ಅಬ್ಬಬ್ಬಾ..ಅಂಬಾನಿ ಫ್ಯಾಮಿಲಿ ಪ್ರಯಾಣಿಸೋ ಅಲ್ಟ್ರಾ ಲಕ್ಸುರಿಯಸ್ ಬಾಂಬ್ ಪ್ರೂಫ್ ಕಾರಿನ ಬೆಲೆ ಇಷ್ಟೊಂದಾ?
ಮುಕೇಶ್ ಅಂಬಾನಿ 966142 ಕೋಟಿ ರೂಪಾಯಿಗಳ ಬೃಹತ್ ನಿವ್ವಳ ಮೌಲ್ಯದೊಂದಿಗೆ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಹೀಗಾಗಿಯೇ ಇವರ ಲೈಫ್‌ಸ್ಟೈಲ್ ಅತ್ಯಂತ ಲಕ್ಸುರಿಯಸ್ ಆಗಿದೆ. ಆದ್ರೆ ಅಂಬಾನಿ ಫ್ಯಾಮಿಲಿ ಪ್ರಯಾಣಿಸೋ ಕಾರಿನ ಬೆಲೆ ಎಷ್ಟೂಂತ ನಿಮ್ಗೆ ಗೊತ್ತಿದ್ಯಾ?
ಮುಕೇಶ್ ಅಂಬಾನಿ 966142 ಕೋಟಿ ರೂಪಾಯಿಗಳ ಬೃಹತ್ ನಿವ್ವಳ ಮೌಲ್ಯದೊಂದಿಗೆ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಬಹುಕೋಟಿ ಮೌಲ್ಯದ ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷರಾಗಿದ್ದಾರೆ. ಇದು 1979000 ಕೋಟಿ ಮಾರುಕಟ್ಟೆ ಬಂಡವಾಳದೊಂದಿಗೆ ಭಾರತದ ಅತ್ಯಂತ ಪ್ರತಿಷ್ಠಿತ ಕಂಪೆನಿಯಾಗಿದೆ.
ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ, ಮಕ್ಕಳಾದ ಆಕಾಶ್ ಅಂಬಾನಿ, ಅನಂತ್ ಅಂಬಾನಿ, ಮತ್ತು ಶ್ಲೋಕಾ ಮೆಹ್ತಾ ಸೇರಿದಂತೆ ಅವರ ಕುಟುಂಬದವರು 15000 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಭಾರತದ ಅತ್ಯಂತ ದುಬಾರಿ ಮನೆ ಆಂಟಿಲಿಯಾದಲ್ಲಿ ವಾಸಿಸುತ್ತಿದ್ದಾರೆ.
ಮುಕೇಶ್ ಅಂಬಾನಿ ಜಗತ್ತಿನಾದ್ಯಂತ ಇರುವ ಬಿಲಿಯನೇರ್‌ಗಳಲ್ಲಿ ಒಬ್ಬರು. ಕೋಟಿ ಕೋಟಿ ಮೌಲ್ಯದ ಕಾರು, ವಸ್ತುಗಳನ್ನು ಹೊಂದಿದ್ದಾರೆ. ಹೀಗಾಗಿ ಇವರ ಮನೆಗೂ, ಇವರು ಸಂಚರಿಸುವಾಗಲೂ ಹೈ ಸೆಕ್ಯುರಿಟಿ ಇರುತ್ತದೆ.
ಭದ್ರತೆಗಾಗಿ ಮುಕೇಶ್ ಅಂಬಾನಿ ಭಾರೀ ಮೊತ್ತವನ್ನು ಖರ್ಚು ಮಾಡುತ್ತಾರೆ. ಅಂಬಾನಿ ಕುಟುಂಬದ ಸದಸ್ಯರು ಆಂಟಿಲಿಯಾದಿಂದ ಹೊರಬಂದಾಗ, ಬೃಹತ್ SUV ಗಳು ಮತ್ತು ಭದ್ರತಾ ಕಾರುಗಳ ಬೃಹತ್ ಬೆಂಗಾವಲು ಅಂಬಾನಿ ಕುಟುಂಬವನ್ನು ಹಿಂಬಾಲಿಸುತ್ತದೆ. ಮುಕೇಶ್ ಅಂಬಾನಿ ತಮ್ಮ ಬೆಂಗಾವಲು ಪಡೆಯನ್ನು ಕಾಲಕಾಲಕ್ಕೆ ಅಪ್‌ಡೇಟ್ ಮಾಡುತ್ತಲೇ ಇರುತ್ತಾರೆ.
