ಟೀ ಲವರ್‌ಗಳಿಗೆ ಹೊಸ ಆಯ್ಕೆ ಬಬಲ್ ಟೀ!

ಥೈವಾನಿನ ಚಹಾ ಅಂಗಡಿಯವನೊಬ್ಬ ಸುಮ್ಮನೆ ಪ್ರಯೋಗಕ್ಕಾಗಿ ಮಾಡಿ ಮಾರಿದ ಬಬಲ್ ಟೀ ಇದು ಜಗತ್ತಿನ ಮೂಲೆ ಮೂಲೆಯ ಜನರಿಗೂ ಇಷ್ಟವಾದ ಪೇಯವಾಗಿದೆ. ಟೀ ಲೋಕದಲ್ಲಿ ಹೊಸ ಟ್ರೆಂಡ್ ಬಬಲ್ ಟೀ. 

Everything You Didn't Know About This bubble tea

ನೀವು ಚಹಾಪ್ರಿಯರಾಗಿದ್ದಲ್ಲಿ, ಬೇರೆ ಬೇರೆ ರೀತಿಯ ಚಹಾ ಟ್ರೈ ಮಾಡುವಲ್ಲಿ ಕೂಡಾ ನಿಮ್ಮ ಆಸಕ್ತಿ ಹರಡಿರುತ್ತದೆ. ನೀವೀಗಾಗಲೇ ಮಸಾಲಾ ಟೀ, ಲೈಮ್ ಟೀ, ಹರ್ಬಲ್ ಟೀ, ಗ್ರೀನ್ ಟೀ, ಮಶ್ರೂಮ್ ಟೀ ಮುಂತಾದವನ್ನು ಕೇಳಿರಬಹುದು. ರುಚಿಯನ್ನೂ ಸವಿದಿರಬಹುದು. ಹಾಗಿದ್ದರೆ ನೀವಿನ್ನೂ ಟ್ರೈ ಮಾಡಬೇಕಿರುವುದು ಬಬಲ್ ಟೀ. ಇತ್ತೀಚೆಗೆ ಭಾರತದಾದ್ಯಂತ ಹೆಸರು ಮಾಡುತ್ತಿರುವ ಬಬಲ್ ಟೀ ಮೂಲತಃ ಥೈವಾನ್‌ ಟೀಯಿಂದ ಹುಟ್ಟಿದೆ. 

ಇದೊಂದು ಆಲ್ಕೋಹಾಲ್ ರಹಿತವಾದ, ಕಾರ್ಬೋನೇಟೆಡ್ ಅಲ್ಲದ ತಣ್ಣನೆಯ ಹಾಲಿನಿಂದ ತಯಾರಿಸಿದ ಟೀ. ಟಾಪಿಯೋಕ ಪರ್ಲ್ ಡ್ರಿಂಕ್, ಬಿಗ್ ಪರ್ಲ್, ಬೊಬಾ ನೈ ಚಾಯ್ ಮುಂತಾದ ಹೆಸರೂಗಳು ಇದಕ್ಕಿವೆ. 

ಆಹಾ! ಗ್ರೀನ್ ಟೀ, ಬ್ಲ್ಯಾಕ್ ಟೀ ಗೊತ್ತು, ಮಶ್ರೂಮ್ ಟೀ....

'ಬಬಲ್‌' ಎಂದಾಕ್ಷಣ ಇದರಲ್ಲಿ ಗುಳ್ಳೆಗಳಿರುವುದಿಲ್ಲ. ಆದರೆ ಇದಕ್ಕೆ ಹಾಕುವ ಜೆಲ್ಲಿಗಳಂತಿರುವ 'ಟ್ಯಾಪಿಕೊ ಪರ್ಲ್‌'ಗಳಿಂದಾಗಿ ಈ ಜ್ಯೂಸ್‌ಗೆ 'ಬಬಲ್‌ ಟೀ' ಎಂಬ ವಿಶಿಷ್ಟ ಹೆಸರು ಬಂದಿದೆ. ಇದು ಈ ಪೇಯದ ಬುಡದಲ್ಲಿ ಕಾಮಕಸ್ತೂರಿ ಬೀಜದಂತೆ ಕಾಣುತ್ತಿರುತ್ತದೆ. ಒಮ್ಮೆ ಬಬಲ್ ಟೀ ಫೇಮಸ್ ಆಗಿದ್ದೇ ತಡ, ಅದರಲ್ಲಿ ಹತ್ತು ಹಲವು ಫ್ಲೇವರ್‌ಗಳು, ವಿಧಗಳು ಹುಟ್ಟಿಕೊಂಡುಬಿಟ್ಟಿವೆ. 

