userpic
user icon
0 Min read

Natural Hair Care: ಯಾವ ಹೇರ್ ಡೈ ಬೇಡ, ಕೂದಲು ಕಪ್ಪಾಗಲು ಎಣ್ಣೆಯನ್ನು ಮನೆಯಲ್ಲಿಯೇ ತಯಾರಿಸಿ

DIY Hair Oil for Naturally Darker Hair

Synopsis

ನಿಮ್ಮ ಸೌಂದರ್ಯ ಹೆಚ್ಚಲು ತ್ವಚೆಯ ಜೊತೆಗೆ ಕೂದಲ ಕಡೆಗೂ ಸ್ವಲ್ಪಗಮನಹರಿಸಿ. ಅದರಲ್ಲೂ ಕಡು ಕಪ್ಪು ಕೂದಲು ಬಯಸುವವರು ಸೌಂದರ್ಯ ತಜ್ಞರು ಸೂಚಿಸಿರುವ ಈ ವಿಶೇಷ ಟಿಪ್ಸ್ ಅನುಸರಿಸಿದರೆ ನಿಮಗೆ ತಿಳಿಯಲಿದೆ ಇದರ ಮ್ಯಾಜಿಕ್.

ಹೆಚ್ಚಿನ ಮಹಿಳೆಯರು/ಪುರುಷರು ತಮ್ಮ ಕೂದಲಿನ ಸೌಂದರ್ಯವನ್ನು ಕಾಪಾಡಿಕೊಳ್ಳಲು ಅನೇಕ  ಮನೆ ಮದ್ದುಗಳನ್ನು ಪ್ರಯತ್ನಿಸುತ್ತಾರೆ. ಈ ಪೈಕಿ ಕೆಲವರು ಮಾರುಕಟ್ಟೆಯಲ್ಲಿ ಲಭ್ಯವಿರುವ ಅನೇಕ ದುಬಾರಿ ಉತ್ಪನ್ನಗಳನ್ನು ಸಹ ಬಳಸುತ್ತಾರೆ. ಆದರೆ ಸಾಕಷ್ಟು ಪ್ರಯತ್ನದ ನಂತರವೂ, ಕೆಲವರು ತಮ್ಮ ಕೂದಲಿನಲ್ಲಿ ಯಾವುದೇ ಗಮನಾರ್ಹ ವ್ಯತ್ಯಾಸವನ್ನು ಕಾಣುವುದಿಲ್ಲ. ಇದೆಲ್ಲ ಬಿಡಿ, ಈಗ ನೀವು ಕೂಡ ಉದ್ದ, ದಪ್ಪ ಮತ್ತು ಸುಂದರವಾದ ಕೂದಲನ್ನು ಹೊಂದಲು ಬಯಸಿದರೆ, ಈ ಲೇಖನದಿಂದ ನಿಮಗೆ ಅನುಕೂಲವಾಗಬಹುದು. ಇಂದು ಖ್ಯಾತ ಸೌಂದರ್ಯ ತಜ್ಞರೊಬ್ಬರು ಹೇಳಿರುವಂತೆ ವಿಶೇಷವಾದ ಎಣ್ಣೆಯನ್ನು ಬಳಸಿ ನಿಮ್ಮ ಕೂದಲನ್ನು ಕಪ್ಪು ಮತ್ತು ಸುಂದರವಾಗಿಸುವುದು ಹೇಗೆ ಎಂದು ನಾವಿಂದು ನಿಮಗೆ ತಿಳಿಸುತ್ತೇವೆ.   

