MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • ವಿಶ್ವದ ಹಳೆಯ ದೈತ್ಯ ಆಮೆಗೀಗ 195 ವರ್ಷ: ಪ್ರಧಾನಿ ಮೋದಿಗೂ ಇದೆ ಕುತೂಹಲ ಲಿಂಕ್​- ಏನಿದು ವಿಷ್ಯ

ವಿಶ್ವದ ಹಳೆಯ ದೈತ್ಯ ಆಮೆಗೀಗ 195 ವರ್ಷ: ಪ್ರಧಾನಿ ಮೋದಿಗೂ ಇದೆ ಕುತೂಹಲ ಲಿಂಕ್​- ಏನಿದು ವಿಷ್ಯ

ವಿಶ್ವದ ಅತ್ಯಂತ ಹಿರಿಯ ಜೀವಂತ ಭೂ ಪ್ರಾಣಿ ಎನಿಸಿರುವ ಜೊನಾಥನ್ ಆಮೆಗೆ ಸುಮಾರು 195 ವರ್ಷ. ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಸೀಶೆಲ್ಸ್ ಪ್ರವಾಸದ ವೇಳೆ ಇಂತಹದ್ದೇ ಆಮೆಯೊಂದನ್ನು ಭೇಟಿಯಾಗಿ ಆಹಾರ ನೀಡಿದ್ದರು. ಈ ಮೂಲಕ ವಿಶ್ವದ ಹಿರಿಯ ಆಮೆ ಮತ್ತು ಭಾರತದ ಪ್ರಧಾನಿ ನಡುವೆ ವಿಶೇಷ ನಂಟು ಬೆಸೆದುಕೊಂಡಿದೆ.

2 Min read
Author : Suchethana D
Published : Aug 08 2026, 05:54 PM IST
Share this Photo Gallery
  • FB
  • TW
  • Linkdin
  • Whatsapp
16
ಆಮೆಯ ಜೀವಿತಾವಧಿ
Image Credit : Social Media

ಆಮೆಯ ಜೀವಿತಾವಧಿ

ಸಾಮಾನ್ಯವಾಗಿ ಆಮೆಗಳು 80 ರಿಂದ ಅಬ್ಬಬ್ಬಾ ಎಂದರೆ 150 ವರ್ಷಗಳು ಬದುಕುತ್ತವೆ. ಆದರೆ ವಿಶ್ವದ ಅತ್ಯಂತ ಹಿರಿಯ ಆಮೆಗೆ ಈಗ 195 ವರ್ಷ ವಯಸ್ಸಾಗಿದ್ದು, ಇದಿನ್ನೂ ಜೀವಂತವಾಗಿದೆ. ಕುತೂಹಲದ ವಿಷಯ ಏನೆಂದರೆ, ಈ ಆಮೆಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಒಂದು ಲಿಂಕ್​ ಇದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ವಿಶ್ವದ ಅತ್ಯಂತ ಹಿರಿಯ ಆಮೆ
Image Credit : Social Media

ವಿಶ್ವದ ಅತ್ಯಂತ ಹಿರಿಯ ಆಮೆ

ಹೌದು. ಈ ಆಮೆಯ ಹೆಸರು. ಜೊನಾಥನ್ (Jonathan). ಇದನ್ನು ವಿಶ್ವದ ಅತ್ಯಂತ ಹಳೆಯ ಜೀವಂತ ಭೂಪ್ರಾಣಿ ಎಂದು ಪರಿಗಣಿಸಲ್ಪಟ್ಟಿರುವ ದೈತ್ಯ ಆಮೆಯಾಗಿದೆ. 1832ರಲ್ಲಿ ಜನಿಸಿದೆ ಎಂದು ಅಂದಾಜಿಸಲಾಗಿದ್ದು, ಪ್ರಸ್ತುತ ಇದರ ವಯಸ್ಸು ಸುಮಾರು 195 ವರ್ಷಗಳು. ಇದು ದಕ್ಷಿಣ ಅಟ್ಲಾಂಟಿಕ್ ಮಹಾಸಾಗರದಲ್ಲಿರುವ ಸೇಂಟ್ ಹೆಲೆನಾ ದ್ವೀಪದ ಗವರ್ನರ್ ಅಧಿಕೃತ ನಿವಾಸದಲ್ಲಿ ವಾಸಿಸುತ್ತಿದೆ.

