Sridhar Vembu marriage advice: ಝೋಹೋ ಸಹ-ಸಂಸ್ಥಾಪಕ ಶ್ರೀಧರ್ ವೆಂಬು ಅವರು ಯುವಕರು 20ರ ಹರೆಯದಲ್ಲಿಯೇ ಮದುವೆಯಾಗಿ ಮಕ್ಕಳನ್ನು ಪಡೆಯಬೇಕೆಂದು ಸಲಹೆ ನೀಡಿದ್ದಾರೆ. ಉಪಾಸನಾ ಕೊನ್ನಿಡೆಲ್ಲಾ ಅವರ ಪೋಸ್ಟ್‌ಗೆ ಪ್ರತಿಕ್ರಿಯೆಯಾಗಿ ನೀಡಿದ ಈ ಹೇಳಿಕೆಯು, ಈಗ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ.

ಯಾವ ವಯಸ್ಸಿನಲ್ಲಿ ಮಕ್ಕಳು ಮಾಡಿಕೊಂಡರೆ ಬೆಸ್ಟ್‌

ಮಕ್ಕಳನ್ನು ಪಡೆಯುವುದಕ್ಕೆ 20 ರಿಂದ 30 ವರ್ಷಗಳು ಸರಿಯಾದ ಸಮಯ ಎಂದು ಅನೇಕ ಹಿರಿಯರು ಹಾಗೂ ವೈದ್ಯರು ಕೂಡ ಹೇಳುತ್ತಾರೆ. ಆದರೆ ಈಗಿನ ಕಾಲದಲ್ಲಿ ಬಹುತೇಕ ಯುವತಿಯರು ಮದುವೆಗೂ ಮೊದಲೇ ವೃತ್ತಿ ಜೀವನ ಹಾಗೂ ಆರ್ಥಿಕವಾಗಿ ಸಧೃಡವಾಗಬೇಕೆಂದು ಬಯಸುವುದರಿಂದ ಮದುವೆಯನ್ನು ಮುಂದೂಡುತ್ತಿದ್ದು, ಉದ್ಯೋಗಸ್ಥರಾಗಿ ಆರ್ಥಿಕವಾಗಿ ಸಬಲರಾಗಿರುವ ಬಹುತೇಕ ಯುವತಿಯರು ಇತ್ತೀಚೆಗಂತು 30ರ ನಂತರವೇ ಮದುವೆಯಾಗುತ್ತಾರೆ. ಹೀಗಿರುವಾಗ ಝೋಹೋ ಸಂಸ್ಥೆಯ ಸಹ ಸಂಸ್ಥಾಪಕರಾಗಿರುವವ ಶ್ರೀಧರ್ ವೆಂಬು ಅವರು ಯುವ ಸಮುದಾಯಕ್ಕೆ 20ರ ಹರೆಯದಲ್ಲಿ ಮದುವೆಯಾಗಿ ಮಕ್ಕಳನ್ನು ಮಾಡಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ಎಕ್ಸ್‌ನಲ್ಲಿ ಅವರು ಈ ಬಗ್ಗೆ ಬರೆದುಕೊಂಡಿದ್ದು, ಅವರ ಪೋಸ್ಟ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಜೊತೆಗೆ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಝೋಹೋ ಸಹ ಸಂಸ್ಥಾಪಕ ಶ್ರೀಧರ್ ಪೋಸ್ಟ್ ಭಾರಿ ವೈರಲ್

ಅಪೋಲೋ ಆಸ್ಪತ್ರೆ ಸಮೂಹ ಸಂಸ್ಥೆಗಳ ಸಿಎಸ್‌ಆರ್ ಆಗಿರುವ ಹಾಗೂ ನಟ ರಾಮ್‌ಚರಣ್ ಅವರ ಪತ್ನಿಯೂ ಆಗಿರು ಉಪಾಸನಾ ಕೊನ್ನಿಡೆಲ್ಲಾ ಅವರು ಮಾಡಿದ ಪೋಸ್ಟಗೆ ಪ್ರತಿಕ್ರಿಯೆಯಾಗಿ ಝೋಹೋ ಶ್ರೀಧರ್ ಈ ಪೋಸ್ಟ್ ಮಾಡಿದ್ದಾರೆ ಹಾಗಿದ್ದರೆ ಅವರ ಎಕ್ಸ್ ಪೋಸ್ಟ್‌ನಲ್ಲಿ ಏನಿದೆ ನೋಡೋಣ ಬನ್ನಿ.

