ಹಿಂದೆ ಮನೆಯೊಳಗೆ ಚಪ್ಪಲಿ ಧರಿಸುವುದನ್ನು ನಿಷಿದ್ಧವೆನ್ನಲಾಗುತ್ತಿತ್ತು, ಆದರೆ ಇಂದು ಅದು ಫ್ಯಾಷನ್ ಆಗಿದೆ. ಈ ಲೇಖನವು ಮನೆಯೊಳಗೆ ಚಪ್ಪಲಿ ಧರಿಸುವುದು ಮತ್ತು ಬರಿಗಾಲಿನಲ್ಲಿ ನಡೆಯುವುದರ ಆರೋಗ್ಯಕರ ಹಾಗೂ ಅನಾರೋಗ್ಯಕರ ಪರಿಣಾಮಗಳನ್ನು ವಿವರಿಸುತ್ತದೆ.
ಒಂದು ಕಾಲದಲ್ಲಿ ನಮ್ಮ ಹಿರಿಯರು ಮನೆಯೊಳಗೆ ಚಪ್ಪಲಿ ಹಾಕಿಕೊಂಡು ಬರುವುದು ಮನೆಯ ಪಾವಿತ್ರ್ಯತೆ, ದೇವರ ನೆಲೆಸಿರುವಂಥ ಮನೆಗೆ ಧಕ್ಕೆ ಎಂದು ನಂಬುತ್ತಿದ್ದರು. ಅಪ್ಪಿ ತಪ್ಪಿ ಮಕ್ಕಳು ಮನೆಯೊಳಗೆ ಚಪ್ಪಲಿ ಧರಿಸಿ ಒಳ ಬಂದರೆಂದರೆ ಅವನು/ ಅವಳೆಂತಹ ಮುದ್ದಿನ ಮಗಳಾಗಿದ್ದರೂ ಏಟು ಬಿಳುತ್ತಿದ್ದಂತೂ ಹೌದು. ಕೆಲವೊಮ್ಮೆ ಮನೆಯೊಳಗೆ ಚಪ್ಪಲಿ ಧರಿಸಿ ಪ್ರವೇಶಿಸಿದರೆ ಅದರಲ್ಲೂ ಹಬ್ಬದ ದಿನಗಳಲ್ಲಿ ಪ್ರವೇಶಿಸಿದರೆ ವಾಚಮಗೋಚರ ಬೈದು ಇಡೀ ಮನೆಯನ್ನ ಮತ್ತೊಮ್ಮೆ ತೊಳೆದುಬಿಡುತ್ತಿದ್ದರು. ಅದೆಲ್ಲ ಈಗಿನವರಿಗೆ ತಮಾಷೆಯಾಗಿ, ಗೊಡ್ಡು ನಂಬಿಕೆಯಾಗಿ ಕಾಣುತ್ತೆನ್ನುವುದು ವಿಪರ್ಯಾಸ.
