ಫಿಂಗರ್ ಪ್ರಿಂಟ್ ಮೂಲಕವೇ ಮನುಷ್ಯನ ರೋಗ ಪತ್ತೆ ಮಾಡಬಹುದು..!

Just some of the Diseases that could be Detected from your FINGERPRINT
Highlights

ಆಧುನಿಕ ದಿನಮಾನಗಳಲ್ಲಿ  ವೈದ್ಯಕೀಯ ಸೌಲಭ್ಯಗಳು ಹೆಚ್ಚಿದಂತೆ ಮಾನವನಿಗೆ ಕಾಡುವ ರೋಗಗಳೂ ಕೂಡ ಹೆಚ್ಚಾಗುತ್ತಿದೆ. ಯಾವುದೇ ರೀತಿಯಾದ ರೋಗಗಳಿದ್ದರೂ ಸ್ಕ್ಯಾನಿಂಗ್, ಎಕ್ಸ್ ರೇ ಸೇರಿದಂತೆ ವಿವಿಧ ರೀತಿಯಾದ ಸಾಧನಗಳು, ರಕ್ತಪರೀಕ್ಷೆ, ಮೂತ್ರಪರೀಕ್ಷೆಗಳು ಸೇರಿದಂತೆ ನಾನಾ ವಿಧಾನಗಳಿಗಿಂತ  ಪತ್ತೆ ಮಾಡಲಾಗುತ್ತದೆ. ಆದರೆ ಇದೀಗ ಹೊಸದಾದ ವಿಧಾನವೊಂದನ್ನು ಸಂಶೋಧನೆ ಮಾಡಲಾಗಿದೆ.

ನವದೆಹಲಿ :  ಆಧುನಿಕ ದಿನಮಾನಗಳಲ್ಲಿ  ವೈದ್ಯಕೀಯ ಸೌಲಭ್ಯಗಳು ಹೆಚ್ಚಿದಂತೆ ಮಾನವನಿಗೆ ಕಾಡುವ ರೋಗಗಳೂ ಕೂಡ ಹೆಚ್ಚಾಗುತ್ತಿದೆ. ಯಾವುದೇ ರೀತಿಯಾದ ರೋಗಗಳಿದ್ದರೂ ಸ್ಕ್ಯಾನಿಂಗ್, ಎಕ್ಸ್ ರೇ ಸೇರಿದಂತೆ ವಿವಿಧ ರೀತಿಯಾದ ಸಾಧನಗಳು, ರಕ್ತಪರೀಕ್ಷೆ, ಮೂತ್ರಪರೀಕ್ಷೆಗಳು ಸೇರಿದಂತೆ ನಾನಾ ವಿಧಾನಗಳಿಗಿಂತ  ಪತ್ತೆ ಮಾಡಲಾಗುತ್ತದೆ. ಆದರೆ ಇದೀಗ ಹೊಸದಾದ ವಿಧಾನವೊಂದನ್ನು ಸಂಶೋಧನೆ ಮಾಡಲಾಗಿದೆ.

ಕೇವಲ ಫಿಂಗರ್ ಪ್ರಿಂಟ್’ನಿಂದಲೇ ಮಾನವನ ದೇಹಕ್ಕೆ ತಗುಲಿದ ರೋಗಗಳನ್ನು ಪತ್ತೆ ಮಾಡಬಹುದಾಗಿದೆ. ಎಲ್ಲಾ ರೀತಿಯಾದ ರೋಗಗಳನ್ನೂ ಕೂಡ ಫಿಂಗರ್ ಪ್ರಿಂಟ್’ನಿಂದ ಕಂಡು ಹಿಡಿಯಬಹುದಾಗಿದೆ.

ಕೇವಲ ಅಪರಾಧ ಪತ್ತೆಗೆ ಫಿಂಗರ್ ಫ್ರಿಂಟ್ ಬಳಸಲಾಗುತ್ತಿತ್ತು. ಆದರೀಗ ರೋಗದ ಪತ್ತೆಯೂ ಬೆರಳಚ್ಚಿನಿಂದ ಮಾಡ ಬಹುದಾಗಿದೆ. ಬೆರಳಿನ ಅಚ್ಚಿನಲ್ಲಿ ಕೆಲ ರೋಗಗಳಿಗೆ ಕೆಲ ರೀತಿಯ ಬದಲಾವಣೆಗಳು ಕಂಡು ಬರುತ್ತವೆ ಎನ್ನಲಾಗುತ್ತದೆ.

ಅಸ್ತಮಾ, ಕ್ಯಾನ್ಸರ್, ಖಿನ್ನತೆ, ಹೃದಯದ ಸಮಸ್ಯೆ, ಡಯಾಬಿಟೀಸ್’ನಂತಹ ಸಮಸ್ಯೆಗಳೂ ಕೂಡ ಬೆರಳಚ್ಚಿನಿಂದ ಪತ್ತೆಯಾಗುತ್ತವೆ ಎನ್ನುತ್ತಾರೆ ಸಂಶೋಧಕರು.

 

loader