Related Articles

Related image1
3ನೇ ಬಾರಿ ದಿಢೀರ್​ ಲೈವ್​ನಲ್ಲಿ ಕಾಣಿಸಿಕೊಂಡು ಇನ್ನೊಂದು ದೊಡ್ಡ ಘೋಷಣೆ ಮಾಡಿದ ಪ್ರಧಾನಿ ಮೋದಿ
Related image2
1917ರಲ್ಲಿ ಬ್ರಿಟಿಷರಿಗೆ 35 ಸಾವಿರ ಸಾಲ: ಈಗ ಸಿಕ್ಕಿತು ದಾಖಲೆ- ಹಣ ವಾಪಸಿಗೆ ಮನವಿ; ಮುಂದಾಗಿದ್ದೇ ರೋಚಕ
36
ಪ್ರಧಾನಿ ನರೇಂದ್ರ ಮೋದಿ ಭೇಟಿ
Image Credit : Asianet News

ಪ್ರಧಾನಿ ನರೇಂದ್ರ ಮೋದಿ ಭೇಟಿ

ಇದನ್ನು ಕೆಲ ತಿಂಗಳ ಹಿಂದೆ ಸೀಶೆಲ್ಸ್‌ ಪ್ರವಾಸದಲ್ಲಿದ್ದಾಗ ಪ್ರಧಾನಿ ನರೇಂದ್ರ ಮೋದಿ ಅವರು ವೀಕ್ಷಿಸಿದ್ದರು. ಅಲ್ಲಿನ ಅಧ್ಯಕ್ಷ ಪ್ಯಾಟ್ರಿಕ್ ಹರ್ಮಿನಿ ಜತೆ ರಾಷ್ಟ್ರೀಯ ಸಸ್ಯೋದ್ಯಾನಕ್ಕೆ ಭೇಟಿ ನೀಡಿದರು. ಆಮೆಗೆ ಆಹಾರ ನೀಡಿದ್ದರು. ಇದೇ ವೇಳೆ ಭೇಟಿಯ ನೆನಪಿಗಾಗಿ ಸಸಿಯೊಂದನ್ನು ನೆಟ್ಟಿದ್ದರು.

46
ರಾಜತಾಂತ್ರಿಕ ಸಂಬಂಧ
Image Credit : Asianet News

ರಾಜತಾಂತ್ರಿಕ ಸಂಬಂಧ

ಭಾರತ ಮತ್ತು ಸೀಶೆಲ್ಸ್ ನಡುವಿನ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 50ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ, ಸಿಶೆಲ್ಸ್‌ ಪ್ರಧಾನಿ ಮೋದಿ ಅವರನ್ನು ಆಹ್ವಾನಿಸಿದ್ದರು. ಈ ವೇಳೆ ರಾಷ್ಟ್ರೀಯ ಸಸ್ಯೋದ್ಯಾನಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ, ಜೋನಾಥನ್‌ ಆಮೆ ಭೇಟಿ ಮಾಡಿ ಗಮನ ಸೆಳೆದಿದ್ದರು.

56
ಆಮೆಯ ವಿಶೇಷತೆ
Image Credit : Asianet News

ಆಮೆಯ ವಿಶೇಷತೆ

ಈ ಆಮೆಯ ವಿಶೇಷತೆ ಎಂದರೆ ಇದನ್ನು 1882ರಲ್ಲಿ ಸೀಶೆಲ್ಸ್‌ನಿಂದ ಸೇಂಟ್ ಹೆಲೆನಾ ದ್ವೀಪಕ್ಕೆ ತರಲಾಯಿತು. ಆ ಹೊತ್ತಿಗೆ ಅದಕ್ಕೆ ಸುಮಾರು 50 ವರ್ಷ ವಯಸ್ಸಾಗಿತ್ತು. ಇದು ಬ್ರಿಟಿಷ್ ಸಾಮ್ರಾಜ್ಯದ ಅನೇಕ ರಾಜಮನೆತನದವರನ್ನು ಮತ್ತು ಪ್ರಮುಖ ವ್ಯಕ್ತಿಗಳನ್ನು ಕಂಡಿದೆ. ವಯಸ್ಸಾಗಿದ್ದರೂ ಇದು ಈಗಲೂ ಆರೋಗ್ಯವಾಗಿದ್ದು, ಹುಲ್ಲು ತಿನ್ನುವುದು ಮತ್ತು ಬಿಸಿಲಿನಲ್ಲಿ ಓಡಾಡುವುದನ್ನು ಆನಂದಿಸುತ್ತದೆ.