ಸೌಂದರ್ಯ ತಜ್ಞರು ಹೇಳುವಂತೆ...
ಕೆಲವು ಮಹಿಳೆಯರು ತಮ್ಮ ಮುಖದ ಸೌಂದರ್ಯದ ಜೊತೆಗೆ ಕೂದಲಿನ ಬಗ್ಗೆಯೂ ಹೆಚ್ಚಿನ ಕಾಳಜಿ ವಹಿಸುತ್ತಾರೆ. ನಿಮ್ಮ ಕೂದಲಿನ ಆರೈಕೆಗಾಗಿ ನೀವು ವಿವಿಧ ಮನೆಮದ್ದುಗಳನ್ನು ಪ್ರಯತ್ನಿಸಿಯೂ ವಿಫಲರಾಗಿದ್ದರೆ ಚಿಂತಿಸಬೇಕಾಗಿಲ್ಲ. ಖ್ಯಾತ ಸೌಂದರ್ಯ ತಜ್ಞರು ಹೇಳಿರುವ ವಿಶೇಷ ಎಣ್ಣೆಯನ್ನು ನೀವು ಮನೆಯಲ್ಲಿಯೇ ತಯಾರಿಸಿ ಬಳಸಬಹುದು. ಪ್ರತಿಯೊಬ್ಬ ಮಹಿಳೆಯೂ ಉದ್ದ, ದಪ್ಪ ಮತ್ತು ಸುಂದರವಾದ ಕೂದಲನ್ನು ಪಡೆಯಲು ಬಯಸುತ್ತಾರೆ. ಹಾಗಾಗಿ ಇಂದು ನೀವು ಎಲ್ಲಿಯೂ ಹೋಗದೆ ಮನೆಯಲ್ಲಿಯೇ  ನಿಮ್ಮ ಕೂದಲನ್ನು ಕಪ್ಪಾಗಿಸಲು ಬಯಸಿದರೆ ಇದಕ್ಕಾಗಿ ನಿಮಗೆ ಕೆಲವು ಪದಾರ್ಥಗಳನ್ನು ಹೇಳಲಿದ್ದೇವೆ ಓದಿ... 

ಮನೆಯಲ್ಲಿ ಲಭ್ಯವಿರುವ ಆ 4 ಪದಾರ್ಥಗಳು 

* ಸಾಸಿವೆ ಎಣ್ಣೆ: ಸಾಸಿವೆ ಎಣ್ಣೆಯನ್ನು ಶತಮಾನಗಳಿಂದ ಬಳಸಲಾಗುತ್ತಿದೆ. ಇದು ಪ್ರಮುಖ ಜೀವಸತ್ವಗಳು, ಖನಿಜಗಳು ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳನ್ನು ಹೊಂದಿರುತ್ತದೆ. ಸಾಸಿವೆ ಎಣ್ಣೆ ಕೂದಲಿನ ಕಿರುಚೀಲಗಳನ್ನು ಬಲಪಡಿಸುತ್ತದೆ, ನೆತ್ತಿಯನ್ನು ಹೈಡ್ರೇಟ್ ಮಾಡುತ್ತದೆ ಮತ್ತು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. 

* ಕರಿಬೇವು: ಕರಿಬೇವಿನ ಎಲೆಗಳಲ್ಲಿ ವಿಟಮಿನ್ ಬಿ, ವಿಟಮಿನ್ ಸಿ, ಪ್ರೋಟೀನ್ ಮತ್ತು ಅನೇಕ ಆಂಟಿ-ಆಕ್ಸಿಡೆಂಟ್‌ಗಳು ಕಂಡುಬರುತ್ತವೆ. ಇದು ನೆತ್ತಿಗೆ ಸಾಕಷ್ಟು ಪೋಷಣೆಯನ್ನು ಒದಗಿಸುತ್ತದೆ ಮತ್ತು ಕೂದಲಿನ ಬೆಳವಣಿಗೆಗೆ ಸಹಕಾರಿಯಾಗಿದೆ. ಕರಿಬೇವು ಅಮೈನೋ ಆಮ್ಲಗಳಿಂದ ಸಮೃದ್ಧವಾಗಿರುವುದರಿಂದ ಕೂದಲಿಗೆ ಹೊಳಪನ್ನು ನೀಡುತ್ತದೆ. ಕರಿಬೇವಿನ ಎಲೆಗಳಲ್ಲಿ ಕ್ಯಾಲ್ಸಿಯಂ, ಕಬ್ಬಿಣ ಮತ್ತು ರಂಜಕ ಇರುವುದರಿಂದ ಕೂದಲು ಉದುರುವುದನ್ನು ತಡೆಯಲು ಸಹಾಯ ಮಾಡುತ್ತದೆ.  

* ನೆಲ್ಲಿಕಾಯಿ: ನೆಲ್ಲಿಕಾಯಿಯಯ್ನ ಆರೋಗ್ಯದ ನಿಧಿ ಎಂದು ಪರಿಗಣಿಸಲಾಗುತ್ತದೆ. ಇದರಲ್ಲಿ ಹೆಚ್ಚಿನ ಪ್ರಮಾಣದ ಉತ್ಕರ್ಷಣ ನಿರೋಧಕಗಳು ಇರುತ್ತವೆ. ಇದು ವಿಟಮಿನ್ ಸಿ ಯ ಸಮೃದ್ಧ ಮೂಲವಾಗಿದೆ. ಮನೆಯಲ್ಲಿಯೇ ನೆಲ್ಲಿಕಾಯಿಯಿಂದ ಹಲವು ರೀತಿಯ ಹೇರ್ ಮಾಸ್ಕ್‌ಗಳನ್ನು ತಯಾರಿಸಬಹುದು. ಕೂದಲು ಉದುರುವುದು, ತಲೆಹೊಟ್ಟು ಮುಂತಾದ ಸಮಸ್ಯೆಗಳನ್ನು ಇದರ ಬಳಕೆಯಿಂದ ಪರಿಹರಿಸಿಕೊಳ್ಳಬಹುದು. 

