Asianet Suvarna News Asianet Suvarna News

ಬರ್ತ್ ಡೇ ಅಂದರೆ ಕೇಕು, ಜಿಲೇಬಿ ಅಷ್ಟೇ ಅನ್ನೋ ಖ್ಯಾತ ಲೇಖಕ Ruskin Bond ಲೈಫ್‌ ಬಗ್ಗೆ ಏನು ಹೇಳ್ತಾರೆ ?

ಹ್ಯಾಪಿ ಬರ್ತ್ ಡೇ (Happy Birthday) ಸಾರ್ ಅಂತ ರಸ್ಕಿನ್ ಬಾಂಡ್‌ (Ruskin bond) ಅವರಿಗೆ ಹೇಳಿ ನೋಡಿ, ಸುಮ್ಮನೆ ನಗ್ತಾರೆ. ಏನು ಬರ್ತ್ ಡೇ ಸ್ಪೆಷಲ್ ಅಂತ ಕೇಳಿದ್ರೆ, ಬರ್ತ್ ಡೇ ಅಂದರೆ ಕೇಕು (Cake), ಜಿಲೇಜಿ ಅಷ್ಟೇ, ಅದರಾಚೆ ಏನೂ ಇಲ್ಲ ಅಂತ ನಗು ಮುಂದುವರಿಸ್ತಾರೆ. ಇವತ್ತು ಅವರ 88ನೇ ಜನ್ಮದಿನ. ಜಿಲೇಬಿ (Jalebi) ಅಂದ್ರೆ ಜೀವ ಬಿಡೋ ಈ ಸಾಹಿತಿಯ 'ಹೌ ಟು ಲಿವ್ ಲೈಫ್' ಅನ್ನೋ ಬುಕ್‌ ಇವತ್ತು ರಿಲೀಸ್ ಆಗುತ್ತಿದೆ.

Great Indian author Ruskin bonds insights about Life
Author
Bengaluru, First Published May 20, 2022, 1:45 PM IST

ರಸ್ಕಿನ್ ಬಾಂಡ್(Ruskin Bond) ಅವರ ಕತೆಗಳನ್ನೋ, ಕಾದಂಬರಿಯನ್ನೋ ಏನಿಲ್ಲ ಅಂದರೆ ಟೆಕ್ಸ್ಟ್‌ ಬುಕ್‌ನಲ್ಲಾದ್ರೂ ಓದಿರ್ತೀವಿ. ಇವರೊಬ್ಬ ಆಂಗ್ಲೋ ಇಂಡಿಯನ್(Anaglo Indian) ಸಾಹಿತಿ. ಈವರೆಗೆ 500ಕ್ಕೂ ಹೆಚ್ಚು ಸಣ್ಣಕತೆಗಳನ್ನು ಬರೆದಿದ್ದಾರೆ. ಮದುವೆ ಗಿದುವೆ ಎಲ್ಲ ಆಗಿಲ್ಲ. ಬರವಣಿಗೆಯನ್ನೇ ವಿವಾಹವಾದ ಹಾಗಿದ್ದಾರೆ. ನಮ್ಮ ದೇಶ ಬ್ರಿಟೀಶರ(British) ವಶದಲ್ಲಿದ್ದಾಗಲೇ ಇವರ ಹೆತ್ತವರು ಇಲ್ಲಿಗೆ ಬಂದರು. ಇಂಗ್ಲೆಂಡ್ ದಂಪತಿಗೆ ರಸ್ಕಿನ್‌ ಬಾಂಡ್ ಹುಟ್ಟಿದ್ದು ಪಂಜಾಬ್‌ನಲ್ಲಿ. ಮುಂದೆ ತಂದೆ ತಾಯಿ ಬೇರ್ಪಡುತ್ತಾರೆ. ಇವರು ಬೋರ್ಡಿಂಗ್ ಸ್ಕೂಲ್‌(Boarding school)ನಲ್ಲಿ ಓದುತ್ತಿರುವಾಗ ಯೋಧರಾಗಿದ್ದ ತಂದೆ ಯುದ್ಧದಲ್ಲಿ ಸಾವನ್ನಪ್ಪುತ್ತಾರೆ. ಅದು ರಸ್ಕಿನ್ ಬಾಂಡ್ ಬದುಕಿನ ಕರಾಳ ಇದೆ. ಹೀಗೆಲ್ಲ ಇವರ ಲೈಫ್‌ ಸ್ಟೋರಿ(Life story) ಮುಂದುವರಿಯುತ್ತೆ.

