Gym ಮಾಡ್ಲಿಕ್ಕಾಗೋಲ್ಲ ಎನ್ನೋರಿಗೆ ಸಿಕ್ಸ್ ಪ್ಯಾಕ್ ಬೇಕಾದ್ರೆ ಇದೆ ಕಳ್ಳ ದಾರಿ....
ವರ್ಕೌಟ್ ಮಾಡೋಕೆ ಕಷ್ಟ ಆದ್ರೆ ಸಿಕ್ಸ್ ಪ್ಯಾಕ್ ಅಂದ್ರೆ ಇಷ್ಟ ಎನ್ನುವವರಿಗೊಂದು ಕಳ್ಳದಾರಿ ಸೃಷ್ಟಿಯಾಗಿದೆ. ಅದೇ ಪ್ಲ್ಯಾಸ್ಟಿಕ್ ಸರ್ಜರಿ. ಹೌದು, ಅಬ್ಡೋಮಿನಲ್ ಎಚಿಂಗ್ ಎಂಬ ಈ ವಿಧಾನವು ನಿಮ್ಮ ಹೊಟ್ಟೆ ಮೇಲೆ 6 ಪ್ಯಾಕ್ಸ್ ಮೂಡಿಸಬಲ್ಲದು ಎನ್ನುತ್ತಿದ್ದಾರೆ ವಿಜ್ಞಾನಿಗಳು...
ಅಯ್ಯೋ ಸಾಕಪ್ಪಾ ಸಾಕು ಈ ಡಯಟ್ಟು, ವರ್ಕೌಟು ಎಲ್ಲ. ಎಷ್ಟು ಬೆವರಿಳಿಸಿದ್ರೂ ಸಿಕ್ಸ್ ಪ್ಯಾಕ್ ಬರೋ ಲಕ್ಷಣಗಳು ಕಾಣ್ತಿಲ್ಲ ಎನ್ನೋರು ನೀವಾದ್ರೆ ನಿಮ್ಮ ಸಹಾಯಕ್ಕೆ ಇನ್ನು ಮುಂದೆ ಪ್ಲ್ಯಾಸ್ಟಿಕ್ ಸರ್ಜನ್‌ಗಳು ಬರಬಹುದು. ನೀವು ಕಾಣದ ಆ ಸಿಕ್ಸ್ ಪ್ಯಾಕ್ ಆ್ಯಬ್ಸ್ ಮ್ಯಾಜಿಕ್ಕನ್ನು ನಿಮ್ಮ ಹೊಟ್ಟೆ ಮೇಲೆ ಮೂಡಿಸಿ, ನಿಮ್ಮ ದೇಹದ ಶೇಪ್‌ಗೊಂದು ರೂಟ್ ಮ್ಯಾಪ್ ಹಾಕಿಕೊಡಲಿದ್ದಾರೆ ವೈದ್ಯರು. ಅದನ್ನು ಉಳಿಸಿಕೊಂಡು ಹೋಗುವತ್ತ ಗಮನ ಹರಿಸಿದರೆ ಸಾಕಷ್ಟೇ.
ಅಬ್ಡೋಮಿನಲ್ ಎಚಿಂಗ್ ಎಂಬ ಪ್ಲ್ಯಾಸ್ಟಿಕ್ ಸರ್ಜರಿಯಿಂದಾಗಿ ಕ್ಲಾಸಿಕ್ ಸಿಕ್ಸ್ ಪ್ಯಾಕ್ ಆ್ಯಬ್ಸ್ ಪಡೆಯಬಹುದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಬೊಜ್ಜಿರೋ ಹೊಟ್ಟೆ ಯಾರಿಗೇ ಬೇಕೇಳಿ? ಹೀಗ್ ಹೋಗಲಾಡಿಸಿಕೊಳ್ಳಿ...
