ಇತ್ತೀಚೆಗೆ ಸೆಲೆಬ್ರಿಟಿಗಳ ಪ್ರೆಗ್ನೆನ್ಸಿ ಫೋಟೋಶೂಟ್ ಟ್ರೆಂಡ್ ಹೆಚ್ಚಾಗಿದ್ದು, ಹೊಟ್ಟೆ ಪ್ರದರ್ಶಿಸುವ ಫೋಟೋಗಳು ಸಾಮಾನ್ಯವಾಗಿದೆ. ಇದೇ ವೇಳೆ ಗರ್ಭಿಣಿ ನಾಯಿಯೊಂದರ ಫೋಟೋಶೂಟ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ನೆಟ್ಟಿಗರು ಇದನ್ನು ಸೆಲೆಬ್ರಿಟಿಗಳ ಫೋಟೋಶೂಟ್‌ಗೆ ಹೋಲಿಸಿ ಕಮೆಂಟ್ ಮಾಡುತ್ತಿದ್ದಾರೆ.
ಈಗ ಪ್ರೆಗ್ನೆನ್ಸಿ ಫೋಟೋಶೂಟ್ ಎನ್ನೋದು ಸಿಕ್ಕಾಪಟ್ಟೆ ಕಾಮನ್ ಆಗಿಬಿಟ್ಟಿದೆ. ಮೊದಲು ಮದುವೆಯ ದಿನವಷ್ಟೇ ಸೀಮಿತ ಆಗ್ತಿದ್ದ ಫೋಟೋಶೂಟ್ಗಳು, ಕೆಲ ದಶಕದಿಂದ ಪ್ರೀ ವೆಡ್ಡಿಂಗ್, ಪೋಸ್ಟ್ ವೆಡ್ಡಿಂಗ್ವರೆಗೆ ಬಂದು ಪ್ರೀ ಹನಿಮೂನ್ ಫೋಟೋಶೂಟ್ ಕೂಡ ನಡೆಯುತ್ತಿವೆ. ಹನಿಮೂನ್ಗೆ ಹೋಗುವ ಮುನ್ನದ ಫೋಟೋಶೂಟ್ ಇದಾಗಿದೆ. ಆ ಪರಿಯಲ್ಲಿ ಫೋಟೋಗ್ರಫಿ ಈಗ ಮಿಂಚುತ್ತಿದೆ. ಅದರಲ್ಲಿ ಇತ್ತೀಚಿನ ವರ್ಷಗಳಲ್ಲಿ ಸೇರ್ಪಡೆಯಾಗಿರುವುದು ಪ್ರೆಗ್ನೆನ್ಸಿ ಫೋಟೋಶೂಟ್. ವಿದೇಶಗಳಲ್ಲಿನ ಈ ಐಡಿಯಾ ಭಾರತಕ್ಕೆ ಬಂದು ಕೆಲವು ವರ್ಷಗಳೇ ಗತಿಸಿವೆ. ಹೆಚ್ಚಾಗಿ ಸೆಲೆಬ್ರಿಟಿಗಳು ಫೋಟೋಶೂಟ್ ಮಾಡಿಸಿಕೊಳ್ಳುವುದು ಇದ್ದು, ಅವರನ್ನೇ ಅನುಸರಿಸುವ ಅಭಿಮಾನಿಗಳು ಫೋಟೋಶೂಟ್ ಮಾಡಿಸಿಕೊಳ್ಳುತ್ತಿದ್ದಾರೆ.
