Lamborghini Hurricane India: ಟೋಲ್ ಕಟ್ಟದೇ ಯಾವುದೇ ವಾಹನಗಳು ಟೋಲ್‌ ಗೇಟ್‌ಗಳಲ್ಲಿ ಮುಂದೆ ಹೋಗಲು ಸಾಧ್ಯವಿಲ್ಲ ಏಕೆಂದರೆ ಟೋಲ್‌ ಮುಂದಿನ ಕಬ್ಬಿಣದ ರಾಡ್‌ಗಳನ್ನು ಟೋಲ್ ಕಟ್ಟಿದ ನಂತರವೇ ತೆರೆಯುತ್ತಾರೆ. ಆದರೂ ಇಲ್ಲೊಂದು ಕಾರು ಟೋಲ್ ಕಟ್ಟದೇ ಮುಂದೆ ಹೋಗಿದೆ ಅದು ಹೇಗೆ ಇಲ್ಲಿದೆ ನೋಡಿ ಸ್ಟೋರಿ…

ಟೋಲ್ ಕಟ್ಟದೇ ಎಸ್ಕೇಪ್ ಆದ ಕಾರು

ಟೋಲ್ ಕಟ್ಟದೇ ಯಾವುದೇ ವಾಹನಗಳು ಟೋಲ್‌ ಗೇಟ್‌ಗಳಲ್ಲಿ ಮುಂದೆ ಹೋಗಲು ಸಾಧ್ಯವಿಲ್ಲ ಏಕೆಂದರೆ ಟೋಲ್‌ ಮುಂದಿರುವ ಕಬ್ಬಿಣದ ರಾಡ್‌ಗಳನ್ನು ಟೋಲ್ ಕಟ್ಟಿದ ನಂತರವೇ ಅಲ್ಲಿನ ಸಿಬ್ಬಂದಿ ತೆರೆಯುತ್ತಾರೆ. ಆದರೆ ಇಲ್ಲೊಂದು ಕಡೆ ಟೋಲ್ ಕಟ್ಟದೆಯೇ ಕಾರೊಂದು ಟೋಲ್ ಕೆಳಗೆ ನುಸುಳಿಕೊಂಡು ಹೋಗಿದ್ದು, ಅದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾಮಾನ್ಯವಾಗಿ ಬಹುತೇಕ ಕಾರುಗಳು ಟೋಲ್ ಗೇಟ್‌ನಲ್ಲಿರುವ ಕಬ್ಬಿಣದ ರಾಡ್ ಕೆಳಗೆ ನುಗ್ಗಿ ಹೋಗುವಷ್ಟು ತೆಳ್ಳಗೆ ಇರೋದಿಲ್ಲ, ಆದರೆ ಇಲ್ಲಿ ಬಹಳ ತೆಳ್ಳಗಿನ ಐಷಾರಾಮಿ ಕಾರೊಂದು ಟೋಲ್ ಕಟ್ಟದೇ ನುಸುಳಿ ಹೋಗಿದ್ದು, ವೀಡಿಯೋ ವೈರಲ್ ಆಗಿದೆ ವೀಡಿಯೋ ನೋಡಿದ ಅನೇಕು ಹಲವು ಕಾಮೆಂಟ್ ಮಾಡಿದ್ದು, ಟೋಲ್ ತಪ್ಪಿಸಬೇಕಾದರೆ ಇಂತಹದ್ದೇ ಕಾರು ಖರೀದಿಸುವಂತೆ ಕಾಮೆಂಟ್ ಮಾಡಿದ್ದಾರೆ.