ಮನೆಯೊಳಗೆ ಚಪ್ಪಲಿ ಏಕೆ ಧರಿಸಬಾರದು:
ಹೊರಗೆಲ್ಲ ಸುತ್ತಾಡಿ ಬಂದ ಚಪ್ಪಲಿಗಳೊಂದಿಗೆ ನೀವು ಮನೆ ಪ್ರವೇಶಿಸಿದರೆಂದರೆ ನೀವಷ್ಟೇ ಅಲ್ಲ, ನಿಮ್ಮೊಂದಿಗೆ ಧೂಳು, ಮಣ್ಣು, ಕೊಳಕು ಜೊತೆಗೆ ಸೂಕ್ಶ್ಮಾಣುಜೀವಿಗಳು ಮನೆಗೆ ಪ್ರವೇಶಿಸುತ್ತವೆ ಎಂಬ ಅರಿವು ಅವರಿಗಿತ್ತು. ಆದ್ದರಿಂದ ಮನೆಯೊಳಗೆ ಕಾಲಿಡುವ ಮೊದಲು ಚಪ್ಪಲಿಯನ್ನು ಹೊರಗೇ ಬಿಟ್ಟು, ಕೈಕಾಲು ಚೆನ್ನಾಗಿ ತೊಳೆದು ಮನೆ ಪ್ರವೇಶಿಸುವುದು ಹಿರಿಯರ ಜೀವನಶೈಲಿಯ ಭಾಗವಾಗಿತ್ತು. ಇದು ಸಂಪ್ರದಾಯವಲ್ಲ ಆರೋಗ್ಯ ಮತ್ತು ಶುಚಿತ್ವದ ಬಗ್ಗೆ ಇದ್ದ ಜಾಗೃತಿಯೂ ಆಗಿತ್ತು. ಅದೇ ಈಗ ನೋಡಿ ಯಾರ ಮನೆಗೆ ಆದ್ರೂ ಪ್ರವೇಶಿಸಬೇಕಾದ್ರೆ ನೇರ ಒಳಗೆ ಹೋಗ್ತಾರೆ. ಬಂದವರಿಗೆ ಕೈಕಾಲು ತೊಳೆಯಲು ಮನೆಯ ಹೊರಗೆ ನೀರಿನ ವ್ಯವಸ್ಥೆಯೇ ಇರೋದಿಲ್ಲ. ಮನೆಯೊಳಗೆ ಬಾತ್ ರೂಂ ಇರುವುದುರಿಂದ ಮನೆಯೊಳಗೆ ಪ್ರವೇಶಿಸಿಯೇ ಕೈಕಾಲು ಸ್ವಚ್ಛಗೊಳಿಸಬೇಕು!
ಈಗ ಮನೆಯೊಳಗೆ ಚಪ್ಪಲಿ ಧರಿಸುವುದು ಒಂದು ಫ್ಯಾಷನ್, ಪ್ರತಿಷ್ಠೆ!
ನೀವು ಟಿವಿಗಳಲ್ಲಿ ಸೆಲೆಬ್ರಿಟಿಗಳ ಮನೆಯಲ್ಲಿನ ವಿಡಿಯೋ ನೋಡಿ ಗಮನಿಸಿರಬಹುದು. ಅಲ್ಲಿ ಮನೆಯೊಳಗೆ ಚಪ್ಪಲಿ ಧರಿಸಿ ಓಡಾಡುವುದು ಗಮನಿಸಿರುತ್ತೀರಿ. ಅರೇ ಇವರು ಯಾಕೆ ಮನೆಯೊಳಗೂ ಚಪ್ಪಲಿ ಹಾಕ್ತಾರೆ, ಮನೆಯಲ್ಲೇನು ಕಳ್ಳು ಮುಳ್ಳು ಇವೆಯೇ? ಅಂತಾ ಅನಿಸಿರುತ್ತಲ್ಲವೇ? ಪರಿಸ್ಥಿತಿ ಬದಲಾಗಿದೆ. ಮನೆಯೊಳಗೆ ಚಪ್ಪಲಿ ಧರಿಸಿ ಓಡಾಡುವುದು, ಅದೇ ಚಪ್ಪಲಿಯೊಂದಿಗೆ ಅಡುಗೆಮನೆಗೂ ಪ್ರವೇಶಿಸುವುದು ಕೆಲವರಿಗೆ ಆಧುನಿಕ ಜೀವನಶೈಲಿಯಂತೆ ಕಾಣುತ್ತಿದೆ. ಹೊರಗಿನ ರಸ್ತೆ, ಸಾರ್ವಜನಿಕ ಸ್ಥಳಗಳ ಧೂಳು-ಕೊಳಕು ಮನೆಯ ನೆಲದ ಮೇಲೆ ಹರಡಿ, ಮಕ್ಕಳು ಆಟವಾಡುವ ಜಾಗಕ್ಕೂ, ನಾವು ಊಟ ಮಾಡುವ ಅಡುಗೆಮನೆಗೂ ತಲುಪುತ್ತದೆ. ಫ್ಯಾಷನ್‌ಗಿಂತ ಸ್ವಚ್ಛತೆ ಮತ್ತು ಆರೋಗ್ಯ ಮುಖ್ಯ ಎಂಬುದನ್ನು ನೆನಪಿಟ್ಟರೆ ಮನೆಯ ಬಾಗಿಲಿನ ಹೊರಗೇ ಚಪ್ಪಲಿ ಬಿಡುವ ಸಣ್ಣ ಅಭ್ಯಾಸವೇ ಆರೋಗ್ಯಕರ ಜೀವನಶೈಲಿಗೆ ಉತ್ತಮ.