ಹೊಟ್ಟೆ ಬಿಟ್ಟುಕೊಂಡು ಫೋಟೋಶೂಟ್
ಸಾಮಾನ್ಯ ಜನರು ತಮ್ಮನ್ನು ಅನುಸರಿಸಿದ ಮೇಲೆ ಸೆಲೆಬ್ರಿಟಿಗಳಿಗೆ ಮರ್ಯಾದೆ ಇರಲ್ಲ, ಸ್ವಲ್ಪ ಡಿಫರೆಂಟ್ ಆಗಿರಲಿ ಎಂದು, ತಮ್ಮ ಎಲ್ಲಾ ಅಂಗಾಂಗಗಳನ್ನೂ ಪ್ರದರ್ಶಿಸುತ್ತಾ, ಇತ್ತೀಚಿನ ವರ್ಷಗಳಲ್ಲಿ ಪ್ರೆಗ್ನೆನ್ಸಿ ಫೋಟೋಶೂಟ್ ಮಾಡಿಸಿಕೊಳ್ಳುತ್ತಿದ್ದಾರೆ. ಹಿಂದೆಲ್ಲಾ ಗರ್ಭಿಣಿಯಾದಾಗ ಹೊಟ್ಟೆಯನ್ನು ತೋರಿಸುವುದೇ ಅಪರಾಧವಾಗಿತ್ತು. ಬೇರೆಯವರ ಕೆಟ್ಟದೃಷ್ಟಿ ಬೀಳುತ್ತದೆ ಎನ್ನುವ ನಂಬಿಕೆಯಿಂದ ಹೊಟ್ಟೆಯನ್ನು ಮುಚ್ಚಿಕೊಂಡೇ ತಿರುಗುತ್ತಿದ್ದರು. ಎಷ್ಟೋ ಮನೆಗಳಲ್ಲಿ, ಗರ್ಭಿಣಿಯರನ್ನು ಇಂದಿಗೂ ಹೊರಕ್ಕೆ ಕಳುಹಿಸುವುದಿಲ್ಲ. ಆದರೆ, ಕೆಲವು ನಟಿಯರು ಮಾಡಿಕೊಳ್ಳುತ್ತಿರುವ ಪ್ರೆಗ್ನೆನ್ಸಿ ಫೋಟೋಶೂಟ್ ನೋಡಿದರೆ ಮಾತ್ರ ಹಲವರು ಕಣ್ಣುಮುಚ್ಚಿಕೊಳ್ಳುವ ಸ್ಥಿತಿ ಇದೆ.
ಹೊಟ್ಟೆಯ ಮೇಲೆ ವಿವಿಧ ಆಕೃತಿಯನ್ನು ಬಿಡಿಸಿಕೊಂಡು, ಎಲ್ಲಾ ಅಂಗಾಂಗಗಳನ್ನು ಧಾರಾಳವಾಗಿ ತೋರಿಸುತ್ತಾ, ಸೆಲೆಬ್ರಿಟಿಗಳು ಫೋಟೋಶೂಟ್ ಮಾಡಿಸಿಕೊಂಡರೆ, ಇತ್ತ ತಾನೇನು ಕಡಿಮೆ ಎಂದು ನಾಯಿಯೊಂದು ತನ್ನ ಅಂಗಾಂಗಗಳನ್ನು ತೋರಿಸುತ್ತಾ (ಅದು ಇರುವುದೇ ಹಾಗೆ ಬಿಡಿ) ಪ್ರೆಗ್ನೆನ್ಸಿ ಫೋಟೋಶೂಟ್ ಮಾಡಿಸಿಕೊಂಡಿದ್ದು, ಅದರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗುತ್ತಿವೆ.
ವ್ಯತ್ಯಾಸ ಇಲ್ಲ ಬಿಡಿ
ಬಿಳಿ ಮತ್ತು ಕಂದು ಬಣ್ಣ ಇರುವ ನಾಯಿ ಗರ್ಭಿಣಿಯಾದಾಗ ಅದಕ್ಕೆ ಸಿಂಗಾರಮಾಡಲಾಗಿದೆ. ಕೊನೆಗೆ ಅದರ ಫೋಟೋಶೂಟ್ ಮಾಡಿಸಲಾಗಿದೆ. ವಿವಿಧ ಭಂಗಿಯಲ್ಲಿ ನಾಯಿ ಪೋಸ್ ಕೊಟ್ಟಿದೆ. ಇದಕ್ಕೆ ಥಹರೇವಾರಿ ಕಮೆಂಟ್ಸ್ ಬರುತ್ತಿವೆ. ಅವರೂ ದೇಹಬಿಟ್ಟುಕೊಂಡಿರ್ತಾರೆ, ಇದು ಕೂಡ ಅವರಂತೆ ದೇಹ ಬಿಟ್ಟುಕೊಂಡಿದೆ. ವ್ಯತ್ಯಾಸ ಏನೂ ಇಲ್ಲ ಬಿಡಿ ಎಂದು ಹಲವರು ಕಮೆಂಟ್ನಲ್ಲಿ ಹೇಳುತ್ತಿದ್ದಾರೆ.

