Indian trains X mark: ಕೊನೆಯ ಕೋಚ್‌ನಲ್ಲಿ ಎರಡು ಬಣ್ಣದ ಧ್ವಜಗಳನ್ನು ಹಿಡಿದುಕೊಂಡು ಒಬ್ಬ ವ್ಯಕ್ತಿ ನಿಂತಿರುತ್ತಾನೆ. ನಮಗೆಲ್ಲಾ ಈ ಧ್ವಜಗಳ ಬಣ್ಣಗಳ ಅರ್ಥ ತಿಳಿದಿದೆ. ಆದರೆ ರೈಲಿನ ಕೊನೆಯ ಬೋಗಿಯಲ್ಲಿ ಹೆಚ್ಚಾಗಿ ಇಂಗ್ಲಿಷ್ ಅಕ್ಷರ X ಇರುತ್ತದೆ. ಹಾಗೆಯೇ ಸ್ವಲ್ಪ ಕೆಳಗೆ LV ಎಂದು ಬರೆದಿರಲಾಗುತ್ತದೆ. 

ಮ್ಮ ದೇಶದಾದ್ಯಂತ ಹೆಚ್ಚಿನ ಜನರು ರೈಲಿನಲ್ಲಿ ಪ್ರಯಾಣಿಸುತ್ತಾರೆ. ಇದಕ್ಕೆ ಕಾರಣ ರೈಲು ಪ್ರಯಾಣವು ತುಂಬಾ ಸುರಕ್ಷಿತ ಮತ್ತು ಆರಾಮದಾಯಕ. ಇಂದಿಗೂ ನಮ್ಮ ದೇಶದಲ್ಲಿ ಲಕ್ಷಾಂತರ ಜನರು ರೈಲಿನಲ್ಲಿ ಪ್ರಯಾಣಿಸಲು ಬಯಸುತ್ತಾರೆ. ಇದಲ್ಲದೆ ರೈಲಿನಲ್ಲಿ ಪ್ರಯಾಣಿಸಲು ಟಿಕೆಟ್ ಬೆಲೆಗಳು ಕಡಿಮೆ. ಅದಕ್ಕಾಗಿಯೇ ಅನೇಕ ಜನರು ರೈಲಿನಲ್ಲಿ ಪ್ರಯಾಣಿಸಲು ಬಯಸುತ್ತಾರೆ.

ಅಂದಹಾಗೆ ನಾವು ರೈಲಿನಲ್ಲಿ ಪ್ರಯಾಣಿಸುವಾಗ ಅಥವಾ ರೈಲು ನಿಲ್ದಾಣಕ್ಕೆ ಭೇಟಿ ನೀಡಿದಾಗಲೆಲ್ಲಾ ಅಲ್ಲಿ ನಿಂತಿರುವ ರೈಲುಗಳನ್ನು ಗಮನಿಸುತ್ತೇವೆ. ರೈಲು ನಮ್ಮ ಮುಂದೆ ಹಾದುಹೋದಾಗ ನಮ್ಮ ಲುಕ್ ಆಗಾಗ್ಗೆ ಕೊನೆಯ ಕೋಚ್‌ನತ್ತ ಹೋಗುತ್ತದೆ. ಕೊನೆಯ ಕೋಚ್‌ನಲ್ಲಿ ಎರಡು ಬಣ್ಣದ ಧ್ವಜಗಳನ್ನು ಹಿಡಿದುಕೊಂಡು ಒಬ್ಬ ವ್ಯಕ್ತಿ ನಿಂತಿರುತ್ತಾನೆ. ನಮಗೆಲ್ಲಾ ಈ ಧ್ವಜಗಳ ಬಣ್ಣಗಳ ಅರ್ಥ ತಿಳಿದಿದೆ. ಆದರೆ ರೈಲಿನ ಕೊನೆಯ ಬೋಗಿಯಲ್ಲಿ ಹೆಚ್ಚಾಗಿ ಇಂಗ್ಲಿಷ್ ಅಕ್ಷರ X ಇರುತ್ತದೆ. ಹಾಗೆಯೇ ಸ್ವಲ್ಪ ಕೆಳಗೆ LV ಎಂದು ಬರೆದಿರಲಾಗುತ್ತದೆ.

