ಅಬ್ಬಬ್ಬಾ..ಬಿಲಿಯನೇರ್ ಮುಕೇಶ್ ಅಂಬಾನಿ ತಮ್ಮ ಮಕ್ಕಳ ಮದ್ವೆಗೆ ಖರ್ಚು ಮಾಡಿರೋದು ಇಷ್ಟೊಂದು ಕೋಟಿನಾ?

ಬಿಲಿಯನೇರ್ ಮುಕೇಶ್ ಅಂಬಾನಿ ತಮ್ಮ ಮನೆಯಲ್ಲಿ ನಡೆಯುವ ಪಾರ್ಟಿ, ಸಮಾರಂಭಗಳಿಗಾಗಿ ಕೋಟಿ ಕೋಟಿ ವ್ಯಯಿಸುತ್ತಾರೆ. ಹಾಗೆಯೇ ಅಂಬಾನಿಗಳು ತಮ್ಮ ಮೂವರು ಮಕ್ಕಳಾದ ಆಕಾಶ್, ಇಶಾ ಮತ್ತು ಅನಂತ್ ಅಂಬಾನಿ ಅವರ ವಿವಾಹಕ್ಕೆ ಎಷ್ಟು ಹಣವನ್ನು ಖರ್ಚು ಮಾಡಿದ್ದಾರೆ ನಿಮ್ಗೆ ಗೊತ್ತಿದ್ಯಾ? ಇಲ್ಲಿದೆ ಮಾಹಿತಿ.

How many crores Mukesh spent on Akash Ambani, Isha Ambani, and Anant Ambanis lavish weddings Vin

ಭಾರತೀಯ ಬಿಲಿಯನೇರ್, ಮುಖೇಶ್ ಅಂಬಾನಿ ವಿಶ್ವದ 11ನೇ ಶ್ರೀಮಂತ ವ್ಯಕ್ತಿ. 113 ಶತಕೋಟಿ ಡಾಲರ್ ಗಿಂತ ಹೆಚ್ಚು ನಿವ್ವಳ ಮೌಲ್ಯವನ್ನು ಮುಖೇಶ್ ಅಂಬಾನಿ ಹೊಂದಿದ್ದಾರೆ. ಕೋಟಿ ಆಸ್ತಿಯ ಒಡೆಯ ಅಲ್ಟ್ರಾ ಲಕ್ಸುರಿಯಸ್ ಲೈಫ್‌ಸ್ಟೈಲ್‌ ಫಾಲೋ ಮಾಡುತ್ತಾರೆ. ಭೂಕಂಪವನ್ನು ತಡೆದುಕೊಳ್ಳುವಂತೆ ವಿನ್ಯಾಸಗೊಳಿಸಿರುವ 15,000 ಕೋಟಿ ಮೌಲ್ಯದ ಬಹುಮಹಡಿ ಬಂಗಲೆ ಆಂಟಿಲಿಯಾದಲ್ಲಿ ಅಂಬಾನಿ ಕುಟುಂಬ ವಾಸಿಸುತ್ತಿದೆ. ಬುಲೆಟ್‌, ಬಾಂಬ್ ಪ್ರೂಫ್‌ನ ಕಾರುಗಳಲ್ಲಿ ಅಂಬಾನಿ ಕುಟುಂಬ ಸದಸ್ಯರು ಸಂಚರಿಸುತ್ತಾರೆ.

ತಮ್ಮ ಮನೆಯಲ್ಲಿ ನಡೆಯುವ ಪಾರ್ಟಿ, ಸಮಾರಂಭಗಳಿಗಾಗಿ ಅಂಬಾನಿ ದಂಪತಿಗಳು ಕೋಟಿ ಕೋಟಿ ವ್ಯಯಿಸುತ್ತಾರೆ. ಹಾಗೆಯೇ ಅಂಬಾನಿಗಳು ತಮ್ಮ ಮೂವರು ಮಕ್ಕಳಾದ ಆಕಾಶ್, ಇಶಾ ಮತ್ತು ಅನಂತ್ ಅಂಬಾನಿ ಅವರ ವಿವಾಹಕ್ಕೆ ಎಷ್ಟು ಹಣವನ್ನು ಖರ್ಚು ಮಾಡಿದ್ದಾರೆ. ಎಲ್ಲರೂ ತಿಳಿದುಕೊಳ್ಳಲು ಬಯಸುವ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.

ಇದು ಆ್ಯಂಟಿಲಿಯಾವಲ್ಲ, ಮುಖೇಶ್ ಅಂಬಾನಿಯ ಈ ಬಂಗಲೆಯಲ್ಲಿ ಇವೆ 49 ಬೆಡ್‌ರೂಮ್ಸ್, ಆಸ್ಪತ್ರೆ...