ನಾನು ಭೇಟಿಯಾಗುವ ಯುವ ಉದ್ಯಮಿಗಳು, ಪುರುಷರು ಮತ್ತು ಮಹಿಳೆಯರು ಎಲ್ಲರಿಗೂ ಮದುವೆಯಾಗಿ 20 ರ ಹರೆಯದಲ್ಲಿ ಮಕ್ಕಳನ್ನು ಹೊಂದಲು ಮತ್ತು ಈ ಮಕ್ಕಳನ್ನು ಮಾಡಿಕೊಳ್ಳುವ ಪ್ರಕ್ರಿಯೆಯನ್ನು ಮುಂದೂಡುವುದನ್ನು ನಿಲ್ಲಿಸುವಂತೆ ನಾನು ಸಲಹೆ ನೀಡುತ್ತೇನೆ. ಸಮಾಜ ಮತ್ತು ಅವರ ಪೂರ್ವಜರಿಗೆ ತಮ್ಮ ಜನಸಂಖ್ಯಾ ಕರ್ತವ್ಯವನ್ನು ಅವರು ಮಾಡಬೇಕು ಎಂದು ನಾನು ಅವರಿಗೆ ಹೇಳುತ್ತೇನೆ. ಈ ಕಲ್ಪನೆಗಳು ವಿಲಕ್ಷಣ ಅಥವಾ ಹಳೆಯದಾಗಿ ಧ್ವನಿಸಬಹುದು ಎಂದು ನನಗೆ ತಿಳಿದಿದೆ ಆದರೆ ಈ ವಿಚಾರಗಳು ಮತ್ತೆ ಪ್ರತಿಧ್ವನಿಸುತ್ತವೆ ಎಂದು ನನಗೆ ಖಚಿತವಾಗಿದೆ ಎಂದು ಅವರು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಇದಕ್ಕೂ ಮೊದಲು ಉಪಾಸನಾ ಮಾಡಿದ್ದ ಟ್ವಿಟ್ ಏನು?

@IITHyderabadನಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸುವಾಗ ನಿಜಕ್ಕೂ ನಾನು ನಿಜವಾಗಿಯೂ ಅಧ್ಬುತವಾದ ಸಮಯವನ್ನು ಕಳೆದೆ

ನಿಮ್ಮಲ್ಲಿ ಎಷ್ಟು ಮಂದಿ ಮದುವೆಯಾಗಲು ಬಯಸುತ್ತೀರಿ? ಎಂದು ನಾನು ಕೇಳಿದಾಗ ಮಹಿಳೆಯರಿಗಿಂತ ಹೆಚ್ಚಿನ ಪುರುಷರು ಕೈ ಎತ್ತಿದರು.

ಮಹಿಳೆಯರು ಹೆಚ್ಚು ವೃತ್ತಿ ಕೇಂದ್ರಿತರಾಗಿ ಕಾಣುತ್ತಿದ್ದರು. ಇದು ಹೊಸ ಪ್ರಗತಿಶೀಲ ಭಾರತ,

ನಿಮ್ಮ ದೃಷ್ಟಿಕೋನವನ್ನು ಸಿದ್ಧಪಡಿಸಿ

ನಿಮ್ಮ ಗುರಿಗಳಿಗೆ ಅರ್ಥ ನೀಡಿ

ನಿಮ್ಮ ಪಾತ್ರವನ್ನು ನಿರ್ವಹಿಸಿ

ಮತ್ತು ನಿಮ್ಮನ್ನು ಯಾರು ತಡೆಯಲಾಗದನ್ನು ನೋಡಿ ಎಂದು ಅವರು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದರು. ಇವರ ಈ ಟ್ವಿಟ್‌ಗೆ ಪ್ರತಿಯಾಗಿ ಝೋಹೋ ಶ್ರೀಧರ್ ವೆಂಬು ಅವರ ಪ್ರತಿಕ್ರಿಯೆ ಬಂದಿದೆ.

ನೆಟ್ಟಿಗರ ಕಾಮೆಂಟ್ ಏನು?