ಅಲ್ಲೇಕೆ ಬರೆಯಲಾಗುತ್ತದೆ?

ನಿಲ್ದಾಣದಲ್ಲಿ ಸಾಮಾನ್ಯವಾಗಿ ನಾವು ಆತುರದಲ್ಲಿರುತ್ತೇವೆ. ಆದ್ದರಿಂದ ಇಂತಹ ವಿಷಯಗಳನ್ನು ಕಡೆಗಣಿಸುತ್ತೇವೆ. ಆದರೆ ನಾವು ಅಂತಹ ಸಣ್ಣ, ಕೆಲವು ಮುಖ್ಯವಾದ ವಿಷಯಗಳನ್ನು ಕಡೆಗಣಿಸಬಾರದು. ಒಂದು ವೇಳೆ ಸಂದೇಹ ಬಂದರೂ ಅದೇನೆಂದು ತಿಳಿದುಕೊಳ್ಳಲು ಪ್ರಯತ್ನಿಸಬೇಕು. ಸದ್ಯ ನಾವು ರೈಲು ಬೋಗಿಗಳ ಹಿಂಭಾಗದಲ್ಲಿರುವ X ಮತ್ತು LV ಅಕ್ಷರಗಳ ಬಗ್ಗೆ ತಿಳಿದುಕೊಳ್ಳೋಣ. ಈ ಚಿಹ್ನೆಗಳನ್ನು ಅಲ್ಲೇಕೆ ಬರೆಯಲಾಗುತ್ತದೆ?, ಅವುಗಳ ಅರ್ಥವೇನೆಂದು ಇಲ್ಲಿ ನೋಡೋಣ..

ಪ್ರಯಾಣಿಕರ ಸುರಕ್ಷತೆ ಮತ್ತು ಭದ್ರತೆಗಾಗಿ ರೈಲ್ವೆ ಹಲವು ರೀತಿಯ ನೀತಿ ನಿಯಮಗಳನ್ನು ಮಾಡಿದೆ. ಅಂತಹ ಒಂದು ನಿಯಮವೆಂದರೆ ಪ್ರತಿ ರೈಲಿನ ಕೊನೆಯ ಕೋಚ್‌ನಲ್ಲಿ X ಅಕ್ಷರ ಇರುತ್ತದೆ. ರೈಲ್ವೆ ನೌಕರರು ಮಾತ್ರ ಈ ಚಿಹ್ನೆಯನ್ನು ಸುಲಭವಾಗಿ ಅರ್ಥಮಾಡಿಕೊಳ್ಳುತ್ತಾರೆ. ಸಾಮಾನ್ಯವಾಗಿ ರೈಲುಗಳಲ್ಲಿ ಅನೇಕ ಬೋಗಿಗಳಿದ್ದು, ನೂರಾರು ರೈಲುಗಳು ಪ್ರತಿದಿನ ಒಂದೇ ನಿಲ್ದಾಣದ ಮೂಲಕ ಹಾದು ಹೋಗುತ್ತವೆ. ಆಗ ಅದರ ಕೋಚ್‌ಗಳು, ಕಂಪಾರ್ಟ್‌ಮೆಂಟ್‌ ಎಣಿಸಲು ಸಾಧ್ಯವಿಲ್ಲ. ಆದ್ದರಿಂದಲೇ ಕೊನೆಯ ಕೋಚ್‌ ಮೇಲೆ ಈ ರೀತಿ ಮಾರ್ಕ್ ಮಾಡಲಾಗುತ್ತದೆ. ನಾವದನ್ನು ನೋಡಿದಾಗ ಇಡೀ ರೈಲು ಇತ್ತ ಹಾದುಹೋಗಿದೆ ಎಂದು ತಿಳಿಯುತ್ತದೆ.

