ಈತನಿಗೆ ಈಗಿನ್ನೂ 27 ವರ್ಷ: ಅದಾಗಲೇ 18 ಮಕ್ಕಳ ತಂದೆ!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 20, Dec 2018, 1:02 PM IST
Kyle Gordy The Most Popular Sperm Donor in The World
Highlights

ಇಲ್ಲಿದ್ದಾನೆ ವೀರ್ಯ ದಾನ ಮಾಡುವ ರಿಯಲ್ ವಿಕಿ ಡೋನರ್| 27 ವಯಸ್ಸಿನಲ್ಲೇ 18 ಮಕ್ಕಳಿಗೆ ತಂದೆಯಾದ ಯುವಕ| ವಿಶ್ವದ ಅತ್ಯಂತ ಜನಪ್ರಿಯ ವೀರ್ಯ ದಾನಿ ಎಂಬ ಹೆಗ್ಗಳಿಕೆಗೆ ಪಾತ್ರ| ಮಗು ಬಯಸುವ ಮಹಿಳೆಯರಿಗೆ ಈತನಿಂದ ವೀರ್ಯ ದಾನ| ಫೇಸ್‌ಬುಕ್‌ನಲ್ಲಿ ವೀರ್ಯ ದಾನಕ್ಕಾಗಿ ಮನವಿಗಳ ಮಹಾಪೂರ

ಲಾಸ್ ಎಂಜಿಲಿಸ್(ಡಿ.20): ನೀವೆಲ್ಲಾ ಬಾಲಿವುಡ್ ಚಿತ್ರ ವಿಕಿ ಡೋನರ್ ನೊಡಿರುತ್ತೀರಿ. ತನ್ನ ವೀರ್ಯವನ್ನು ದಾನ ಮಾಡುವ ಮೂಲಕ ಚಿತ್ರದ ನಾಯಕ, ಮಕ್ಕಳಿಲ್ಲದ ಪೋಷಕರ ಮಡಿಲು ತುಂಬಿಸುವ ಸತ್ಕಾರ್ಯದಲ್ಲ ನಿರತರಾಗಿರುತ್ತಾನೆ.

ಆದರೆ ಅಮೆರಿಕದಲ್ಲೋರ್ವ ನಿಜ ಜೀವನದ ವಿಕಿ ಡೋನರ್ ಇದ್ದಾನೆ. ಈತ ವಿಶ್ವದ ಅತ್ಯಂತ ಜನಪ್ರಿಯ ವೀರ್ಯ ದಾನಿ. 27 ವರ್ಷದ ಕೈಲ್ ಗೋರ್ಡಿ ಇದುವರೆಗೂ 18 ಮಹಿಳೆಯರಿಗೆ ವೀರ್ಯ ದಾನ ಮಾಡುವ ಮೂಲಕ ಅವರ ಬಂಜೆತನ ನಿವಾರಿಸಿದ್ದಾನೆ.

ಅಮೆರಿಕದ ಲಾಸ್ ಎಂಜಿಲಿಸ್ ನಗರದ ಕೈಲ್ ಗೋರ್ಡಿ, ತನ್ನ ವೀರ್ಯ ದಾನ ಮಾಡುವ ಮೂಲಕ ಇದುವರೆಗೆ 18 ಮಕ್ಕಳಿಗೆ ತಂದೆಯಾಗಿದ್ದಾನೆ. ವಿಶ್ವದಾದ್ಯಂತ ಸಂಚರಿಸಿ ಮಹಿಳೆಯರಿಗೆ ವೀರ್ಯ ದಾನ ಮಾಡುವ ಮೂಲಕ ಅವರಿಗೆ ತಾಯಿ ಭಾಗ್ಯ ಕಲ್ಪಿಸುವ ಆಸೆ ಕೈಲ್ ಗೋರ್ಡಿಯದ್ದು.

ತನ್ನ 20ನೇ ವಯಸ್ಸಿನಲ್ಲೇ ವೀರ್ಯ ದಾನ ಮಾಡಲು ಪ್ರಾರಂಭಿಸಿದ ಕೈಲ್, 7 ವರ್ಷಗಳ ಅವಧಿಯಲ್ಲಿ ಒಟ್ಟು 18 ಮಕ್ಕಳ ಜನನಕ್ಕೆ ಕಾರಣನಾಗಿದ್ದಾನೆ. ಈತನ ಫೇಸ್‌ಬುಕ್‌ನಲ್ಲಿ ವೀರ್ಯ ದಾನ ಮಾಡುವಂತೆ ಮನವಿಗಳ ಮಹಾಪೂರವೇ ಹರಿದು ಬರುತ್ತದೆ.

loader