ಇಶಾ ಅಂಬಾನಿ ಮತ್ತು ಆನಂದ್ ಪಿರಾಮಲ್ (2018)
ಇಶಾ ಅಂಬಾನಿ ಮತ್ತು ಆನಂದ್ ಪಿರಮಾಲ್ ಅವರ ಅದ್ದೂರಿ ವಿವಾಹಕ್ಕೆ ಮುಕೇಶ್‌ ಮತ್ತು ನೀತಾ ಅಂಬಾನಿ ಸುಮಾರು 830 ಕೋಟಿ ರೂ. ಖರ್ಚು ಮಾಡಿದ್ದಾರೆ. ಮದುವೆಯ ಆಮಂತ್ರಣ ಪತ್ರಿಕೆಯೊಂದಕ್ಕೆ ಸುಮಾರು 3 ಲಕ್ಷ ರೂ. ಖರ್ಚು ಮಾಡಲಾಯಿತು. ಗ್ರ್ಯಾಮಿ ಪ್ರಶಸ್ತಿ-ವಿಜೇತ ಗಾಯಕ/ಗೀತರಚನೆಕಾರ ಬೆಯಾನ್ಸ್ ಮದುವೆಯಲ್ಲಿ ಕಾರ್ಯಕ್ರಮ ನೀಡಲು ಅಂಬಾನಿಗಳು ಅಂದಾಜು ರೂ 33 - 50 ಕೋಟಿಪಾವತಿಸಿದರು. ಮದುವೆಯ ಆಚರಣೆಗಳು ಮೂರು ವಿಭಿನ್ನ ಸ್ಥಳಗಳಲ್ಲಿ ನಡೆದವು. ನಿಶ್ಚಿತಾರ್ಥ ಸಮಾರಂಭವು ಇಟಲಿಯಲ್ಲಿ (ಲೇಕ್ ಕೊಮೊ), ಮದುವೆಯ ಪೂರ್ವ ಸಮಾರಂಭಗಳು ಉದಯಪುರದಲ್ಲಿ ಮತ್ತು ಭವ್ಯವಾದ ವಿವಾಹವು ಮುಂಬೈನಲ್ಲಿ ಆಂಟಿಲಿಯಾದಲ್ಲಿ ನಡೆಯಿತು. ಮದುವೆಯಲ್ಲಿ ಪ್ರಿಯಾಂಕಾ ಚೋಪ್ರಾ, ಹಿಲರಿ ಕ್ಲಿಂಟನ್, ಗ್ರೀಕ್-ಅಮೆರಿಕನ್ ಲೇಖಕಿ ಅರಿಯಾನಾ ಹಫಿಂಗ್ಟನ್ ಮತ್ತು ಅನೇಕ ಪ್ರಸಿದ್ಧ ಬಾಲಿವುಡ್ ತಾರೆಯರು ಭಾಗವಹಿಸಿದ್ದರು.

ಆಕಾಶ್ ಅಂಬಾನಿ ಮತ್ತು ಶ್ಲೋಕಾ ಮೆಹ್ತಾ (2019)
ಆಕಾಶ್ ಅಂಬಾನಿ ಮತ್ತು ಶ್ಲೋಕಾ ಮೆಹ್ತಾ ಅವರ ವಿವಾಹವು ದೇಶದಲ್ಲಿ ನಡೆದ ಅತೀ ಅದ್ಧೂರಿ ವಿವಾಹವೆಂದು ಪರಿಗಣಿಸಲ್ಪಟ್ಟಿದೆ. ವಿವಾಹದ ಆಚರಣೆಗಳು ಸೇಂಟ್ ಮೊರಿಟ್ಜ್‌ನಲ್ಲಿ ವಿವಾಹ ಪೂರ್ವ ಕಾರ್ಯಕ್ರಮದೊಂದಿಗೆ ಪ್ರಾರಂಭವಾಯಿತು ಅಲ್ಲಿ ಚೈನ್ಸ್ಮೋಕರ್ಸ್ ಮತ್ತು ಕೋಲ್ಡ್ಪ್ಲೇನ ಕ್ರಿಸ್ ಮಾರ್ಟಿನ್ ಪ್ರದರ್ಶನ ನೀಡಿದರು. ಇದರ ನಂತರ ಮುಂಬೈನಲ್ಲಿ ಮೂರು ದಿನಗಳ ಅದ್ಧೂರಿ ವಿವಾಹವು ನಡೆಯಿತು, ಇದರಲ್ಲಿ ಮಾಜಿ ಬ್ರಿಟಿಷ್ ಪ್ರಧಾನಿ ಟೋನಿ ಬ್ಲೇರ್, ಗೂಗಲ್ ಸಿಇಒ ಸುಂದರ್ ಪಿಚೈ, ಬಿಲಿಯನೇರ್ ಲಕ್ಷ್ಮಿ ಮಿತ್ತಲ್ ಮತ್ತು ಇತರರು ಸೇರಿದಂತೆ ಹಲವಾರು ಪ್ರಮುಖ ವ್ಯಕ್ತಿಗಳು ಭಾಗವಹಿಸಿದ್ದರು. ವಿವಿಧ ಆನ್‌ಲೈನ್ ವರದಿಗಳ ಪ್ರಕಾರ, ಕೇವಲ ಒಂದು ಮದುವೆ ಕಾರ್ಡ್‌ಗೆ 1.5 ಲಕ್ಷ ರೂ. ವ್ಯಯಿಸಲಾಗಿತ್ತ. ಆಕಾಶ್ ಅಂಬಾನಿ ಮತ್ತು ಶ್ಲೋಕಾ ಮೆಹ್ತಾ ವಿವಾಹದಲ್ಲಿ ಜನಪ್ರಿಯ ಸಂಗೀತ ಬ್ಯಾಂಡ್ ಮರೂನ್ ಸಹ ಪ್ರದರ್ಶನ ನೀಡಿದರು.