ಲ್ಯಾಂಬೋರ್ಘಿನಿ ಕಾರಿನ ವೀಡಿಯೋ ಭಾರಿ ವೈರಲ್:

ಅಂದಹಾಗೆ ಟ್ರೋಲ್ ತಪ್ಪಿಸಿಕೊಂಡು ಎಸ್ಕೇಪ್ ಆಗಿರೋದು ಐಷಾರಾಮಿ ಲ್ಯಾಂಬೋರ್ಘಿನಿ ಹುರಿಕೇನ್ ಕಾರು. ಕೆಲ ಮಾಹಿತಿಯ ಪ್ರಕಾರ ಮುಂಬೈನ ರಾಷ್ಟ್ರೀಯ ಹೆದ್ದಾರಿಯ ಟೋಲ್ ಪ್ಲಾಜಾವೊಂದರಲ್ಲಿ ಈ ಘಟನೆ ನಡೆದಿದೆ. ಕಪ್ಪು ಬಣ್ಣದ ಲಂಬೋರ್ಘಿನಿ ಸೂಪರ್ ಕಾರು ಟೋಲ್ ಶುಲ್ಕ ಪಾವತಿಸದೇ ಕಬ್ಬಿಣದ ಸರಳಿನ ಕೆಳಗೆ ನುಸುಳಿ ಹೋಗಿದೆ. ಇದರಿಂದ ಟೋಲ್ ಸಿಬ್ಬಂದಿ ಶಾಕ್ ಆಗಿದ್ದಾರೆ. ಆದರೆ ವೈರಲ್ ಆದ ವೀಡಿಯೋದಲ್ಲಿ ಸ್ಟಷ್ಟವಾಗಿ ಕಾರಿನ ನಂಬರ್ ಪ್ಲೇಟ್ ಕೂಡ ಕಾಣಿಸುತ್ತಿಲ್ಲ, ಈ ಐಷಾರಾಮಿ ಲ್ಯಾಂಬೋರ್ಘಿನಿ ಕಾರಿನ ಹಿಂದಿದ್ದ ಮತ್ತೊಂದು ಕಾರಿನಲ್ಲಿದ್ದವರು ಈ ದೃಶ್ಯವನ್ನು ಸೆರೆಹಿಡಿದಿದ್ದಾರೆ.

ಐಷಾರಾಮಿ ಕಾರು ಮಾಲೀಕರ ವರ್ತನೆಗೆ ತೀವ್ರ ಖಂಡನೆ

ಸಾಮಾನ್ಯವಾಗಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಾಗಬೇಕಾದರೆ ವಾಹನ ಸವಾರರು ಟೋಲ್ ಕಟ್ಟುವುದಕ್ಕೆ ಸಾವಿರಾರು ರೂಪಾಯಿಗಳನ್ನು ತೆಗೆದಿಡಬೇಕಾಗುತ್ತದೆ. ಹೀಗಿರುವಾಗ ಇಲ್ಲಿ ಕಾರೊಂದು ಯಾವುದೇ ತೊಂದರೆ ಇಲ್ಲದೇ ಟೋಲ್‌ನಲ್ಲಿ ಕ್ರಾಸಿಂಗ್ ಬಾರನ್ನು ದಾಟಿ ಹೋಗಿದ್ದು ಅನೇಕರನ್ನು ಅಚ್ಚರಿಗೀಡು ಮಾಡಿದೆ. ವೀಡಿಯೋ ನೋಡಿದ ಅನೇಕರು ಹಲವು ಕಾಮೆಂಟ್ ಮಾಡಿದ್ದಾರೆ. ಐಷಾರಾಮಿ ಲ್ಯಾಂಬೋರ್ಘಿನಿ ಕಾರನ್ನು ಬಡವರು ಬಿಡಿ ಮಾಧ್ಯಮವರ್ಗದ ಶ್ರೀಮಂತರಿಗೂ ಕೊಳ್ಳಲು ಸಾಧ್ಯವಿಲ್ಲ, ಈ ಕಾರೇನಿದ್ದರೂ ಶ್ರೀಮಂತರ ಸ್ವತ್ತು. ಈ ಕಾರುಗಳಿಗೆ ಕಡಿಮೆ ಎಂದರೂ ಸುಮಾರು 2 ಕೋಟಿಗೂ ಅಧಿಕ ದರವಿದೆ. ಹೀಗಿರುವಾಗ ಇಷ್ಟು ದುಬಾರಿ ಕಾರನ್ನು ಖರೀದಿಸಿದವರಿಗೆ ಟೋಲ್‌ನಲ್ಲಿ 75ರಿಂದ 100 ರೂಪಾಯಿ ಒಳಗಿನ ಟೋಲ್ ಕಟ್ಟುವುದಕ್ಕೆ ಕಷ್ಟವೇಕೆ ಎಂಬುದು ಅನೇಕರ ಪ್ರಶ್ನೆಯಾಗಿದೆ.

