ತಂದೆ ಇಲ್ಲ, ತಾಯಿ ಬೇರೆ ಮದುವೆಯಾಗಿ ದೂರವಾಗಿದ್ದಾರೆ. ನನ್ನ ಮದುವೆಗೆ ನೀವು ಬನ್ನಿ ಎಂದು ಅಪರಿಚಿತರಿಗೆ ಸೋಶಿಯಲ್ ಮೀಡಿಯಾ ಮೂಲಕ ಆಹ್ವಾನ ನೀಡಿದ್ದ. ತನ್ನ ಜೀವನದ ಪ್ರಮುಖ ಘಟ್ಟದಲ್ಲಿ ಆಪ್ತರು, ಬಂಧುಬಳಗ ಇಲ್ಲದೆ ಸಮಾರಂಭ ಸೊರಗಿ ಹೋಗಲಿದೆ ಎಂದು ಆತಂಕಗೊಂಡಿದ್ದ ವರನಿಗೆ ಅಚ್ಚರಿ ಕಾದಿತ್ತು.

ಚಿಕ್ಕವನಿದ್ದಾಗ ತಂದೆ ತೀರಿಕೊಂಡರು, ತಾಯಿ ಬೇರೆ ಮದುವೆಯಾಗಿ ದೂರವಾದರು. ಇತ್ತ ಬಂಧು ಬಳಗದವರು ನನ್ನ ಜೊತೆಗಿಲ್ಲ. ನನ್ನ ಜೀವನದ ಪ್ರಮುಖ ಘಟ್ಟಕ್ಕೆ ನಾನು ತಲುಪಿದ್ದೇನೆ. ಬಹುಕಾಲದ ಪ್ರೀತಿಸಿದ ಗೆಳತಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದೇನೆ. ನನ್ನ ಮದುವೆಯಲ್ಲಿ ಆಪ್ತರು, ಬಂಧುಬಳಗವಿಲ್ಲದೆ ಸೊರಗಬಾರದು. ನಿಮ್ಮೆಲ್ಲರಿಗೂ ಮದುವೆಗೆ ಆಹ್ವಾನ ನೀಡುತ್ತಿದ್ದೇನೆ. ಬಂದು ನಮಗೆ ಹರಸಿ ಎಂದು ವರ ಅಪರಿಚಿತರಿಗೆ ಆಹ್ವಾನ ನೀಡಿದ್ದಾನೆ. ಮದುವೆ ದಿನ ಬಂದೇ ಬಿಟ್ಟಿತ್ತು. ವರನ ಆತಂಕ ಹೆಚ್ಚಾಗಿತ್ತು. ಮದುವೆ ದಿನ ಯಾರೂ ಇಲ್ಲದೆ ಸ್ಮರಣೀಯ ಕ್ಷಣದ ಸಂಭ್ರಮ ಇಲ್ಲವಾಗುತ್ತೋ ಅನ್ನೋ ಆತಂಕ ಎದುರಾಗಿತ್ತು. ಆದರೆ ಅಪರಿಚಿತರು ನೀಡಿದ ಸರ್ಪ್ರೈಸ್‌ಗೆ ವರ ಭಾವುಕನಾದ ಘಟನೆ ಚೀನಾದಲ್ಲಿ ನಡೆದಿದೆ.

ಅಚ್ಚರಿ ಮೇಲೆ ಅಚ್ಚರಿ

ಯುವಕನೊಬ್ಬ ತನ್ನ ಮದುವೆಗೆ ಸೂಕ್ತ ಬಂಧುಮಿತ್ರರಿಲ್ಲ ಎಂಬ ಕೊರಗಿನಿಂದ ಸೋಶಿಯಲ್ ಮೀಡಿಯಾದಲ್ಲಿ ಅಪರಿಚಿತರಿಗೆ ಆಹ್ವಾನ ಪತ್ರಿಕೆ ನೀಡಿದ್ದಾನೆ. ಯುವಕನ ಮದುವೆಗೆ ಸಾರ್ವಜನಿಕರು ಬರೋಬ್ಬರಿ ಲಕ್ಷುರಿ ಮೈಬ್ಯಾಕ್' (Maybach) ಸೇರಿದಂತೆ ಸಾಲು ಸಾಲು ಐಷಾರಾಮಿ ಕಾರುಗಳ ಮೆರವಣಿಗೆಯೊಂದಿಗೆ ಆಗಮಿಸಿ ಅಚ್ಚರಿ ಮೇಲೆ ಅಚ್ಚರಿ ಕೊಟ್ಟಿದ್ದಾರೆ.