ಬಬಲ್ ಟೀ ಇತಿಹಾಸ

1980ರಲ್ಲಿ ತೈವಾನ್‌ನಲ್ಲಿ ಈ ಪೇಯ ಹುಟ್ಟಿತು. ಆ ಬಳಿಕ ಇದರ ಕ್ರೇಜ್ ಜಗತ್ತಿನಾದ್ಯಂತ ಹರಡಿ ಹಬ್ಬಿದ್ದು ಸ್ವತಃ ಇದನ್ನು ಮೊದಲು ತಯಾರಿಸಿದವನಿಗೂ ಅಚ್ಚರಿಯೇ. ತೈವಾನ್‌ನ ಟೀ ಅಂಗಡಿ ಮಾಲೀಕ ಲಿಯು ಹನ್‌-ಚೀ ಎಂಬಾತ ತನ್ನ ಅಂಗಡಿಯಲ್ಲಿ ಜನರನ್ನು ಸೆಳೆಯಲು ಏನಾದರೂ ಹೊಸತನ್ನು ಕಂಡು ಹಿಡಿಯಬೇಕೆಂದು ಕೋಲ್ಡ್‌ ಮಿಲ್ಕ್‌ ಟೀಗೆ ಯಮ್‌, ಹಣ್ಣುಗಳು, ಸಿರಪ್‌ಗಳು ಹಾಗೂ ಟ್ಯಾಪಿಕೊ ಬಾಲ್‌ಗಳನ್ನು ಹಾಕಿ ಮೊದಲು ಈ ಪಾನೀಯವನ್ನು ತಯಾರಿಸಿದ.

ಗ್ರೀನ್‌ ಟೀ ಆಯ್ತು ಈಗ ಗ್ರೀನ್‌ ಕಾಫಿ!: ದೇಹದ ತೂಕ ಇಳಿಕೆಗೆ ಬೆಸ್ಟ್!

ಅದಾದ ಹತ್ತು ವರ್ಷದಲ್ಲೇ ಇದು ಪೂರ್ವ ಮತ್ತು ಆಗ್ನೇಯ ಏಷ್ಯಾಗಳಲ್ಲಿ ಜನಪ್ರಿಯಗೊಂಡಿತು. ಈಗಂತೂ ಥೈವಾನ್‌ನ ಪ್ರತೀ ಟೀ ಅಂಗಡಿಗಳೂ ಇದು ತಮ್ಮ ಹೆಗ್ಗುರುತು ಎಂಬಂತೆ ಬಬಲ್ ಟೀ ತಯಾರಿಸುತ್ತವೆ. ಇದರ ಬೇಡಿಕೆ ನೋಡಿ ಹಲವರು ಇದರಲ್ಲಿ ಮತ್ತಷ್ಟು ಪ್ರಯೋಗಗಳನ್ನು ಮಾಡಿ ಹೊಸ ಹೊಸ ರುಚಿಗಳು ಅಂಗಡಿಗಳಲ್ಲಿ ಲಭ್ಯವಿವೆ. ಅಮೆರಿಕ, ಆಸ್ಟ್ರೇಲಿಯಾ, ಯೂರೋಪ್, ದಕ್ಷಿಣ ಆಫ್ರಿಕಾ ಅಷ್ಟೇ ಏಕೆ, ಬೆಂಗಳೂರಿನ ಮಾಲ್‌ಗಳಲ್ಲಿ ಕೂಡಾ ಈ ಬಬಲ್ ಟೀ ಜನಪ್ರೀತಿ ಗಳಿಸಿದೆ. 

ಈ ಪಾನೀಯದ ರುಚಿ ಅದನ್ನು ತಯಾರಿಸುವಾಗ ಬಳಸುವ ಹಣ್ಣು, ಅದಕ್ಕೆ ಸೇರಿಸುವ ಬೇಸ್‌ ಮತ್ತು ಸಿರಪ್‌ಗಳ ಮೇಲೆ ನಿಂತಿದೆ. ಬಳಸುವ ಸಾಮಗ್ರಿಗಳಿಗೆ ಅನುಗುಣವಾಗಿ ಈ ಪೇಯ ಕೆಲವೊಮ್ಮೆ ಸಿಹಿ ಅಥವಾ ಕಹಿಯಾಗಿರಬಹುದು. ಅಧ್ಯಯನಗಳ ಪ್ರಕಾರ, ಒಂದು ಬಾರಿಯ ಸರ್ವಿಂಗ್‌ನ ಈ ಪೇಯದಲ್ಲಿ 38 ಗ್ರಾಂನಷ್ಟು ಸಕ್ಕರೆ ಇದ್ದು, 300ರಿಂದ 400 ಕ್ಯಾಲೊರಿ ಇರುತ್ತದೆ. 

