ದಿನಕ್ಕೆ ಕೇವಲ 100 ರೂ. ಕೂಲಿ ಮಾಡುತ್ತಿದ್ದ ಝೌ ಕುನ್ಫೀ ಅವರು ಲೆನ್ಸ್ ಟೆಕ್ನಾಲಜಿ ಸ್ಥಾಪಿಸಿ ಆಪಲ್ ಐಫೋನ್‌ಗಳಿಗೆ ಗ್ಲಾಸ್ ಪೂರೈಸುವ ಮೂಲಕ ದೊಡ್ಡ ಬಿಲಿಯನೇರ್ ಆಗಿ ಬೆಳೆದಿದ್ದಾರೆ. ಪ್ರಸ್ತುತ ಇವರು 1.8 ಲಕ್ಷ ಕೋಟಿ ರೂ. ಸಂಪತ್ತಿನೊಂದಿಗೆ ಚೀನಾದ ಅತ್ಯಂತ ಶ್ರೀಮಂತ ಮಹಿಳೆಯಾಗಿ ಹೊರಹೊಮ್ಮಿದ್ದಾರೆ.
ಹುಟ್ಟಿನಿಂದಲೇ ಎಲ್ಲರಿಗೂ ಗೂಲ್ಡನ್ ಸ್ಪೂನ್ ಸಿಕ್ಕಿರುವುದಿಲ್ಲ. ಅಂತದ್ದೇ ಸ್ಟೋರಿ ಇದಾಗಿದೆ. ಒಂದು ಕಾಲದಲ್ಲಿ ದಿನಕ್ಕೆ ಕೇವಲ ನೂರು, ಇನ್ನೂರು ರೂಪಾಯಿ ಕೂಲಿಗಾಗಿ ಕೆಲಸಕ್ಕೆ ಹೋಗುತ್ತಿದ್ದ ಹೆಣ್ಮಮಗಳು. ಇವತ್ತು ದೊಡ್ಡ ಬಿಲಿಯನೇರ್! ಹೇಗೆ ಅವರು ತಮ್ಮ ಸಾಮ್ರಾಜ್ಯವನ್ನು ಸ್ಥಾಪಿಸಿದರು ಅನ್ನೋ ವಿವರ ಈ ಸ್ಟೋರಿಯಲ್ಲಿದೆ.
ಹೆಸರು ಝೌ ಕುನ್ಫೀ. 1970 ರಲ್ಲಿ ಚೀನಾದ ಹುನಾನ್ ಪ್ರಾಂತ್ಯದಲ್ಲಿ ಇವರು ಜನಿಸಿದರು. ಚಿಕ್ಕ ವಯಸ್ಸಿನಲ್ಲೀಯೇ ಶಾಲೆಯನ್ನು ಬಿಟ್ಟು ಹೊಟ್ಟೆ ತುಂಬಿಸಿಕೊಳ್ಳಲು ಕೂಲಿ ಕೆಲಸ ಶುರುಮಾಡಿದರು. ಕೊನೆಗೆ ಒಂದು ದಿನ ಕೆಲಸ ಹುಡುಕಿಕೊಂಡು ಶೆನ್ಜೆನ್‌ಗೆ ಬಂದರು. ಅಲ್ಲಿ ಅವರು ಒಂದು ವಾಚ್ ಗ್ಲಾಸ್ ಕಾರ್ಖಾನೆಗೆ ಸೇರಿಕೊಂಡರು. ಅವರ ಕೆಲಸಕ್ಕಾಗಿ ನಿತ್ಯ 100 ರೂಪಾಯಿ ನೀಡಲಾಗುತ್ತಿತ್ತು. 23ನೇ ವಯಸ್ಸಿನಲ್ಲಿ ಅವರು ತಮ್ಮದೇ ಗಾಜಿನ ಸಂಸ್ಕರಣಾ ಘಟಕ ತೆರೆದರು. ಸ್ಕ್ರೀನ್ ಪ್ರಿಂಟಿಂಗ್ ಮತ್ತು ಬಾಗಿದ ಗಾಜಿನ ಉತ್ಪಾದನಾ ತಂತ್ರಗಳನ್ನು ಕಲಿತರು. ಈ ಸ್ಕಿಲ್ ಅವರ ಬ್ಯುಸಿನೆಸ್‌ಗೆ ದೊಡ್ಡ ಅಡಿಪಾಯ ಹಾಕಿತು. ನಂತರ ಸ್ಮಾರ್ಟ್‌ಫೋನ್‌ಗಳಿಗೆ ಪರದೆಗಳನ್ನು ಪೂರೈಸುವ ಗ್ಲಾಸ್ ಪ್ರಾಡೆಕ್ಟ್ ಕಂಪನಿ ಲೆನ್ಸ್ ಟೆಕ್ನಾಲಜಿ ಸ್ಥಾಪಿಸಿದರು.
