ಆಹಾ! ಗ್ರೀನ್ ಟೀ, ಬ್ಲ್ಯಾಕ್ ಟೀ ಗೊತ್ತು, ಮಶ್ರೂಮ್ ಟೀ....
ಗ್ರೀನ್ ಟೀ, ಮಸಾಲಾ ಟೀ, ಲೈಮ್ ಟೀ, ಜಿಂಜರ್ ಟೀ ಮುಂತಾದವನ್ನು ಕೇಳಿಯೇ ಇರುತ್ತೀರಿ. ಆದರೆ ಮಶ್ರೂಮ್ ಟೀ ಬಗ್ಗೆ ಕೇಳಿದ್ದೀರಾ? ಅಣಬೆ ಎಂಬ ಸೂಪರ್ ಫುಡ್‌ನಲ್ಲಿ ತಯಾರಿಸುವ ಈ ಸೂಪರ್ ಸ್ವಾದಿಷ್ಟ ಚಹಾ ಒಮ್ಮೆ ಸವಿದು ನೋಡಿ.
ನಿಮ್ಮ ಹೆಲ್ತ್ ಸ್ಟೋರ್‌ಗಳಲ್ಲಿ, ಹೆಲ್ದೀ ಕೆಫೆಗಳಲ್ಲಿ ಹೊಸದೊಂದು ಟೀಯನ್ನು ನೀವೀಗ ಸವಿಯಬಹುದು. ಅದೇ ಮಶ್ರೂಮ್ ಟೀ. ಇದುವರೆಗೂ ಸೂಪ್‌ಗಳಲ್ಲಿ, ಪಿಜ್ಜಾದಲ್ಲಿ, ಮಶ್ರೂಮ್ ಮಂಚೂರಿಯಲ್ಲಿ ಅಣಬೆಗಳನ್ನು ಕಾಣುತ್ತಿದ್ದ ನಿಮಗೆ, ಏನು ಅಣಬೆಯಲ್ಲಿ ಟೀ ಮಾಡುವುದೇ ಎಂದು ಅಚ್ಚರಿಯಾಗಬಹುದು.
ಹೌದು, ಆರೋಗ್ಯಕರ ಆಹಾರಗಳಿಗಾಗಿ ಜನ ಎಡತಾಕುತಿರುವ ಈ ದಿನಗಳಲ್ಲಿ ಸೂಪರ್‌ಫುಡ್ ಎನಿಸಿಕೊಂಡಿರುವ ಅಣಬೆ ಟೀ ರೂಪದಲ್ಲೂ ಹೊಟ್ಟೆ ಸೇರುತ್ತಿದೆ. ಈ ಚಹಾದ ವಿಶೇಷತೆಯೆಂದರೆ ಸಸ್ಯಾಹಾರಿಗಳು, ವೇಗನ್ಸ್, ಮಾಂಸಾಹಾರಿಗಳು ಎಲ್ಲರೂ ಇಷ್ಟಪಟ್ಟು ತಮ್ಮದೇ ಕೆಟಗರಿಗೆ ಸೇರಿದ ಪೇಯವೆಂದುಕೊಂಡು ಇದನ್ನು ಸವಿಯಬಹುದು!
ಅಣಬೆಯ ಹಣೆಬರಹ ತಿಳಿದುಕೊಳ್ಳುವುದು ಹೇಗೆ?
ಮನೆಯಲ್ಲೇ ಮಶ್ರೂಮ್ ಟೀ ಮಾಡೋದು ಹೇಗೆ?