ಮದುವೆಗೆ ಉಚಿತವಾಗಿ ಆಗಮಿಸಿ ಶುಭಕೋರಿ

ಬಾಲ್ಯದಲ್ಲೇ ಕೌಟುಂಬಿಕ ಬೆಂಬಲವಿಲ್ಲದೆ, ಕೌಟುಂಬಿಕ ವಲಯದಲ್ಲಿ ಬೆಳೆದ ಈ ಯುವಕ ಈತ. ತನ್ನ ಮದುವೆಯ ಶುಭ ಸಂದರ್ಭದಲ್ಲಿ ಮಂಟಪ ಖಾಲಿಯಾಗಿರಬಾರದು ಎಂಬುದು ಈತನ ಬಯಕೆಯಾಗಿತ್ತು. ಹೀಗಾಗಿ ಯುವಕ ಸೋಶಿಯಲ್ ಮೀಡಿಯಾದಲ್ಲಿ ತನ್ನ ನೋವಿನ ಕತೆಯ ಸಣ್ಣ ಸಾರಾಂಶ ಹಂಚಿಕೊಂಡಿದ್ದ. ನನ್ನ ಮದುವೆಗೆ ಬಂದು ಆಶೀರ್ವದಿಸಲು ನನ್ನ ಬಳಿ ಹೆಚ್ಚಿನ ಸಂಬಂಧಿಕರಿಲ್ಲ. ಮದುವೆ ಮಾಡಿಸಿಕೊಡಲು ಪೋಷಕರೂ ಇಲ್ಲ. ಆಸಕ್ತಿ ಇರುವ ಅಪರಿಚಿತರು ಯಾರು ಬೇಕಾದರೂ ನನ್ನ ಮದುವೆಗೆ ಉಚಿತವಾಗಿ ಆಗಮಿಸಿ ಶುಭಕೋರಬಹುದು ಎಂದು ಪೋಸ್ಟ್ ಮಾಡಿದ್ದಾನೆ.

ಯುವಕನ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಚೀನಾದ ನೆಟ್ಟಿಗರು ಭಾವುಕವಾಗಿ ಸ್ಪಂದಿಸಿದ್ದಾರೆ. ಮದುವೆ ದಿನ ಯುವಕನ ಆತಂಕ ಹೆಚ್ಚಾಗಿತ್ತು. ಸೋಶಿಯಲ್ ಮೀಡಿಯಾ ಕರೆಗೆ ಯಾರು ತಮ್ಮ ಸಮಯವನ್ನು ನನ್ನ ಮದುವೆಗೆ ಮೀಸಲಿಡುತ್ತಾರೆ ಎಂದುಕೊಂಡಿದ್ದ. ಆದರೆ ಮದುವೆಗೆ ವರ ಹಾಗೂ ವಧು ಮಂಟಪಕ್ಕೆ ಆಗಮಿಸುವ ವೇಳೆ ಅಚ್ಚರಿ ಕಾದಿತ್ತು. ಮರ್ಸಿಡಿಸ್ ಬೆಂಜ್ ಮೇಬ್ಯಾಕ್ ಸೇರಿದಂತೆ ಐಷಾರಾಮಿ ಕಾರುಗಳು ಮಂಟಪದ ಮುಂದೆ ಸಾಲು ಸಾಲಾಗಿ ನಿಂತಿತ್ತು. ನೂರೂರು ಮಂದಿ ವಧು ವರರ ಸ್ವಾಗತಕ್ಕೆ ನಿಂತಿದ್ದರು. ಚಪ್ಪಾಳೆ, ಹೂವುಗಳ ಮೂಲಕ ಸ್ವಾಗತ ಕೋರಿದ್ದಾರೆ. ಇಲ್ಲಿ ಸ್ವಾಗತ ಕೋರಿದವರು, ಮಂಟಪದಲ್ಲಿ ತುಂಬಿ ತುಳುಕಿದ್ದವರೆಲ್ಲೂ ಅಪರಿಚಿತರು.

ವಧು ವರರಿಗೆ ಭರ್ಜರಿ ಗಿಫ್ಟ್

ವೇದಿಕೆ ಹತ್ತುವ ವೇಳೆ ವರ ಭಾವುಕನಾಗಿದ್ದಾನೆ. ತನ್ನ ಸೋಶಿಯಲ್ ಮೀಡಿಯಾ ಪೋಸ್ಟ್ ನೋಡಿ ಆಗಮಿಸಿದ ಅಪರಿಚಿತರಿಗೆ ಧನ್ಯವಾದ ಹೇಳಿ ಕಣ್ಣೀರಿಟ್ಟಿದ್ದಾನೆ. ಸಾಲು ಸಾಲಾಗಿ ಬಂದ ಅಪರಿಚಿತರು ವಧು ವರರಿಗೆ ಭರ್ಜರಿ ಗಿಫ್ಟ್ ನೀಡಿ ಶುಭಕೋರಿದ್ದಾರೆ. ಮದುವೆ ಮಂಪದಲ್ಲಿ ಶ್ರೀಮಂತರು, ಅಪರಿಚಿತರ ದಂಡೇ ನೆರೆದಿತ್ತು. ರ್ತತ ಸಂಬಂಧವಿಲ್ಲದಿದ್ದರೂ ಮಾನವಿಯತೆ ದೃಷ್ಟಿಯಿಂದ ಅಪರಿಚಿತರು ಯುವಕನ ಮನವಿಗೆ ಸ್ವಂದಿಸಿದ್ದರು. ಈ ಘಟನೆ ಚೀನಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಪ್ರತಿಯೊಬ್ಬ ವ್ಯಕ್ತಿ ತನ್ನ ಜೀವನದ ವಿಶೇಷ ಕ್ಷಣಗಳು, ದಿನಗಳನ್ನು ಸಂಭ್ರಮಿಸಲು ಅರ್ಹ ಎಂದು ಹಲವರು ಕಮೆಂಟ್ಸ್ ಮಾಡುತ್ತಿದ್ದಾರೆ.