ಈಗಾಗಲೇ ಅವರ ಐದೂ ಮಕ್ಕಳು ಕಂಪನಿಯ ಬೇರೆ ಬೇರೆ ವಿಭಾಗಗಳ ಜವಾಬ್ದಾರಿ ನೋಡಿಕೊಳ್ಳುತ್ತಿದ್ದಾರೆ. ತನ್ನ ಮರಣಾನಂತರ ಯಾರು ಸಿಇಒ ಆಗಬೇಕು ಎಂಬುದನ್ನು ನಿರ್ಧರಿಸಲು ತಂದೆ ಈ ‘ಆಡಿಷನ್‌’ ನಡೆಸುತ್ತಿದ್ದಾರೆ.

ಪ್ಯಾರಿಸ್‌ (ಏಪ್ರಿಲ್ 25, 2023): ಜಗತ್ತಿನ ನಂ.1 ಶ್ರೀಮಂತ ಉದ್ಯಮಿ ಬರ್ನಾರ್ಡ್‌ ಅರ್ನಾಲ್ಟ್‌ (74) ತನ್ನ ನಂತರ ಲೂಯಿಸ್‌ ವಿಟ್ಟನ್‌ ಕಂಪನಿಯನ್ನು ಮುನ್ನಡೆಸುವ ಉತ್ತರಾಧಿಕಾರಿಯ ಆಯ್ಕೆಗೆ ಐವರು ಮಕ್ಕಳನ್ನು ಪ್ರತಿ ತಿಂಗಳೂ ಒಮ್ಮೆ ಊಟಕ್ಕೆ ಕರೆದು ಸಂದರ್ಶನ ನಡೆಸುತ್ತಿದ್ದಾರೆ ಎಂಬ ಕುತೂಹಲಕರ ಸಂಗತಿ ಬೆಳಕಿಗೆ ಬಂದಿದೆ. ಅಮೆರಿಕದ ಟೆಸ್ಲಾ ಸಿಇಒ ಎಲಾನ್‌ ಮಸ್ಕ್‌ರನ್ನು ಹಿಂದಿಕ್ಕಿ ಫ್ರಾನ್ಸ್‌ ಮೂಲದ ಲೂಯಿಸ್‌ ವಿಟ್ಟನ್‌ (ಎಲ್‌ವಿಎಂಎಚ್‌) ಕಂಪನಿಯ ಸಿಇಒ ಹಾಗೂ ಚೇರ್ಮನ್‌ ಬರ್ನಾರ್ಡ್‌ ಅರ್ನಾಲ್ಟ್‌ ಇತ್ತೀಚೆಗೆ ಜಗತ್ತಿನ ನಂ.1 ಶ್ರೀಮಂತನಾಗಿದ್ದಾರೆ. ಹತ್ತಾರು ಐಷಾರಾಮಿ ಬ್ರ್ಯಾಂಡ್‌ಗಳ ಮಾಲಿಕತ್ವ ಹೊಂದಿರುವ ಕಂಪನಿ ಅವರದ್ದಾಗಿದೆ. ಅವರ ಒಟ್ಟು ಆಸ್ತಿ 240 ಶತಕೋಟಿ ಡಾಲರ್‌ (ಸುಮಾರು 19.70 ಲಕ್ಷ ಕೋಟಿ ರೂ.).

ಉತ್ತರಾಧಿಕಾರಿ ಆಯ್ಕೆಗೆ ಹತ್ತು ವರ್ಷಗಳ ಪ್ರಕ್ರಿಯೆಯೊಂದನ್ನು ರೂಪಿಸಿಕೊಂಡಿರುವ ಬರ್ನಾಡ್‌ ಅರ್ನಾಲ್ಟ್‌ (Bernard Arnault), ಅದರ ಭಾಗವಾಗಿ ಪ್ರತಿ ತಿಂಗಳು ತಮ್ಮ ಎಲ್ಲಾ ಐವರು ಮಕ್ಕಳನ್ನು (Children) ಊಟಕ್ಕೆ (Lunch) ಕರೆಯುತ್ತಿದ್ದಾರೆ. 90 ನಿಮಿಷಗಳ ಕಾಲ ಊಟದ ಸಭೆ (Meeting) ನಡೆಯುತ್ತದೆ. ಈ ವೇಳೆ ತಮ್ಮ ಐಪ್ಯಾಡ್‌ನಿಂದ ಕೆಲ ವಿಷಯಗಳನ್ನು ಓದುವ ಬರ್ನಾರ್ಡ್‌, ಅದರ ಬಗ್ಗೆ ಮಕ್ಕಳ ಅಭಿಪ್ರಾಯ ಕೇಳುತ್ತಾರೆ. ಕಂಪನಿಗೆ ಸಂಬಂಧಿಸಿದ ಬದಲಾವಣೆ, ಹಿರಿಯ ಅಧಿಕಾರಿಗಳ ಕಾರ್ಯವೈಖರಿ, ಕಂಪನಿಯ ಸುಧಾರಣೆ ಬಗ್ಗೆಯೂ ಅಭಿಪ್ರಾಯ ಸಂಗ್ರಹಿಸುತ್ತಾರೆ. ನಂತರ ತಮ್ಮದೇ ನೋಟ್ಸ್‌ ಬರೆದುಕೊಳ್ಳುತ್ತಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

ಇದನ್ನು ಓದಿ: Forbes: ಜಗತ್ತಿನ ನಂ. 1 ಶ್ರೀಮಂತ ಎಂಬ ಹಣೆಪಟ್ಟಿನೂ ಕಳಕೊಂಡ್ರೇ ಎಲಾನ್‌ ಮಸ್ಕ್..?

ಈಗಾಗಲೇ ಅವರ ಐದೂ ಮಕ್ಕಳು ಕಂಪನಿಯ ಬೇರೆ ಬೇರೆ ವಿಭಾಗಗಳ ಜವಾಬ್ದಾರಿ ನೋಡಿಕೊಳ್ಳುತ್ತಿದ್ದಾರೆ. ತನ್ನ ಮರಣಾನಂತರ ಯಾರು ಸಿಇಒ (CEO) ಆಗಬೇಕು ಎಂಬುದನ್ನು ನಿರ್ಧರಿಸಲು ತಂದೆ ಈ ‘ಆಡಿಷನ್‌’ (Audition) ನಡೆಸುತ್ತಿದ್ದಾರೆ. ಉತ್ತರಾಧಿಕಾರಿ ರೇಸ್‌ನಲ್ಲಿ ಅವರ ಮಕ್ಕಳಾದ ಡೆಲ್ಫೀನ್‌, ಆ್ಯಂಟನಿ, ಫ್ರೆಡರಿಕ್‌, ಅಲೆಕ್ಸಾಂಡರ್‌ ಹಾಗೂ ಜೀನ್‌ ಇದ್ದಾರೆ.

ಇದನ್ನೂ ಓದಿ: ಮರಳಿ ಹಳಿಗೆ ಅದಾನಿ ಗ್ರೂಪ್‌: 2 ಗಂಟೆಗಳಲ್ಲಿ 5 ಬಿಲಿಯನ್ ಡಾಲರ್‌ ಜಿಗಿದ ಗೌತಮ್‌ ಅದಾನಿ ಆಸ್ತಿ