ಈ ಮೂರು ಗುರುತುಗಳು ಸಾಮಾನ್ಯ

ಎಲ್ಲಾ ರೈಲು ಕೋಚ್‌ಗಳು ನಿಲ್ದಾಣವನ್ನು ದಾಟಿದೆ ಮತ್ತು ಅದರ ಎಲ್ಲಾ ಬೋಗಿಗಳು ಸುರಕ್ಷಿತ ಮತ್ತು ಸುಭದ್ರವಾಗಿವೆ ಮತ್ತು ಯಾವುದೇ ಅಪಘಾತ ಸಂಭವಿಸಿಲ್ಲ ಎಂದು ರೈಲ್ವೆ ಸಿಬ್ಬಂದಿ ತಿಳಿದಿರಲೇಬೇಕು. ಪ್ರತಿ ನಿಲ್ದಾಣದಲ್ಲಿ ಸಂಬಂಧಪಟ್ಟ ಸಿಬ್ಬಂದಿ ಈ ಬೋಗಿಗಳನ್ನು ಪರಿಶೀಲಿಸುತ್ತಾರೆ. ಇದರ ಆಧಾರದ ಮೇಲೆ ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ಹಾಜರಿರುವ ವ್ಯಕ್ತಿಯು ರೈಲಿನ ಕೊನೆಯ ಬೋಗಿಯಲ್ಲಿ ಧ್ವಜಗಳೊಂದಿಗೆ ನಿಂತಿರುವ ವ್ಯಕ್ತಿಗೆ ತನ್ನಲ್ಲಿರುವ ಧ್ವಜಗಳ ಮೂಲಕ ಸಂಕೇತ ನೀಡುತ್ತಾನೆ.

ಇದು ಮಾತ್ರವಲ್ಲದೆ, ಕೊನೆಯ ಬೋಗಿಯ ಮೇಲೆ ಬೋರ್ಡ್‌ನಂತಹ ಪ್ಲೇಟ್ ಇದೆ. ಅದರ ಮೇಲೆ LV ಎಂದು ಇಂಗ್ಲಿಷ್‌ನಲ್ಲಿ ಬರೆಯಲಾಗಿದೆ. ಈ LV ಎಂದರೆ ಕೊನೆಯ ವಾಹನ ಎಂದರ್ಥ. ಇದು ರೈಲಿನ ಕೊನೆಯ ಬೋಗಿ ಎಂದು ಸಹ ಸೂಚಿಸುತ್ತದೆ.

X ಮತ್ತು LV ಜೊತೆಗೆ ಕೊನೆಯ ಕೋಚ್‌ನ ಬಗ್ಗೆ ಸೂಚಿಸುವ ಮತ್ತೊಂದು ಚಿಹ್ನೆ ಇದೆ. ಇದು ಕೊನೆಯ ಕೋಚ್‌ನಲ್ಲಿ ದುಂಡಗಿನ, ರೇಡಿಯಂ ಆಕಾರದ ದೀಪವಾಗಿದೆ. ಇದು ಕೊನೆಯ ಕೋಚ್‌ಗೆ ಸಂಕೇತವಾಗಿಯೂ ಕಾರ್ಯನಿರ್ವಹಿಸುತ್ತದೆ.

ರೈಲಿನ ಕೊನೆಯ ಕೋಚ್‌ನಲ್ಲಿ ಈ ಮೂರು ಗುರುತುಗಳು ಅಂದರೆ X ಅಥವಾ ಎಲ್‌ವಿ ಗುರುತುಗಳು ಇಲ್ಲದಿದ್ದರೆ ರೈಲು ತುರ್ತು ಪರಿಸ್ಥಿತಿಯಲ್ಲಿದೆ ಎಂದು ಅರ್ಥ ಮಾಡಿಕೊಳ್ಳಬೇಕು ಅಥವಾ ಒಂದು ಕೋಚ್ ಬೇರ್ಪಟ್ಟು ಹಿಂದೆ ಉಳಿದಿದೆ ಎಂಬ ಅನುಮಾನ ವ್ಯಕ್ತವಾಗುತ್ತದೆ. ಅಂತಹ ಸಂದರ್ಭದಲ್ಲಿ ಉನ್ನತ ಅಧಿಕಾರಿಗಳಿಗೆ ತಕ್ಷಣವೇ ಮಾಹಿತಿ ನೀಡಲಾಗುತ್ತದೆ.