ಶಿವ ಮತ್ತು ಪಾರ್ವತಿ ಪುತ್ರ ಕಾರ್ತಿಕೇಯ. ಗಣೇಶನ ಅಣ್ಣ. ದಕ್ಷಿಣ ಭಾರತದಲ್ಲಿ ಕಾರ್ತಿಕೇಯನನ್ನು ಕುಲದೇವತೆಯಾಗಿಯೂ ಪೂಜಿಸಲಾಗುತ್ತದೆ. ದಕ್ಷಿಣದಲ್ಲಿ ಈತನನ್ನು ಷಣ್ಮುಖ, ಮುರುಗ, ಸುಬ್ರಹ್ಮಣ್ಯ ಎನ್ನುತ್ತಾರೆ. ನಮ್ಮ ದೇಶದಲ್ಲಿ ಮಾತ್ರವಲ್ಲ ವಿದೇಶದಲ್ಲೂ ವಿಶೇಷವಾಗಿ ಕಾರ್ತಿಕನನ್ನು ಪೂಜಿಸಲಾಗುತ್ತದೆ. 

ಹೌದು. ಪ್ರಪಂಚದ ಅತ್ಯಂತ ಎತ್ತರವಾದ, 141 ಅಡಿಯ ಸುಬ್ರಹ್ಮಣ್ಯ ಮೂರ್ತಿ ಮಲೇಷ್ಯಾದಲ್ಲಿದೆ. ಮಲೇಶ್ಯಾದಲ್ಲಿರುವ ಬಟು ಗುಹೆಯ ಸುಬ್ರಹ್ಮಣ್ಯ ದೇವಾಲಯದಲ್ಲಿ ಆ  ಮೂರ್ತಿ ಇದೆ. 

  • ಇದು ಪ್ರಾಚೀನ ಗುಹಾ ಮಂದಿರವಾಗಿದ್ದು ಸುಮಾರು 400 ವರ್ಷಗಳ ಇತಿಹಾಸ ಹೊಂದಿದೆ. ಇತರೆ ಹಿಂದೂ ದೇವಿ -ದೇವತೆಯರ ಮೂರ್ತಿಗಳಿಗೂ ಇಲ್ಲಿ ಪೂಜಿಸಲಾಗುತ್ತದೆ. 
  • ಸುಬ್ರಹ್ಮಣ್ಯನ ಜನ್ಮ ದಿವಸದ ರೂಪದಲ್ಲಿ ಇಲ್ಲಿ ಥೈಪೂಸಮ್ ಹೆಸರಿನ ಉತ್ಸವ ನಡೆಯುತ್ತದೆ. ಹತ್ತು ತಿಂಗಳಿಗೆ ಒಂದು ಬಾರಿ ಈ ಹಬ್ಬ ನಡೆಯುತ್ತದೆ. 
  • ಇಲ್ಲಿನ ಗುಹೆಯ ಸೌಂದರ್ಯವೂ ಅದ್ಭುತವಾಗಿದೆ. ಸುಬ್ರಮಣ್ಯನಿಗೆ ನಮಸ್ಕರಿಸಿ 272 ಮೆಟ್ಟಿಲುಗಳನ್ನು ಹತ್ತಿ ಮೇಲೆ ಹೋದರೆ ಸುಂದರವಾದ ಗುಹೆ ಸಿಗುತ್ತದೆ. ಇದು ‘ಲೈಮ್ ಸ್ಟೋನ್’ನಿಂದ ರಚನೆಯಾದ ಗುಹೆಯಾಗಿದ್ದು, ಸುಮಾರು ನಾಲ್ಕುನೂರು ಮಿಲಿಯನ್ ವರ್ಷಗಳ ಹಿಂದೆ ರೂಪುಗೊಂಡಿತೆಂಬ ನಂಬಿಕೆ ಇದೆ.
  • ಮಲೇಷ್ಯಾದಲ್ಲಿ ಬ್ರಿಟಿಷರ ಅಧಿಕಾರವಧಿಯಲ್ಲಿ (1878) ಈ ಗುಹೆಯು ವಿಶೇಷ ಪ್ರಾಮುಖ್ಯತೆ ಗಳಿಸಿತ್ತು. 
  • 272 ಮೆಟ್ಟಿಲುಗಳನ್ನು ಏರಿದಾಗ ನೂರು ಅಡಿ ಎತ್ತರದ ವಿಶಾಲವಾದ ಜಾಗ ಗೋಚರಿಸುತ್ತದೆ. ಗುಹೆಯೊಳಗೆ ಕೆಲವು ದೇವರ ಮೂರ್ತಿಗಳಿವೆ. 
  • ಒಟ್ಟಿನಲ್ಲಿ ಹೇಳಬೇಕೆಂದರೆ ದೈವಿಕ ಪರಿಸರವನ್ನು ಹೊಂದಿದ ಅತ್ಯದ್ಭುತ ಪ್ರಕೃತಿ ಸೌಂದರ್ಯ ಹೊಂದಿರುವ ತಾಣವಿದು.