ಬಬಲ್‌ ಟೀ ತಯಾರಿಸುವಾಗ ನೀವು ಯಾವ ಹಣ್ಣು ಆಯ್ಕೆ ಮಾಡುತ್ತೀರಿ ಮತ್ತು ಎಷ್ಟು ಸಕ್ಕರೆ ಹಾಕುತ್ತೀರಿ ಎಂಬುದರ ಮೇಲೆ ಇದು ನಿಮ್ಮ ದೇಹಾರೋಗ್ಯಕ್ಕೆ ಪೂರಕವೇ ಅಥವಾ ಇಲ್ಲವೇ ಎಂಬುದು ನಿರ್ಧರಿತವಾಗುತ್ತದೆ. ನೀವು ಅತಿಯಾಗಿ ಸಕ್ಕರೆ ಹಾಗೂ ಫ್ಲೇವರ್ ಬಳಸಿದರೆ ಖಂಡಿತಾ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಇವುಗಳನ್ನು ಅವಾಯ್ಡ್ ಮಾಡಿ ಹಣ್ಣುಗಳನ್ನು ಬಳಸಿ ತಯಾರಿಸಿದರೆ ಪೇಯವು ಸಹಜವಾಗಿಯೇ ಸಿಹಿಯಾಗುತ್ತದೆ, ಜೊತೆಗೆ ಆರೋಗ್ಯಕಾರಿ ಕೂಡಾ. ನೀವು ಆಯಾ ಸೀಸನ್‌ಗೆ ತಕ್ಕಂತೆ ಮಾವು, ಬಾಳೆಹಣ್ಣು, ಕಲ್ಲಂಗಡಿ ಮುಂತಾದ ಹಣ್ಣುಗಳನ್ನು ಇದಕ್ಕಾಗಿ ಬಳಸಬಹುದು. ಟ್ಯಾಪಿಕೋ ಪರ್ಲ್‌ಗಳಲ್ಲಿ ಪ್ರೋಟೀನ್, ವಿಟಮಿನ್ ಕೆ, ಕ್ಯಾಲ್ಶಿಯಂ ಹಾಗೂ ಪೊಟ್ಯಾಶಿಯಂ ಅಧಿಕವಾಗಿದ್ದು, ಹಾಗಾಗಿ ಈ ಬಬಲ್‌ಗಳು ಟೀಗೆ  ಹೆಚ್ಚಿನ ಪೋಷಕಾಂಶ ಒದಗಿಸುತ್ತವೆ. 

ತೂಕ ಇಳಿಸಿಕೊಳ್ಳಲು ಮಳೆಗಾಲ ಬೆಸ್ಟ್ ಟೈಮ್...

ಸಧ್ಯದ ಮಟ್ಟಿಗೆ ಬಬಲ್ ಟೀ ವೈವಿಧ್ಯಗಳಲ್ಲಿ ಭಾರತದಲ್ಲಿ ಜನಪ್ರಿಯತೆ ಪಡೆದವೆಂದರೆ ಕಾಫಿ ಬಬಲ್ ಟೀ, ಕೋಕೋನಟ್ ಬಬಲ್ ಟೀ, ಮ್ಯಾಂಗೋ ಬಬಲ್ ಟೀ, ಕ್ಲಾಸಿಕ್ ಬಬಲ್ ಟೀ ಹಾಗೂ ಸ್ಟ್ರಾಬೆರಿ ಆಲ್ಮಂಡ್ ಮಿಲ್ಕ್ ಬಬಲ್ ಟೀ. 

ಮತ್ತೇಕೆ ತಡ, ಬಬಲ್ ಟೀ ಕುಡಿದು ಎನರ್ಜಿ ಪಡೆದು ಬಬ್ಲಿ ಬಬ್ಲಿಯಾಗಿರಿ. 

Latest Videos
Follow Us:
Download App:
  • android
  • ios