Asianet Suvarna News Asianet Suvarna News

ಗೊರಕೆ ಸಮಸ್ಯೆಯಿಂದ ರಾತ್ರಿ ನಿದ್ದೆ ಬರುತ್ತಿಲ್ಲವೇ?

ಸಾಮಾನ್ಯವಾಗಿ ಬಹುತೇಕರಲ್ಲಿ ಗೊರಕೆ ಸಮಸ್ಯೆಯಿದೆ. ರಾತ್ರಿ ಮಲಗಿದ್ದಾಗ ಜೋರಾಗಿ ಗೊರಕೆ ಹೊಡೆಯುತ್ತಾರೆ. ಇದರಿಂದ ಹೊರ ಬರುವುದು ಹೇಗೆ? ಏನು ಮಾಡಬೇಕು? ಇಲ್ಲಿದೆ ಪರಿಹಾರ

Know the things about snoring problem
Author
Bengaluru, First Published Aug 1, 2018, 4:07 PM IST

ಗೊರಕೆ ಹೊಡೆಯುವುದು ಸಾಮಾನ್ಯ , ಅದರಿಂದ ಏನು  ತೊಂದರೆ ಇಲ್ಲ. ಕೇವಲ ಪಕ್ಕದಲ್ಲಿದ್ದವರಿಗೆ ಮಾತ್ರ ತೊಂದರೆ ಎಂದು ನೀವು  ಅಂದುಕೊಂಡರೆ ಅದು ಖಂಡಿತ ತಪ್ಪು. ಯಾಕೆಂದರೆ ಕೆಲವೊಮ್ಮ  ಉಸಿರಾಠದ ಸಮಸ್ಯೆ ಜೋರಾಗಿ ಉಸಿರು ಕಟ್ಟಬಹುದು. ಇದರಿಂದ ಸಾವು  ಸಂಭವಿಸುವ ಸಾಧ್ಯತೆ ಇದೆ. ಈ ಸಮಸ್ಯೆ ನಿವಾರಣೆಗೆ ನಿಮ್ಮ ಜೀವನ ಶೈಲಿಯಲ್ಲಿ ಕೆಲವೊಂದು ಬದಲಾವಣೆ ತಂದರೆ ಸಾಕು. 

- ನಿಮ್ಮ ತೂಕ ತುಂಬಾ ಹೆಚ್ಚಾಗಿದ್ದರೆ ತೂಕ ಇಳಿಸಿಕೊಳ್ಳಿ . ಇದರಿಂದ ಗೊರಕೆ ಕಡಿಮೆಯಾಗುತ್ತದೆ. 

-ತಲೆಯನ್ನು ಸ್ವಲ್ಪ ಎತ್ತರದಲ್ಲಿಟ್ಟು ಮಲಗಿದರೆ ಗೊರಕೆ ಸಮಸ್ಯೆ ಕಡಿಮೆಯಾಗುತ್ತದೆ. 

-ಬೆನ್ನ ಮೇಲೆ ಮಲಗುವ ಬದಲು ಮಗ್ಗುಲಾಗಿ ಮಲಗಿದರೂ ಕೂಡ ಗಂಟಲ ಮೇಲೆ ಒತ್ತಡ ಬೀಳದೆ ಗೊರಕೆ ಕಡಿಮೆಯಾಗುತ್ತದೆ. 

-ಅಲರ್ಜಿ ಮೊದಲಾದ ಸಮಸ್ಯೆ ಕಂಡು ಬಂದರೆ ಶೀಘ್ರದಲ್ಲೇ ಅದಕ್ಕೆ ಪರಿಹಾರ ನೀಡಿ. ಇಲ್ಲದಿದ್ದರೆ ಗೊರಕೆ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ.  ಮೂಗು ಕಟ್ಟಿಕೊಂಡು ಬಾಯಿಯಿಂದ ಉಸಿರಾಡಬೇಕಾಗುತ್ತದೆ. ಇದು ಕೂಡ ಗೊರಕೆಗೆ ಕಾರಣವಾಗುತ್ತದೆ. 

- ಮಲಗುವ ಮುನ್ನ ಯಾವುದೇ ಕಾರಣಕ್ಕೆ ಆಲ್ಕೋಹಾಲ್ ಸೇವಿಸಬೇಡಿ. ಇದರಿಂದ ಗೊರಕೆ ಸಮಸ್ಯೆ ಕಾಡುತ್ತದೆ. 

-ಉಸಿರಾಟದ ತೊಂದರೆಯಿಂದ ಉಸಿರುಗಟ್ಟುವ ಅಪಾಯವಿದೆ. ಅಂತಹ ಸಂದರ್ಭದಲ್ಲಿ ಕೂಡಲೇ ತಜ್ಞ ವೈದ್ಯರನ್ನು ಸಂಪರ್ಕಿಸಬೇಕು.

-ಸ್ಮೋಕ್ ಮಾಡುವುದನ್ನು ಅವಾಯ್ಡ್ ಮಾಡಿ. ಹೀಗೆ ಮಾಡಿದರೆ ಉಸಿರಾಟದ ಸಮಸ್ಯೆ ಕಡಿಮೆಯಾಗಿ ಗೊರಕೆ ಉಂಟಾಗುವುದಿಲ್ಲ. 

- ಚೆನ್ನಾಗಿ ನಿದ್ದೆ ಮಾಡಿ. ನಿದ್ರೆಯ ಕೊರತೆಯಿಂದ ಈ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ . 

-ದಿಂಬಿನಲ್ಲಿರುವ ಕೊಳೆಯಿಂದಾಗಿ ಅಲರ್ಜಿ ಉಂಟಾಗಿ ಗೊರಕೆ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ದಿಂಬನ್ನು ಬದಲಾಯಿಸಿ. 

- ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಸೇವಿಸಿ. ಇದರಿಂದ ದೇಹದಲ್ಲಿ ತೇವಾಂಶ ಕೂಡಿರುತ್ತದೆ. ಗೊರಕೆ ಸಮಸ್ಯೆ ಕಾಡುವುದಿಲ್ಲ 

 

Follow Us:
Download App:
  • android
  • ios