ಮಧ್ಯಪ್ರದೇಶದ ಅಶೋಕನಗರದಲ್ಲಿ ನಾಯಿಯೊಂದು ರಕ್ತದಾನ ಮಾಡಿ ಮತ್ತೊಂದು ನಾಯಿಯ ಜೀವ ಉಳಿಸಿದೆ. ಗರ್ಭಿಣಿಯಾಗಿದ್ದ ಡೈಸಿ ಎಂಬ ನಾಯಿಗೆ ರಕ್ತಸ್ರಾವವಾಗಿ ರಕ್ತದ ಮಟ್ಟ ಕಡಿಮೆಯಾಗಿತ್ತು. ಪಶುವೈದ್ಯರು ರಕ್ತದ ಅವಶ್ಯಕತೆ ತಿಳಿಸಿದರು. ಸಮಾಜ ಸೇವಕರು ಪೊಲೀಸ್ ಪೇದೆಗಳ ಸಹಾಯದಿಂದ ಗೂಗಲ್ ಎಂಬ ನಾಯಿಯಿಂದ ರಕ್ತದಾನ ಮಾಡಿಸಿ ಡೈಸಿಯ ಜೀವ ಉಳಿಸಿದರು. ನಾಯಿಗಳಲ್ಲಿ ರಕ್ತದ ಪ್ರಕಾರಗಳು ಸಂಕೀರ್ಣವಾಗಿವೆ.

ರಕ್ತ ದಾನ (blood donation ) ವನ್ನು ಮಹಾ ದಾನ ಎಂದೇ ಕರೆಯಲಾಗುತ್ತದೆ. ಮನುಷ್ಯರು ರಕ್ತ ದಾನ ಮಾಡೋದು ಸಾಮಾನ್ಯ ಸಂಗತಿ. ಆದ್ರೆ ಮೂಖ ಪ್ರಾಣಿಯೊಂದು ಇನ್ನೊಂದು ಪ್ರಾಣಿಯ ಪ್ರಾಣ ಉಳಿಸಲು ರಕ್ತ ದಾನ ಮಾಡಿದ ಘಟನೆ ಇದೇ ಮೊದಲ ಭಾರಿ ಬೆಳಕಿಗೆ ಬಂದಿದೆ. ಮಧ್ಯಪ್ರದೇಶದ ಅಶೋಕನಗರದಲ್ಲಿ ನಾಯಿ (dog) ಯೊಂದು ರಕ್ತ ದಾನ ಮಾಡಿ, ಸಾವು- ಬದುಕಿನ ಮಧ್ಯೆ ಹೋರಾಡುತ್ತಿದ್ದ ನಾಯಿಯ ಜೀವ ಉಳಿಸಿದೆ. 

