜೆಟ್ ಖರೀದಿಸಿದ್ದರು.

ಅಂದಹಾಗೆ ಭೂಪಿಂದರ್ ಭಾರತದಲ್ಲೇ ಮಹಾರಾಜ ಪಟ್ಟಕ್ಕೇರಿದ ಅತಿಕಿರಿಯ ವ್ಯಕ್ತಿ ಮಾತ್ರವಲ್ಲದೇ, ಸ್ವಾತಂತ್ರ್ಯಪೂರ್ವ ಭಾರತದ ಅತ್ಯುತ್ತಮ ಕ್ರಿಕೆಟಿಗರಾಗಿದ್ದರು ಎನ್ನುವುದು ಬಹುತೇಕ ಮಂದಿಗೆ ಗೊತ್ತಿಲ್ಲ. ಐಷಾರಾಮಿ ಜೀವನಶೈಲಿ ಮೂಲಕವೇ ಹೆಚ್ಚು ಸುದ್ದಿಯಾಗಿದ್ದ ಭೂಪಿಂದರ್ ಸಿಂಗ್, ಕ್ರಿಕೆಟ್‌ ಕ್ರೀಡೆಯ ಬಗ್ಗೆ ವಿಪರೀತ ಒಲವು ಹೊಂದಿದವರಾಗಿದ್ದರು. ಭೂಪಿಂದರ್ ಸಿಂಗ್ ಪಟಿಯಾಲಾ XI ತಂಡದ ಪ್ರಮುಖ ಆಟಗಾರರಾಗಿದ್ದರು. ಆ ಕಾಲಘಟ್ಟದಲ್ಲಿ ಪಟಿಯಾಲಾ XI ಭಾರತದ ಅತ್ಯುತ್ತಮ ಕ್ರಿಕೆಟ್ ತಂಡಗಳಲ್ಲಿ ಒಂದು ಎನಿಸಿಕೊಂಡಿತ್ತು. ಮಹಾರಾಜ ಭೂಪಿಂದರ್ ಸಿಂಗ್ ನೇತೃತ್ವದ ಭಾರತ ಕ್ರಿಕೆಟ್ ತಂಡವು 1911ರಲ್ಲಿ ಕ್ರಿಕೆಟ್ ಆಡಲು ಇಂಗ್ಲೆಂಡ್ ಪ್ರವಾಸ ಮಾಡಿತ್ತು. 

ವಿಮಾನ ಖರೀದಿಸಿದ ಮೊದಲ ಭಾರತೀಯ ಈ ಮಹಾರಾಜನಿಗಿದ್ದಿದ್ದು 360 ಪತ್ನಿಯರು! ಬಳಿ ಇತ್ತು 248 ಕೋಟಿಯ ನೆಕ್ಲೇಸ್!

ಪಟಿಯಾಲಾದ ಮಹಾರಾಜ ಭೂಪಿಂದರ್ ಸಿಂಗ್, ತಮ್ಮ ಇಡೀ ಕ್ರಿಕೆಟ್ ವೃತ್ತಿಜೀವನದಲ್ಲಿ 27 ಪ್ರಥಮದರ್ಜೆ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದರು. ಇನ್ನು ಭೂಪಿಂದರ್ ಸಿಂಗ್ 1926ರಲ್ಲಿ ಮೆರಿಲ್‌ಬೋನ್ ಕ್ರಿಕೆಟ್ ಕ್ಲಬ್‌ನ ಭಾಗವಾಗಿದ್ದರು. ಇನ್ನು 1932ರಲ್ಲಿ ಭಾರತ ಟೆಸ್ಟ್ ತಂಡದ ನಾಯಕರಾಗಿ ಭೂಪಿಂದರ್ ಸಿಂಗ್ ಅವರು ಆಯ್ಕೆಯಾಗಿದ್ದರು. ಭಾರತ ಟೆಸ್ಟ್‌ ತಂಡ 1932ರಲ್ಲಿ ಟೆಸ್ಟ್ ಸರಣಿಯನ್ನಾಡಲು ಇಂಗ್ಲೆಂಡ್ ಪ್ರವಾಸ ಕೈಗೊಂಡಿತ್ತು. ಆದರೆ ಆರೋಗ್ಯದ ಸಮಸ್ಯೆಯಿಂದಾಗಿ ಭೂಪಿಂದರ್ ಸಿಂಗ್, ಟೆಸ್ಟ್ ಸರಣಿಯನ್ನಾಡಲು ಇಂಗ್ಲೆಂಡ್‌ಗೆ ತೆರಳಿರಲಿಲ್ಲ.

Latest Videos
Follow Us:
Download App:
  • android
  • ios