ಹೇಗೆ ಕಲ್ಲಿನಲ್ಲಿ ಕುಳಿತ ಶಿಲೆಯನ್ನು ಶಿಲ್ಪಿ ಕೆತ್ತಿ ತೆಗೆಯುತ್ತಾನೋ ಇದೂ ಒಂಥರಾ ಹಾಗೆಯೇ. ಈ ವಿಧಾನದಲ್ಲಿ ಲೈಪೋಸಕ್ಷನ್ ಮೂಲಕ ಹೇಗೆ ಬೇಕೋ ಹಾಗೆಯೇ ಅಬ್ಡೋಮಿನಲ್ ಮಸಲ್ಸ್ ಬೆಳೆಸಬಹುದು. ವರ್ಕೌಟ್ ರೂಟಿನ್ ಹಾಗೂ ಡಯಟ್ ಪ್ಲ್ಯಾನ್‌ನಿಂದ ಸಿಕ್ಸ್ ಪ್ಯಾಕ್ ಸಾಧ್ಯವಾಗುತ್ತಿಲ್ಲ, ಟೋನ್ಡ್ ದೇಹ ಆಗುತ್ತಿಲ್ಲ ಎನ್ನುವವರು ಈ ವಿಧಾನದ ಮೊರೆ ಹೋಗಬಹುದು ಎಂದು ಮಿಯಾಮಿ ಯೂನಿವರ್ಸಿಟಿಯ ಸಂಶೋಧಕರು ತಿಳಿಸಿದ್ದಾರೆ.
'ಪುರುಷ ಹಾಗೂ ಮಹಿಳೆಯರಲ್ಲಿ ನೀಟಾದ ಆ್ಯಬ್ಸ್ ಹುಟ್ಟು ಹಾಕಲು ಇದೊಂದು ಸುರಕ್ಷಿತವಾದ ಹಾಗೂ ಪರಿಣಾಮಕಾರಿ ವಿಧಾನ," ಎನ್ನುತ್ತಾರೆ ಅಧ್ಯಯನದ ಕುರಿತ ವರದಿ ಮಾಡಿದ ತಾರೀಕ್ ಎಂ ಹುಸೇನ್.
ಪ್ಲ್ಯಾಸ್ಟಿಕ್ ಆ್ಯಂಡ್ ರಿಕನ್ಸ್ಟ್ರಕ್ಟಿವ್ ಸರ್ಜರಿ ಜರ್ನಲ್‌ನಲ್ಲಿ ಈ ಕುರಿತ ವರದಿ ಪಬ್ಲಿಶ್ ಆಗಿದ್ದು, ಸಂಶೋಧಕರು 50 ಪೇಶೆಂಟ್‌ಗಳ ಮೇಲೆ ಈ ಪ್ರಯೋಗ ನಡೆಸಿ ಸಫಲರಾಗಿದ್ದಾರೆ ಎಂದು ತಿಳಿಸಲಾಗಿದೆ. ಈ ಪೇಶೆಂಟ್‌ಗಳು ಬಹುತೇಕ ಉತ್ತಮ ಆಕಾರ ಪಡೆದದ್ದು, ವರ್ಕೌಟ್ ಹಾಗೂ ಡಯಟ್ ಮಾಡುತ್ತಿದ್ದವರೇ. ಆದರೆ, ಕೆಲವು ಭಾಗಗಳಲ್ಲಿ ಮಾತ್ರ ಫ್ಯಾಟ್ ಜಪ್ಪಯ್ಯ ಎಂದರೂ ಕರಗುತ್ತಿರಲಿಲ್ಲ. ಹೀಗಾಗಿ, ಇವರೆಲ್ಲ ಹೊಟ್ಟೆಯ ಸ್ನಾಯುಗಳಿಗೆ ಆಕಾರ ನೀಡಲು ಸರ್ಜರಿ ಮೊರೆ ಹೋಗಿದ್ದಾರೆ. ಅದಾಗಿ 6 ವರ್ಷ ಕಳೆದರೂ ಯಾವೊಬ್ಬ ಪೇಶೆಂಟ್‌ನದೂ ದೂರುಗಳಿಲ್ಲ ಎಂದು ವರದಿ ಸ್ಪಷ್ಟಪಡಿಸಿದೆ.
ಬಿರಿಯಾನಿ ಪ್ರಿಯೆಯ ಹೆಲ್ತ್ ಅಡ್ವೈಸ್!
