ಕಲ್ಲುಪ್ಪಿಗಿಂತ ಚಿಕ್ಕದಾದ ಲೂಯಿಸ್ ವಿಟಾನ್ ಬ್ಯಾಗ್ ಹರಾಜಿನಲ್ಲಿ 51 ಲಕ್ಷಕ್ಕೆ ಸೇಲ್!
Louis Vuitton Handbag: ಕಲ್ಲುಪ್ಪಿಗಿಂತ ಚಿಕ್ಕದಾದ, ತೀರಾ ದಿಟ್ಟಿಸಿ ನೋಡಿದಾಗಲಷ್ಟೇ ಕಾಣುವ ಲೂಯಿಸ್ ವಿಟಾನ್‌ನ ಮೈಕ್ರೋಸ್ಕೋಪಿಕ್ ಬ್ಯಾಗ್ ಹರಾಜಿನಲ್ಲಿ ಬರೋಬ್ಬರಿ 51 ಲಕ್ಷ ರೂಪಾಯಿಗೆ ಮಾರಾಟವಾಗಿದೆ. ಈ ಬ್ಯಾಗ್‌ನ ಚಿತ್ರಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ನವದೆಹಲಿ (ಜೂ.30): ವಿಶ್ವದ ಅತ್ಯಂತ ದುಬಾರಿ ವಸ್ತುಗಳ ಬಗ್ಗೆ ನೀವು ಕೇಳಿರಬಹುದು. ಅವುಗಳನ್ನು ನೋಡುವ ಮೂಲಕ ಅವುಗಳ ಮೌಲ್ಯವನ್ನು ಅಂದಾಜು ಮಾಡಲು ಕಷ್ಟವಾಗುವ ಹಲವು ವಿಷಯಗಳಿವೆ. ಕಲ್ಲುಪ್ಪಿಗಿಂತ ಚಿಕ್ಕದಾಗಿರುವ ಹ್ಯಾಂಡ್‌ಬ್ಯಾಗ್‌ವೊಂದು ಪ್ಯಾರಿಸ್ ಫ್ಯಾಶನ್ ವೀಕ್‌ನ ಹರಾಜಿನಲ್ಲಿ ಬರೋಬ್ಬರಿ 51 ಲಕ್ಷ ರೂಪಾಯಿಗೆ ಹರಾಜಾಗಿದೆ. ಈ ಹ್ಯಾಂಡ್‌ಬ್ಯಾಗ್‌ಅನ್ನು ಆನ್‌ಲೈನ್‌ನಲ್ಲಿ ಹರಾಜು ಮಾಡಲಾಗಿತ್ತು. ಹಳದಿ ಹಾಗೂ ಸಣ್ಣ ಪ್ರಮಾಣದ ಹಸಿರು ಬಣ್ಣವನ್ನು ಹೊಂದಿರುವ ಈ ಹ್ಯಾಂಡ್‌ಬ್ಯಾಗ್‌ಅನ್ನು ವಿಶ್ವದ ದುಬಾರಿ ಹ್ಯಾಂಡ್‌ಬ್ಯಾಗ್‌ಗಳನ್ನು ತಯಾರಿಸುವಲ್ಲಿಯೇ ಹೆಸರುವಾಸಿಯಾಗಿರುವ ಲೂಯಿಸ್ ವಿಟಾನ್ ಕಂಪನಿಯ ಬ್ರ್ಯಾಂಡ್‌ನದ್ದಾಗಿದೆ. ಈ ಬ್ಯಾಗ್‌ಅನ್ನು ನ್ಯೂಯಾರ್ಕ್ ಆರ್ಟ್ ಗ್ರೂಪ್ ಎಂಎಸ್‌ಸಿಎಚ್‌ಎಫ್ ತಯಾರಿಸಿದೆ. ಮಾಧ್ಯಮ ವರದಿಗಳ ಪ್ರಕಾರ, ಈ ಬ್ಯಾಗ್‌ನ ಅಗಲ ಹೆಚ್ಚೆಂದರೆ 0.3 ಇಂಚುಗಳಿರಬಹುದು ಎನ್ನಲಾಗಿದೆ. ಈ ತಿಂಗಳ ಆರಂಭದಲ್ಲಿ ಎಂಎಸ್‌ಸಿಎಚ್‌ಎಫ್ ಇದರ ಚಿತ್ರವನ್ನು ಇನ್ಸ್‌ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿತ್ತು. ಇದರ ಬೆನ್ನಲ್ಲಿಯೇ ಈ ಹ್ಯಾಂಡ್‌ಬ್ಯಾಂಗ್‌ನ ಚತ್ರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದು ಕಲ್ಲುಪ್ಪಿನ ಕಣಕ್ಕಿಂತ ಚಿಕ್ಕದಾದ ಬ್ಯಾಗ್ ಎಂದು ಹೆಮ್ಮೆಯಿಂದ ಎಂಎಸ್‌ಸಿಎಚ್‌ಎಫ್ ಬರೆದುಕೊಂಡಿತ್ತು.