ಮಾಹಿತಿ ಪ್ರಕಾರ, ಅಶೋಕ್ ನಗರ ನಿವಾಸಿ ಸೋನು ರಘುವಂಶಿ ಅವರಿಗೆ ಎರಡು ವರ್ಷದ ಡೈಸಿ ಎಂಬ ಹೆಣ್ಣು ಲ್ಯಾಬ್ರಡಾರ್ ನಾಯಿ ಇದೆ. ಡೈಸಿ ಸುಮಾರು 35 ದಿನಗಳ ಗರ್ಭಿಣಿಯಾಗಿದ್ದಳು. ಕಳೆದ ಕೆಲವು ದಿನಗಳಿಂದ ಅವಳ ಖಾಸಗಿ ಭಾಗಗಳಿಂದ ನಿರಂತರ ರಕ್ತಸ್ರಾವ (Bleeding)ವಾಗುತ್ತಿತ್ತು. ಸೋನು ಮತ್ತು ಅವರ ಕುಟುಂಬದವರು ತಕ್ಷಣ ಡೈಸಿಯನ್ನು ಅಶೋಕನಗರದಲ್ಲಿರುವ ಸರ್ಕಾರಿ ಪಶುವೈದ್ಯಕೀಯ ಆಸ್ಪತ್ರೆಗೆ ದಾಖಲಿಸಿದ್ದರು. ಡೈಸಿ ಹೊಟ್ಟೆಯಲ್ಲಿದ್ದ ಎಲ್ಲ ನಾಯಿ ಮರಿಗಳು ಅಲ್ಲೇ ಸಾವನ್ನಪ್ಪಿದ್ದರಿಂದ ಅವುಗಳನ್ನು ತೆಗೆಯುವುದು ಅನಿವಾರ್ಯವಾಗಿತ್ತು. ಇದ್ರಿಂದ ಅತಿಯಾದ ರಕ್ತಸ್ರಾವ ಆಗಿತ್ತು. ನಾಯಿಯ ರಕ್ತದ ಮಟ್ಟವು ಗಮನಾರ್ಹವಾಗಿ ಕಡಿಮೆಯಾಯ್ತು. ರಕ್ತ ಪರೀಕ್ಷೆಯ ಸಮಯದಲ್ಲಿ, ಪಶುವೈದ್ಯ ಶಿವೇಂದ್ರ ಅಗರ್ವಾಲ್, ನಾಯಿಯ ರಕ್ತದಲ್ಲಿನ ಸಕ್ಕರೆ ಮಟ್ಟವು ಅಪಾಯಕಾರಿಯಾಗಿ ಕಡಿಮೆಯಾಗಿದೆ ಎಂಬುದನ್ನು ಪತ್ತೆ ಮಾಡಿದ್ರು. ಹೆಣ್ಣು ನಾಯಿಗೆ ರಕ್ತದ ಅವಶ್ಯಕತೆ ಇತ್ತು. ರಕ್ತ ನೀಡದೆ ಶಸ್ತ್ರಚಿಕಿತ್ಸೆ ಅಸಾಧ್ಯ ಹಾಗೂ ನಾಯಿ ಬದುಕುವ ಸಾಧ್ಯತೆ ಕೂಡ ಕಡಿಮೆ ಎಂದು ವೈದ್ಯರು ಹೇಳಿದ್ದರು. 

ಬೆಂಗಳೂರಿನಲ್ಲಿ ನಾಯಿ ಜೊತೆ ವಾಕ್ ಮಾಡ್ತೀರಾ ಹುಷಾರ್: ನಿಮ್ಮ ನಾಯಿನೂ

 ಡಾ. ಅಗರ್ವಾಲ್, ಸೋನು ಅವರಿಗೆ ತಕ್ಷಣವೇ 3 ಯೂನಿಟ್ ರಕ್ತದ ವ್ಯವಸ್ಥೆ ಮಾಡುವಂತೆ ಹೇಳಿದ್ದರು. ಆತಂಕದಲ್ಲಿದ್ದ ಸೋನು ತಕ್ಷಣ, ಸ್ಥಳೀಯ ಸಮಾಜ ಸೇವಕ ಪ್ರಿಯಶ್ ಶರ್ಮಾ ಅವರನ್ನು ಸಂಪರ್ಕಿಸಿದ್ದಾರೆ. ಪ್ರಿಯೇಶ್ ಅವರು ರಕ್ತ ಸಹಾಯ ಗುಂಪಿನ ಸಕ್ರಿಯ ಸದಸ್ಯರಾಗಿರುವ ಪೊಲೀಸ್ ಪೇದೆಗಳಾದ ಹರೇಂದ್ರ ರಘುವಂಶಿ ಮತ್ತು ಕೃಷ್ಣ ರಘುವಂಶಿ ಅವರನ್ನು ಸಂಪರ್ಕಿಸಿದ್ರು. ಆ ನಂತ್ರ ಹರೇಂದ್ರ ಮತ್ತು ಕೃಷ್ಣ ರಘುವಂಶಿ ತಮ್ಮ ಸಾಕು ನಾಯಿ ಗೂಗಲ್ನೊಂದಿಗೆ ಜಿಲ್ಲಾ ಪಶುವೈದ್ಯಕೀಯ ಆಸ್ಪತ್ರೆಗೆ ಬಂದಿದ್ದರು. ರಕ್ತದ ಗುಂಪುಗಳನ್ನು ಹೊಂದಿಸಿದ ನಂತರ, ವೈದ್ಯರಾದ ಶಿವೇಂದ್ರ ಅಗರ್ವಾಲ್ ಮತ್ತು ತ್ರಿಪ್ತಿ ಲೋಧಿ ರಕ್ತ ವರ್ಗಾವಣೆಯನ್ನು ಯಶಸ್ವಿಯಾಗಿ ಮುಗಿಸಿದ್ರು. ಇದು ಬಹುಶಃ ಜಿಲ್ಲೆಯಲ್ಲಿ ಮೊದಲ ಪ್ರಾಣಿ ರಕ್ತ ವರ್ಗಾವಣೆಯಾಗಿದೆ ಎಂದು ವೈದ್ಯರು ಹೇಳಿದ್ದಾರೆ. 

