ಬಾತ್ ರೂಂ ಕ್ಲೀನ್ ಮಾಡಲು ಹಲವು ಕ್ಲೀನರ್ ಬಳಸುತ್ತಾರೆ. ಆದರೆ ಪರಿಣಾಮಕಾರಿಯಾಗಿ ಬಳಸುವುದು ಹೇಗೆ? ಜೊತೆಗೆ ಸುರಕ್ಷಿತವಾಗಿ ಬಳಕೆಗೂ ಇದೇ ಸೂಚನೆ. ಅಪ್ಪಿ ತಪ್ಪಿ ಈ ಮೂರು ವಿಚಾರ ಮರೆತು ಬಿಡಬೇಡಿ

ಬಾತ್‌ರೂಂ ಶುಚಿಯಾಗಿಡುವುದು ಅತ್ಯಂತ ಅವಶ್ಯಕ. ಆರೋಗ್ಯ ಉತ್ತಮವಾಗಿರಲು ಬಾತ್‌ರೂಂ ಶುಚಿಯಾಗಿರಬೇಕು. ಇದಕ್ಕಾಗಿ ಹಲವು ಬಾತ್‌ರೂಂ ಕ್ಲೀನರ್ ಲಭ್ಯವಿದೆ. ಹಾರ್ಪಿಕ್ ಸೇರಿದಂತೆ ಹಲವು ಜನಪ್ರಿಯ ಬ್ರ್ಯಾಂಡ್‌‌ಗಳು ಮಾರುಕಟ್ಟೆಯಲ್ಲಿದೆ. ಆದರೆ ಬಾತ್‌ರೂಂ ಕ್ಲೀನರ್ ಬಳಸುವಾಗ ಕೆಲ ವಿಚಾರದ ಕುರಿತು ಎಚ್ಚರವಿರಬೇಕು. ಇಷ್ಟೇ ಅಲ್ಲ ಸೂಕ್ತ ರೀತಿಯಲ್ಲಿ ಬಾತ್‌ರೂಂ ಕ್ಲೀನರ್ ಬಳಕೆ ಮಾಡಿದರೆ ಪರಿಣಾಮಕಾರಿಯಾಗಲಿದೆ. ಕಾರಣ ಇದರಿಂದ ಆಗುವ ಸೈಡ್ ಎಫೆಕ್ಟ್ ಬಗ್ಗೆ ಗಮನ ಹರಿಸಬೇಕು. ಹೀಗಾಗಿ ಬಾತ್‌ರೂಂ ಕ್ಲೀನರ್ ಬಳಸುವಾಗ ಎಚ್ಚರಿಕೆ ಅತ್ಯಗತ್ಯ.

ಬಾತ್ ರೂಂ ಕ್ಲೀನರ್ ಸೈಡ್ ಎಫೆಕ್ಟ್

ಕೆಲ ರಾಸಾಯನಿಕ ಮಿಶ್ರಣಗಳ ಬಾತ್‌ರೂಂ ಕ್ಲೀನರ್ ಬಳಸುವಾಗ ಎಚ್ಚರವಹಿಸಬೇಕು. ಬಾತ್‌ರೂಂ ಕ್ಲೀನರ್ ಲಿಕ್ವಿಡ್ ಕೈ ಅಥವಾ ಚರ್ಮದ ಮೇಲೆ ಬಿದ್ದರೆ ತುರಿಕೆ, ಚರ್ಮ ಸಮಸ್ಯೆಗಳು ಕಾಣಿಸಿಕೊಳ್ಳಲಿದೆ. ಹಲವು ಬಾರಿ ಕಜ್ಜಿಗಳು ಕಾಣಿಸಿಕೊಳ್ಳಲಿದೆ. ಇದೇ ಕೇವ ಅಲರ್ಜಿ ಮಾತ್ರವಲ್ಲ ಚರ್ಮದಲ್ಲಿ ಗಂಭೀರ ಸಮಸ್ಯೆಗಳಿಗೂ ಕಾರಣವಾಗಲಿದೆ.

ಬಾತ್‌ರೂಂ ಕ್ಲೀನರ್ ಮೂಕ ಶುಚಿಗೊಳಿಸುವಾಗ ಕಣ್ಣಿನ ಆರೋಗ್ಯವೂ ಮುಖ್ಯ. ಪವರ್ ರಾಸಾಯನಿಕಗಳನ್ನು ಬಳಸಿರುವ ಕಾರಣ ಕಣ್ಣಿನ ತುರಿಕೆ, ಕಣ್ಣು ನೋವು, ಕಾರ್ನಿಯಲ್ ಇರಿಟೇಶನ್ ಸೇರಿದಂತೆ ಕೆಲ ಸಮಸ್ಯೆಗಳು ಕಾಣಿಸಿಕೊಳ್ಳಲಿದೆ.