ಬದುಕು ಬದಲಿಸಿದ ಐಫೋನ್
2007 ರಲ್ಲಿ ಆಪಲ್‌ನ ಮೊದಲ ಐಫೋನ್‌ಗಳಿಗೆ ಗಾಜಿನ ಕವರ್‌ಗಳನ್ನು ಪೂರೈಸಲು ಕೆಲಸ ಆರಂಭಿಸಿದರು. ಅಲ್ಲಿಂದ ಝೌ ಕುನ್‌ಫೀ ಅವರ ಬದುಕು ಬದಲಾಗುತ್ತ ಹೋಯಿತು. ಐಫೋನ್‌ಗಳಿಗೆ ಅಗತ್ಯವಿರುವ ಗಾಜಿನ ಪರದೆಯ ಕವರ್‌ಗಳನ್ನು ಲೆನ್ಸ್ ಟೆಕ್ನಾಲಜಿ ಪೂರೈಸಿತು. 2011 ಮತ್ತು 2014 ರ ನಡುವೆ.. ಐಫೋನ್‌ಗಳಿಗೆ ಗಾಜಿನ ಮಾರಾಟದಿಂದ ಕಂಪನಿಯು ಅನಿರೀಕ್ಷಿತ ಲಾಭ ಗಳಿಸಿತು. 2015ರಲ್ಲಿ ಕಂಪನಿಯ ಷೇರುಗಳನ್ನು ಶೆನ್ಜೆನ್ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಪಟ್ಟಿ ಮಾಡಿದಾಗ ಝೌ ಕುನ್‌ಫೀ ಸಂಪತ್ತು ಹೆಚ್ಚಾಯಿತು. ಅದೇ ವರ್ಷ ಚೀನಾದ ಅತ್ಯಂತ ಶ್ರೀಮಂತ ಮಹಿಳೆ ಎಂದು ಗುರುತಿಸಲ್ಪಟ್ಟರು.
ಇನ್ನು, 2018 ರಲ್ಲಿ ಯುಎಸ್-ಚೀನಾ ವ್ಯಾಪಾರ ಯುದ್ಧ ಇವರ ಬ್ಯುಸಿನೆಸ್ ಮೇಲೆ ಹೊಡೆತ ನೀಡಿತು. ಲೆನ್ಸ್ ಟೆಕ್ನಾಲಜಿ ಷೇರುಗಳು ಕುಸಿತಕಂಡವು. ಅಲ್ಲಿಗೆ ಅವರು ನಿರಾಸರಾಗಲಿಲ್ಲ. ಝೌ ಕುನ್ಫೀ ಕಂಪನಿಯನ್ನು ಸ್ಮಾರ್ಟ್‌ಫೋನ್ ಪರದೆಗಳು, ವಿದ್ಯುತ್ ವಾಹನಗಳು, ಎಐ ಹಾರ್ಡ್‌ವೇರ್ ಮತ್ತು ರೊಬೊಟಿಕ್ಸ್ ಕ್ಷೇತ್ರಗಳಿಗೆ ಶಿಫ್ಟ್ ಆದರು. ಲೆನ್ಸ್ ತಂತ್ರಜ್ಞಾನವು ಈಗ ಸ್ಮಾರ್ಟ್‌ಫೋನ್ ಗ್ಲಾಸ್, ಕೃತಕ ಬುದ್ಧಿಮತ್ತೆ (ಎಐ) ಮತ್ತು ರೊಬೊಟಿಕ್ಸ್ ಕ್ಷೇತ್ರಗಳಿಗೆ ವಿಸ್ತರಿಸಿಕೊಂಡರು.
1.8 ಲಕ್ಷ ಕೋಟಿ ರೂ. ಸಂಪತ್ತು..
ಹುರುನ್ ಪಟ್ಟಿ ಪ್ರಕಾರ.. 2026 ರ ಶ್ರೀಮಂತ ಮಹಿಳೆಯರ ಪಟ್ಟಿಯಲ್ಲಿ56 ವರ್ಷದ ಝೌ ಕುನ್ಫೆಗೆ ಸ್ಥಾನ ಇದೆ. ಅವರ ಒಟ್ಟು ಸಂಪತ್ತು 127 ಬಿಲಿಯನ್ ಯುವಾನ್ ತಲುಪಿದೆ. ಅಂದರೆ ಭಾರತೀಯ ಕರೆನ್ಸಿಯಲ್ಲಿ 1.8 ಲಕ್ಷ ಕೋಟಿ ರೂ. ಕಳೆದ ವರ್ಷಕ್ಕೆ ಹೋಲಿಸಿದರೆ ಅವರ ಸಂಪತ್ತು ಶೇ. 15 ರಷ್ಟು ಹೆಚ್ಚಾಗಿದೆ. ಝೌ ಕುನ್ಫೆ ಹ್ಯಾನ್ಸೊ ಫಾರ್ಮಾಸ್ಯುಟಿಕಲ್ ಸಂಸ್ಥಾಪಕ ಝಾಂಗ್ ಹುಯಿಜುವಾನ್ ಅವರನ್ನು ಹಿಂದಿಕ್ಕಿ ಅಗ್ರಸ್ಥಾನ ಪಡೆದಿದ್ದಾರೆ. ಚೀನಾದ 50 ಶ್ರೀಮಂತ ಮಹಿಳೆಯರಲ್ಲಿ ಶೇ.65 ರಷ್ಟು ಜನರು ಸ್ವ-ನಿರ್ಮಿತರಾಗಿದ್ದು, ಒಟ್ಟು 1.93 ಟ್ರಿಲಿಯನ್ ಯುವಾನ್ ಸಂಪತ್ತನ್ನು ಹೊಂದಿದ್ದಾರೆ. ಇನ್ನು ಹುರುನ್ ಶ್ರೀಮಂತ ಪಟ್ಟಿಯಲ್ಲಿ ಝೌ ಕುನ್ಫೀ ಮತ್ತು ಅವರ ಪತಿ 33ನೇ ಸ್ಥಾನದಲ್ಲಿದ್ದಾರೆ.