ಮನೆಯಲ್ಲಿ ಬರಿಗಾಲಿನಲ್ಲಿ ಓಡಾಡಿ:
ಕೆಲವು ಶ್ರೀಮಂತರು ನೆಲಕ್ಕೆ ಕಾಲು ತಾಗಿದ್ರೂ ಕಾಲು ಕೊಳೆಯಾಗುತ್ತೆ ಅಂತಾ ಭಾವಿಸ್ತಾರೆ! ಇಂಥವರು ಬರಿಗಾಲಲ್ಲಿ ಕನಸಿನಲ್ಲಿಯೂ ನಡೆಯುವುದಿಲ್ಲ. ಮನೆಯಲ್ಲಿ ಓಡಾಡೋಕೆ ಅಂತಾನೇ ಚಪ್ಪಲಿ ಸಾಕ್ಸ್‌ಗಳು ಇರುತ್ತವೆ. ಶ್ರೀಮಂತ ವ್ಯಕ್ತಿಗಳ ಈ ಅಭ್ಯಾಸದಿಂದಾಗಿ ಏನಾಗುತ್ತೆ ಎಂದರೆ ಮುಂದೊಂದು ದಿನ ಬರಿಗಾಲಲ್ಲಿ ರಸ್ತೆಯ ಮೇಲೆ ನಡೆದರೂ ಅಸಾಧ್ಯ ನೋವು, ಒಂದ ಸಣ್ಣ ಕಲ್ಲು ಒತ್ತಿದರೂ ನೋವು. ಪಾದ ಅಷ್ಟೊಂದು ನುಣುಪವಾಗಿರುತ್ತವೆ. ಕಾಲಿನ ಆರೋಗ್ಯ ದೃಷ್ಟಿಯಿಂದಲೂ ಬರಿಗಾಲಲ್ಲಿ ನಡೆಯುವುದು ಉತ್ತಮ. ಈ ವಿಷಯದ ಬಗ್ಗೆ ಅನೇಕ ಸಂಶೋಧನೆಗಳು ಹೇಳಿವೆ. ವೈದ್ಯರು ಕೂಡ ಸಲಹೆ ನೀಡುವುದು ಬರಿಗಾಲಲ್ಲೇ ನಡೆಯುದನ್ನೇ.
ಬರಿಗಾಲಿನಲ್ಲಿ ನಡೆಯುವುದರಿಂದ ಪಾದಗಳಲ್ಲಿನ ಸಣ್ಣ ಸ್ನಾಯುಗಳು ಆಕ್ಟಿವ್ ಆಗುತ್ತವೆ ಎಂದು ಸಂಶೋಧನೆ ಹೇಳುತ್ತೆ. ಇದು ಪಾದಗಳು ಗಟ್ಟಿಮುಟ್ಟಾಗಿರುತ್ತವೆ. ಕಾಲುಬೆರಳುಗಳ ಬಲವನ್ನು ಹೆಚ್ಚಿಸುತ್ತದೆ. ಪಾದಗಳು ಗಟ್ಟಿಮುಟ್ಟಾಗಿದ್ದಾಗ ನಡೆಯುವುದ ಬ್ಯಾಲೆನ್ಸ್ ಕಾಪಾಡಿಕೊಳ್ಳಲು ಸಾಧ್ಯವಾಗುತ್ತೆ.