ಅಣಬೆಯನ್ನು ಸಣ್ಣ ಸಣ್ಣದಾಗಿ ಕತ್ತರಿಸಿಟ್ಟುಕೊಳ್ಳಿ. ಇನ್ನೊಂದೆಡೆ ನೀರನ್ನು ಕುದಿಸಿಕೊಳ್ಳಿ. ಈ ಕುದ್ದ ನೀರನ್ನು ಅಣಬೆ ತುಂಡುಗಳ ಮೇಲೆ ಹಾಕಿ ಅರ್ಧ ಗಂಟೆ ಬಿಡಿ. ನಂತರ ಆ ನೀರನ್ನು ಸೋಸಿ, ಅರ್ಧ ಚಮಚ ಜೇನುತುಪ್ಪ ಹಾಕಿಕೊಂಡು ಸೇವಿಸಿ. ಮಸಾಲಾ ಫ್ಲೇವರ್‌ಗಾಗಿ ಇದಕ್ಕೆ ನಿಂಬೆರಸ ಹಾಗೂ ಶುಂಠಿಯನ್ನೂ ಸೇರಿಸಬಹುದು. ಇನ್ನೊಂದು ವಿಧಾನವೆಂದರೆ ಅಣಬೆಗಳನ್ನು ಚೆನ್ನಾಗಿ ಒಣಗಿಸಿ ಪುಡಿ ಮಾಡಿಟ್ಟುಕೊಳ್ಳುವುದು. ಇದನ್ನು ಟೀ ಪೌಡರ್‌ನಂತೆ ಬಳಸಬಹುದು. ಅಥವಾ ಕಾಫಿ ಫಿಲ್ಟರ್‌ಗೆ ಹಾಕಿ ಪೇಯ ತಯಾರಿಸಬಹುದು. ಇಷ್ಟೇ ಅಲ್ಲದೆ, ಅಂಗಡಿಗಳಲ್ಲಿ ಕೂಡಾ ಇದೀಗ ಅಣಬೆ ಟೀ ಬ್ಯಾಗ್‌ಗಳು ದೊರೆಯುತ್ತವೆ. ಅವನ್ನು ತಂದಿಟ್ಟುಕೊಂಡರೆ, ಬಿಸಿನೀರಿಗೆ ಅದ್ದಿ ತೆಗೆದು ಕುಡಿದರಾಯ್ತು. ಇದನ್ನು ಆಹಾರ ಎನ್ನುವುದಕ್ಕಿಂತ ಸಪ್ಲಿಮೆಂಟ್ ಎಂದು ಪರಿಗಣಿಸಲಾಗುತ್ತಿದೆ ಎಂದರೆ ಇದರ ಲಾಭಗಳೆಷ್ಟಿರಬಹುದು ನೀವೇ ಯೋಚಿಸಿ.
ಗ್ರೀನ್ ಟೀ ಆಯ್ತು ಈಗ ಗ್ರೀನ್ ಕಾಫಿ!: ದೇಹದ ತೂಕ ಇಳಿಕೆಗೆ ಬೆಸ್ಟ್!
ಅಣಬೆಯಿಂದ ಆರೋಗ್ಯ
ಇದು ದಣಿದ ಮನಸಿಗೆ ಮುದ ನೀಡುವುದಷ್ಟೇ ಅಲ್ಲ, ಆರೋಗ್ಯಕ್ಕೂ ಹಲವು ಲಾಭಗಳನ್ನು ತಂದುಕೊಡುತ್ತದೆ. ಅಣಬೆಯೆಂಬ ಶಿಲೀಂಧ್ರಗಳನ್ನು ಆರೋಗ್ಯಕರ ಲಾಭಕ್ಕಾಗಿ ಬಳಸುವುದು ನಮ್ಮ ದೇಶದಲ್ಲಿ ಸಾವಿರಾರು ವರ್ಷಗಳಿಂದಲೂ ನಡೆದುಕೊಂಡು ಬಂದಿದೆ. ಆಯುರ್ವೇದ ಹಾಗೂ ಸಾಂಪ್ರದಾಯಿಕ ಚೀನೀಯರು ಅಣಬೆಗಳನ್ನು ಅಡಾಪ್ಟೋಜನ್ಸ್ ಎಂದು ಕರೆಯುತ್ತಿದ್ದರು. ಕಾರಣ, ಅವು ನಿಮ್ಮ ಬಾಡಿಯನ್ನು ಒತ್ತಡಕ್ಕೆ ಅಡಾಪ್ಟ್(ಹೊಂದಿಕೊಳ್ಳಲು) ಆಗಲು ಸಹಾಯ ಮಾಡುತ್ತವೆ ಎಂದು.
