ಜೊಜೊಬಾ ಎಣ್ಣೆ ತ್ವಚೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ. ಸ್ಕಿನ್ ಹೈಡ್ರೇಟ್, ಮಾಯಿಶ್ಚರೈಜ್ ಮತ್ತು ಪಿಂಪಲ್ ಸಮಸ್ಯೆ, ಜೊತೆಗೆ ನೆರಿಗೆ, ಸುಕ್ಕು ಎಲ್ಲಾ ಸಮಸ್ಯೆಗಳೂ ಈ ಎಣ್ಣೆಯಿಂದ ಹೇಳ ಹೆಸರಿಲ್ಲದಂತೆ ದೂರವಾದುತ್ತದೆ. ಜೊತೆಗೆ ಈ ಎಣ್ಣೆಯಲ್ಲಿರುವ ಆ್ಯಂಟಿ ಬ್ಯಾಕ್ಟಿರಿಯಲ್ ಮತ್ತು ವಿಟಮಿನ್ ಅಂಶಗಳು ಚರ್ಮಕ್ಕೆ ಸಂಬಂಧಿಸಿದ ಎಲ್ಲ ಸಮಸ್ಯೆಗಳ ನಿವಾರಿಸಿ, ಸ್ಕಿನ್ ತುಂಬಾ ಸುಂದರವಾಗಿರುವಂತೆ ಮಾಡುತ್ತದೆ. 

ವಿನೆಗರ್ ಸೌಂದರ್ಯಕ್ಕೂ ಸೈ, ಕ್ಲೀನಿಗೂ ಜೈ

ಪಿಂಪಲ್ ನಿವಾರಣೆ: ಇದರಲ್ಲಿರುವ ಆ್ಯಂಟಿಸೆಪ್ಟಿಕ್ ಗುಣ ಮೊಡವೆಯನ್ನು ಮಾಯ ಮಾಡುತ್ತೆ. ಜೊತೆಗೆ ಪೋರ್ಸ್‌ಗಳನ್ನು ಬಂದ್ ಮಾಡಿ ಕಲೆಯೂ ಉಳಿಯದಂತೆ ನೋಡಿಕೊಳ್ಳುತ್ತದೆ. ಇದರಿಂದ ಕಲೆರಹಿತ ಸುಂದರ ತ್ವಚೆ ನಿಮ್ಮದಾಗುತ್ತದೆ. 

ಸ್ಕಿನ್ ಮಾಯಿಶ್ಚರೈಸರ್: ಇದು ನಿಮ್ಮ ಸ್ಕಿನ್ ಅನ್ನು ಸಾಫ್ಟ್ ಮಾಡುತ್ತದೆ, ಯಾವಾಗಲೂ ಮಾಯಿಶ್ಚರೈಸ್ ಆಗುವಂತೆ ಮಾಡುತ್ತದೆ. ಜೊತೆಗೆ ಸ್ಕಿನ್ ಹೊಳೆಯುತ್ತದೆ. ಅದಕ್ಕಾಗಿ ಈ ಎಣ್ಣೆಯಲ್ಲಿ ಮಸಾಜ್ ಮಾಡಿ. 

ಸಿಹಿಯಿಂದ ದೂರವಿದ್ದರೆ ಒಳಿತು

ಕೂದಲಿಗೆ ಕಂಡೀಷನ್: ಇದನ್ನು ಕೂದಲಿಗೆ ಹಾಕಿ ಮಸಾಜ್ ಮಾಡಿದರೆ ಕೂದಲು ಸಾಫ್ಟ್ ಆಗುತ್ತದೆ. ಜೊತೆಗೆ ತಲೆಹೊಟ್ಟು ಸಮಸ್ಯೆ ನಿವಾರಣೆ ಮಾಡುತ್ತದೆ. ಅಷ್ಟೇ ಅಲ್ಲ ಕೂದಲಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆ ಗಳೂ ನಿವಾರಿಸುತ್ತದೆ. 

ಬ್ಯುಟಿ ಕ್ವೀನ್ ಆಗ್ಲಿಕ್ಕೆ ಹೀಗ್ ಮಾಡಿ

ಮೇಕಪ್ ರಿಮೂವರ್: ಇದನ್ನು ಮೇಕಪ್ ರಿಮೂವರ್ ಆಗಿ ಬಳಕೆ ಮಾಡಬಹುದು. ಎಲ್ಲಾ ಮೇಕಪ್ ಮುಖದ ಮೇಲಿಂದ ಹೋಗಿ ಮುಖ ಕ್ಲೀನ್ ಆಗುತ್ತದೆ. ಇದರಿಂದ ಸ್ಕಿನ್ ಆರೋಗ್ಯಯುತವಾಗಿರಲು ಸಾಧ್ಯವಾಗುತ್ತದೆ.