ಕೆಲವರ ಪಾದಗಳು ಸೂಕ್ಹ್ಮ
ಹುಲ್ಲು, ಮಣ್ಣು, ಬೆಟ್ಟ ಗುಡ್ಡ ರಸ್ತೆಗಳ ಮೇಲೆ ಬರಿಗಾಲಿನಲ್ಲಿ ನಡೆದಾಗ ಈ ಪ್ರಯೋಜನವು ಹೆಚ್ಚಾಗಿರುತ್ತದೆ. ಆದರೆ ಇನ್ನೊಂದು ಸಮಸ್ಯೆ ಇದೆ ಅದೇನೆಂದರೆ ಭಾರತದ ಹೆಚ್ಚಿನ ಮನೆಗಳು ಅಮೃತಶಿಲೆ, ಟೈಲ್ಸ್ ಅಥವಾ ಸಿಮೆಂಟ್‌ನಿಂದ ಮಾಡಿದ ಗಟ್ಟಿಯಾದ ನೆಲವನ್ನು ಹೊಂದಿರುವುದರಿಂದ ಕೆಲವರು ದೀರ್ಘಕಾಲ ಬರಿಗಾಲಿನಲ್ಲಿ ನಡೆಯುವುದರಿಂದ ಪಾದಗಳ ಹಿಮ್ಮಡಿಗೆ ಒತ್ತಡ ಹೆಚ್ಚಾಗಿ ಬಿರುಕು ಬಿಡಲಾರಂಭಿಸುತ್ತೆ. ಆರೋಗ್ಯ ಮಾಹಿತಿ ಸಂಸ್ಥೆ ಕ್ಲೀವ್‌ಲ್ಯಾಂಡ್‌ಕ್ಲಿನಿಕ್ ಪ್ರಕಾರ, ಇದು ಈಗಾಗಲೇ ಪ್ಲಾಂಟರ್ ಫ್ಯಾಸಿಟಿಸ್, ಚಪ್ಪಟೆ ಪಾದಗಳು ಅಥವಾ ಹಿಮ್ಮಡಿ ನೋವು ಇರುವವರಿಗೆ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ ಇಂಥವರು ಚಪ್ಪಲಿ ಧರಿಸುವುದು ಉತ್ತಮ.
ತೂಕ ಹೆಚ್ಚಳ ಸಮಸ್ಯೆ ಇರುವವರು ಚಪ್ಪಲಿ ಧರಿಸವುದು ಒಳ್ಳೆಯದೇ?
ತಜ್ಞರ ಪ್ರಕಾರ, ಉತ್ತಮ ಗುಣಮಟ್ಟದ ಸಪೋರ್ಟಿವ್ ಚಪ್ಪಲಿಗಳನ್ನು ಧರಿಸುವುದರಿಂದ ದೇಹದ ತೂಕ ಪಾದಗಳಾದ್ಯಂತ ಸಮವಾಗಿ ವಿತರಿಸಲ್ಪಡುತ್ತದೆ. ಇದು ಪಾದಗಳಿಗೆ ಒತ್ತಡ, ಅಪಾಯ ಕಡಿಮೆ ಮಾಡುತ್ತದೆ, ಇದು ಕಣಕಾಲುಗಳು, ಮೊಣಕಾಲುಗಳು, ಸೊಂಟ ಮತ್ತು ಸೊಂಟಕ್ಕೆ ಪ್ರಯೋಜನವನ್ನು ನೀಡುತ್ತದೆ. ವಿಶೇಷವಾಗಿ ದೀರ್ಘಕಾಲ ನಿಂತು ಮನೆಯಲ್ಲಿ ಕೆಲಸ ಮಾಡುವವರಿಗೆ ಚಪ್ಪಲಿಗಳು ಬೆನ್ನು ಮತ್ತು ಕಾಲು ನೋವನ್ನು ಕಡಿಮೆ ಮಾಡಲು ಸಹಾಯಕವಾಗಬಹುದು.