ಮುಕೇಶ್ ಅಂಬಾನಿಯವರ ಐಷಾರಾಮಿ ಬೆಂಗಾವಲು ಪಡೆ ರೋಲ್ಸ್ ರಾಯ್ಸ್ ಕಲ್ಲಿನಾನ್, ಲ್ಯಾಂಡ್ ರೋವರ್ ರೇಂಜ್ ರೋವರ್ ಆಟೋಬಯೋಗ್ರಫಿ, ಮರ್ಸಿಡಿಸ್-ಎಎಂಜಿ ಜಿ63, ಟೊಯೋಟಾ ಫಾರ್ಚುನರ್, ಎಂಜಿ ಗ್ಲೋಸ್ಟರ್ ಮೊದಲಾದವುಗಳನ್ನು ಒಳಗೊಂಡಿದೆ. ಬೆಂಗಾವಲು ಪಡೆಗೆ ಬರೋಬ್ಬರಿ 30 ಕೋಟಿ ರೂ. ಖರ್ಚು ಮಾಡಲಾಗಿದೆ.
ಇತ್ತೀಚೆಗಷ್ಟೇ ಮುಕೇಶ್ ಅಂಬಾನಿ ತಮ್ಮ ಬೆಂಗಾವಲು ಪಡೆಗೆ ಹೊಸ ಮರ್ಸಿಡಿಸ್ ಬೆಂಝ್ S680 ಗಾರ್ಡ್ ಐಷಾರಾಮಿ ಸೆಡಾನ್‌ನ್ನು ಕಲಹರಿ ಸೇರಿಸಿದ್ದಾರೆ. ಇದು ಸಾಮಾನ್ಯ ಸೆಡಾನ್‌ಗಿಂತ ಸುಮಾರು 2 ಟನ್‌ಗಳಷ್ಟು ಭಾರವಾಗಿದೆ. ಸೂಪರ್ ದುಬಾರಿ ಕಾರು ಗಂಟೆಗೆ 80 ಕಿಮೀ ವೇಗದಲ್ಲಿ ಚಲಿಸುತ್ತದೆ.
ಕಾರು 6.0-ಲೀಟರ್ V12 ಎಂಜಿನ್‌ನಿಂದ ಚಾಲಿತವಾಗಿದ್ದು ಅದು 612 Ps ಮತ್ತು 830 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಕಾರಿನ ಬಾಡಿ ವಿಶೇಷ ಸಂಯೋಜಿತ ಶೆಲ್ ಅನ್ನು ಹೊಂದಿದೆ ಮತ್ತು ಕಾರ್ ಬುಲೆಟ್ ಮತ್ತು ಬ್ಲಾಸ್ಟ್-ಪ್ರೂಫ್, ಬಹು-ಪದರದ ಗಾಜಿನನ್ನು ಹೊಂದಿದೆ.
ಇದು ಹಿಂದಿನ ವರ್ಷದಲ್ಲಿ ಮುಕೇಶ್ ಅಂಬಾನಿ ಖರೀದಿಸಿದ ಎರಡನೇ Mercedes-Benz S680 ಗಾರ್ಡ್ ಐಷಾರಾಮಿ ಸೆಡಾನ್ ಆಗಿದೆ. ಇದರ ಬೆಲೆ ಭರ್ತಿ 10 ಕೋಟಿ ರೂ.. ಸೆಡಾನ್ ಅನ್ನು ಮಹೀಂದ್ರಾ ಸ್ಕಾರ್ಪಿಯೊ, ರೇಂಜ್ ರೋವರ್, ಮರ್ಸಿಡಿಸ್-ಬೆನ್ಜ್ ಜಿ-ವ್ಯಾಗನ್ ಜೊತೆಗೆ ದೊಡ್ಡ ಬೆಂಗಾವಲು ಪಡೆಯೊಂದಿಗೆ ನೋಡಬಹುದಾಗಿದೆ.