66
ಈ ಹಿಂದೆ ಸುಳ್ಳು ಸುದ್ದಿ
Image Credit : Asianet News

ಈ ಹಿಂದೆ ಸುಳ್ಳು ಸುದ್ದಿ

ಈ ಹಿಂದೆ ಜೊನಾಥನ್‌ ಆಮೆಯನ್ನು ಪಶುವೈದ್ಯ ಜೋ ಹಾಲಿನ್ಸ್‌ ಅವರು ನೋಡಿಕೊಳ್ಳುತ್ತಿದ್ದರು. ಅವರ ಖಾತೆಯಿಂದ ಕಳೆದ ವರ್ಷ ಈ ಆಮೆ ಸಾವನ್ನಪ್ಪಿದೆ ಎನ್ನುವ ಸುದ್ದಿ ಸದ್ದು ಮಾಡಿದ್ದು, ಭಾರಿ ಕೋಲಾಹಲಕ್ಕೂ ಕಾರಣವಾಗಿತ್ತು. ಈ ವರದಿಯನ್ನು BBC, USA Today ಮತ್ತು Daily Mail ಸೇರಿದಂತೆ ಮಾಧ್ಯಮಗಳಲ್ಲಿ ಪ್ರಸಾರ ಕೂಡ ಆಗಿಬಿಟ್ಟಿತ್ತು. ಕೊನೆಗೆ ಹಾಲಿನ್ಸ್​ ಅವರು, ಇದು ಸುಳ್ಳು ಸುದ್ದಿ. ಆಮೆ ಜೀವಂತವಾಗಿದೆ, ಯಾರೋ ಕಿಡಿಗೇಡಿಗಳು ಈ ಸುಳ್ಳು ಸುದ್ದಿ ಹರಡಿಸಿದ್ದಾರೆ ಎಂದಿದ್ದರು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ನರೇಂದ್ರ ಮೋದಿ
ಭಾರತ ಸುದ್ದಿ
ರಾಜಕೀಯ ಸುದ್ದಿ
ಅಂತರರಾಷ್ಟ್ರೀಯ ಸುದ್ದಿ
ಜೀವನಶೈಲಿ
Latest Videos
Recommended Stories
Recommended image1
ನೋಡಿದ್ರೆ ಫಿದಾ ಆಗ್ತೀರಾ, ಅದ್ಭುತ ವಿನ್ಯಾಸದ ಪಟಿಯಾಲಾ ಸೂಟ್ಸ್‌ ಇಲ್ಲಿವೆ!
Recommended image2
How To Find Snakes: ನಿಮ್ಮ ಮನೆ ಬಳಿ ಹಾವು ಓಡಾಡುತ್ತಿದೆ ಅಂತ ಗುರುತಿಸೋದು ಹೇಗೆ? ಇಲ್ಲಿದೆ ನೋಡಿ 6 ಮುನ್ಸೂಚನೆಗಳು!
Recommended image3
ಮಳೆಗಾಲದಲ್ಲಿ ಕಿಟಕಿ ಬಳಿ ಸ್ಪೂನ್ ಇಡೋದ್ರಿಂದ ಏನಾಗುತ್ತೇ? 90% ಜನರಿಗೆ ಈ ಸೀಕ್ರೆಟ್ ಟ್ರಿಕ್ ಗೊತ್ತೇ ಇಲ್ಲ
Related Stories
Recommended image1
3ನೇ ಬಾರಿ ದಿಢೀರ್​ ಲೈವ್​ನಲ್ಲಿ ಕಾಣಿಸಿಕೊಂಡು ಇನ್ನೊಂದು ದೊಡ್ಡ ಘೋಷಣೆ ಮಾಡಿದ ಪ್ರಧಾನಿ ಮೋದಿ
Recommended image2
1917ರಲ್ಲಿ ಬ್ರಿಟಿಷರಿಗೆ 35 ಸಾವಿರ ಸಾಲ: ಈಗ ಸಿಕ್ಕಿತು ದಾಖಲೆ- ಹಣ ವಾಪಸಿಗೆ ಮನವಿ; ಮುಂದಾಗಿದ್ದೇ ರೋಚಕ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved