ದಾಸವಾಳದಲ್ಲಿದೆ ಸೌಂದರ್ಯ; ಹೆಚ್ಚಿಸುತ್ತೆ ಬೆಡಗಿಯ ಅಂದ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 7, Nov 2018, 11:31 AM IST
Hibiscus beauty and skin care benefits
Highlights

ವಿಭಿನ್ನ ಬಣ್ಣಗಳಲ್ಲಿ ಬಿಡೋ ದಾಸವಾಳ ದೇವರ ಪೂಜೆ ಸೊಬಗನ್ನು ಹೆಚ್ಚಿಸುತ್ತದೆ. ಆದರೆ, ಇದರ ಸೊಪ್ಪು ಹೆಣ್ಣಿನ ಕೇಶ ಸೌಂದರ್ಯ ಹೆಚ್ಚಿಸುವಲ್ಲಿ ಮುಖ್ಯ ಪಾತ್ರವಹಿಸುತ್ತದೆ ಗೊತ್ತಾ? ದಾಸವಾಳ ದೇವರ ಮುಡಿಗೇರುವುದು ಸಹಜ. ಆದರೆ, ಇದರ ಹೂ ಮತ್ತು ಎಲೆ ಹೆಣ್ಣಿನ ಸೌಂದರ್ಯವನ್ನು ಹೆಚ್ಚಿಸುವಲ್ಲಿಯೂ ಮುಖ್ಯ ಪಾತ್ರ ವಹಿಸುತ್ತದೆ. ಹೇಗೆ?

ದೇವರ ಪಾದ ಸೇರುವ ದಾಸವಾಳ ಬೆಡಗಿಯ ಅಂದವನ್ನು ಹೆಚ್ಚಿಸುತ್ತೆ. ವಿಭಿನ್ನ ಬಣ್ಣಗಳಲ್ಲಿ ಬಿಡೋ ದಾಸವಾಳ ದೇವರ ಪೂಜೆ ಸೊಬಗನ್ನು ಹೆಚ್ಚಿಸುತ್ತದೆ. ಆದರೆ, ಇದರ ಸೊಪ್ಪು ಹೆಣ್ಣಿನ ಕೇಶ ಸೌಂದರ್ಯ ಹೆಚ್ಚಿಸುವಲ್ಲಿ ಮುಖ್ಯ ಪಾತ್ರವಹಿಸುತ್ತದೆ ಗೊತ್ತಾ?

ದಾಸವಾಳ ದೇವರ ಮುಡಿಗೇರುವುದು ಸಹಜ. ಆದರೆ, ಇದರ ಹೂ ಮತ್ತು ಎಲೆ ಹೆಣ್ಣಿನ ಸೌಂದರ್ಯವನ್ನು ಹೆಚ್ಚಿಸುವಲ್ಲಿಯೂ ಮುಖ್ಯ ಪಾತ್ರ ವಹಿಸುತ್ತದೆ. ಹೇಗೆ?

ಆ್ಯಂಟಿ ಆಕ್ಸಿಡೆಂಟ್ : ದಾಸವಾಳದಲ್ಲಿರುವ ಆಂಟಿ ಆಕ್ಸಿಡೆಂಟ್ ಸ್ಕಿನ್ ಡ್ಯಾಮೇಜ್ ಆಗುವುದನ್ನು ತಡೆಯುತ್ತದೆ. ಅಲ್ಲದೆ ಚರ್ಮ ಸುಕ್ಕುಗಟ್ಟುವುದನ್ನು ತಪ್ಪಿಸುತ್ತದೆ. 

ಯಂಗ್ ಲುಕ್: ದಾಸವಾಳ ಹೂವನ್ನು ಪೇಸ್ಟ್ ಮಾಡಿ ಮುಖಕ್ಕೆ ಹಾಕಿ ಹತ್ತು ನಿಮಿಷ ಬಿಟ್ಟು ತೊಳೆಯಬೇಕು. ಹೀಗೆ ನಿಯಮಿತವಾಗಿ ಮಾಡುವುದರಿಂದ ಮುಖ ಯಂಗ್ ಆ್ಯಂಡ್ ಎನರ್ಜೆಟಿಕ್ ಆಗಿ ಕಾಣುತ್ತದೆ. 

ನ್ಯಾಚುರಲ್ ಶ್ಯಾಂಪೂ : ಬಿಸಿ ನೀರಿಗೆ ದಾಸವಾಳದ ಎಸಳು ಮತ್ತು ಎಲೆಗಳನ್ನು ಹಾಕಿ ಚೆನ್ನಾಗಿ ಹಿಸುಕಿ. ಇದನ್ನು 15 ನಿಮಿಷ ಹಾಗೆ ಬಿಡಿ. ನಂತರ ಅದನ್ನು ಸೋಸಿ ಅದಕ್ಕೆ ಸ್ವಲ್ಪ ಆಲಿವ್ ಆಯಿಲ್ ಹಾಕಿ ತಲೆಗೆ ಹಚ್ಚಿ. ಹತ್ತು ನಿಮಷದ ನಂತರ ತೊಳೆಯಿರಿ. ಇದರಿಂದ ಕೂದಲು ಸಿಲ್ಕಿ ಆಗುತ್ತದೆ. 

ಸ್ಕಿನ್ ಟೋನ್ :  ದಾಸವಾಳವನ್ನು ಮುಖಕ್ಕೆ ಹಚ್ಚುವುದರಿಂದ ಸುಂದರ ಹಾಗು ಫೇರ್ ಸ್ಕಿನ್ ನಿಮ್ಮದಾಗುತ್ತದೆ. 

ಮಾಯಿಶ್ಚರೈಸಿಂಗ್ : ದಾಸವಾಳ ಹೂವಿನಲ್ಲಿ ಮಾಯಿಶ್ಚರೈಸಿಂಗ್ ಅಂಶವಿದೆ. ಇದರಿಂದ ಕೂದಲು ಸದಾ ಹೊಳೆಯುತ್ತಿರುತ್ತದೆ. . 

ಕೂದಲಿನ ಬೆಳವಣಿಗೆ : ದಾಸವಾಳ ಮತ್ತು ಅದರ ಎಲೆಗಳನ್ನು ಹಾಕಿ ತಯಾರು ಮಾಡಿದ ಎಣ್ಣೆಯನ್ನು ನಿಯಮಿತವಾಗಿ ಕೂದಲಿಗೆ ಹಚ್ಚಿದರೆ, ಕೂದಲು ಚೆನ್ನಾಗಿ ಬೆಳೆಯುತ್ತದೆ. ಅಲ್ಲದೆ ನೆರೆಗೂದಲು ನಿವಾರಿಸಿ ಕಪ್ಪಾದ ಕೂದಲು ಬೆಳೆಯಲು ಸಹಕಾರಿ. 
 

loader