ವೈದ್ಯರು ಹಾಗೂ ನಾಯಿ ಮಾಲಿಕರ ನಿರಂತರ ಪ್ರಯತ್ನದಿಂದ ಹೆಣ್ಣು ನಾಯಿ ಬದುಕುಳಿದಿದೆ. ಪ್ರಾಣಿಗಳ ಜೀವ ಉಳಿಸಲು ರಕ್ತದ ಅವಶ್ಯಕತೆ ಇರುತ್ತದೆ. ನಿಮ್ಮ ನಾಯಿಗಳ ರಕ್ತವನ್ನು ದಾನ ಮಾಡಿ ಎಂದು ಪ್ರಿಯೇಶ್ ಶರ್ಮಾ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. 

ನಾಯಿ ಕಡಿದು ಆರು ತಿಂಗಳ ಬಳಿಕ ವ್ಯಕ್ತಿ ಸಾವು! ಪಪ್ಪಿ ಲವರ್ಸ್ ಇದನ್ನ ಅಲಕ್ಷ್ಯ

ನಾಯಿಗಳ ರಕ್ತ ವರ್ಗಾವಣೆ ಹೇಗೆ? : ಗಂಭೀರ ಸ್ಥಿತಿಯಲ್ಲಿದ್ದ ನಾಯಿಗೆ ಆರೋಗ್ಯಕರ ನಾಯಿಯ ರಕ್ತ ನೀಡಿ ಬದುಕಿಸಬಹುದು. ಆದ್ರೆ ಮನುಷ್ಯರಷ್ಟು ಸುಲಭದ ಕೆಲಸ ಇದಲ್ಲ. ನಾಯಿಗಳು ಮನುಷ್ಯರಿಗಿಂತ ವಿಭಿನ್ನ ರಕ್ತದ ಪ್ರಕಾರಗಳನ್ನು ಹೊಂದಿರುತ್ತವೆ. ಅವುಗಳ ಪ್ರಕಾರಗಳು ಹೆಚ್ಚು ಸಂಕೀರ್ಣವಾಗಿವೆ. ಇಲ್ಲಿಯವರೆಗೆ ಒಂದು ಡಜನ್ಗಿಂತಲೂ ಹೆಚ್ಚು ವಿಭಿನ್ನರಕ್ತದ ಪ್ರಕಾರಗಳನ್ನು ಕಂಡುಹಿಡಿಯಲಾಗಿದೆ. ಈ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಯುತ್ತಿದ್ದು, ರಕ್ತ ಪ್ರಕಾರ ಹೆಚ್ಚಾಗುವ ಸಾಧ್ಯತೆ ಇದೆ. ಪ್ರತಿಯೊಂದು ರಕ್ತದ ಗುಂಪನ್ನು ಸ್ವತಂತ್ರವಾಗಿ ಆನುವಂಶಿಕವಾಗಿ ಪಡೆಯಲಾಗುತ್ತದೆ. ಅಂದರೆ ನಾಯಿಯು 12+ ರಕ್ತ ಗುಂಪುಗಳ ಯಾವುದೇ ಸಂಯೋಜನೆಯನ್ನು ಹೊಂದಿರಬಹುದು.