ಹೆಚ್ಚು ಹೆಚ್ಚು ಸಿಹಿ ತಿಂದರೆ ವಯಸ್ಸಾಗುವಿಕೆ ಸಮಸ್ಯೆಗಳು ಬೇಗನೆ ಕಾಣಿಸುತ್ತವೆ. ಇದರಿಂದ ಇನ್ನಿತರ ಸಮಸ್ಯೆಗಳೂ ಕಾಣಿಸಿಕೊಳ್ಳುತ್ತವೆ. ಆದುದರಿಂದ ಆಹಾರದಲ್ಲಿ 2-3 ಶೇಕಡಾ ಮಾತ್ರ ಸಿಹಿ ಇರಬೇಕು. ಡಯಟ್‌ನಲ್ಲಿ ಹೆಚ್ಚು ಸಕ್ಕರೆ ಸೇವಿಸಿದರೆ ಬ್ಯಾಕ್ಟಿರಿಯಾ ಮತ್ತು ಫಂಗಲ್ ಇನ್ಫೆಕ್ಷನ್ ಉಂಟಾಗಬಹುದು. 

ಸ್ಕಿನ್ ಏಜಿಂಗ್ : ಹೆಚ್ಚು ಸಿಹಿ ತಿಂದರೆ ಏಜಿಂಗ್ ಸಮಸ್ಯೆ ಉಂಟಾಗುತ್ತದೆ. ಸಕ್ಕರೆಯಿಂದ ಕಾಲೊಜೆನ್ ಉಂಟು ಮಾಡುತ್ತದೆ. ಇದರಿಂದ ಸಮಸ್ಯೆಗಳುಂಟಾಗಿ ಮುಖದಲ್ಲಿ ನೆರಿಗೆ ಉಂಟಾಗುತ್ತದೆ. ಜೊತೆಗೆ ತ್ವಚೆ ಇಲಾಸ್ಟಿಸಿಟಿ ಕಳೆದುಕೊಳ್ಳುತ್ತದೆ. ಇದರಿಂದ ಬೇಗ ವಯಸ್ಸಾದವರಂತೆ ಕಾಣುವಿರಿ. 

ಸ್ಕಿನ್ ಸ್ಯಾಗಿಂಗ್: ಸಿಹಿ ತಿಂದರೆ ಒಬೆಸಿಟಿ ಹೆಚ್ಚುತ್ತದೆ. ಇದರಿಂದ ಹೊಟ್ಟೆ, ಕೈ, ಕಾಲು ಮಾತ್ರವಲ್ಲ ಮುಖದ ಮೇಲೂ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಮುಖ ಹೆಚ್ಚು ದಪ್ಪವಾಗುತ್ತದೆ. ಗಲ್ಲ, ಕೆನ್ನೆ ಮತ್ತು ಕಿವಿ ಹತ್ತಿರದ ಭಾಗದಲ್ಲಿ ಬೇಗ ಫ್ಯಾಟ್ ತುಂಬಿಸಿಕೊಳ್ಳುತ್ತದೆ. ಡಬಲ್ ಚಿನ್ ಕಾಣಿಸಿಕೊಂಡರೆ ಅಸಹ್ಯವಾಗಿ ಕಾಣಿಸುತ್ತೀರಿ. 

ಎಂಗ್ ಆಗಿ ಕಾಣಲು ಈ ವ್ಯಾಕ್ಸ್ ದಿ ಬೆಸ್ಟ್...

ಮೊಡವೆ: ಹೌದು. ಸಿಹಿ ತಿಂದರೆ ಇನ್ಸುಲಿನ್ ಹೆಸರಿನ ಹಾರ್ಮೋನ್ ಕೂಡ ಹೆಚ್ಚುತ್ತದೆ. ಇದರಿಂದ ಮೊಡವೆಗಳು ಕಾಣಿಸಿಕೊಳ್ಳುತ್ತವೆ. ಮೊಡವೆಗಳು ಉಂಟಾದರೆ ಸ್ಕಿನ್ ಮೇಲೆ ಬ್ಯಾಕ್ಟಿರಿಯಾ ಮತ್ತು ಫಂಗಲ್ ಉಂಟಾಗುತ್ತದೆ. ಡಯಾಬಿಟಿಕ್ ಜನರಿಗೆ ಇದು ಹೆಚ್ಚುತ್ತದೆ.