ಅಬ್ಬಬ್ಬಾ..ಅಂಬಾನಿ ಫ್ಯಾಮಿಲಿ ಪ್ರಯಾಣಿಸೋ ಅಲ್ಟ್ರಾ ಲಕ್ಸುರಿಯಸ್‌ ಬಾಂಬ್ ಪ್ರೂಫ್‌ ಕಾರಿನ ಬೆಲೆ ಇಷ್ಟೊಂದಾ?

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ (2024)
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆ ಇನ್ನೂ ನಡೆದಿಲ್ಲ. ಆದರೆ ಮೊನ್ನೆ ಮಾರ್ಚ್ 1ರಿಂದ 3ರ ವರೆಗೆ ಗುಜರಾತ್‌ನ ಜಾಮ್‌ನಗರದಲ್ಲಿ ನಡೆದ ಮೂರು ದಿನಗಳ ಪ್ರಿ ವೆಡ್ಡಿಂಗ್ ಇವೆಂಟ್‌ ನೋಡಿಯೇ ಎಲ್ಲರೂ ಬೆರಗಾಗಿದ್ದಾರೆ. ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್, ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಮತ್ತು ಇವಾಂಕಾ ಟ್ರಂಪ್ ಸೇರಿದಂತೆ ವಿಶ್ವದಾದ್ಯಂತದ ಹಲವಾರು ಪ್ರಮುಖ ವ್ಯಕ್ತಿಗಳು ಈ ಸಮಾರಂಭದಲ್ಲಿ ಭಾಗವಹಿಸಿದ್ದರು. ಚಾರ್ಟರ್ಡ್ ಫ್ಲೈಟ್‌ಗಳು, ಐಷಾರಾಮಿ ರೂಮ್, ವಿಶ್ವ ದರ್ಜೆಯ ಬಾಣಸಿಗರು, ಪಿಕ್-ಅಪ್ ಮತ್ತು ಡ್ರಾಪ್-ಆಫ್‌ಗಾಗಿ ದುಬಾರಿ ವಾಹನಗಳನ್ನು ಒದಗಿಸುವ ಮೂಲಕ ಅಂಬಾನಿಗಳು ಐಷಾರಾಮಿ ವಿಷಯದಲ್ಲಿ ತಮ್ಮ ಯಾವಾಗಲೂ ಮುಂದು ಎಂಬುದನ್ನು ಸಾಬೀತುಪಡಿಸಿದರು. 

ಏಷ್ಯಾದ ಅತ್ಯಂತ ಶ್ರೀಮಂತ ಕುಟುಂಬವಾಗಿರುವ ಅಂಬಾನಿಗಳು, ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ವಿವಾಹ ಪೂರ್ವ ಸಮಾರಂಭಕ್ಕಾಗಿ ಬರೋಬ್ಬರಿ 1260 ಕೋಟಿ ರೂ. ಖರ್ಚು ಮಾಡಿದ್ದಾರೆ. ವಿವಿಧ ಆನ್‌ಲೈನ್ ವರದಿಗಳ ಪ್ರಕಾರ, ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಜುಲೈ 2024ರಲ್ಲಿ ಮದುವೆಯಾಗುವ ನಿರೀಕ್ಷೆಯಿದೆ.

Latest Videos
Follow Us:
Download App:
  • android
  • ios