ಈ ಪೋಸ್ಟ್ ನೋಡಿದ ಜನರು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆಯನ್ನು ಹುಟ್ಟು ಹಾಕಿದ್ದಾರೆ. 20 ವರ್ಷ ವಯಸ್ಸಿನಲ್ಲಿ ಬೇಗನೆ ಮದುವೆಯಾಗುವಂತೆ ಎಲ್ಲರೂ ಸಲಹೆ ನೀಡುತ್ತಲೇ ಇರುತ್ತಾರೆ, ಆದರೆ ನಿಜವಾದ ವಿನಿಮಯದ ಬಗ್ಗೆ ಯಾರೂ ಮಾತನಾಡುವುದಿಲ್ಲ. ಇಂದಿನ ಯುವಕರು ಜವಾಬ್ದಾರಿಗೆ ಹೆದರುವುದಿಲ್ಲ, ಆದರೆ ಅವರು ಅಸ್ಥಿರ ಸಂಬಳ, ಶೂನ್ಯ ಕೆಲಸ, ಜೀವನ ಸಮತೋಲನ ಮತ್ತು ಆದಾಯದ 40% ಅನ್ನು ತಿನ್ನುವ ಬಾಡಿಗೆಯಲ್ಲಿ ಕುಟುಂಬವನ್ನು ನಿರ್ಮಿಸುವುದು ಹೇಗೆ ಎಂಬ ಬಗ್ಗೆ ಹೆದರುತ್ತಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಒಬ್ಬರು, ನಿಮ್ಮ ಮಾತಿಗೆ ನಾನು ಸಹಮತ ವ್ಯಕ್ತಪಡಿಸುತ್ತೇನೆ. ಆದರೆ ಖರ್ಚು ಮಾಡಲು ಶಕ್ತರಾಗಿರುವ ಜನರು ಸಹ ಮದುವೆಯಾಗುತ್ತಿಲ್ಲ ಮತ್ತು ಮಕ್ಕಳನ್ನು ಪಡೆಯುತ್ತಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ನೀವು ಅವರದೇ ಆದ ಸಂಪಾದನೆ ಮಾಡುವ ಮೊದಲೇ ಮದುವೆಯಾಗಿ ಮಕ್ಕಳನ್ನು ಮಾಡುವಂತೆ ಹೇಳುತ್ತೀರಿ ಆದರೆ ಹಾಗೆ ಮಾಡಲು ಪ್ರಯತ್ನಿಸಿ, 28 ವರ್ಷಕ್ಕೆ 3 ಮಕ್ಕಳನ್ನು ಪಡೆದು ಈಗ ವಿಚ್ಛೇದನ ಪಡೆದು, ಮುರಿದುಬಿದ್ದವರ ಬಗ್ಗೆ ಏನು ಹೇಳುವಿರಿ ಎಂದು ಕೆಲವರು ಪ್ರಶ್ನಿಸಿದ್ದಾರೆ.

ಝೋಹೋದ ಶ್ರೀಧರ್ ವೆಂಬು ಅವರ ಪೋಸ್ಟನ್ನು ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದು, 800ಕ್ಕೂ ಹೆಚ್ಚು ಜನ ಕಾಮೆಂಟ್ ಮಾಡಿದ್ದಾರೆ. ಹೀಗಾಗಿ ಈ ಪೋಸ್ಟ್ ಆಧುನಿಕ ಜೀವನ ಶೈಲಿ, ಕುಟುಂಬ ಜೀವನ ಮದುವೆಯ ಮಕ್ಕಳ ಪಡೆಯುವಿಕೆಯ ಬಗ್ಗೆ ಯುವ ಸಮೂಹದ ಮನಸ್ಥಿತಿಯ ಬಗ್ಗೆ ಹೊಸ ಚರ್ಚೆಹುಟ್ಟುಹಾಕಿದೆ.

ಇದನ್ನೂ ಓದಿ: ಹೆದ್ದಾರಿಗಳಲ್ಲಿ ಟೋಲ್ ತಪ್ಪಿಸ್ಬೇಕಾ? ಈ ಕಾರು ಖರೀದಿ ಮಾಡಿ

ಇದನ್ನೂ ಓದಿ: ಛತ್ತೀಸ್‌ಗಢದಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆ: ಹಾಕ್ ಫೋರ್ಸ್‌ ಇನ್ಸ್‌ಪೆಕ್ಟರ್ ಹುತಾತ್ಮ

Scroll to load tweet…