ಮುಂದೆ ಹಿಮಾಲಯದ ಕಣಿವೆಯಲ್ಲೇ(Himalayan Valley) ವಾಸ ಮಾಡುತ್ತಾ, ಅಲ್ಲಿದ್ದ ಬುಡಕಟ್ಟು ಕುಟುಂಬವನ್ನು ದತ್ತು ತೆಗೆದುಕೊಂಡು ಅವರ ಮಕ್ಕಳನ್ನು ಓದಿಸಿ, ಅವರ ಕುಟುಂಬವನ್ನು ನೋಡಿಕೊಳ್ಳುತ್ತಾ ಬದುಕು ಸಾಗಿಸುತ್ತಿದ್ದಾರೆ. ಈಗ 88ರಲ್ಲಿರೋ ಹ್ಯಾಪಿ ಪರ್ಸನ್ ರಸ್ಕಿನ್ ಬಾಂಡ್ 'ಹ್ಯಾಪಿ ಬರ್ತ್ ಡೇ ಸಾರ್'(Happy birthday sir) ಅಂದರೆ ಸುಮ್ಮನೆ ನಗ್ತಾರೆ. ಬರ್ತ್ ಡೇಗೆ ಏನು ಸ್ಪೆಷಲ್ ಅಂತ ಕೇಳಿದರೆ, ಕೇಕು, ಜಿಲೇಬಿ ಅಷ್ಟೇ. ಅದರಾಚೆ ಏನೂ ಇಲ್ಲ ಅಂತ ಬೊಚ್ಚು ಬಾಯಲ್ಲಿ ನಗುತ್ತಾ ಹೇಳುತ್ತಾರೆ. ಇವರ 'ಹೌ ಟು ಲಿವ್ ಲೈಫ್' (How to live life)ಅನ್ನೋ ಪುಸ್ತಕ ಇವತ್ತು ಬಿಡುಗಡೆಯಾಗಿದೆ. ಇವರಿಗೆ ಜಿಲೇಬಿ ಅಂದ್ರೆ ಪ್ರಾಣ. ಅದು ಅವರ ಹತ್ತಿರದ ಸರ್ಕಲ್ ನವರಿಗೆ ಮಾತ್ರ ಅಲ್ಲ, ಅವರ ಓದುಗರಿಗೂ ತಿಳಿದಿರುವ ವಿಷಯ.

 

'ಪೆನ್(Pen) ಹಿಡ್ಕೊಂಡು ಬರಿಯೋದು, ಪರ್ವತಗಳಾಚಿಂದ ಇಣುಕುವ ಸೂರ್ಯನ ಬೆಳಕನ್ನು ಹೀರಿಕೊಳ್ಳೋದು, ಸಖತ್ತಾಗಿರೋ ಬೆಳಗಿನ ಉಪಹಾರ ಸೇವಿಸೋದು, ಅಭಿಮಾನಿಗಳಿಂದ, ಆತ್ಮೀಯರಿಂದ ಬಂದ ಪತ್ರಗಳನ್ನು ಓದೋದು.. ನನ್ನ ದಿನಚರಿ ಹೀಗಿರುತ್ತೆ' ಅನ್ನೋ ರಸ್ಕಿನ್ ಬಾಂಡ್ ಹಿಮಾಲಯದ ಕಣಿವೆಯ ಬದುಕಿನ ಬಗ್ಗೆ ಅನೇಕ ಕತೆ, ಪ್ರಬಂಧ, ಕಾದಂಬರಿ ಇತ್ಯಾದಿಗಳನ್ನು ಬರೆದಿದ್ದಾರೆ. ಅವರ ಕೆಲವು ಮಹತ್ವದ ಮಾತುಗಳು ಹೀಗಿವೆ.

- ಸಾಹಿತಿಗಳು ಜಾಸ್ತಿ ಮಾತಾಡಬಾರದು. ಅವರು ಮಾತುಗಳನ್ನೆಲ್ಲ ತಮ್ಮ ಓದುಗರಿಗಾಗಿ ಮುಚ್ಚಿಟ್ಟುಕೊಂಡು ಅಕ್ಷರ ರೂಪಕ್ಕಿಳಿಸಬೇಕು. ಎಲ್ಲೋ ಅಜ್ಞಾತವಾಗಿರುವ ಓದುಗರಿಗೆ ಅವರ ಮನಸ್ಸಿನ ಮಾತು ತಲುಪಬೇಕು.

- ನಾವು ಹಿಂದಿದ್ದನ್ನು ನೆನಪು ಮಾಡ್ಕೊಳ್ಳೋದು ಅಂದರೆ ಹಿಂದೆ ಪಟ್ಟ ಕಷ್ಟಗಳನ್ನು, ಅನುಭವಿಸಿದ ನೋವು, ಸಂಕಟಗಳನ್ನು ನೆನಪು ಮಾಡ್ಕೊಳ್ತೇವೆ. ಇಂಥವುಗಳನ್ನು ನಮ್ಮ ಇವತ್ತಿನ ದಾರಿಗೆ ಅಡ್ಡವಾಗಿ ತರಬಾರದು. ದಾರಿಯಲ್ಲಿ ಇಂಥಾ ಹಳೆಯ ಕಸಗಡ್ಡಿಗಳೇ ತುಂಬಿದ್ದರೆ ಇವತ್ತಿನ ನಡಿಗೆಯಲ್ಲಿ ಮಜಾ ಇರೋದಿಲ್ಲ.