ಪಾಶ್ಚಾತ್ಯರೂ ಈಗ ಈ ವಿಷಯದಲ್ಲಿ ನಮ್ಮನ್ನು ಅನುಕರಿಸುತ್ತಿದ್ದಾರೆ. ಏಕೆಂದರೆ ಅಣಬೆ ರೋಗ ನಿರೋಧಕ ಶಕ್ತಿ ಹೆಚ್ಚಿಸಿ, ಒತ್ತಡ ತಗ್ಗಿಸುತ್ತದೆ. ಉತ್ತಮ ನಿದ್ರೆ ತಂದು ಕೊಟ್ಟು ಆಯಾಸ ಇಳಿಸುತ್ತದೆ. ದೇಹದ ಶಕ್ತಿ ಹೆಚ್ಚಿಸಿ, ಟ್ಯೂಮರ್ ಬೆಳೆಯದಂತೆ ನೋಡಿಕೊಳ್ಳುತ್ತದೆ. ಅಷ್ಟೇ ಅಲ್ಲ, ರಕ್ತದೊತ್ತಡ ತಗ್ಗಿಸಿ, ದೇಹದ ಸಕ್ಕರೆ ಮಟ್ಟವನ್ನು ಹದವಾಗಿಡುತ್ತದೆ. ವೈರಸ್ ವಿರುದ್ಧ ಹೋರಾಡಿ, ನರಮಂಡಲವನ್ನು ಆರೋಗ್ಯಕಾರಿಯಾಗಿಡುತ್ತದೆ. ಮೂಳೆ ಹಾಗೂ ಸ್ನಾಯುಗಳನ್ನೂ ಬಲಪಡಿಸುತ್ತದೆ. ಸಂಕಟ ಉಪಶಮನ ಮಾಡುತ್ತವೆ...
ಬ್ಲ್ಯಾಕ್ ಅಲ್ಲ, ಆರೋಗ್ಯಕ್ಕೆ ಬ್ಲೂ ಟೀ
ಊಫ್, ಹೇಳುತ್ತಾ ಹೋದರೆ ಅಣಬೆಯ ಲಾಭಗಳು ಮುಗಿಯಲಾರವು. ಮಶ್ರೂಮ್‌ನಲ್ಲಿರುವ ಫೈಟೋಕೆಮಿಕಲ್‌ಗಳು ರೋಗಗಳ ವಿರುದ್ಧ ಹೋರಾಡುವುದರಲ್ಲಿ ಎತ್ತಿದ ಕೈ. ಅದಕ್ಕೇ ಇದು ಸೂಪರ್ ಫುಡ್ ಎನಿಸಿಕೊಂಡಿರುವುದು. ಅದೇ ಕಾರಣಕ್ಕೆ ಈಗ ಅಣಬೆಯ ಕುರಿತ ಸಂಶೋಧನೆಗೆ ಆರೋಗ್ಯತಜ್ಞರು ಆಸಕ್ತಿ ತೋರಿಸುತ್ತಿರುವುದು.
ಎಚ್ಚರ ಎಚ್ಚರ
ಅಣಬೆಯಲ್ಲೂ ವಿಷ ಅಣಬೆಗಳು, ಮಾದಕ ಅಣಬೆಗಳಿವೆ. ಇವುಗಳನ್ನು ಸೇವಿಸಿದಾಗ ಅಲರ್ಜಿ, ಹೊಟ್ಟೆನೋವು, ಸಂಕಟ, ತಲೆನೋವು ಮುಂತಾದ ಲಕ್ಷಣಗಳು ಕಾಣಸಿಕೊಳ್ಳಬಹುದು. ಹೀಗಾಗಿ, ಉತ್ತಮವಾದ, ಆರೋಗ್ಯಕಾರಿ ಅಣಬೆ ಯಾವುದು ಎಂದು ಗುರುತಿಸಿ, ಮನೆಯಲ್ಲೇ ಬೆಳೆಸಿ ಬಳಸುವುದು ಉತ್ತಮ. ಸಾಮಾನ್ಯವಾಗಿ ಮರಗಳಲ್ಲಿ ಬೆಳೆವ ಚಾಗಾ, ಹೆಸರಿಗೆ ತಕ್ಕಂತೆ ಕೊಡೆ ಸುತ್ತ ಅಗಲ ಹರಡುವ ಲಯನ್ಸ್ ಮೇನ್ ಹಾಗೂ ಕೊಳೆತ ಮರಗಳ ಮೇಲೆ ಬೆಳೆವ ರೇಶಿ ಜಾತಿಯ ಅಣಬೆಗಳನ್ನು ತಿನ್ನಲು ಬಳಸಲಾಗುತ್ತದೆ.