ಈ ವಿಧಾನದಲ್ಲಿ ಮೃದು, ಗಟ್ಟಿ, ಬಹಳ ಎದ್ದು ಕಾಣುವ ಆ್ಯಬ್ಸ್ ಗೆರೆಗಳು ಹೀಗೆ ಪೇಶೆಂಟ್ ಬಯಸಿದಂತೆ ವೈದ್ಯರು ಮಾಡಬಲ್ಲರು. ಕ್ಲೈಂಟ್‍ಗಳ ಹೊಟ್ಟೆ ಭಾಗದಲ್ಲಿ ಇರುವ ಎಕ್ಸ್ಟ್ರಾ ಬೊಜ್ಜನ್ನು ತೆಗೆದು ಅದರೊಳಗೆ ಅವಿತ ಆ್ಯಬ್ಸ್ ಕಾಣುವಂತೆ ಶಸ್ತ್ರಚಿಕಿತ್ಸೆ ಮೂಲಕ ವೈದ್ಯರು ಮಾಡುತ್ತಾರೆ. ಶಸ್ತ್ರಚಿಕಿತ್ಸೆ ಬಳಿಕ ಕ್ಲೈಂಟ್‌ಗಳು ಎರಡು ವಾರ ಸಣ್ಣ ಪುಟ್ಟ ವ್ಯಾಯಾಮದಲ್ಲಿ ತೊಡಗಿಸಿಕೊಳ್ಳಬಹುದು. ನಾಲ್ಕು ವಾರದ ಬಳಿಕ ಎಷ್ಟು ಬಿಗಿಯಾದ ವ್ಯಾಯಾಮ ಕೂಡಾ ಮಾಡಬಹುದು. ಈ ಸಿಕ್ಸ್ ಪ್ಯಾಕನ್ನು ಹೆಚ್ಚು ಕಾಲ ಉಳಿಸಿಕೊಳ್ಳಲು ಕ್ಲೈಂಟ್ಸ್ ಸರಿಯಾದ ಡಯಟ್ ಪ್ಲ್ಯಾನ್, ಎಕ್ಸರ್ಸೈಸ್ ಪ್ಲ್ಯಾನ್ ಹಾಗೂ ಹಾರ್ಮೋನ್ ಇಂಬ್ಯಾಲೆನ್ಸ್ ಸರಿಯಾಗಲು ಔಷಧ ತೆಗೆದುಕೊಳ್ಳುವುದು ಅಗತ್ಯ.
ಇಷ್ಟಾದರೆ ಹಲವಾರು ವರ್ಷಗಳ ಕಾಲ ಸಲ್ಮಾನ್ ಖಾನ್‌ನಂತೆ ಶರ್ಟ್‌ಲೆಸ್ ಆಗಿ ಓಡಾಡಬಲ್ಲಿರಿ. ಆದರೆ, ಇದು ಅಷ್ಟು ಸುಲಭವಾಗಿ ಕೈಗೆಟುಕುವುದಿಲ್ಲ. ಏಕೆಂದರೆ ಸಧ್ಯ ಇದರ ವೆಚ್ಚ 4500 ಯೂರೋಗಳು (ಬರೋಬ್ಬರಿ 3.5 ಲಕ್ಷ ರೂ.). ಇಲ್ಲ, ನಮಗೆ ವರ್ಕೌಟ್ ಮಾಡಲೂ ಸಾಧ್ಯವಿಲ್ಲ, ಅಬ್ಡೋಮಿನಲ್ ಎಚಿಂಗ್‌ಗಾಗಿ ಅಷ್ಟು ಹಣವನ್ನೂ ಖರ್ಚು ಮಾಡಲು ಸಾಧ್ಯವಿಲ್ಲ ಆದರೆ ಸಿಕ್ಸ್ ಪ್ಯಾಕ್ ಬೇಕೇ ಬೇಕು ಎನ್ನುವವರಿಗೆ ಬೋಟಾಕ್ಸ್, ಆಯಿಲ್ ಸೊಲ್ಯೂಶನ್ ಜಕ್ಷನ್, ಎಂಡೋಪೀಲ್ ಮುಂತಾದ ವಿಧಾನಗಳು ಇದ್ದೇ ಇವೆ.
ಈ ನಟಿಗೂ ಇದ್ಯಂತಪ್ಪಾ ಈ ವೀಕ್‌ನೆಸ್!