Child Care : ಓದಲು ಆಸಕ್ತಿ ತೋರದ ಮಕ್ಕಳ ಪಾಲಕರಿಗೆ ಇಲ್ಲಿದೆ ಟಿಪ್ಸ್

- ನಿನ್ನ ಕನಸುಗಳನ್ನು ಯಾರೋ ಕದಿಯೋದಕ್ಕಾಗಲ್ಲ. ಕೊನೆಯವರೆಗೂ ಅದು ನಿನ್ನ ಜೊತೆಗೇ ಇರುತ್ತದೆ.

- ಇಬ್ಬರು ಗಂಡಸರು ಕೆಲವೊಂದು ವಿಚಾರಗಳಲ್ಲಿ ಒಂದೇ ಥರ ಇರಬಹುದೇನೋ. ಆದರೆ ನನ್ನ ಇಷ್ಟು ವರ್ಷದ ಬದುಕಿನಲ್ಲಿ ಕಂಡಂತೆ ಯಾವ ಇಬ್ಬರು ಮಹಿಳೆಯರೂ ಒಂದೇ ಥರ ಇರೋದಿಲ್ಲ.

- ನಾನು ಬಹುಕಾಲದಿಂದ ಹಿಮಾಲಯ ಬೆಟ್ಟಗಳ ನಡುವೆ ಬದುಕುತ್ತಿದ್ದೇನೆ. ಈ ಬೆಟ್ಟಗಳಿಗೊಂದು ವಿಶೇಷತೆ ಇದೆ. ನೀವು ನಿಮ್ಮ ಬದುಕಿನ ಎಷ್ಟೇ ಸಮಯವನ್ನು ಅವುಗಳ ಜೊತೆಗೆ ಕಳೆಯಿರಿ, ಅವು ನಿಮ್ಮನ್ನು ಅವುಗಳಿಗೇ ಸೇರಿದವರೇನೋ ಎಂಬಂತೆ ನೋಡುತ್ತವೆ. ಎಂದಿಗೂ ನಿಮ್ಮ ಮನಸ್ಸಿಂದ ದೂರವಾಗೋದಿಲ್ಲ.

ಮಹಿಳೆಯರ ದೇಹದಲ್ಲಾಗುವ ಈ ಸಣ್ಣ ಬದಲಾವಣೆಗಳು ಗಂಭೀರ ಸಮಸ್ಯೆಯ ಕಾರಣವಾಗಿರಬಹುದು

- ಲೈಫಲ್ಲಿ(Life) ಖುಷಿ ಅನ್ನೋದು ಚಿಟ್ಟೆಯ ಹಾಗೆ. ಅದು ಅತ್ತಿಂದಿತ್ತ ಇತ್ತಿಂದತ್ತ ಹಾರಾಡುತ್ತಲೇ ಇರುತ್ತದೆಯೇ ವಿನಃ ಅವುಗಳನ್ನು ನಿಮ್ಮ ಅಂಗೈಯೊಳಗೆ ಭದ್ರವಾಗಿ ಹಿಡಿದಿಡಲಾಗದು. ಕೆಲವೊಮ್ಮೆ ಹತ್ತಿರ ಬಂದ ಹಾಗನಿಸಿದರೂ ಮತ್ತೆಲ್ಲೋ ಓಡಿ ಹೋಗುತ್ತವೆ.

- ಪ್ರಕೃತಿ ಜೊತೆಗೆ ಬದುಕುತ್ತಿದ್ದರೆ ನಿಮಗ್ಯಾವತ್ತೂ ನೀವು ಒಂಟಿ ಅನ್ನುವ ಭಾವನೆ ಬರೋದಿಲ್ಲ.

- ಕೆಂಪು ಗುಲಾಬಿಗಳು(Red Rose) ಯುವ ಪ್ರೇಮಿಗಳಿಗಷ್ಟೇ. ಆದರೆ ಸುದೀರ್ಘವಾಗಿ ಉಳಿಯುವ ಸಂಬಂಧಗಳಿಗೆ ಬೇಳೆಕಾಳುಗಳೇ ಬೇಕು. ನೋಟದ ರಮ್ಯತೆಗಿಂತ ಬದುಕು ದೊಡ್ಡದಾಗಿರುತ್ತೆ.

- ಓದುವವರು ಅದೃಷ್ಟವಂತರು. ಅವರಿಗೆ ಎಲ್ಲೂ ಸಿಗದ ಆನಂದ ಪುಸ್ತಕದ ಓದಿನಲ್ಲಿ ಸಿಗುತ್ತದೆ. ಓದಿನ ಅಭ್ಯಾಸ ಇಲ್ಲದವರು ದುರಾದೃಷ್ಟವಂತರು. ಕ್ಷಣಿಕ ಖುಷಿಗಳಷ್ಟೇ ಅವರಿಗೆ ಸಿಗುತ್ತದೆ. ಓದಿನ ಆನಂದದಿಂದ ಅವರು ವಂಚಿತರಾಗುತ್ತಾರೆ.

ಬ್ರೇಕ್ ಅಪ್ ಆದ ಬಳಿಕ ಮುಂದೇನು ? ಚಿಂತಿಸಬೇಡಿ, ಇಲ್ಲಿದೆ ಟಿಪ್ಸ್

Follow Us:
Download App:
  • android
  • ios