* ಮೆಂತ್ಯ ಬೀಜಗಳು: ಮೆಂತ್ಯ ಬೀಜಗಳನ್ನು ಕೂದಲಿಗೆ ವಿವಿಧ ರೀತಿಯಲ್ಲಿ ಹಚ್ಚಬಹುದು. ಫೋಲಿಕ್ ಆಮ್ಲ, ವಿಟಮಿನ್ ಎ, ಸಿ ಮತ್ತು ಕೆ, ಪೊಟ್ಯಾಶಿಯಂ, ಕಬ್ಬಿಣ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳಿಂದ ಸಮೃದ್ಧವಾಗಿರುವ ಮೆಂತ್ಯ ಬೀಜಗಳನ್ನು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು, ಕೂದಲು ಉದುರುವುದನ್ನು ತಡೆಯಲು ಮತ್ತು  ಬಲಪಡಿಸಲು ಬಳಸಬಹುದು. 

 ಎಣ್ಣೆ ತಯಾರಿಸುವುದು ಹೇಗೆ?

ನೀವು ಕೂಡ ನಿಮ್ಮ ಕೂದಲನ್ನು ಕಪ್ಪಾಗಿ ಮತ್ತು ಸುಂದರವಾಗಿ ಕಾಣುವಂತೆ ಮಾಡಿಕೊಳ್ಳಲು ಬಯಸಿದರೆ ಮೊದಲು ಮೆಂತ್ಯ ಬೀಜಗಳನ್ನು ಕುದಿಸಿ, ನಂತರ ಅದನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಂಡು ಸ್ವಲ್ಪ ಆರಿದ ಮೇಲೆ ಅದೇ ಪಾತ್ರೆಗೆ ಸಾಸಿವೆ ಎಣ್ಣೆಯನ್ನು ಸೇರಿಸಿ , ನಂತರ ಅದಕ್ಕೆ ಕರಿಬೇವಿನ ಎಲೆಗಳೊಂದಿಗೆ ನೆಲ್ಲಿಕಾಯಿ ಎಣ್ಣೆಯನ್ನು ಸೇರಿಸಿ. ಈ ಮಿಶ್ರಣವನ್ನು ಕನಿಷ್ಠ 20 ನಿಮಿಷಗಳ ಕಾಲ ಮುಚ್ಚಿಡಿ. ಈಗ ನೀವು ಸಿದ್ಧವಾದ ಈ ಮಿಶ್ರಣವನ್ನು ಒಂದು ಡಬ್ಬಿಯಲ್ಲಿ ಸಂಗ್ರಹಿಸಿ ಕಾಲಕಾಲಕ್ಕೆ ಬಳಸಬಹುದು.  

ಈ ವಿಷಯಗಳನ್ನು ನೆನಪಿಡಿ...  
ನೀವು ಇದನ್ನು ವಾರಕ್ಕೆ ಕನಿಷ್ಠ ಎರಡು ಬಾರಿ ಬಳಸಬಹುದು. ಹೀಗೆ ಮಾಡುವುದರಿಂದ ಕೆಲವೇ ವಾರಗಳಲ್ಲಿ ಫಲಿತಾಂಶಗಳನ್ನು ನೋಡಬಹುದು. ಎಣ್ಣೆಯನ್ನು ಬಳಸಿದಾಗಲೆಲ್ಲಾ, ಮೊದಲು ನಿಮ್ಮ ಕೂದಲನ್ನು ತೊಳೆದು ಒಣಗಿಸಿ ನಂತರ ಈ ಎಣ್ಣೆಯಿಂದ ಮಸಾಜ್ ಮಾಡಿ. ಕೆಲವು ಗಂಟೆಗಳ ನಂತರ ನೀವು ಮತ್ತೆ ಶಾಂಪೂ ಬಳಸಿ ನಿಮ್ಮ ಕೂದಲನ್ನು ತೊಳೆಯಬಹುದು . ಇದಕ್ಕಾಗಿ ನೀವು ನೈಸರ್ಕಿಕ ಶಾಂಪೂವನ್ನು ಬಳಸುವುದು ಒಳ್ಳೆಯದು. 

Download App

Latest Videos