ಲಭ್ಯ ಮಾಹಿತಿಯ ಪ್ರಕಾರ, ಈ ಬ್ಯಾಗ್‌ಅನ್ನು ಎರಡು ಫೋಟೋ ಪಾಲಿಮರೀಕರಣವನ್ನು ಬಳಸಿ ತಯಾರಿಸಲಾಗುತ್ತದೆ. ಇದನ್ನು 3D ಪ್ರಿಂಟ್ ಮೈಕ್ರೋ-ಸ್ಕೇಲ್ ಪ್ಲಾಸ್ಟಿಕ್ ಭಾಗಗಳಿಗೆ ಬಳಸಲಾಗುತ್ತದೆ. ಈ ಬ್ಯಾಗ್‌ನೊಂದಿಗೆ ಡಿಜಿಟಲ್ ಡಿಸ್‌ಪ್ಲೇ ಹೊಂದಿರುವ ಮೈಕ್ರೋಸ್ಕೋಪ್‌ನೊಂದಿಗೆ ಮಾರಾಟ ಮಾಡಲಾಗಿದೆ. ಖರೀದಿದಾರರು ಈ ಬ್ಯಾಗ್‌ಅನ್ನು ನೋಡಬೇಕಾದರೆ, ಮೈಕ್ರೋಸ್ಕೋಪಿಕ್ ಮೂಲವೇ ನೋಡಲು ಸಾಧ್ಯವಾಗಿದೆ. ಈ ಬ್ಯಾಗ್‌ನ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಅನೇಕ ಬಳಕೆದಾರರು ಈ ಬ್ಯಾಗ್‌ನಿಂದ ಏನು ಪ್ರಯೋಜನ ಎಂದು ಕಾಮೆಂಟ್ ಮಾಡಿದ್ದಾರೆ.
ಒಂದೇ ದಿನದಲ್ಲಿ 92,620 ಕೋಟಿ ಕಳೆದುಕೊಂಡ ವಿಶ್ವದ ಶ್ರೀಮಂತ ವ್ಯಕ್ತಿ ಬರ್ನಾರ್ಡ್ ಅರ್ನಾಲ್ಟ್!
ಯಾರಿದು ಎಂಎಸ್‌ಸಿಎಚ್‌ಎಫ್?: MSCHF ಅನ್ನು 2016 ರಲ್ಲಿ ಸ್ಥಾಪಿಸಲಾಗಿದೆ. ಇದು ಇಂಥದ್ದೇ ಬ್ಯಾಗ್‌ಗಳು, ಹರಾಜಿಗೆ ಆಗುವಂಥ ಉತ್ಪನ್ನಗಳನ್ನು ತಯಾರಿಸುವಲ್ಲಿ ಹೆಸರುವಾಸಿಯಾಗಿದೆ. 2021ರಲ್ಲಿ MSCHF ಬಿರ್ಕಿನ್ ಬ್ಯಾಗ್‌ಗಳಿಂದ ಸ್ಯಾಂಡಲ್‌ಗಳನ್ನು ತಯಾರಿಸಿತ್ತು. . ಲೂಯಿ ವಿಟಾನ್ ಬಗ್ಗೆ ಮಾತನಾಡುತ್ತಾ, ಇದು ಅಂತರರಾಷ್ಟ್ರೀಯ ಐಷಾರಾಮಿ ಬ್ರಾಂಡ್ ಆಗಿದೆ. ಇದರ ಪ್ರತಿ ಚೀಲದ ಬೆಲೆ ಲಕ್ಷಗಟ್ಟಲೆ. ಲೂಯಿ ವಿಟಾನ್ ಬ್ಯಾಗ್ ಕಂಪನಿಯು ವಿಶ್ವದಲ್ಲಿಯೇ ಅತ್ಯಂತ ದುಬಾರಿ ಬೆಲೆಯ ಬ್ಯಾಗ್‌ಗಳನ್ನು ತಯಾರಿಸುವಲ್ಲಿ ಹೆಸರುವಾಸಿಯಾಗಿದೆ.
ನಂ.1 ಶ್ರೀಮಂತನ ಉತ್ತರಾಧಿಕಾರಿ ಆಯ್ಕೆಗೆ ಪ್ರತಿ ತಿಂಗಳೂ 5 ಮಕ್ಕಳ ಸಂದರ್ಶನ! ಆಡಿಷನ್ ಪ್ರಕ್ರಿಯೆ ಹೀಗಿದೆ..