ಶ್ರೀಮಂತರಾಗಿದ್ದರೂ ಟೋಲ್ ಕಟ್ಟದೇ ಮೂಲಭೂತ ನಾಗರಿಕ ಕರ್ತವ್ಯದಿಂದ ಅವರು ತಪ್ಪಿಸಿಕೊಂಡಿದ್ದಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಲ್ಯಾಂಬೋರ್ಘಿನಿ ಕಾರು ಖರೀದಿಸಿ ಇವರಿಗೆ ಟೋಲ್ ಶುಲ್ಕ ಕಟ್ಟಲು ಹಣವಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇದೇ ಕಾರಣಕ್ಕೆ ಶ್ರೀಮಂತರು ಶ್ರೀಮಂತರಾಗಿಯೇ ಇರುತ್ತಾರೆ ಬಡವರು ಬಡವರಾಗಿಯೇ ಉಳಿಯುತ್ತಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.ಹಣದಿಂದ ಲಂಬೋರ್ಘಿನಿ ಖರೀದಿಸಬಹುದು ಆದರೆ ನಾಗರಿಕ ಪ್ರಜ್ಞೆಯನ್ನಲ್ಲ. ಸುಂದರವಾದ, ಕ್ಲಾಸಿ ಕಾರಿಗೆ ಎಂತಹ ಅವಮಾನ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಅಷ್ಟೊಂದು ದುಬಾರಿ ಮೊತ್ತದ ರೋಡ್ ಟ್ಯಾಕ್ಸ್ ಕಟ್ಟಿದ ನಂತರ ಕಾರಿನ ಮಾಲೀಕನಿಗೆ ಟೋಲ್‌ನಲ್ಲೂ ಹಣ ಕಟ್ಟುವುದಕ್ಕೆ ಬೇಸರವಾಗಿಬೇಕು ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.

ಹಾಗೆಯ ಈ ಲಂಬೋರ್ಘಿನಿ ಕಾರಿನ ನಂಬರ್ ಪ್ಲೇಟ್‌ ಸರಿಯಾಗಿರಲಿಲ್ಲ ಎಂಬ ವಿಚಾರವನ್ನು ಕೂಡ ನೆಟ್ಟಿಗರು ಗಮನಿಸಿದ್ದು, ಈ ಉಲ್ಲಂಘನೆಯು ಕೇವಲ ಒಂದು ಸಣ್ಣ ತಪ್ಪಿಗಿಂತ ಹೆಚ್ಚಿನದಾಗಿದೆ, ಇದು ಬಹುಶಃ ಕಾನೂನುಬಾಹಿರವಾಗಿರಬಹುದು. ಟೋಲ್ ಸಿಬ್ಬಂದಿ ಕಾರು ತಪ್ಪಿಸಿಕೊಂಡು ಮುಂದೆ ಹೋಗುವುದನ್ನು ನೋಡಿದರು, ಆದರೆ ಅದನ್ನು ನಿಲ್ಲಿಸಲು ಸಾಧ್ಯವಾಗಲಿಲ್ಲ, ಹಣದಿಂದ ಕೆಲವೊಂದು ಘನತೆಗಳನ್ನು ಖರೀದಿಸಲು ಸಾಧ್ಯವಿಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

View post on Instagram

ಇದನ್ನೂ ಓದಿ: ಛತ್ತೀಸ್‌ಗಢದಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆ: ಹಾಕ್ ಫೋರ್ಸ್‌ ಇನ್ಸ್‌ಪೆಕ್ಟರ್ ಹುತಾತ್ಮ

ಇದನ್ನೂ ಓದಿ: ಫೋಟೋಗ್ರಾಫರ್‌ಗೆ ಹೊಡೆದ ವರ: ಮದುವೆ ನಿಲ್ಲಿಸಿದ ವಧು