ಬಾತ್‌ರೂಂ ಕ್ಲೀನರ್ ಬಳಸುವಾಗ ಅದರ ವಾಸನೆ, ಘಾಟು ಉಸಿರಾಟದ ಮೂಲಕ ದೇಹ ಸೇರಲಿದೆ. ಇದರಿಂದ ಗಂಟಲು ಕೆರೆತ, ಕೆಮ್ಮು, ಹೊಟ್ಟೆ ನೋವು ಸೇರಿದಂತೆ ಇತರ ಸಮಸ್ಯೆಗಳಿಗೂ ಕಾಣವಾಗಲಿದೆ.

ಈ ರೀತಿ ಬಳಸಬೇಡಿ

ಬಾತ್‌ರೂಂ ಕ್ಲೀನರ್ ಪರಿಣಾಮಕಾರಿಯಾಗಿಲ್ಲ ಅಥವಾ ಎರೆಡೆರಡು ಬಾರಿ ಶುಚಿಗೊಳಿಸಲು ಸಾಧ್ಯವಿಲ್ಲ ಎಂದು ಬಾತ್‌ರೂಂ ಕ್ಲೀನರ್ ಜೊತೆ ಬ್ಲೀಚಿಂಗ್ ಪೌಡರ್, ಇತರ ರಾಸಾಯನಿಕಗಳನ್ನು ಮಿಕ್ಸ್ ಮಾಡಬಾರದು. ಇದು ರಿಯಾಕ್ಷನ್ ಮೂಲಕ ದೊಡ್ಡ ಸಮಸ್ಯೆಗೆ ಕಾರಣಾಗಲಿದೆ. ಈ ರೀತಿಯ ಮಿಕ್ಸ್‌ನಿಂದ ಕ್ಲೋರಿನ್ ಗ್ಯಾಸ್ ಉತ್ಪತ್ತಿಯಾಗಲಿದೆ ಇದು ಅಪಾಯಕಾರಿಯಾಗಿದೆ. ಕೆಲ ಫಾರ್ಮುಲಾಗಳು ಬಾತ್‌ರೂಂನ ಬಕೆಟ್ ಸೇರಿದಂತೆ ಇತರ ಪಾತ್ರೆಗಳ ಮೇಲೂ ಪರಿಣಾಮ ಬೀರಲಿದೆ.

ಸುರಕ್ಷಿತ ಹಾಗೂ ಪರಿಣಮಾಕಾರಿ ಬಳಕೆ ಹೇಗೆ

ಪ್ರತಿ ಬಾತ್ ರೂಂ ಕ್ಲೀನರ್ ಅಥವಾ ರಾಸಾಯನಿಕಗಳನ್ನು ಬಳಸಲು ಕೆಲ ನಿರ್ದಿಷ್ಠ ಸೂಚನೆಗಳನ್ನು ಪ್ರತಿ ಉತ್ಪನ್ನದ ಮೇಲೆ ನೀಡಿರುತ್ತಾರೆ. ಅದರಂತೆ ಬಳಸಬೇಕು. ಈ ಬಾತ್‌ರೂಂ ಕ್ಲೀನರ್ ಬಳಸುವಾಗ ಕೈಗಳಿಗೆ ರಬ್ಬರ್ ಗ್ಲೌವ್ಸ್ ಬಳಸಬೇಕು. ಬಾತ್ ರೂಂ ಕ್ಲೀನ್ ಮಾಡುವಾಗ ಬಾಗಿಲು, ಕಿಟಕಿ ತೆರೆದು ಶುಚಿಗೊಳಿಸೇಕು, ಸರಿಯಾಗಿ ಗಾಳಿಯಾಡುವಂತಿರಬೇಕು. ಬಾತ್ ರೂಂ ಕ್ಲೀನರ್ ಬಾಟಲಿಗಳನ್ನು ಸರಿಯಾಗಿ ಮುಚ್ಚಿಡಬೇಕು. ಮಕ್ಕಳಿಗೆ ಸಿಗುವ ಹಾಗೆ ಇಡಬಾರದು.