ಮಧುಮೇಹಿಗಳು ಬರಿಗಾಲಲ್ಲಿ ನಡೆಯಬಾರದು
ಮಧುಮೇಹ ಇರುವವರಿಗೆ ಮನೆಯೊಳಗೆ ಬರಿಗಾಲಲ್ಲಿ ನಡೆಯುವುದು ಅಪಾಯಕಾರಿ. ಏಕೆಂದರೆ ಮದುಮೇಹಿಗಳ ಪಾದಗಳಲ್ಲಿನ ಸಂವೇದನೆ ಕಡಿಮೆಯಾಗುವುದರಿಂದ, ಸಣ್ಣಪುಟ್ಟ ಗಾಯಗಳು ಗಮನಕ್ಕೆ ಬಾರದೆ ಹೋಗಬಹುದು. ಈ ಸಣ್ಣ ಗಾಯವು ನಂತರ ಗಂಭೀರ ಸೋಂಕಾಗಿ ಬೆಳೆಯಬಹುದು. ಈ ಕಾರಣಕ್ಕಾಗಿ, ವೈದ್ಯರು ಮತ್ತು ಪಾದ ಆರೋಗ್ಯ ತಜ್ಞರು ಮಧುಮೇಹ ರೋಗಿಗಳು ಒಳಾಂಗಣದಲ್ಲಿಯೂ ಸಹ ಯಾವಾಗಲೂ ಸುರಕ್ಷಿತ ಮತ್ತು ಆರಾಮದಾಯಕ ಪಾದರಕ್ಷೆಗಳನ್ನು ಧರಿಸಲು ಸಲಹೆ ನೀಡುತ್ತಾರೆ.
ಎಲ್ಲ ಚಪ್ಪಲಿಗಳು ಕಾಲಿನ ಆರೋಗ್ಯ ಕಾಪಾಡುವುದಿಲ್ಲ
ಅಯ್ಯೋ ಕಾಲಿಗೆ ಯಾಕೆ ದುಬಾರಿ ಚಪ್ಪಲಿ, ಯಾವುದಾದ್ರೂ ರಬ್ಬರ್ ಚಪ್ಪಲಿ ಸಾಕು ಎಂಬುವವರ ತುಂಬಾ ಜನ ಸಿಕ್ತಾರೆ. ಆದರೆ ಚಪ್ಪಲಿಯಲ್ಲಿದೆ ಆರೋಗ್ಯದ ಗುಟ್ಟು. ಉತ್ತಮ ಮತ್ತು ಮೆತ್ತಗಿರುವ ಚಪ್ಪಲಿಗಳನ್ನ ಧರಿಸಬೇಕು.
ಆಗಾದ್ರೆ ಚಪ್ಪಲಿ ಧರಿಸಬೇಕೆ ಬೇಡವೇ?
ಸಂಶೋಧನೆಯ ಆಧಾರದ ಮೇಲೆ ಹೇಳುವುದಾದರೆ ಬರಿಗಾಲಿನ ಮತ್ತು ಚಪ್ಪಲಿ ಎರಡನ್ನೂ ಬ್ಯಾನೆನ್ಸ್ ಆಗಿ ಬಳಸುವುದು ಉತ್ತಮ. ನೆಲ ಸ್ವಚ್ಛವಾಗಿದ್ದರೆ ನೀವು ಬರಿಗಾಲಲ್ಲಿ ನಡೆಯಬಹುದು. ಅದು ಪಾದದ ಸ್ನಾಯುಗಳನ್ನು ಬಲಪಡಿಸುತ್ತದೆ. ಹೊರಗಡೆಯಾದ್ರೂ ಅಥವಾ ಮನೆಯಲ್ಲಾದ್ರೂ ಸರಿ ಕೆಲಸ ಮಾಡುವಾಗಗಟ್ಟಿಯಾದ ಮಹಡಿಗಳ ಮೇಲೆ ನಡೆಯುವಾಗ ಉತ್ತಮ ಗುಣಮಟ್ಟದ, ಕಾಲಿಗೆ ಸಪೋರ್ಟ್ ನೀಡುವ ಚಪ್ಪಲಿಗಳನ್ನು ಧರಿಸುವದರಿಂದ ಪಾದಗಳು ಮತ್ತು ಕೀಲುಗಳ ಸಮಸ್ಯೆಯಾಗದಂತೆ ತಡೆಯುತ್ತೆ

